ವಿಜಯಪುರ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಒದಗಿಸಲು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನೆರವಾಗುತ್ತಿವೆ ಎಂದು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜಾನ್ ಖಟವಟೆ ಹೇಳಿದ್ದಾರೆ.
ಚಡಚಣದಲ್ಲಿ ಬುಧವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಆರೋಗ್ಯವೇ ಭಾಗ್ಯ ಎಂಬ ತತ್ವದಡಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸಂಬಂಧಿತ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಚಡಚಣದಲ್ಲಿ ಇಂಥ ಶಿಬಿರಗಳ ಆಯೋಜನೆಯಿಂದ ಈ ಭಾಗದಲ್ಲಿ ಜನರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಶಾಂತೇಶ ಸಲಗರೆ ಮಾತನಾಡಿ, ಆಸ್ಪತ್ರೆಯ ತಜ್ಞವೈದ್ಯರು ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಜನಸಾಮಾನ್ಯರು ಮತ್ತು ಬಡವರ,ಸಾಮಾನ್ಯರಿಗಾಗಿ ಗ್ರಾಮೀಣ ಭಾಗದಲ್ಲಿ ಇಂಥ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಈ ಶಿಬಿರದಲ್ಲಿ ಚಡಚಣ ಸಮುದಾಯ ಆರೋಗ್ಶ ಕೇಂದ್ರ ಚಡಚಣದ ವೈಧ್ಶರು, ನರ್ಸಿಂಗ್ ಸಿಬ್ಬಂದಿ ಮತ್ತು ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಹೃದ್ರೋಗ ವೈದ್ಯರಾದ ಡಾ. ದರ್ಶನ ಬಿರಾದಾರ, ಡಾ. ಸುನೀಲ, ಮೂತ್ರಜನಕಾಂಗ ಶಸ್ತ್ರ ಚಿಕಿತ್ಸಾ ವಿಭಾಗದ ವೈಧ್ಶರಾದ ಡಾ ಕಿರಣಕುಮಾರ ನೇಗಿ, ಡಾ. ಈರಪ್ಪ ಕೊಟಗಿ ಭಾಗವಹಿಸಿ ಒಟ್ಟು 154 ರೋಗಿಗಳ ಆರೋಗ್ಶ ತಪಾಸಣೆ ಮಾಡಿದರು.
ಈ ಶಿಭಿರದಲ್ಲಿ ಹೃದ್ರೋಗ ಸಂಬಂಧಿಸಿದ 40, ಮೂತ್ರಜನಕಾಂಗ ಸಮಸ್ಯೆಯ 25, ನರರೋಗಕ್ಕೆ ಸಂಬಂಧಿಸಿದ 65 ಹಾಗೂ ಸಾಮಾನ್ಯ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ 24 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಅಲ್ಲದೇ, 135 ಜನರಿಗೆ ಉಚಿತವಾಗಿ ಇಸಿಜಿ ಪರೀಕ್ಷೆ, 150 ಜನರ ಮಧುಮೇಹ ಕಾಯಿಲೆ, ದೇಹದ ತೂಕˌ ನಾಡಿಮಿಡಿತ, ರಕ್ತದೊತ್ತಡ ಪರೀಕ್ಷೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯಾದ ಶಿವನಗೌಡ ಬಾದರಬಂಡಿˌ ದ್ರಾಕ್ಷಾಯಿಣಿ ಶಟಗಾರˌ ಪ್ರೀತು ದಶವಂತ ಹಾಗೂ ಹಣಮಂತರಾವ ಕನಸೆ ˌ ಶಸಿಕಾಂತ ಕೋಳಿ, ಪಿ. ಆರ್.ಎ ಅನೀಲ, ಕಸ್ತೂರಿˌ ಅನಿಸಾ ಶಾನವಾಲೆ, ಬಸವರಾಜ ಮುಂತಾದವರು ಉಪಸ್ಥಿತರಿದ್ದು ರೋಗಿಗಳ ಆಪ್ತ ಸಮಾಲೋಚನೆ ನಡೆಸಿದರು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡರು. ಶ್ರೀ ಪ್ರೀತು ದಶವಂತ ಸಾಮಾಜಿಕ ಕಾರ್ಯಕರ್ತರು ಹಾಗೂ ಬಿ ಎಲ್ ಡಿ ಆಸ್ಪತ್ರೆಯ ಶ್ರೂಶ್ರುಷಕರು ನಿರುಪಿಸಿ ಸ್ವಾಗತಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

