ಬಸವನಬಾಗೇವಾಡಿ: ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬ ಮಾತು ಸರ್ವಕಾಲಿಕವಾಗುವ ಜೊತೆಗೆ ಸತ್ಯವಾಗಿದೆ.ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಔಷಧಿ ನೀಡಿ ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ ಸಿಂಹಾಸನ ಹೇಳಿದರು.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಸೋಮವಾರ ಹಮ್ಮಿಕೊಂಡಿದ್ದ ವೈದ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಗೆ ಸರಿಯಾಗಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವುದು ವೈದ್ಯರ ಕಾಯಕ. ನಮ್ಮ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ವೈದ್ಯರೊಂದಿಗೆ ಉಳಿದ ಸಿಬ್ಬಂದಿಗಳ ಪಾತ್ರವೂ ಬಹುಮುಖ್ಯವಾಗಿದೆ. ಎಲ್ಲರ ಸಹಕಾರದೊಂದಿಗೆ ಜನರಿಗೆ ಉತ್ತಮ ಸೇವೆ ನೀಡುವುದು ತುಂಬಾ ಅಗತ್ಯವಿದೆ. ಸರ್ಕಾರ ನಮಗೆ ಒದಗಿಸುವ ಸೌಲಭ್ಯಗಳು ಜನರಿಗೆ ತಲುಪಿಸುವಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕೆಂದರು.
ಆಸ್ಪ್ರತ್ರೆಯ ಡಾ.ಶಾಕೀರ ಪಟೇಲ ಹಾಗೂ ಡಾ.ಬಸವರಾಜ ಮುತ್ತತ್ತಿ ಅವರು ಮಾತನಾಡಿ, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಗಳಾಗಿದ್ದ ಡಾ.ಬಿ.ಸಿ.ರಾಯ್ ಅವರ ಸ್ಮರಣೆಯಲ್ಲಿ ಪ್ರತಿವರ್ಷ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಡಾ.ಬಿ.ಸಿ.ರಾಯ್ ಅವರೊಬ್ಬ ಅಸಾಧಾರಣ ವೈದ್ಯರಾಗಿದ್ದರು. ಅವರು ಒಬ್ಬ ಮಾದರಿ ವೈದ್ಯರಾಗಿ ತಮ್ಮ ಬದುಕು ಸವೆಸಿದರು. ಅವರು ದೂರದೃಷ್ಟಿ ನಿಲುವುಗಳಿಂದ ವೈದ್ಯಲೋಕಕ್ಕೆ ಅಪರೂಪದ ಕೊಡುಗೆ ನೀಡಿದ್ದಾರೆ. ಡಾ.ಬಿ.ಸಿ.ರಾಯ್ ಅವರು ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದರು.
ಡಾ.ಬಸವರಾಜ ಝಳಕಿ ಮಾತನಾಡಿದರು.
ಡಾ.ಸಂಜಯ ಸಂಗಾವಿ, ಡಾ.ಪಾರ್ಥ ನಾಝ್, ಡಾ.ಹಜರಾ ಬೇಗಂ, ಡಾ.ಮುತ್ತಣ್ಣ ಮನಹಳ್ಳಿ, ಆಸ್ಪತ್ರೆಯ ಸಿಬ್ಬಂದಿಗಳಾದ ಐ.ಎಂ.ಕೊಣ್ಣೂರ, ಶಾಂತಾ ಕೋಲಕಾರ, ಅರ್ಚನಾ ನಾಟೀಕಾರ, ಬಸವರಾಜ ಧನ್ಯಾಳ, ನಿರ್ಮಲಾ ವಸ್ತ್ರದ, ವೆಂಕಟೇಶ ವಡ್ಡರ,ಪರಶುರಾಮ ಬಡಿಗೇರ, ಹಾಸೀಂ, ಬಸವರಾಜ ಪಟ್ಟಣಶೆಟ್ಟಿ ಇತರರು ಇದ್ದರು. ಗುರುರಾಜ ಕುಲಕರ್ಣಿ ಸ್ವಾಗತಿಸಿದರು. ಅಣ್ಣಪ್ಪ ಬಿದ್ನಾಳ ನಿರೂಪಿಸಿ,ವಂದಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ವೈದ್ಯರಿಗೆ ಸಿಹಿ ತಿನ್ನಿಸಿ ವೈದ್ಯರ ದಿನಾಚರಣೆಯ ಶುಭಕೋರಿದರು.
Subscribe to Updates
Get the latest creative news from FooBar about art, design and business.
Related Posts
Add A Comment

