ಮುದ್ದೇಬಿಹಾಳ: ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಮಾತು. ಅನಾರೋಗ್ಯಕ್ಕೆ ತುತ್ತಾದ ಪ್ರತಿಯೋಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ ಎಂದು ಜೆಓಸಿಸಿ ಬ್ಯಾಂಕ್ ನಿರ್ದೇಶಕ ಆನಂದಗೌಡ ಬಿರಾದಾರ ಹೇಳಿದರು.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಲೈನ್ಸ್ ಕ್ಲಬ್ ನ ಸಹಯೋಗದಲ್ಲಿ ತಾಲೂಕು ಆರೋಗ್ಯ ಸಿಬ್ಬಂದಿಗಳು ಏರ್ಪಡಿಸಲಾಗಿದ್ದ ವೈದ್ಯರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶ್ರೇಷ್ಠ ವೈದ್ಯ ಬಿ.ಸಿ.ರಾಯ್ ಅವರ ವೈದ್ಯಕೀಯ ಸೇವೆಗೆ ನೀಡಿದ ಅವರ ಸ್ಮರಣಾರ್ಥ ಹಾಗೂ ಅವರ ಅಪಾರ ಕೊಡುಗೆ ಸ್ಮರಿಸಿ ಪ್ರತಿ ವರ್ಷ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸುವ ಮೂಲಕ ವೈದ್ಯರಿಗೆ ವಿಶೇಷ ಗೌರವ ನೀಡಲಾಗುತ್ತದೆ ಎಂದರು.
ಈ ವೇಳೆ ತಾಲೂಕ ಆರೋಗ್ಯ ಅಧಿಕಾರಿ ಡಾ.ಸತೀಶ್ ತಿವಾರಿ, ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಅನಿಲಕುಮಾರ್ ಶೇಗುಣಶಿ, ತಜ್ಞ ವೈದ್ಯರಾದ ಡಾ. ಮಹಮ್ಮದಅಸ್ಪಕ್, ಡಾ. ಹಸನ್ ಬೀಳಗಿ ಡಾ. ಬಸವರಾಜ್ ಅಲಗೂರ, ದಂತ ವೈದ್ಯರಾದ ರಿಪತಕೌಸರ್ ಇನಾಮಧಾರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಲೈನ್ಸ್ ಕ್ಲಬ್ ಶಾಲೆಯ ಅಧ್ಯಕ್ಷೆ ದೀಪಾ ದೇಸಾಯಿ, ಹಾಗೂ ಕಾರ್ಯದರ್ಶಿ ವೆಂಕನಗೌಡ ಪಾಟೀಲ, ಆರೋಗ್ಯ ಇಲಾಖೆಯ ಟಿ.ಎಚ್.ಲಮಾಣಿ, ಬಸಮ್ಮ ಸಾರವಾಡ, ಎಂ.ಎಸ್.ಗೌಡರ, ಸಂಜಯ ಬೋಸ್ಲೆ, ಎಂ.ಬಿ.ಬಾಗವಾನ, ಸಚಿನ್ ರಾಠೋಡ್, ವ್ಹಿ.ವ್ಹಿ.ಪವಾಡಶೆಟ್ಟಿ, ಯಲಗೂರೇಶ ತೋನಶ್ಯಾಳ, ಚೇತನ ಕಲ್ಲುಂಡಿ, ವಿರೇಶ ಎಸ್.ಬಿ, ಎಸ್.ಎಸ್.ಸಜ್ಜನ, ರಾಜೇಶ್ವರಿ ಅಳಗುಂಡಿ, ರಾಜೇಶ್ವರಿ ಹೊಕ್ರಾಣಿ, ಎಫ್.ಡಿ.ಕೊಡಗಾನೂರ, ಎಸ್.ಡಿ.ಸಗರಿ, ಮಂಜುಳಾ ಪಾಟೀಲ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

