Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿನಿಯ ಕೊಲೆ ಖಂಡನೀಯವಾಗಿದೆ. ಮಾನವ ಕುಲ ತಲೆತಗ್ಗಿಸುವಂತಾಗಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಇಂತಹ ಘಟನೆಗಳು ನಡೆಯುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡರಾದ ಸಾವಿತ್ರಿ ಕಲ್ಯಾಣಶೆಟ್ಟಿ ಎಂದು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೇಹಾ ಕೊಲೆ ಕುರಿತು ಮಾನ್ಯ ಗೃಹಮಂತ್ರಿ ಪರಮೇಶ್ವರ ಅವರು ಕೊಟ್ಟ ಹೇಳಿಕೆ ಮಹಿಳಾ ಕುಲಕ್ಕೆ ಅವಮಾನ ಮಾಡುವಂತಾಗಿದೆ. ಅಪರಾಧಿಗಳಿಗೆ ಶಿಕ್ಷೆ ಕೊಡುವುದನ್ನು ಬಿಟ್ಟು ಪರೋಕ್ಷವಾಗಿ ಬೆಂಬಲಿಸುವ ನೀತಿಯನ್ನು ಕೈ ಬಿಡಬೇಕು. ಇತ್ತೀಚೆಗೆ ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಹಲ್ಲೆ ಮಾಡಿರುವುದು. ಬೆಂಗಳೂರಿನ ಕೆಫೆ ಒಂದರಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಘಟನೆಗಳು ನಡೆದಿವೆ. ಅಷ್ಟೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಯಿತು. ಇಂತಹ ಘಟನೆಗಳು ಪದೇಪದೇ ನಡೆಯುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ಅರ್ಥವಾಗುತ್ತದೆ. ಇಂತಹ ಘಟನೆಗಳ ಕುರಿತು ಯಾವೊಬ್ಬ…
ಬಸವನಬಾಗೇವಾಡಿ: ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಳ್ಳಿ ಗ್ರಾಮದ ರವಿ ಮಲ್ಲಿಕಾರ್ಜುನ ತಡಕಲ್(೪೧) ಡಿ.೧೨,೨೦೨೩ ರಂದು ಮನೆಯಿಂದ ಬೆಳಗ್ಗೆ ೮ ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋದವರು ಇದುವರೆಗೂ ಮನೆಗೆ ಬಂದಿಲ್ಲ ಎಂದು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮಾ. ೧,೨೦೨೪ ರಂದು ರವಿ ತಡಕಲ್ ಅವರ ತಾಯಿ ಶಿವಬಾಯಿ ಮಲ್ಲಿಕಾರ್ಜುನ ತಡಕಲ್ ಪ್ರಕರಣ ದಾಖಲಿಸಿದ್ದಾರೆ.ಅವರು ದಾಖಲಿಸಿರುವ ಪ್ರಕರಣದ ಮಾಹಿತಿಯಲ್ಲಿ ನನಗೆ ಅನ್ನಪೂರ್ಣ, ರವಿ, ನೀಲಮ್ಮ, ಸುಜಾತಾ, ಬಸವರಾಜ ಎಂದು ಐದು ಮಕ್ಕಳಿದ್ದು. ಎಲ್ಲ ಮಕ್ಕಳಿಗೂ ಮದುವೆಯಾಗಿದೆ. ಅದರಂತೆ ರವಿಗೂ ೧೨ ವರ್ಷದ ಹಿಂದೆ ರೇಖಾ ಎಂಬುವಳೊಂದಿಗೆ ಮದುವೆಯಾಗಿ ಸೌಮ್ಯ, ಸಂಗಮೇಶ ಎಂಬ ಇಬ್ಬರು ಮಕ್ಕಳಿದ್ದಾರೆ. ರವಿಗೆ ಕುಡಿಯುವ ಚಟವಿದ್ದರಿಂದಾಗಿ ಅವನು ಹಿಂದೆ ಅನೇಕ ಸಲ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆ ಬಿಟ್ಟು ಹೋಗಿ ಸುಮಾರು ತಿಂಗಳುಗಟ್ಟಲೆ ಹೊರಗೆ ಇದ್ದು ತಾನೇ ಬರುತ್ತಿದ್ದನು. ಆಗ ಅವನನ್ನು ವಿಚಾರಿಸಿದಾಗ ವಿಜಯಪುರದಲ್ಲಿ ಅಡತಿಯಲ್ಲಿ ಇದ್ದೇ ಅಂತ ಹೇಳುತ್ತಿದ್ದನು. ಆಗ ನಾವು ಅವನಿಗೆ ಮನೆ ಬಿಟ್ಟು ಹೋಗಬೇಡ ನಮ್ಮದೇ…
ಬಸವನಬಾಗೇವಾಡಿ: ಜಗತ್ತಿನಲ್ಲಿ ಧರ್ಮ ಜಾಗೃತಿ ಮೂಡಿಸಲು ಶ್ರೀಮಠಗಳು ಅಗತ್ಯವಿದೆ. ಸಮಾಜದಲ್ಲಿ ಮಠ-ಗುರುವಿನ ಪಾತ್ರ ದೊಡ್ಡದಿದೆ ಎಂದು ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರ ೮೬ ನೇ ಪುಣ್ಯರಾಧನೆಯ ಜಾತ್ರಾಮಹೋತ್ಸವದಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ಪುರಾಣ ಮಂಗಲ ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಅವರು, ಗುರು-ಭಕ್ತರ ಸಂಬಂಧ ತಾಯಿ-ಮಕ್ಕಳ, ನೀರು-ಮೀನು ನಡುವೆ ಇರುವ ಸಂಬಂಧವಿದ್ದಂತೆ. ನೀರಿನ ಕಲ್ಮಷ ಸ್ವಚ್ಛ ಮಾಡಲು ಮೀನು ಅಗತ್ಯವಿದೆ. ಅದರಂತೆ ಮೀನಿಗೆ ನೀರು ಅಗತ್ಯವಿದೆ. ನೀರಿಲ್ಲದೇ ಮೀನು ಇರಲು ಸಾಧ್ಯವಿಲ್ಲ. ಅದರಂತೆ ಗುರು-ಭಕ್ತರ ಸಂಬಂಧವಾಗಿದೆ. ಸಮಾಜಕ್ಕೆ ಗುರುವಿನ ಮಾರ್ಗದರ್ಶನ ಇರಬೇಕು. ಸಮಾಜದಲ್ಲಿನ ಅಜ್ಞಾನ ಕಳೆದುಹಾಕಲು ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಈ ಶ್ರೀಮಠದ ಕರ್ತೃ ಲಿಂ. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯವರ ಕರ್ತೃ ಶಕ್ತಿಯಿಂದ ನಿರಂತರವಾಗಿ ಜಾತ್ರೆಯು ಭಕ್ತರ ಸಹಕಾರದೊಂದಿಗೆ ನಡೆಯುತ್ತಿರುವುದು ಶ್ಲಾಘನೀಯ. ಮುಂದೆಯೂ ಇದೇ ರೀತಿಯಲ್ಲಿ ನಡೆಯುವಂತಾಗಲಿ ಎಂದರು.ಜೀವನದಲ್ಲಿ ದಾನ,ಧರ್ಮ, ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಂಡರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಬಸವಾದಿ…
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ೨೦೮೫ ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ದೃಷ್ಟಿಯಿಂದ ಮತದಾನದ ಹಿಂದಿನ ದಿನ ಮೇ ೬ ಹಾಗೂ ಮತದಾನ ದಿನವಾದ ಮೇ ೭ ರಂದು ಜಿಲ್ಲೆಯಾದ್ಯಂತ ಸಂತೆ, ಜಾತ್ರೆ, ಉತ್ಸವಗಳನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಟಿ. ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಮತದಾನವು ಮೆ.೭ರಂದು ನಡೆಯಲಿದ್ದು, ಜಿಲ್ಲೆಯ ಎಲ್ಲಾ ೨೦೮೫ ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಸಲುವಾಗಿ ಮೇ ೫ ರಿಂದ ೭ ರವರೆಗೆ ಮತದಾನ ಮುಕ್ತಾಯವಾಗುವರೆಗೂ ಜಿಲ್ಲೆಯಲ್ಲಿ ಸೆಕ್ಷನ್ ೧೪೪ ರ ಪ್ರತಿಭಂದಕಾಜ್ಞೆ ಜಾರಿ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.ಮೇ ೫ ರಿಂದ ಮೇ ೭ ರಂದು ಮತದಾನ ಮುಗಿಯವವರೆಗೂ ೫ ಕ್ಕಿಂತ ಹೆಚ್ಚು ಜನರು ಗುಂಪು ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ ಜರುಗಿಸುವುದು ನಿಷೇಧಿಸಿದೆ. ಅದಲ್ಲದೇ, ಶಸ್ತಾçಸ್ತçಗಳನ್ನು ತೆಗೆದುಕೊಂಡು ಸಂಚರಿಸುವುದು, ಮತಗಟ್ಟೆಗಳ ೧೦೦ ಮೀಟರ್ ಸುತ್ತಮುತ್ತ ರಾಜಕೀಯ ಪಕ್ಷಗಳ ಪೋಸ್ಟರ್, ಬ್ಯಾನರ್ ಹಾಗೂ ಪ್ರಚಾರ, ಸಾರ್ವಜನಿಕವಾಗಿ ಪ್ರಚೋಧನಕಾರಿ ಹೇಳಿಕೆ, ವ್ಯಕ್ತಿಗಳ ತೇಜೋವಧೆ ಮಾಡುವುದು, ಮತಗಟ್ಟೆಯ ಸುತ್ತಮುತ್ತ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ನಿರ್ಬಂದವಿರುತ್ತದೆ ಎಂದು ತಮ್ಮ ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಿಜಯಪುರ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವಿಜಯಪುರ ತಾಲೂಕಿನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗಕ್ಕೆ ಸಂಬಂಧಿಸಿದಂತೆ ಏ.೨೦ರಂದು ಮಧ್ಯಾಹ್ನ ೩ ಗಂಟೆಗೆ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ಕಚೇರಿಯಲ್ಲಿ ರೈತರು ಹಾಗೂ ಗ್ರಾಹಕರೊಂದಿಗೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಹಕರ ಸಂವಾದ ಸಭೆ ನಡೆಸಲು ತೀರ್ಮಾನಿಸಲಾಗಿದೆ.ಆದ ಕಾರಣ ಗ್ರಾಮೀಣ ಉಪ ವಿಭಾಗದ ಕಚೇರಿಗೆ ಒಳಪಡುವ ಗ್ರಾಮಗಳ ಗ್ರಾಹಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಜಯಪುರ ಗ್ರಾಮೀಣ ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೃಷ್ಣಾ ನದಿಯ ಮೂಲದ ೨ನೇ ಹಂತದ ಕೋಲ್ಹಾರ ಮೂಲ ಸ್ಥಾವರದಿಂದ ಜಲನಗರ ನೆಲಮಟ್ಟದ ಜಲಸಂಗ್ರಹಗಾರದವರೆಗೆ ೯೦೦/೯೬೫ಎಂ.ಎಂ ವ್ಯಾಸದ ಪಿ.ಎಸ್.ಸಿ/ಎಂ.ಎಸ್‌ಏರು ಕೊಳವೆ ಮಾರ್ಗದ ಚೈನೇಜ್ ೦.೦೦ಕಿ.ಮೀ ಕೋಲ್ಹಾರ ಜಾಕವೆಲ್ ಹತ್ತಿರಎಂ.ಎಸ್ ಕೊಳವೆ ಮಾರ್ಗದಲ್ಲಿ, ಚೈನೆಜ್ ೩೩.೩೫೦ಕಿ.ಮೀ ಸಾಯಿಬಾಬಾ ಗುಡಿ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಚೈನೆಜ್ ೩೪.೭೬೦ಕಿ.ಮೀ ಬಾರಾಕೋಟರಿ ತಾಂಡಾ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ, ಚೈನೆಜ್ ೩೯.೯೧೦ಕಿ.ಮೀ ಮಮದಾಪೂರ ರಮೇಶ ತೋಟದ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ಮತ್ತು ಚೈನೆಜ್ ೪೦.೯೫೫ಕಿ.ಮೀ ಅಣ್ಣಾ ಡಾಬಾ ಹತ್ತಿರ ಪಿ.ಎಸ್.ಸಿ ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಉಂಟಾಗಿದ್ದು ಶುಧ್ದ ನೀರು ಪೋಲಾಗುತ್ತಿರುವುದರಿಂದ, ತುರ್ತು ದುರಸ್ಥಿ ಕಾಮಗಾರಿಯನ್ನು ಏಪ್ರೀಲ್ ೨೧ರಂದು ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ.ಆದಕಾರಣ ಏಪ್ರೀಲ್ ೨೧ರಂದು ವಿಜಯಪುರ ನಗರಕ್ಕೆ ಕೋಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ ನಗರದ ಸಾರ್ವಜನಿಕರು…
ವಿಜಯಪುರ: ನಮಗಾಗಿ, ನಮ್ಮ ಭವಿಷ್ಯಕ್ಕಾಗಿ, ನಮ್ಮ ಸಮಾಜಕ್ಕಾಗಿ ಮತ್ತು ನಮ್ಮ ದೇಶಕ್ಕಾಗಿ ಮತದಾನ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ತಾಲೂಕ ಆಡಳಿತ ಹಾಗೂ ತಾಲೂಕ ಸ್ವೀಪ್ ಸಮಿತಿ ಇಂಡಿ ಇವರ ಸಹಯೋಗದಲ್ಲಿ ಲೋಕಸಭಾ ಚುನಾವಣೆ-೨೦೨೪ರ ಹಿನ್ನೆಲೆಯಲ್ಲಿ ಇಂಡಿ ತಾಲೂಕಿನ ಮಿನಿ ಆಡಳಿತ ಸೌಧದಿಂದ ರಂಗೋಲಿ ವೀಕ್ಷಣೆ ಹಾಗೂ ಹೀಲಿಯಂ ಬಲೂನ್ ಹಾರಿಸುವುದರ ಮೂಲಕ ಮತದಾನ ಜಾಗೃತಿ ಜಾಥಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ನಿಮ್ಮ ಪ್ರತಿಯೊಂದು ಮತ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸುತ್ತ ಮುತ್ತಲಿನ ಎಲ್ಲ ಜನರಿಗೂ ಸಹ ಮತದಾನ ಮಾಡುವಂತೆ ತಿಳಿಸಬೇಕು. ಮತದಾನದ ದಿನದಂದು ಕಡ್ಡಾಯವಾಗಿ ಮತಗಟ್ಟೆಗಳಿಗೆ ಬಂದು ಎಲ್ಲರೂ ಮತದಾನ ಮಾಡಬೇಕು ಎಂದರು.ಇಂಡಿ ತಾಲೂಕು ಉಪ ವಿಭಾಗಾಧಿಕಾರಿಗಳಾದ ಅಭಿದ ಗದ್ಯಾಳ ಮಾತನಾಡಿ, ಲೋಕಸಭಾ ಚುನಾವಣೆ-೨೦೨೪ರಲ್ಲಿ ಶೇ.೧೦೦ ರಷ್ಟು ಮತದಾನ ಆಗಬೇಕು. ಪ್ರತಿಯೊಬ್ಬರೂ ಮತದಾನ ಮಾಡಿ. ಯಾರು…
ತಾಯಂದಿರು ನಿರ್ಬೀತಿಯಿಂದ ನರೇಗಾ ಕಾಮಗಾರಿಗಳಲ್ಲಿ ತೊಡಗಿಕೊಳ್ಳಿ:ಸಿಇಒ ವಿಜಯಪುರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳನ್ನು ಆರೈಕೆ ಮಾಡಲು ಜಿಲ್ಲೆಯಲ್ಲಿ ೧೬೩ ಕೂಸಿನ ಮನೆಗಳನ್ನು ಪ್ರಾರಂಭ ಮಾಡಲಾಗಿದೆ. ಅದೇ ರೀತಿ ಬೆನಕನಹಳ್ಳಿ ಗ್ರಾಮ ಪಂಚಾಯಿತಿಹ ವ್ಯಾಪ್ತಿಯಲ್ಲಿಯೂ ಸಹ ಕೂಸಿನ ಮನೆಯನ್ನು ಪ್ರಾರಂಭಿಸಲಾಗಿದೆ. ಎಲ್ಲರೂ ನಿಮ್ಮ ಮೂರು ವರ್ಷದ ಒಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ನರೇಗಾ ಕೆಲಸ ಮಾಡಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.ಶುಕ್ರವಾರ ಅವರು ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು.ಕೂಸಿನ ಮನೆಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ಪ್ರತ್ಯೇಕವಾಗಿ ಮಕ್ಕಳ ಆರೈಕೆದಾರರನ್ನು ಆಯ್ಕೆ ಮಾಡಲಾಗಿದೆ. ಅಲ್ಲಿ ಮಕ್ಕಳ ಆರೈಕೆದಾರರು ಮಕ್ಕಳಿಗೆ ಆಟ-ಪಾಠ, ಪಾಲನೆ-ಪೋಷಣೆ, ವೈಯಕ್ತಿಕ ಸ್ವಚ್ಛತೆ ಕಡೆಗೆ ವಿಶೇಷ ಗಮನ ನೀಡುತ್ತಾರೆ. ಕಾರ್ಮಿಕರು ನಿರ್ಭೀತಿಯಿಂದ ನಿಮ್ಮ ಮಕ್ಕಳನ್ನು ಕೂಸಿನ ಮನೆಗಳಲ್ಲಿ ಬಿಟ್ಟು…
ವಿಜಯಪುರ: ಬಿಜಾಪುರ(ಪ ಜಾ) ಲೋಕಸಭೆ ಮತಕ್ಷೇತ್ರದಲ್ಲಿ ಆರನೆ ಮತ್ತು ದಿನವಾದ ಶುಕ್ರವಾರದಂದು ೯ ಅಭ್ಯರ್ಥಿಗಳಿಂದ ೧೦ ನಾಮಪತ್ರಗಳು ಸಲ್ಲಿಕೆಯಾಗಿವೆ.ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ರಮೇಶ ಜಿಗಜಿಣಗಿ ಎರಡು ನಾಮಪತ್ರ, ಎಸ್ ಯು ಸಿ ಐ ಪಕ್ಷದ ಅಭ್ಯರ್ಥಿಯಾಗಿ ನಾಗಜ್ಯೋತಿ ಬಿ.ಎನ್ ಅವರು ಒಂದು, ಭಾರತೀಯ ಜವಾನ್ ಕಿಸಾನ್ ಪಕ್ಷದ ಅಭ್ಯರ್ಥಿಯಾಗಿ ಕುಲಪ್ಪಾ ಚವ್ಹಾಣ ಒಂದು, ಭಾರತೀಯ ಜನ ಸಾಮ್ರಾಟ್ ಪಕ್ಷದ ಆಭ್ಯರ್ಥಿಯಾಗಿ ತಾರಾಬಾಯಿ ಭೋವಿ ಒಂದು, ಪಕ್ಷೇತರ ಅಭ್ಯರ್ಥಿಯಾಗಿ ಸೋಮಶೇಖರ ಭಾವಿಕಟ್ಟಿ ಒಂದು, ನ್ಯಾಷನಲ್ ಲೋಕತಂತ್ರ ಪಕ್ಷದ ಅಭ್ಯರ್ಥಿಯಾಗಿ ರಾಜು ಪವಾರ್ ಅವರು ಒಂದು, ನಕ್ಕಿ ಭಾರತೀಯ ಏಕತಾ ಪಕ್ಷದ ಅಭ್ಯರ್ಥಿಯಾಗಿ ರಾಮಾಜಿ ಯಮನಪ್ಪ ಹರಿಜನ ಉರ್ಫ ಬುಧ್ಧಪ್ರಿಯ ಒಂದು, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಕಲ್ಲಪ್ಪ ತೊರವಿ ಒಂದು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸಂಗಪ್ಪ ಚಂದು ಲಮಾಣಿ ಒಂದು ನಾಮಪತ್ರ ಸಲ್ಲಿಸುವ ಮೂಲಕ ಕೊನೆಯ ದಿನದಂದು ಹತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.ಏಪ್ರಿಲ್ ೧೨ ರಿಂದ ೧೯ ವರೆಗೆ ನಾಮಪತ್ರ ಸ್ವೀಕಾರ…
