ವಿಜಯಪುರ: ಸ್ವಗ್ರಾಮದಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣ ಪಡೆದುಕೊಳ್ಳಲು ಸುತ್ತಮುತ್ತಲಿನ ಗ್ರಾಮಕ್ಕೆ ಕಷ್ಟಪಟ್ಟು ತೆರಳುತ್ತಿರುವ ವಿಧ್ಯಾರ್ಥಿಗಳು ತಮ್ಮ ಸ್ವ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಬೇಕೆ ಬೇಕು ಎಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತುಕೊಂಡಿರುವ ದೃಶ್ಯ ಸೋಮವಾರ ಕಂಡು ಬಂದಿತು.
ತಾಲ್ಲೂಕಿನ ಸೋಮದೇವರಹಟ್ಟಿ ಗ್ರಾಮದ ನೂರಾರು ವಿಧ್ಯಾರ್ಥಿಗಳು ತಮ್ಮ ಊರಿನ ಪ್ರಾಥಮಿಕ ಶಿಕ್ಷಣ ಪಡೆದು ಪ್ರೌಢ ಶಾಲಾ ಶಿಕ್ಷಣಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕಳ್ಳಕವಟಗಿ, ಹುಬನೂರ, ತಿಕೋಟಾ ದೂರದ ಊರುಗಳಿಗೆ ತೆರಳುತ್ತಾರೆ. ಸರಿಯಾದ ವಾಹನಗಳ ಸೌಕರ್ಯ ಇಲ್ಲದ ಇವರಿಗೆ ಪ್ರೌಢ ಶಿಕ್ಷಣ ಪಡೆಯುವದು ಕಷ್ಟವೆನಿಸುತ್ತಿದೆ. ಗ್ರಾಮದಲ್ಲೆ ಪ್ರೌಢ ಶಾಲೆ ಇರದೇ ಇರುವದರಿಂದ ಪಾಲಕರು ಮಕ್ಕಳನ್ನು ಅರ್ಧಕ್ಕೆ ಶಾಲೆ ಬಿಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಕಷ್ಟಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ಕುಳಿತುಕೊಂಡು ತಮ್ಮ ಬೇಡಿಕೆ ಇಡೇರಿಕೆಗೆ ಡಿಸಿ ಕಛೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದ ವಿಧ್ಯಾರ್ಥಿಗಳು ಮುಂದಿನ ಶಿಕ್ಷಣ ಪಡೆಯಬೇಕೆಂಬ ಹಂಬಲವಿದೆ. ಪ್ರೌಢ ಶಾಲೆ ಇಲ್ಲದರಿಂದ ಪಾಲಕರು ಶಾಲೆ ಬಿಡಿಸಲು ಮುಂದಾಗುತ್ತಾರೆ. ಕೆಲವು ವಿಧ್ಯಾರ್ಥಿಗಳು ವಾಹನ ಇಲ್ಲದಿದ್ದರೂ ಬರುವ ಗಾಡಿಗಳಿಗೆ ಕೈ ಮಾಡಿ ಕಷ್ಟಪಟ್ಟು ಬೇರೆ ಊರುಗಳಿಗೆ ಹೋಗಿ ಶಿಕ್ಷಣ ಪಡೆಯುತ್ತಾರೆ. ದಯವಿಟ್ಟು ಬೇಗನೆ ಪ್ರೌಢ ಶಾಲೆ ಮಂಜೂರು ಮಾಡಬೇಕೆಂದು ವಿಧ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಪರಮೇಶ್ವರ ಬೋಸಗಿ, ಭೀಮಣ್ಣಾ ಪೂಜೇರಿ, ಭೀಮರಾಯ ನಿಡೋಣಿ, ಮಾಕಳೆಪ್ಪ ಸನಾಳ, ರಾಜು ಪೂಜೇರಿ, ಅಪ್ಪಾಸಿ ಗುದಗೆನ್ನವರ, ಪ್ರಕಾಶ ನಡುವಿನಕೇರಿ, ಬಿಳ್ಯಾನಸಿದ್ದ ಪೂಜೇರಿ ಹಾಗೂ ಗ್ರಾಮದ ನೂರಾರು ವಿಧ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಸರ್ಕಾರಿ ಪ್ರೌಢ ಶಾಲೆ ಮಂಜೂರಿಗೆ ಧರಣಿ ಕುಳಿತ ವಿದ್ಯಾರ್ಥಿಗಳು
Related Posts
Add A Comment

