Author: editor.udayarashmi@gmail.com

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಹೆಣ್ಣು ಮಕ್ಕಳೇ.. ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ ಅಯ್ಯೋ! ಮಕ್ಕಳಿನ್ನು ಚಿಕ್ಕವರು, ಮನೆ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದೆ.. ಹಾಗಾಗಿ ಯಾವುದೇ ರೀತಿ ಎಕ್ಸರ್ಸೈಜ್, ವಾಕಿಂಗ್, ಯೋಗ ಮಾಡೋಕಾಗಲ್ಲ.. ಏನ್ ಮಾಡ್ಲಿ ಫ್ಯಾಮಿಲಿ ಕಮಿಟ್ಮೆಂಟ್ಸ್ ಇದು ಒಬ್ಬಾಕೆಯ ಮಾತಾದರೆ ನನಗೆ ನಿಜ್ವಾಗ್ಲೂ ದಿನಕ್ಕೆ ಒಂದಿಪ್ಪತ್ತು ನಿಮಿಷ ಆದ್ರೂ ಯೋಗ ವಾಕಿಂಗ್ ಏನಾದರೂ ಮಾಡೋಕೆ ಆಸೆ ಇದೆ ಆದರೆ ನನ್ನ ಕೆಲಸ ನನ್ನ ಜವಾಬ್ದಾರಿಗಳು ನನಗೆ ಅಡ್ಡಗಾಲಾಗಿವೆ., ಐ ಯಾಮ್ ಹೆಲ್ಪ್ ಲೆಸ್… ಇದು ಮತ್ತೊಬ್ಬಾಕೆಯ ಉವಾಚ. ನನಗೂ ಏನು ಮಾಡೋಕ್ ಆಗ್ತಾ ಇಲ್ಲ ಮಕ್ಕಳಿಗೆ ರಜೆ ಬಿಟ್ಟಿದೆ ಅಲ್ಲಿ ಇಲ್ಲಿ ಅಂತ ಪ್ರವಾಸ, ಮದುವೆ ಮುಂಜಿ ಅಂತ ಓಡಾಡ್ತಾ ಇದ್ವಿ… ಇದೀಗ ನನ್ನ ಸಂಪೂರ್ಣ ದೇಹ ನನಗೆ ಸಹಕರಿಸ್ತಾ ಇಲ್ಲ ಅಂತ ಅನ್ನಿಸ್ತಾ ಇದೆ. ಚಿಕ್ಕಂದಿನಲ್ಲಿ ನನಗೆ ಹಾಡೋಕೆ, ಡಾನ್ಸ್ ಮಾಡೋಕೆ ತುಂಬಾ ಇಷ್ಟ ಇತ್ತು, ಸಾಕಷ್ಟು ಪ್ರಶಸ್ತಿಗಳನ್ನು…

Read More

ವಿಜಯಪುರ: ಶಾಲಾ ಸಂಸತ್ತು ಚುನಾವಣೆಗಳನ್ನು ನಡೆಸುವುದರಿಂದ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೆ ದೇಶದ ಚುನಾವಣೆ ಪ್ರಕ್ರಿಯ ಬಗ್ಗೆ ಅರಿವಿ ಮೂಡಿಸಿ ಸೂಕ್ತ ಜನಪ್ರತಿನಿಧಿಯ ಆಯ್ಕೆ ಕುರಿತು ಅರಿವು ಮೂಡಿಸಬಹುದು ಎಂದು ಸಿ.ಇ.ಎನ್ ಪೊಲೀಸ್ ಠಾಣೆಯ ಸಿ.ಪಿ.ಐ ರಮೇಶ ಅವಜಿ ಹೇಳಿದ್ದಾರೆ.ಚುನಾವಣೆಯಲ್ಲಿ ಜಯ ಗಳಿಸುವುದು ಕೇವಲ ಅಧಿಕಾರಕ್ಕಾಗಿ ಅಲ್ಲ. ಅದೊಂದು ಜವಾಬ್ದಾರಿ. ನಾವು ಅದನ್ನು ನಿಷ್ಟೆಯಿಂದ ನಿರ್ವಹಿಸಬೇಕು ಎಂದು ಅವರು ನೂತನ ವಿದ್ಯಾರ್ಥಿ ಸಂಸದರಿಗೆ ಕಿವಿಮಾತು ಹೇಳಿದರು.ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೋಟ್ನಾಳ ಮಾತನಾಡಿ, ಜೀವನದಲ್ಲಿ ನಾವು ಕಾಣುವ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಅವುಗಳಿಗೆ ಪೂರಕವಾಗಿ ಶ್ರಮವಹಿಸಿ ಕಷ್ಟಪಡಬೇಕು. ಸರಿಯಾದ ಮಾರ್ಗದರ್ಶನದಲ್ಲಿ ಮುನ್ನಡೆದು ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಕೆ. ಆರ್. ನಾಯರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಶ್ರೀ ಬಿ. ಎಂ. ಪಾಟೀಲ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನವೀನ ಜೋಯಿಡೆ ಮತ್ತು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.ಜೈನಾಬ್ ಸ್ವಾಗತಿಸಿದರು. ಸೈರಾ ಶೇಕ್ ವಂದಿಸಿದರು.…

Read More

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಒಂದೇ ಬೆಂಚ್‌ನಲ್ಲಿ ಮೂರು ವಿದ್ಯಾರ್ಥಿಗಳನ್ನ ಕೂರಿಸಿ ಪರೀಕ್ಷೆ ನಡೆಸಿ ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ ತರಲಾಗಿತ್ತು. ಈ ಬಗ್ಗೆ ’ಉದಯರಶ್ಮಿ’ ಪತ್ರಿಕೆಯು “ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆ” ಎಂಬ ತಲೆಬರಹದಡಿ ವರದಿ ಬಿತ್ತರಿಸಿ ಅಧಿಕಾರಿಗಳ ಗಮನಸೆಳೆದಿದೆ.‌ಜೂ.30 ರವಿವಾರ ಇರೋದರಿಂದಈ ಬಗ್ಗೆ ಶಿಕ್ಷಣ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯದಿದ್ದರೂ ಸಾರ್ವಜನಿಕರಿಂದ ಈ ಶಾಲೆಯ ಬಗ್ಗೆ ಇನ್ನಷ್ಟು ದೂರುಗಳು ಕೇಳಿ ಬಂದಿವೆ.ಈ ಹಿಂದೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಬಹುತೇಕ ಮಕ್ಕಳು ಮತ್ತು ಸಧ್ಯ ಓದುತ್ತಿರುವ ಮಕ್ಕಳಲ್ಲಿ ಕೆಲವರು ಶಿಕ್ಷಕರ ಮಕ್ಕಳೇ ಆಗಿದ್ದಾರೆ ಎಂದು ಕೆಲವರು ದೂರಿದರೆ, ಇನ್ನೂ ಕೆಲವರು ಜೂ29 ರಂದು ನಡೆದ ಪರೀಕ್ಷೆಯಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಎನ್.ಬಿ.ತೆಗ್ಗಿನಮಠ ಇವರ ಪುತ್ರ ಕೂಡ ಪರೀಕ್ಷೆ ಬರೆದಿದ್ದಾನೆ ಎಂದು‌ ದೂರಿದ್ದಾರೆ. ಅಲ್ಲದೇ ಸದರಿ ಶಾಲೆಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ಸಿಸಿಟಿವಿ‌ ಅಳವಡಿಸಿದ್ದು ಪರೀಕ್ಷೆಯಲ್ಲಿ ಅದನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಲಾಗಿತ್ತು ಎಂಬ ಗಂಭೀರ ಆರೋಪವೂ ಕೇಳಿ…

Read More

ವಿಜಯಪುರ: ನಗರದ ಟಕ್ಕೆಯಲ್ಲಿರುವ ಕಿರಿಯರ ಬಾಲಕರ ಸರಕಾರಿ ಬಾಲಮಂದಿರಕ್ಕೆ ಭಾನುವಾರ ಬೆಳಿಗ್ಗೆ ಡಿಸಿ ಟಿ.ಭೂಬಾಲನ್ ದಿಢೀರ ಭೇಟಿ ನೀಡಿ, ಬಾಲಮಂದಿರದ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.ಬಾಲಮಂದಿರದ ಅಡುಗೆ ಕೊಠಡಿ ವೀಕ್ಷಣೆ ನಡೆಸಿ, ಅಡುಗೆ ಕೊಠಡಿಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ, ಶುದ್ಧ ಕುಡಿಯುವ ನೀರು ಮಕ್ಕಳಿಗೆ ಪೂರೈಸಬೇಕು. ಬಾಲಮಂದಿರದ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಮಕ್ಕಳಿಂದ ಕುಂದು ಕೊರತೆ ಆಲಿಸಿದ ಅವರು, ಮಕ್ಕಳಿಗೆ ಆರೋಗ್ಯ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಬಾಲಮಂದಿರದ ಆವರಣವನ್ನು ಸ್ವಚ್ಛವಾಗಿಡಬೇಕು. ಉತ್ತಮ ಗುಣಮಟ್ಟದ ಆಹಾರ ಹಾಗೂ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವುದನ್ನು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ: ನಗರದ ಟಕ್ಕೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಕಟ್ಟಡ ಪರಿಶೀಲನೆ, ಆಹಾರ ಧಾನ್ಯಗಳ ಸಂಗ್ರಹ ಕೊಠಡಿ, ಒದಗಿಸುತ್ತಿರುವ ವೈದ್ಯಕೀಯ ಸೇವೆ ಮಾಹಿತಿ, ಅಡುಗೆ ಕೊಠಡಿ, ಆಹಾರದ ಗುಣಮಟ್ಟ ಹಾಗೂ…

Read More

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ‌ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಚಡಚಣದ ರಾಷ್ಟೀಯ ಸೇವಾ ಯೋಜನಾ ಘಟಕವು ಚಡಚಣ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿತ್ತು.ಎನ್ ಎಸ್ ಎಸ್ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಸಿದ್ದರಾಮೇಶ್ವರ ಪಟ್ಟದ ದೇವರುವರು (ಬೋರಚಿಂಚೋಳ್ಳಿ) ಆಶೀರ್ವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಠ್ಠಲ ಬಿರಾದಾರ (ಗ್ರಾಂ ಪ ಅಧ್ಯಕ್ಷರು) ವಹಿಸಿಕೊಂಡಿದ್ದರು.ಉದ್ಘಾಟನೆಯನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ ಎಸ್ ಗಿಡವೀರ ನೆರವೆರಿಸಿ ಮಾತನಾಡಿ, ಎನ್.ಎಸ್.ಎಸ್ ಶಿಬಿರದಿಂದ ಪುಸ್ತಕದ ಜ್ಞಾನದ ಜೊತೆಗೆ ಸಮಾಜದ ಬದುಕಿನ ಜ್ಞಾನ ಪಡೆಯಲು ಸಾಧ್ಯ. ವಿಶೇಷ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವನೆ ಮೂಡುತ್ತದೆ ಹಾಗೂ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಜಯಪುರ ಡಿಸಿಸಿ ಬ್ಯಾಂಕ ನಿರ್ದೇಶಕ ಕಲ್ಲಣಗೌಡ ಪಾಟೀಲ ಸ್ವಯಂ ಸೇವಕರಲ್ಲಿ ಪ್ರಾಮಾಣಿಕತೆ ಇರಬೇಕು. ದೇಶದ ಭದ್ರತೆ ಮತ್ತು ಅಭಿವೃದ್ದಿ ದೃಷ್ಟಿಕೊನದಲ್ಲಿರಿಸಿಕೊಂಡು ಸೇವೆಯನ್ನು ಇವತ್ತಿನ ಯುವಕರು ಮಾಡಬೇಕು. ಯಾವುದೇ ಸ್ವಚ್ಛತೆಯೇ ಈ ಶಿಬಿರದ…

Read More

ಡಾವಣಗೆರೆ: ನಗರದಲ್ಲಿ ಸೋಮವಾರ ನಗರದ ಹರ್ಡೇಕರ್ ಮಂಜಪ್ಪ ಇವರ ಪುತ್ಥಳಿಗೆ ಮಹಾನಗರ ಪಾಲಿಕೆ ಅಧ್ಯಕ್ಷ ವಿನಾಯಕ ಪೈಲ್ವಾನ್ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶ್ರೀಮತಿ ರೇಣುಕಾ ಇವರು ಮಾಲಾರ್ಪಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿಕಾನಿಪ ಅಧ್ಯಕ್ಷ ಇ.ಮೋ .ಮಂಜುನಾಥ,ಉಪಾಧ್ಯಕ್ಷ ತಿಪ್ಪೇಸ್ವಾಮಿ, ಖಜಾಂಚಿ ಬದರಿನಾಥ್, ಕಾರ್ಯದರ್ಶಿಗಳಾದ ನಿಂಗೋಜಿ ರಾವ್, ಚನ್ನವೀರಯ್ಯ, ಹಿರಿಯ ಪತ್ರಕರ್ತರಾದ ಮಂಜುನಾಥ, ಬಕ್ಕೇಶ್ ನಾಗನೂರು, ಪದಾಧಿಕಾರಿಗಳಾದ ವೇದಮೂರ್ತಿ, ಇಂದುದರ್ ನಿಷಾನಿಮತ್, ರವಿ, ಮಂಜುನಾಥ್ ಕಾಡಜ್ಜಿ, ಸದಸ್ಯರುಗಳಾದ ಚನ್ನಬಸವ ಶೀಲವಂತ, ರಾಜಶೇಖರ್, ನಿಂಗರಾಜು, ವಿನಾಯಕ್ ಜಾದವ್, ಹನುಮಂತಪ್ಪ , ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More

ವಿಜಯಪುರ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಬ್ಬಳ್ಳಿ ಹಾಗೂ ಬಿ.ಎಲ್.ಡಿ.ಇ.ಎ ಸಂಸ್ಥೆಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಅಂತ ಕಾಲೇಜು ಮಟ್ಟದಲ್ಲಿ ಕಾನೂನು ವಿದ್ಯಾರ್ಥಿ ವಿದ್ಯಾರ್ಥಿಣಿಯರಿಗಾಗಿ ಆಯೋಜಿಸಿದ ಚೆಸ್ ಟೋರ್ನಾಮೆಂಟ್ ಹಮ್ಮಿಕೊಂಡ ಸಂದರ್ಭದಲ್ಲಿ ವಿಜಯಪುರದ ಅಂಜುಮನ್ ಕಾನೂನು ಕಾಲೇಜಿನ ಐದು ವಿದ್ಯಾರ್ಥಿಗಳಾದ ಸಮೀರ್ ಖಾಜಿ (ಕ್ಯಾಪ್ಟನ್), ಅಮೀರ ಎನ್. ಕೋರ್ತಿ, ಪ್ರದೀಪ ಬಳಗಾನೂರ, ಆನಂದ ಕಾಳಗಿ, ಶಶಿಕುಮಾರ ನುಗ್ಗಿ ಇವರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.ಸಮೀರ ಖಾಜಿ ಇವರು ಪ್ರಥಮ ಅತ್ಯುತ್ತಮ ಆಟಗಾರರೆಂದು ಪ್ರಶಸ್ತಿಗೆ ಭಾಜನರಾಗಿದ್ದಾರೆ.ದೈಹಿಕ ನಿರ್ದೇಶಕರಾದ ತೌಪಿಕ್ ಅಹ್ಮದ ಕೂಡಗಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದರು.ಇದೇ ಸಂದರ್ಭದಲ್ಲಿ ಅಂಜುಮನ್ ಕಾನೂನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಂತರ ಕಾಲೇಜು ಚೆಸ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ಚೆಸ್ ಆಟಗಾರರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಅಭಿನಂದಿಸಿದ್ದಾರೆ.

Read More

ವಿಜಯಪುರ: ಕರುನಾಡ ಕನ್ನಡ ಕಲಾ ಸಿರಿ ಬಳಗ ಬೆಂಗಳೂರು ಕೊಡಮಾಡುವ 2024-25ನೇ ಸಾಲಿನ ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿಗೆ ರಾಜಶೇಖರ ಕಂಬಾರವರು ಆಯ್ಕೆಯಾದ್ದಾರೆ.ಸಿಂದಗಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೇವರಹಿಪ್ಪರಗಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭಾಷಾ ಶಿಕ್ಷಕ ರಾಜಶೇಖರ ಕಂಬಾರ ಅವರು 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು 125ಕ್ಕೆ 125 ಅಂಕವನ್ನು ಪಡೆಯುವಲ್ಲಿ ಕಾಯಾ, ವಾಚಾ, ಮನಸ್ಸಿನಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಸಾಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದಕ್ಕಾಗಿ ಬೆಂಗಳೂರಿನ ಕರುನಾಡ ಕನ್ನಡ ಕಲಾ ಸಿರಿ ಬಳಗವು ಪ್ರಸಕ್ತ ಸಾಲಿನ ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ಈ ಸಾಧನೆಗೆ ಶಾಲೆಯ ಪ್ರಾಂಶುಪಾಲೆ ರೇಷ್ಮಾ ಜಾಧವ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದರು.

Read More

ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವ್ಯಕತ್ಯೆಯ ಹಜರತ್ ಪೀರ ಬಡೇಸಾಹೇಬ ದರ್ಗಾ (ಉರುಸು) ಕಾರ್ಯಕ್ರಮವು ದಿ ೦೧-೦೭-೨೦೨೪ ರಿಂದ ೦೩-೦೭-೨೦೨೪ರ ವರೆಗೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ.ದಿನಾಂಕ : ೦೧-೦೭-೨೦೨೪ ರಂದು ಸೋಮವಾರ ದಿವಸ ರಾತ್ರಿ ೧೦.೩೦ ಗಂಟೆಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಹಾಯ್ದು ಹಜರತ್ ಪೀರ ಬಡೇಸಾಹೇಬ ಹಾಗೂ ಮೂಕಮತಾಯಿ ಗಂಧ ಏರಿಸುವ ಕಾರ್ಯಕ್ರಮ ಜರುಗುವದು.ದಿನಾಂಕ : ೦೨-೦೭-೨೦೨೪ ರಂದು ಮಂಗಳವಾರ ಹಜರತ್ ಪೀರ ಬಡೇಸಾಹೇಬ ದೇವರಿಗೆ ನೈವಿದ್ಯ ಹಾಗೂ ದೀಡ ನಮಸ್ಕಾರ ಕಾರ್ಯಕ್ರಮ ಜರುಗುವದು. ದಿನಾಂಕ : ೦೩-೦೭-೨೦೨೪ ರಂದು ಬುಧವಾರ ದಿವಸ ಹಜರತ್ ಪೀರ ಬಡೇಸಾಹೇಬ ದೇವರ ಬಾಸಿ ದೀಪ ಇಳಿಸುವ ಹಾಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗುವದು ಎಂದು ಹಜರತ್ ಪೀರ ಬಡೇಸಾಹೇಬ ಉರುಸ ಕಮೀಟಿಯ ಮಹಾಂತರಾವ ದೇಶಮುಖ, ಮುತ್ತುವಲ್ಲಿ ಮಹ್ಮದ ಪೈಗಂಬರ ಮುಲ್ಲಾ ಹಾಗೂ ಸಿದ್ದು ಗೇರಡೆ, ಹಾಜಿಮಲಂಗ ಮುಲ್ಲಾ, ಕಲ್ಲಪ್ಪ ತಳವಾರ, ಸೈಪನಸಾಬ…

Read More

ವಿಜಯಪುರ: ಎಸ್.ಎಮ್.ಎನ್. ಸೌಹಾರ್ದದಲ್ಲಿ ಕೋಟ್ಯಾಂತರ ಹಣತೊಡಗಿಸಿ ಕೈಸುಟ್ಟುಕೊಂಡ ಠೇವಣಿದಾರರಿಗೆ ಶೀಘ್ರದಲ್ಲಿ ಕ್ಲೇಮ್ ಪಡೆದುಕೊಂಡು ಹಣ ಮರುಪಾವತಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರಿಗೆ ಎಸ್.ಎಮ್.ಎನ್. ಸೌಹಾರ್ದದ ವಂಚಿತ ಠೇವಣಿದಾರರ ಹೋರಾಟ ಸಮಿತಿ ಹಾಗೂ ಗ್ರಾಹಕರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡ ಅರವಿಂದ ಕುಲಕರ್ಣಿ ಹಾಗೂ ಎನ್.ಕೆ. ಮನಗೊಂಡ, ಎಸ್.ಜಿ. ಸಂಗೋದಿಮಠ ಮಾತನಾಡಿ, ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಎಸ್.ಎಮ್. ಎನ್. ಸೌಹಾರ್ದದಲ್ಲಿ ತೊಡಗಿಸಿದ ಹಣವನ್ನು ಆಡಳಿತ ಮಂಡಳಿ ೩೦ಕೋಟಿ ಹಣವನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ. ಹೋರಾಟ ಪ್ರತಿಫಲವಾಗಿ ಸರಕಾರ ಎಚ್ಚೆತ್ತುಕೊಂಡು ಸಿಓಡಿ ತನಿಖೆ ನಡೆಸಿ ಸಕ್ಷಮ ಪ್ರಾಧಿಕಾರ ನೇಮಕ ಮಾಡಿ ಸಂಬಂಧಿಸಿದ ಸೌಹಾರ್ದದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ಇನ್ನುಳಿದ ಸಿಬ್ಬಂಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಆಸ್ತಿಗಳನ್ನು ಶೀಘ್ರದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಹಾರಾಜು ಮಾಡಿ ನೊಂದ ಠೇವಣಿದಾರರಿಗೆ ಬಡ್ಡಿ ಸಮೇತ ಹಣ ಮರುಪಾವತಿಸಬೇಕು. ಈಗಾಗಲೇ ಎಸ್.ಎಮ್.ಎನ್. ಸೌಹಾರ್ದದ ವಿಶೇಷ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ ಅವರು…

Read More