ಬಸವನಬಾಗೇವಾಡಿ: ಮಳೆಗಾಲ ಪ್ರಾರಂಭವಾಗಿದ್ದು ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ. ಕೂಡಲೇ ಎಲ್ಲ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ. ಬಸವರಾಜ ಕಮದಾಳ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿಯ ರಾಜೀವಗಾಂಧಿ ಸೇವಾ ಕೇಂದ್ರದ ಸಭಾಭವನದಲ್ಲಿ ಗುರುವಾರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಆರೋಗ್ಯ ಜಾಗೃತಿ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದ ಅವರು, ಮಳೆಗಾಲದಲ್ಲೂ ಕರುಳು ಬೇನೆ, ಕಾಲರ, ಕಾಮಾಲೆ, ವಿಷಮಶೀತ ಜ್ವರ ಹಾಗೂ ಬಹು ದಿನಗಳವರೆಗೆ ನೀರಿನಲ್ಲಿ ಈಡೀಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದರಿಂದ ಸೊಳ್ಳೆಗಳಿಂದ ಹರಡಬಹುದಾದ ಡೆಂಗ್ಯೂ, ಚಿಕುನಗುನ್ಯಾ ಇನ್ನಿತರ ರೋಗಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು ಅಧಿಕಾರಿಗಳು ಮುಂಜಾಗೃತ ಕೈಗೊಳ್ಳಬೇಕು ಎಂದು ಹೇಳಿದರು.
ಈಗಾಗಲೇ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಂದ ನಿಯಮಿತವಾಗಿ ಈಡೀಸ್ ಲಾರ್ವ ಸಮೀಕ್ಷೆ ಹಾಗೂ ಕುಡಿಯುವ ನೀರಿನ ಮೂಲಗಳಿಂದ ನೀರಿನ ಮಾದರಿಗಳು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮುನ್ನೆಚ್ಚರಿಕೆಯಾಗಿ ರೋಗಗಳು ಹರಡದಂತೆ ಗ್ರಾಮ ಪಂಚಾಯತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ. ಎಲ್ಲ ಕುಡಿಯುವ ನೀರಿನ ಟ್ಯಾಂಕರ್ ಗಳನ್ನು ಕೋರಿನೆಷನ್ ಮಾಡಿಸಿ (ಬೀಚಿಂಗ್ ಪೌಡರ್ ಹಾಕಿಸಿ) ಶುದ್ಧ ಕುಡಿಯುವ ನೀರನ್ನು ಒದಗಿಸುವುದು, ಕೈ ಪಂಪುಗಳು, ಮಿನಿ ವಾಟರ್ ಟ್ಯಾಂಕ್ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ತಗ್ಗು ಗುಂಡಿಗಳನ್ನು ಮುಚ್ಚಿಸಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರಿನ ಸರಬರಾಜು ಪೈಪನಲ್ಲಿ ಸೋರಿಕೆ ಇದ್ದಲ್ಲಿ ತಕ್ಷಣವೇ ದುರಸ್ತಿ ಇಲ್ಲವೇ ಬದಲಾಯಿಸುವುದು, ಕುಡಿಯುವ ನೀರಿನ ಸರಬರಾಜುಗಳ ಕನಿಷ್ಠ 100 ಅಡಿ ಸುತ್ತಮುತ್ತಲು ತಿಪ್ಪೆಗುಂಡಿ, ಕಸ ಕಡ್ಡಿ ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಆರೋಗ್ಯ ಇಲಾಖೆ ಸಹಯೋಗದಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಶುದ್ಧ ನೀರಿನ ಘಟಕಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಶೇಖರ ಚಿಂಚೋಳಿ ಮಾತನಾಡಿ, ಪಿಪಿಟಿ ಮೂಲಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ತಾಲೂಕು ಪಂಚಾಯತಿಯ ಪ್ರಭಾರಿ ಇಓ ಪ್ರಕಾಶ ದೇಸಾಯಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಎಸ್. ಮೇಟಿ, ವ್ಹಿ. ಬಿ. ಡಿ ಮೇಲ್ವಿಚಾರಕ ಸಂಜಯ ಸಜ್ಜನ, ತಾಲೂಕು ವಲಯ ಕಾರ್ಯಕ್ರಮ ವ್ಯವಸ್ಥಾಪಕ ಪ್ರಾಣೇಶ ದೇಶಪಾಂಡೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚಂದ್ರಶೇಖರ ಹದಿಮೂರು, ಅಣ್ಣಪ್ಪ ಬಿದ್ನಾಳ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

