Author: editor.udayarashmi@gmail.com

“ಆರೋಗ್ಯ ಅಂಗಳ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ನಾವು ಚಿಕ್ಕವರಿದ್ದಾಗ ತಾಲೂಕು ಕೇಂದ್ರವಾದ ನನ್ನೂರು ಕೊಪ್ಪಳದಿಂದ ಕೇವಲ ಐವತ್ತು ಕಿಲೋಮೀಟರ್ ದೂರದಲ್ಲಿರುವ ನಮ್ಮದೇ ಜಿಲ್ಲೆಯ ಮತ್ತೊಂದು ತಾಲೂಕು ಕೇಂದ್ರ ಕುಷ್ಟಗಿಯಲ್ಲಿ ಕಾಲರಾ ವಿಪರೀತವಾಗಿ ಹರಡಿತ್ತು. ಪಕ್ಕದ ತಾಲೂಕುಗಳಲ್ಲಿ ಕೂಡ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆಯವರು ಕೈಗೊಂಡಿದ್ದರು. ಆಗ ಕಾಲರಾ ಎಂದರೆ ಮಾರಣಾಂತಿಕ ಕಾಯಿಲೆ ಎಂಬ ಭಯ. ಈಗ ಮತ್ತೊಮ್ಮೆ ಕಾಲರ ಮತ್ತೆ ರಾಜ್ಯದೆಲ್ಲೆಡೆ ತಲೆದೋರುತ್ತಿದೆ ಅದರಲ್ಲೂ ಪ್ರಮುಖವಾಗಿ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಕಾಲರಾ ಕಾಣಿಸಿಕೊಂಡಿದೆ ಎಂಬುದು ಗಮನಾರ್ಹ.ವಿಬ್ರಿಯೋ ಕಾಲರೆ ಎಂಬ ಬ್ಯಾಕ್ಟೀರಿಯಾದಿಂದ ಬರುವ ಈ ರೋಗವು 1817 ರಲ್ಲಿ ಮೊದಲ ಬಾರಿ ರಷ್ಯಾ ದೇಶದಲ್ಲಿ ಕಾಣಿಸಿಕೊಂಡು ನಂತರ ವ್ಯಾಪಾರ ಮಾರ್ಗವಾಗಿ ಯುರೋಪಿನ ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿತು. ನಂತರ ಉತ್ತರ ಅಮೆರಿಕ ಮತ್ತು ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿತು.ಕಾಲರಾ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ಮೂಲ ಅಶುದ್ಧವಾದ ವಾತಾವರಣ.ಇನ್ನೂ ಹೇಳಬೇಕೆಂದರೆ ಕಲುಷಿತ ನೀರಿನ ಜಲಮೂಲಗಳ ವಾತಾವರಣದಲ್ಲಿ ಬೆಳೆಯುವ ಚಿಪ್ಪು ಮೀನುಗಳನ್ನು ಸೇವಿಸುವವರಲ್ಲಿ ಈ ಬ್ಯಾಕ್ಟೀರಿಯಾ ಪ್ರಸರಣಗೊಂಡು…

Read More

ಮತದಾನ ಜಾಗೃತಿ ಮಾಲಿಕೆ ಡಾ.ಶಿವಕುಮಾರ ಮಾಲಿಪಾಟೀಲದಂತವೈದ್ಯರು ಗಂಗಾವತಿ & ಜಿಲ್ಲಾ ಚುನಾವಣಾ ರಾಯಭಾರಿ ಕೊಪ್ಪಳ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಪ್ರಮುಖ ಘಟ್ಟಗಳು. ಈಗ ಅವು ಮೌಲ್ಯಗಳನ್ನು ಕಳೆದುಕೊಳ್ಳುತ್ತಾ ಸಾಗಿವೆ. ಚುನಾವಣೆಯ ಮೌಲ್ಯಗಳು ಕೆಡಲು ಹಲವಾರು ಕಾರಣಗಳಿರಬಹುದು. ನಾಯಕರು, ಮತದಾರರು ಸೇರಿ ಎಲ್ಲರೂ ಕಾರಣರಾಗಿರಬಹುದು. ಆದರೆ ಈಗ ಬರಿ ದೂರುವುದನ್ನು ಬಿಟ್ಟು ಪರಿಹಾರ ಕಂಡುಕೊಳ್ಳಲು ಯೋಚಿಸಬೇಕಿದೆ. ಪ್ರಜಾಪ್ರಭುತ್ವದ ಮಹತ್ವ ಪ್ರತಿಯೊಬ್ಬ ಪ್ರಜೆಯೂ ಅರಿಯಬೇಕಿದೆ.ಶಾಲೆ, ಕಾಲೇಜುಗಳಲ್ಲಿ ಈಗ ಶೇ ೯೦, ೯೫ ಫಲಿತಾಂಶಗಳು ಬರುತ್ತವೆ. ಆದರೆ ಚುನಾವಣೆಗಳಲ್ಲಿ ಮಾತ್ರ ಶೇ ೫೦, ೬೦ ಹೆಚ್ಚೆಂದರೆ ೭೦ ಮತದಾನವಾಗುತ್ತದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಪ್ರಜೆಗಳು ಸ್ವ-ಇಚ್ಛೆಯಿಂದ ಪ್ರಯತ್ನಪಟ್ಟರೆ ಶೇ ೯೦ ರವರೆಗೂ ಮತದಾನವಾಗಬಹುದು. ಅವಿದ್ಯಾವಂತರೆ ಮತದಾನದಲ್ಲಿ ಮುಂದೆ ಇದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ನಗರಗಳಿಗಿಂತ ಮತದಾನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ “ಮತದಾನದ ಸಾಕ್ಷರತೆ” ಪ್ರಜಾಪ್ರಭುತ್ವದ ಅರಿವು ವಿದ್ಯಾವಂತರಿಗೂ ಬೇಕಾಗಿದೆ. ಒಂದು ಓಟು ಹಾಕದಿದ್ದರೆ ಏನು ಆಗುತ್ತೆ ಅಂತ ಮನೆಯಲ್ಲಿ ಕೂಡುವ, ಪಿಕ್‌ನಿಕ್‌ಗೆ ಹೋಗುವ ವಿದ್ಯಾವಂತರು ನಿಜವಾದ…

Read More

ವಿಜಯಪುರ: ರಾಜ್ಯದಲ್ಲಿ 2 ನೇ ಹಂತದಲ್ಲಿ‌ ನಡೆಯುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಶುಕ್ರವಾರ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಬಿಜೆಪಿ ಮಾಜಿ ಶಾಸಕರು ಹಾಗೂ ಮಹಿಳಾ ಮುಖಂಡರೊಂದಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ಎರಡು ಸೆಟ್ ನಾಮಪತ್ರ ಸಲ್ಲಿಸಿದರು.ಸಂಸದ ರಮೇಶ ಜಿಗಜಿಣಗಿ ಅವರು ಈಗಾಗಲೇ ಏ.16 ರಂದು ಬೃಹತ್ ಶೋಭಾಯಾತ್ರೆ ಮೂಲಕ‌ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಖಂಡರೊಂದಿಗೆ ತೆರಳಿ ಅಂದು ಎರಡು‌ ಸೆಟ್ ನಾಮಪತ್ರ ಸಲ್ಲಿಸಿದ್ದರು. ಕೊನೆಯ ದಿನವಾದ ಶುಕ್ರವಾರ ಮಾಜಿ ಶಾಸಕರುಗಳಾದ ಅಪ್ಪು ಪಟ್ಟಣಶೆಟ್ಟಿ‌, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಅರುಣ್ ಶಹಾಪುರ ಅವರೊಂದಿಗೆ ಒಂದು ಸೆಟ್ ಹಾಗೂ ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ, ಮಹಿಳಾ ಮುಖಂಡರಾದ ಮಲ್ಲಮ್ಮ ಜೋಗೂರು, ಮಧು ಪಾಟೀಲ್, ಪ್ರಭಾವತಿ ಪಾಟೀಲ್, ಪದ್ಮಾವತಿ‌ ಗುಡಿ ಅವರೊಂದಿಗೆ ಎರಡನೇ ಸೆಟ್ ನಾಮಪತ್ರ ಸಲ್ಲಿಸಿದರು.ರಮೇಶ ಜಿಗಜಿಣಗಿ ಅವರು ಎರಡೂ ದಿನ ಸೇರಿ…

Read More

ಚುನಾವಣೆಯಲ್ಲಿ ಪ್ರತಿಯೊಂದು ಓಟು ನಿರ್ಣಾಯಕ ಎಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಗುರುವಾರ ಪ್ರತಿಯೊಂದು ಮತದ ಮಹತ್ವವನ್ನು ಜನರಿಗೆ ನೆನಪಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಯೊಂದು ಓಟು ನಿರ್ಣಾಯಕ ಎಂದು ಅವರು ಹೇಳಿದ್ದಾರೆ.ಚುನಾವಣೆಗಳು ಭಾರತದ ಪ್ರಜಾಪ್ರಭುತ್ವದ ಅತ್ಯಂತ ಸುಂದರವಾದ ಅಭಿವ್ಯಕ್ತಿಯಾಗಿದೆ. “ಮತದಾನಕ್ಕೆ ಸಮಾನವಾದುದು ಯಾವುದೂ ಇಲ್ಲ” ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಜನರು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಭಾರತೀಯ ಮತದಾರರ ಚೈತನ್ಯವು ಬೇಸಿಗೆಯ ಬಿಸಿಯನ್ನು ಸೋಲಿಸುತ್ತದೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ.ನಮ್ಮ ಪ್ರಜಾಪ್ರಭುತ್ವದಲ್ಲಿ, ಚುನಾವಣೆಗಳು ನಿಮಗೆ ಸೇರಿದ್ದು, ಆಯ್ಕೆಯು ನಿಮಗೆ ಸೇರಿದೆ. ನೀವು ಸರ್ಕಾರವನ್ನು ನಿರ್ಧರಿಸುತ್ತೀರಿ. ನಿಮ್ಮ ಸಲುವಾಗಿ, ನಿಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ, ನಿಮ್ಮ ಗ್ರಾಮ ಅಥವಾ ಪಟ್ಟಣಕ್ಕಾಗಿ ಮತ್ತು ಸಹಜವಾಗಿ, ದೇಶಕ್ಕಾಗಿ ಎಂದಿರುವ ಅವರು,”ಚುನಾವಣಾ ಭಾಗವಹಿಸುವಿಕೆಯಲ್ಲಿ ಕ್ರಾಂತಿ ನಡೆಸಲು ಯುವ ಜನಾಂಗಕ್ಕೆ ಕರೆ ನೀಡುತ್ತೇನೆ. ಪ್ರತಿಯೊಂದು…

Read More

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಸ್ವಾಮೀಜಿ ಧಾರವಾಡ: ಧಾರವಾಡ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೆಡ್ಡು ಹೊಡೆದಿರುವ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಕೊನೆಗೂ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.ಇದರೊಂದಿಗೆ ಹುಬ್ಬಳ್ಳಿ – ಧಾರವಾಡ ಲೋಕಸಭಾ ಕ್ಷೇತ್ರ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರ ಸಹ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ, ಕಾಂಗ್ರೆಸ್​ನಿಂದ ವಿನೋದ ಅಸೂಟಿ ಅಖಾಡಕ್ಕಿಳಿದಿದ್ದಾರೆ. ಇನ್ನು, ತಮಗೆ ಎಲ್ಲಾ ಜಾತಿ, ಧರ್ಮದವರು, ರೈತ ಸಂಘಟನೆಗಳ ಬೆಂಬಲ ಇದೆ ಎನ್ನುತ್ತಿರುವ ದಿಂಗಾಲೇಶ್ವರ ಶ್ರೀ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.ದಿಂಗಾಲೇಶ್ವರ ಶ್ರೀಗಳು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಟೌನ್​ ಹಾಲ್​ನಿಂದ ಮೆರವಣಿಗೆ ನಡೆಸಬೇಕಿತ್ತು. ಆದರೆ, ಮರೆವಣಿಗೆ ಮಾಡದೆ ಮೊದಲು ಸಾಂಕೇತಿಕವಾಗಿ ಒಂದು ಸೆಟ್ ನಾಮಪತ್ರವನ್ನು ಸಲ್ಲಿಸಿದರು. ಬಳಿಕ ಮೆರವಣಿಗೆ ಮೂಲಕ‌ ಮತ್ತೊಮ್ಮೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ…

Read More

ವಿಜಯಪುರ: ಕರ್ನಾಟಕ ಬಯಲಾಟ ಅಕಾಡೆಮಿಗೆ ಬಬಲೇಶ್ವರ ಪಟ್ಟಣದ ಅನಸೂಯಾ ವಡ್ಡರ್ ಇವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬಬಲೇಶ್ವರ ಅವರ ಮನೆಯಲ್ಲಿ ಗೌರವ ಸನ್ಮಾನ ಮಾಡಲಾಯಿತುವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕಸಾಪ ಎಲೆಮರೆಕಾಯಿಯಂತಿರುವ ಕಲಾವಿದರನ್ನು ಗುರುತಿಸುವ ಹಾಗೂ ಗೌರವಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.ಬಬಲೇಶ್ವರ ಪಟ್ಟಣದ ನಿವಾಸಿಗಳಾದ ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆಯಾಗಿ ನೇಮಕಗೊಂಡ ಅನುಸೂಯಾ ವಡ್ಡರ್ ಮನೆಯಲ್ಲಿ ಸನ್ಮಾನಿಸಿ ಮಾತನಾಡಿ, ಶ್ರೀ ಕೃಷ್ಣ ಪಾರಿಜಾತದಲ್ಲಿ ಅನೇಕ ಬಯಲಾಟ ಪಾತ್ರ ನಿರ್ವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ನಾಡಿಗೆ ಗೌರವ ತಂದಿದ್ದಾರೆ ಎಂದರು.ಬಾಗಲಕೋಟ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ, ಜಾನಪದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಯ ಪ್ರತೀಕ, ಕಲಾವಿದರನ್ನು ಸರ್ಕಾರ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಬೇಕು ಎಂದರುಸನ್ಮಾನ ಸ್ವೀಕರಿಸಿ ಮಾತನಾಡಿದ ಅನುಸೂಯಾ ವಡ್ಡರ್ ಮಾತನಾಡಿ, ನಾನು ಬಾಲ್ಯದಿಂದ ಪ್ರತಿಭಾವಂತ ಕಲಾವಿದೆಯಾಗಿ ಸೇವೆ…

Read More

ಸಿಂದಗಿ: ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗದೇ ಒಳ್ಳೆಯ ಅಭ್ಯರ್ಥಿಗೆ ಮತ ಚಲಾವಣೆ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ತಾಪಂ ಇಒ ಸುಬ್ರಮಣ್ಯ ಶರ್ಮಾ ಹೇಳಿದರು.ತಾಲೂಕಿನ ಹಿಕ್ಕಣಗುತ್ತಿ ಗ್ರಾಪಂ ವ್ಯಾಪ್ತಿಯ ಬಬಲೇಶ್ವರ ಗ್ರಾಮದ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ತಾಪಂ ಮತ್ತು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡ ಮತದಾನ ಜಾಗೃತಿ ಅಭಿಯಾನ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಅವರು, ನರೇಗಾ ಕೂಲಿ ಕಾರ್ಮಿಕರಿಗೆ ಬೇಸಿಗೆ ಇರುವದರಿಂದ ಕೆಲಸದಲ್ಲಿ ರಿಯಾಯಿತಿ ಇದ್ದು ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರುವಂತೆ ತಿಳಸಿದರು. ಹಾಗೂ ಬೇಸಿಗೆಯಲ್ಲಿ ನಿರಂತರ ಕೆಲಸ ನೀಡುತ್ತದೆ ಇದರ ಸದುಪಯೋಗ ಪಡೆಯಬೇಕು ಎಂದರು.ಇದೇ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಶಿವಶರಣ ವಂದಗನೂರ್, ಶಂಕರ ಪೂಜಾರಿ, ಭೀಮರಾಯ ಚೌಧರಿ, ಬಸವರಾಜ್, ಆನಂದ, ಆರಿಫ್ ಸೇರಿದಂತೆ ಪಂಚಾಯತ್ ಸಿಬ್ಬಂದಿಗಳು, ನರೇಗಾ ಕಾಯಕ ಬಂಧುಗಳು ಮತ್ತು ಕೂಲಿ ಕಾರ್ಮಿಕರು ಇದ್ದರು.

Read More

ಸಿಂದಗಿ: ಗ್ರಾಮೀಣ ಭಾಗದ ರೈತರ ಹಿತದೃಷ್ಟಿಯಿಂದ ಈ ಐಪಿ ಸೆಟ್ ಲೈನ್ ಪ್ರಾರಂಭ ಮಾಡಲಾಗಿದೆ ಎಂದು ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಚಂದ್ರಕಾಂತ ನಾಯಕ ಹೇಳಿದರು.ಪಟ್ಟಣದ ಸಿಂದಗಿ ಉಪವಿಭಾಗ ೧೧೦ಕೆವಿ ಕೇಂದ್ರದಲ್ಲಿ ನೂತನ ಬೆನಕೊಟಗಿ ಐಪಿ ಲೈನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದೇ ಪಾಳಿಯಲ್ಲಿ ಎರಡು ಐಪಿ ಲೈನ್ ನೀಡುವ ಪರಿಸ್ಥಿತಿ ಇದ್ದುದ್ದರಿಂದ ನಮ್ಮ ಲೈನ್‌ಮ್ಯಾನ್‌ಗಳಿಗೆ ದಿನನಿತ್ಯ ಕಷ್ಟಪಡುತ್ತಿದ್ದರು. ಹಾಗಾಗಿ ಅತೀ ಹೆಚ್ಚು ಹೊರೆ ಇರುವ ಲೈನ್‌ಗಳನ್ನು ವಿಂಗಡಣೆ ಮಾಡಿ ಸಮರ್ಪಕ ವಿದ್ಯುತ್ ನೀಡುವ ನಿಟ್ಟಿನಲ್ಲಿ ಹೊಸದಾಗಿ ಲೈನ್ ಪ್ರಾರಂಭ ಮಾಡಿದ್ದೇವೆ.ಈ ವೇಳೆ ನೋಡಲ್ ಅಧಿಕಾರಿ ಪಿ.ಎಮ್.ಬಡಿಗೇರ, ಸಹಾಯಕ ಇಂಜಿನಿಯರ್ ಡಿ.ಎಂ. ಮೋಲಿಮನಿ, ಎಸ್.ಎನ್.ಗೌಡರ್, ಆಲಮೇ¯೨ ಶಾಖಾಧಿಕಾರಿ ಹೆಚ್.ಎಮ್.ಮುಲ್ಲಾ, ಸಿಂದಗಿ ಗ್ರಾಮೀಣ ಶಾಖೆಯ ಮೇಲ್ವಿಚಾರಕ ಜಿ.ಬಿ.ಪಾಟೀಲ್, ಹೈದರ್, ಎಮ್.ಡಿ.ಪೂಜಾರಿ, ರಾಜು ಸೇರಿದಂತೆ, ಇತರ ವಿಭಾಗದ ಅಧಿಕಾರಿಗಳು, ಲೈನ್‌ಮ್ಯಾನ್‌ಗಳು ಇದ್ದರು.

Read More

ಸಿಂದಗಿ: ರಾಜ್ಯ ಕಾಂಗ್ರೆಸ್ ಸರಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯುವ ನಿಧಿಯ ಭರವಸೆಯನ್ನು ನೀಡಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡ ನಂತರ ಭಾರಿ ಪ್ರಮಾಣದಲ್ಲಿ ಮೋಸ ಮಾಡಿದೆ ಎಂದು ಸಿಂದಗಿ ಬಿಜೆಪಿ ಯುವ ಮೋರ್ಚಾ ತಾಲೂಕಾಧ್ಯಕ್ಷ ಅಶೊಕ ನಾರಾಯಣಪೂರ ಆರೋಪಿಸಿದರು.ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಸಲುವಾಗಿ ವಿದ್ಯಾರ್ಥಿಗಳ ವಿದ್ಯಾಸಿರಿ, ವಿದ್ಯಾನಿಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ವೇತನಗಳನ್ನು ಮೋಟಕುಗೊಳಿಸಿ ವಿದ್ಯಾರ್ಥಿವೇತನದ ಹಣವನ್ನು ಸಹ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿರುವುದು ಖಂಡನೀಯ. ಬಡ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರದ ಈ ಒಂದು ಗ್ಯಾರಂಟಿ ಯೋಜನೆ, ಎಲ್ಲಾ ಯುವಕರಿಗೂ ತೊಂದರೆ ಉಂಟುಮಾಡಿದೆ.ಈ ಉಚಿತ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿ ಮುಂದೊಂದು ದಿನ ರಾಜ್ಯ ದಿವಾಳಿಯಾಗುವುದು ಖಚಿತ. ಇಂತಹ ಉಚಿತ ಯೋಜನೆಗಳಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಹಿಂದಿನ ಬಿಜೆಪಿ…

Read More