Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಜಿಲ್ಲಾಧಿಕಾರಿಗಳಿಂದ ಇಂದಿರಾ ಕ್ಯಾಂಟಿನ್-ಡಿಜಿಟಲ್ ಗ್ರಂಥಾಲಯ ನಿರ್ಮಾಣದ ಸ್ಥಳ ಪರಿಶೀಲನೆ ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬಬಲೇಶ್ವರ ತಾಲೂಕಿನ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ತಾಲೂಕಾ ಆಡಳಿತ ಸೌಧದಲ್ಲಿ ಸಾರ್ವಜನಿಕರ ಕುಂದು-ಕೊರತೆಗಳ ವಿಚಾರಣೆ ನಡೆಸಿದರು.ಗುರುವಾರ ಬಬಲೇಶ್ವರ ತಾಲೂಕಿಗೆ ಭೇಟಿ ನೀಡಿದ ಅವರು, ಬಬಲೇಶ್ವರ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ಸ್ಥಳ ಆಯ್ಕೆ ಹಾಗೂ ಡಿಜಿಟಲ್ ಗ್ರಂಥಾಲಯ ಕಟ್ಟಡ ನಿರ್ಮಾಣ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದರು.ನಂತರ ತಾಲೂಕಾ ಆಡಳಿತ ಸೌಧಕ್ಕೆ ಭೇಟಿ ನೀಡಿ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಾರ್ವಜನಿಕರಿಮದ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಂಡು ಜನರ ಕಚೇರಿಗಳಿಗೆ ಅಲೆದಾಟ ತಪ್ಪಿಸಿ ತ್ವರಿತವಾಗಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಬಬಲೇಶ್ವರ ತಾಲೂಕಿನ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬಸವನಬಾಗೇವಾಡಿ: ಮಳೆಗಾಲ ಪ್ರಾರಂಭವಾಗಿದ್ದು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಕೂಡಲೇ ಎಲ್ಲ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ. ಬಸವರಾಜ ಕಮದಾಳ ಹೇಳಿದರು.ಪಟ್ಟಣದ ತಾಲೂಕು ಪಂಚಾಯತಿಯ ರಾಜೀವಗಾಂಧಿ ಸೇವಾ ಕೇಂದ್ರದ ಸಭಾಭವನದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಆರೋಗ್ಯ ಜಾಗೃತಿ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ಅವರು, ಮಳೆಗಾಲದಲ್ಲೂ ಕರುಳು ಬೇನೆ, ಕಾಲರ, ಕಾಮಾಲೆ, ವಿಷಮಶೀತ ಜ್ವರ ಹಾಗೂ ಬಹು ದಿನಗಳವರೆಗೆ ನೀರಿನಲ್ಲಿ ಈಡೀಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದರಿಂದ ಸೊಳ್ಳೆಗಳಿಂದ ಹರಡಬಹುದಾದ ಡೆಂಗ್ಯೂ, ಚಿಕುನಗುನ್ಯಾ ಇನ್ನಿತರ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಅಧಿಕಾರಿಗಳು ಮುಂಜಾಗೃತ ಕೈಗೊಳ್ಳಬೇಕು ಎಂದು ಹೇಳಿದರು.ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಂದ ನಿಯಮಿತವಾಗಿ ಈಡೀಸ್ ಲಾರ್ವ ಸಮೀಕ್ಷೆ ಹಾಗೂ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ರೋಗಗಳು ಹರಡದಂತೆ ಗ್ರಾಮ ಪಂಚಾಯತಿಯಿಂದ ಮುಂಜಾಗ್ರತಾ ಕ್ರಮಗಳನ್ನು…
ಬಸವನಬಾಗೇವಾಡಿ: ಸರ್ಕಾರ ಇಂದು ನಾಡಿನಲ್ಲಿ ಮಹಾತ್ಮರ-ಶರಣರ-ಮಹನೀಯರ ಸಾಧನೆ, ತತ್ವ-ಸಂದೇಶಗಳನ್ನು ಯುವಜನಾಂಗ ಸೇರಿದಂತೆ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಅವರ ಜಯಂತಿ ಕಾರ್ಯಕ್ರಮ, ಸ್ಮರಣೀಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ನಾಡಿನಲ್ಲಿ ಉತ್ತಮ ಆಡಳಿತ ನೀಡಿದ ಮಹನೀಯರಲ್ಲಿ ಒಬ್ಬರಾದ ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಎಂದಿಗೂ ಮಾದರಿಯಾಗಿದೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ ೫೧೫ ನೇ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೫೧೫ ವರ್ಷಗಳ ನಂತರವೂ ಕೆಂಪೇಗೌಡ ಅವರ ಸ್ಮರಣೆ ಮಾಡುವದಕ್ಕೆ ಅವರು ಮಾಡಿರುವ ಸ್ಮರಣೀಯ ಕಾರ್ಯಗಳಿಂದ ಎಂಬುವದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಮಾತ್ರ ಸಮಾಜ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಕೆಂಪೇಗೌಡ ಅವರು ಬೆಂಗಳೂರಿನಲ್ಲಿ ಒಂದು ಸಾವಿರ ಕೆರೆಗಳನ್ನು ನಿರ್ಮಾಣ ಮಾಡಿದ್ದರೂ ಕೆರೆಗಳು ಬಹಳಷ್ಟು ಅತಿಕ್ರಮಣವಾಗಿ ಕಾರಣದಿಂದಾಗಿ ಇಂದು ಕೇವಲ ೩೭ ಕೆರೆಗಳು ಮಾತ್ರ…
ಸಿಇಟಿ ಮತ್ತು ನೀಟ್ ತರಬೇತಿ ಪೂರ್ವಭಾವಿ ಪಾಲಕರ ಸಭೆಯಲ್ಲಿಡಾ.ಪ್ರಭುಸಾರಂಗದೇವ ಶ್ರೀ ಅಭಿಮತ ಸಿಂದಗಿ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವೂ ಬಹಳ ಮಹತ್ವದ್ದಾಗಿದೆ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ ಶ್ರೀ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಪಿಯುಸಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ತರಬೇತಿ ಪೂರ್ವಭಾವಿ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು.ಮಕ್ಕಳ ಚನವಲನಗಳ ಮೇಲೆ ಪಾಲಕರು ನಿಗಾ ಇಡುವುದು ಅತೀ ಮುಖ್ಯವಾಗಿದೆ. ಈ ಮೋಬೈಲ್ ಗೀಳು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಬೇರೆ ಕಾಲೇಜುಗಳಿಗೆ ಹೋಲಿಸಿದರೆ ನಮ್ಮ ಸಂಸ್ಥೆಯಲ್ಲಿ ತರಬೇತಿಗಾಗಿ ಕಡಿಮೆ ಶುಲ್ಕವನ್ನು ತೆಗೆದುಕೊಂಡು ಪಾಲಕರ ಅಭಿಪ್ರಾಯದೊಂದಿಗೆ ಅನುಭವಿ ವಿಷಯ ಪರಿಣಿತ ಬೋಧಕರಿಂದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ತರಬೇತಿಯನ್ನು ನೀಡಲಾಗುವುದು ಎಂದರು.ಸಭೆಯನ್ನು ಉದ್ಘಾಟಿಸಿ ನಿವೃತ್ತ ಪ್ರಾಚಾರ್ಯ ವಿಮಲಕಾಂತ ಪಾಟೀಲ ಮಾತನಾಡಿ, ನಿಮ್ಮ ಕನಸನ್ನು ನನಸಾಗಿಸುವ ಸಲುವಾಗಿಯೇ ಗ್ರಾಮೀಣ ಭಾಗದ…
“ವೀಣಾಂತರಂಗ”- ವೀಣಾ ಹೇಮಂತ ಗೌಡ ಪಾಟೀಲ್, ಮುಂಡರಗಿ – ಗದಗ ಬದುಕಿನ ಜ್ಯೋತಿಯನ್ನು ಉದ್ದೀಪಿಸುವ 3 ಅಗ್ನಿಗಳು ಪಂಚ ಮಹಾಭೂತಗಳಿಂದ ಕೂಡಿರುವ ನಮ್ಮ ಶರೀರದಲ್ಲಿ ಮೂರು ವಿಧದ ಅಗ್ನಿಗಳಿವೆ. ಈ ಅಗ್ನಿಗಳು ನಮ್ಮ ಭೌತಿಕ ಶರೀರದ ದೈಹಿಕ,ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.ಅವುಗಳೆಂದರೆ ಜಠರಾಗ್ನಿ, ಮಾನಸ ಇಲ್ಲವೇ ಮನೋ ಅಗ್ನಿ ಮತ್ತು ಮೂರನೆಯದು ಭೂತಾಗ್ನಿ.ಮೊದಲನೆಯದು ಜಠರಾಗ್ನಿ..ನಮ್ಮ ದೇಹದ ಜೀರ್ಣಾಂಗ ವ್ಯೂಹಕ್ಕೆ ಸಂಬಂಧಪಟ್ಟದ್ದು ನಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಅನುಕೂಲವಾಗುವಂತಹ ಆಮ್ಲಗಳನ್ನು ಬಿಡುಗಡೆ ಮಾಡುವುದರ ಮೂಲಕ ಉತ್ತಮ ಜೀರ್ಣ ಕ್ರಿಯೆಯ ಮೂಲಕ ಆಹಾರಕ್ಕೆ ರಕ್ತಗತವಾಗುವಂತೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.ಜಠರಾಗ್ನಿಯು ಪ್ರಬಲವಾಗಿದ್ದರೆ ಒಳ್ಳೆಯ ಜೀರ್ಣಶಕ್ತಿ ಇದೆ ಎಂದರ್ಥ. ಜಠರಾಗ್ನಿಯು ಮಂದವಾಗಿರುವ ವ್ಯಕ್ತಿಯು ಜೀರ್ಣ ಸಂಬಂಧಿ ತೊಂದರೆಗಳು ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಾನೆ. ಹೊಟ್ಟೆ ಉಬ್ಬರ, ಅಜೀರ್ಣ, ಹುಳಿತೇಗು, ವಾಕರಿಕೆ, ವಾಯುಬಾಧೆ ಮುಂತಾದ ತೊಂದರೆಗಳು ಆತನನ್ನು ಬಾಧಿಸುತ್ತವೆ.ಎರಡನೆಯದು ಮಾನಸ ಅಗ್ನಿ..ಈ ಅಗ್ನಿಯು ನಮ್ಮ ಮನಶ್ಶಕ್ತಿ ಗೆ ಸಂಬಂಧಪಟ್ಟದ್ದು ನಮ್ಮ ಜಾಣ್ಮೆ, ತಿಳುವಳಿಕೆ…
ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟ ಕುರಿತು ಜಾಗೃತಿ ಕಾರ್ಯಕ್ರಮ ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಚಡಚಣ ಪೊಲೀಸ್ ಠಾಣೆ ವತಿಯಿಂದ ಕ್ರೀಡೆ, ಶಿಸ್ತು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಸಂಜಯಕುಮಾರ ಕಲ್ಲೂರ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಾದ ಗುಟುಕಾ ,ತಂಬಾಕು, ಸಿಗರೇಟು ಗಳಿಂದ ದೂರ ಇರಬೇಕು. ಒಮ್ಮೆ ನೀವು ಮಾದಕ ವಸ್ತುಗಳಿಗೆ ದಾಸರಾದರೆ ಅದರಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತದೆ. ತಮ್ಮ ಕನಸನ್ನು ನನಸು ಮಾಡಲು ದುಶ್ಚಟಗಳಿಂದ ದೂರ ಇರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಿದ್ದೇಶ್ವರ ಸ್ವಾಮಿಗಳ, ಸಿಂಪಿಲಿಂಗಣ್ಣವರ ಅವರ ಚಿಂತನೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಬ್ಬ ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ದೇವರಹಿಪ್ಪರಗಿ ಸರ್ಕಾರಿ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಡಾ. ಅಶೋಕ ಜಾಧವ ಮಾತನಾಡಿ ಮೊದಲು ನಾವು…
ವಿಜಯಪುರ: ದಯೆ, ಶ್ರದ್ಧೆ ಮತ್ತು ವೃತ್ತಿಪರ ಅನುಭವದಿಂದ ನೀಡುವ ಚಿಕಿತ್ಸೆ ರೋಗಿಗಳು ಬೇಗ ಗುಣಮುಖರಾಗಲು ಕಾರಣವಾಗುತ್ತವೆ ಎಂದು ಮುಧೋಳದ ಖ್ಯಾತ ಶಸ್ತ್ರಚಿಕಿತ್ಸೆ ತಜ್ಞ ಡಾ. ಶಿವಾನಂದ ಕುಬಸದ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಗ್ರಾಮೀಣ ಶಸ್ತ್ರಚಿಕಿತ್ಸಕರು – ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದ ಅವರು, ಗ್ರಾಮೀಣ ಭಾಗದಲ್ಲಿ ತಾವು ಅನುಭವಿಸಿದ ವೈದ್ಯಕೀಯ ಕ್ಷೇತ್ರದಲ್ಲಿನ ಸಂಕಷ್ಟಗಳು ಮತ್ತು ಸವಾಲುಗಳು ಹಾಗೂ ರೋಗಿಗಳು ಗುಣಮುಖರಾದ ನಂತರ ಪಡೆದ ಸಂತ್ರಪ್ತಿಯ ಬಗ್ಗೆ ವಿವರಿಸಿದರು. ತಮ್ಮ 40 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಬಸವಣ್ಣನವರ ದಯವೇ ಧರ್ಮದ ಮೂಲ ಎಂಬ ತತ್ವದಡಿ 40 ಸಾವಿರಕ್ಕಿಂತಲೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಿರುವುದಾಗಿ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಎಲ್. ಡಿ. ಈ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ತಾವು ಡಾ. ಕುಬಸದ ಅವರ…
ವಿಜಯಪುರ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಒದಗಿಸಲು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನೆರವಾಗುತ್ತಿವೆ ಎಂದು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜಾನ್ ಖಟವಟೆ ಹೇಳಿದ್ದಾರೆ.ಚಡಚಣದಲ್ಲಿ ಬುಧವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.ಆರೋಗ್ಯವೇ ಭಾಗ್ಯ ಎಂಬ ತತ್ವದಡಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸಂಬಂಧಿತ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಚಡಚಣದಲ್ಲಿ ಇಂಥ ಶಿಬಿರಗಳ ಆಯೋಜನೆಯಿಂದ ಈ ಭಾಗದಲ್ಲಿ ಜನರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಶಾಂತೇಶ ಸಲಗರೆ ಮಾತನಾಡಿ, ಆಸ್ಪತ್ರೆಯ ತಜ್ಞವೈದ್ಯರು ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಜನಸಾಮಾನ್ಯರು ಮತ್ತು ಬಡವರ,ಸಾಮಾನ್ಯರಿಗಾಗಿ ಗ್ರಾಮೀಣ ಭಾಗದಲ್ಲಿ ಇಂಥ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು.ಈ ಶಿಬಿರದಲ್ಲಿ ಚಡಚಣ ಸಮುದಾಯ…
ಕೆಂಭಾವಿ: ಪಟ್ಟಣದ ಸೀಮಾಂತರದಲ್ಲಿರುವ ಗ್ರಾಮ ದೇವತೆ ಹಜರತ್ ಜಚ್ಚಾ ಮಾಸಾಬಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಮಳೆ ಬೆಳೆ ಸಮೃದ್ದಿಗಾಗಿ ಪ್ರಾರ್ಥಿಸಲಾಯಿತು.ಹಿಂದು ಮುಸ್ಲಿಂರ ಭಾವೈಕ್ಯತೆಯ ಆರಾಧ್ಯ ದೈವ ಹಜರತ್ ಜಚ್ಚಾ ಮಾಸಾಬಿಯ ಕುದುರೆಗಳಿಗೆ ಸುಗಂಧ ದ್ರವ್ಯಸಮೇತ ಪುಷ್ಪಾಲಂಕಾರಗೊಳಿಸಿ ವಾದ್ಯ ಮೇಳಗಳ ಮೆರವಣಿಗೆಯೊಂದಿಗೆ ಇಲ್ಲಿನ ರೈತರು ಹಾಗೂ ಮುಸ್ಲಿಂ ಬಾಂಧವರು ಪ್ರತಿವರ್ಷದ ಸಂಪ್ರದಾಯದಂತೆ ಪಾದಯಾತ್ರೆ ಮೂಲಕ ಜಚ್ಚಾ ಮಾಸಾಬಿಯ ಬೆಟ್ಟಕ್ಕೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿ ದೇವಿಗೆ ಮಳೆ ಬೆಳೆ ಸಮೃದ್ದಿಗಾಗಿ ಬೇಡಿಕೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಗ್ರಾಮಕ್ಕೆ ಮರಳಿದರು.ನಯ್ಯುಮ್ ಖಾಜಿ ಪಟ್ಟೇದಾರ, ಅಜೀಜ್ ಖಾಜಿ, ರಫೀಕ ಖಾಜಿ, ಅಹಮದ್ ಖಾಜಿ, ಶಾಹೀದ್ ಹುಸೇನ್ ಖಾಜಿ, ಮಜರ ಖಾಜಿ, ಶಫೀಯುದ್ದೀನ್ ಖಾಜಿ, ಅಜರುದ್ದೀನ ಸೇರಿದಂತೆ ಇತರರಿದ್ದರು.
ವಿಜಯಪುರ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ವಿಜಯಪುರ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿವುಳ್ಳ ವಿಚಾರ-ಯೋಜನೆಗಳು ನಾಡಿನ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅವರು ಓರ್ವ ಉತ್ತಮ ಆಡಳಿತಗಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾಡಿಗಾಗಿ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳ ನೆನಪಿಡುವ ದೃಷ್ಟಿಯಲ್ಲಿ ಅಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿವೆ. ಮಹಾನ್ ವ್ಯಕ್ತಿಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಕೆಂಪೇಗೌಡರು ಎಲ್ಲ ವರ್ಗದ ಹಿತವನ್ನು ಬಯಸುವಂತವರಾಗಿದ್ದರು. ಹಿಂದೆ ಹಲವಾರು ರಾಜರ ಸಂಸ್ಥಾನಗಳು ಆಳ್ವಿಕೆ ಮಾಡಿವೆ ಅದರಲ್ಲಿ ಆಡಳಿತ ಒಂದು ಭಾಗವಾಗಿತ್ತು. ಆಡಳಿತ ಮೇಲೆಯೇ ರಾಜ್ಯಭಾರ ಮಾಡುತ್ತಿದ್ದರು ನಾಡ ಪ್ರಭು ಕೆಂಪೆಗೌಡರು ನಗರಗಳನ್ನು ನಿರ್ಮಾಣ ಮಾಡುವುದರಲ್ಲಿ ಹಾಗೂ ನಗರಗಳು ಸರ್ವೋತ್ತಮುಖ…
