ಆಲಮೇಲದಲ್ಲಿ ವಾಲ್ಮೀಕಿ ನಿಗಮದ ಅವ್ಯವಹಾರ ಮತ್ತು ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಿ
ಆಲಮೇಲ: ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೆ ಅಭಿವೃದ್ದಿ ಕೆಲಸಗಳು ಮಾಡದೆ ಭ್ರಷ್ಟಾಚಾರದಲ್ಲಿ ಮುಳಗಿಹೋಗಿದೆ, ಬೆಲೆ ಏರಿಕೆಯಿಂದ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ದುರಾಡಳಿತ ಕಾಂಗೆಸ್ ಸರ್ಕಾರ ತೊಲಗುವವರೆಗೂ ಹೋರಾಟ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಸೋಮವಾರ ಆಲಮೇಲ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಅವ್ಯವಹಾರ ಮತ್ತು ಬೆಲೆ ಏರಿಕೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ ಅವರು.
ಹಿಂದುಳಿದ ದಲಿತರಿಗೆ ಮಿಸಲಿದ್ದ ವಾಲ್ಮೀಕಿ ನಿಗಮದಲ್ಲಿನ ೧೭೫ ಕೋಟಿ ಅನುದಾನ ತೆಲಂಗಾಣದ ಚುನಾವಣೆಗೆ ಬಳಕೆ ಮಾಡಿಕೊಂಡು ಭ್ರಷ್ಠಾಚಾರ ಮಾಡಿದೆ. ಇದರಿಂದ ಮನನೊಂದ ಅಧಿಕಾರಿ ಚಂದ್ರಶೇಕರ ಆತ್ಮಹತ್ಯ ಮಾಡಿಕೊಂಡಿದ್ದಾರೆ ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೆ ಹೊಣೆ ಹೊತ್ತು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಸಾವಿಗೆ ನ್ಯಾಯ ಒದಗಿಸಬೇಕಾಗಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ೧೭೫ ಕೊಟಿ ಬಹುದೊಡ್ಡ ಹಗರಣ ಮಾಡುವ ಮೂಲಕ ಭ್ರಷ್ಠಾಚಾರವೆ ಅವರ ಕಾಯಕ ಮಾಡಿಕೊಂಡು ರಾಜ್ಯದ ಜನರನ್ನು ವಂಚಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗ್ಯಾರೆಂಟಿ ಯೋಜನೆಗಳು ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲುಪಲು ಸಾದ್ಯವಾಗಿಲ್ಲ, ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯದ ಖಜಾನೆ ಲೋಟಿ ಮಾಡುತಿದೆ ಅಭಿವೃದ್ದಿ ಕೆಲಸಗಳಿಗೆ ಹಣವಿಲ್ಲದ ಸ್ಥಿತಿಗೆ ಬಂದೊದಗಿದ್ದು ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರು.
ವಾಲ್ಮೀಕ ನಿಗಮದ ಹಗರಣದ ಮೂಲಕ ಸಂಬಂದಿಸಿದ ಸಚಿವ ನಾಗೆಂದ್ರ ರಾಜಿನಾಮೆ ನೀಡಿದ್ದು ಇನ್ನು ಮುಂಬರುವ ದಿನಗಳಲ್ಲಿ ಭ್ರಷ್ಠಾಚಾರದಲ್ಲಿ ತೊಡಗಿರುವ ಅನೇಕ ಸಚಿವರು, ಮುಖ್ಯ ಮಂತ್ರಿ ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ, ಭ್ರಷ್ಠಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿ ಹೋಗಿದೆ. ಆರ್ಥಿಕ ನಿರ್ವಹಣೆ ಮುಖ್ಯಮಂತ್ರಿಗಳೆ ಇರುವದರಿಂದ ವಾಲ್ಮೀಕ ನಿಗಮದ ೧೭೫ ಕೋಟಿ ಬ್ರಷ್ಠಾಚಾರದಲ್ಲಿ ಮುಖ್ಯಮಂತ್ರಿಗಳೆ ಮುಂದಾಳತ್ವದಲ್ಲೆ ನಡೆದಿದೆ ಹಿಂತಹ ಭ್ರಷ್ಠ ಸರ್ಕಾರವನ್ನು ಕಿತ್ತೊಗೆದು ರಾಜ್ಯಪಾಲರ ಆಡಳಿತ ನಡೆಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗುವದು ಎಂದು ಹೇಳಿದರು.
ಜೆಡಿಎಸ್ ತಾಲೂಕ ಅಧ್ಯಕ್ಷ ಎಂ.ಎನ್. ಪಾಟೀಲ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಬಡ ಜನರಿಗೆ ತೊಂದರೆಗೆ ಸಿಲುಕಿಸಿದೆ. ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಯಾವುದೆ ಅಭಿವೃದ್ದಿ ಕೆಲಸಗಳು ಮಾಡದೆ ವಿನಾಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬೈಯುವದೆ ಅವರ ಕೆಲಸವಾಗಿದೆ. ಯಾವ ಪಕ್ಷ ದಿನದಲಿತರು, ಅಲ್ಪ ಸಂಖ್ಯಾತರು, ಸಾಮಾನ್ಯ ಜನರ ಪರವಾಗಿರುತ್ತಾರೆ ಹಂತವರನ್ನು ನಾವು ಬೆಂಬಲಿಸಬೇಕಾಗಿದೆ ಎಂದು ಹೇಳಿದರು.
ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಶಿವಾನಂದ ಮಾರ್ಸನಳ್ಳಿ, ಹರಿಶ ಎಂಟಮಾನ, ಈರಣ್ಣ ರಾವೂರ ಮುಂತಾದವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಚ್. ಬಿರಾದಾರ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೋಗಾರ, ಶ್ರೀಮಂತ ನಾಗೂರ, ಗುಂಡು ಮೆಲಿನಮನಿ, ಪ.ಪಂ ಸದಸ್ಯ ಚಂದ್ರಶೇಖರ ಹಳೆಮನಿ, ಮುಖಂಡರಾದ ಶ್ರೀಶೈಲ ಭೋವಿ, ಅಪ್ಪು ಶೆಟ್ಟಿ, ಅಲೋಕ ಬಡದಾಳ, ಸಿದ್ದರಾಯ ತಳವಾರ, ಶಿವು ಗುರಕಾರ, ದೇವಪ್ಪ ಗುಣಾರಿ, ಸಿದ್ದು ಹಾವಳಗಿ, ತಾ.ಪಂ ಮಾಜಿ ಅಧ್ಯಕ್ಷೆ ಮಹಾನಂದ ಸಾಲಕ್ಕಿ, ಸಾವಿತ್ರಿಬಾಯಿ ಹಿಕ್ಕನಗುತ್ತಿ, ಮದನ ರಜಪೂತ, ಕಮಲಕರ ಪತ್ತಾರ, ಮಾಣಿಕ ಕಲಕುಟಗೇರ, ಶಿವು ತಳವಾರ ಸೇರಿದಂತೆ ಆಲಮೇಲ ತಾಲೂಕಿನ ತಾ.ಪಂ, ಜಿ.ಪಂ. ಸದಸ್ಯರು ವಿವಿದ ಗ್ರಾಮದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಮೇನ ಬಜಾರದಿಂದ ಬಸ್ ನಿಲ್ದಾಣದವರೆಗೂ ಬ್ರಹತ್ ಪ್ರತಿಭಟನೆ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ದ ಗೋಷಣೆ ಕೂಗುತ್ತ ಮೆರವಣಿಗೆ ಮಾಡಿದರು ನಂತರ ಅಂಬೇಡ್ಕರ ವೃತ್ತದ ಬಳಿ ಮಾನವ ಸರ್ಪಳಿ ನಿರ್ಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದರ ಪ್ರತಿಬಟಿಸಿ ತಹಶೀಲ್ದಾರ ಸುರೇಶ ಚಾವಲರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

