ವಿಜಯಪುರ: ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಗಳು ಜು.೩ ರಂದು ನಗರಕ್ಕೆ ಆಗಮಿಸಿ ಶ್ರೀಕೃಷ್ಣ-ವಾದಿರಾಜ ಮಠದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ದಿನಾಂಕ ೪ ರಂದು ಬೆಳಿಗ್ಗೆ ಶ್ರೀಮಠದಲ್ಲಿ ಭಕ್ತಾದಿಗಳಿಂದ ಸಾಮೂಹಿಕ ಪಾದಪೂಜೆ ಸ್ವೀಕರಿಸಿ ನಂತರ ದೇಣಿಗೆ ನೀಡಿದ ಭಕ್ತರ ಮನೆಗೆ ಭೇಟಿ ನೀಡಲಿದ್ದಾರೆ. ಸಾಯಂಕಾಲ ೫ ಗಂಟೆಗೆ ಶ್ರೀಗಳನ್ನು ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಅಲಂಕೃತ ವಾಹನದಲ್ಲಿ ಶೋಭಾ ಯಾತ್ರೆ ಮೂಲಕ ಶ್ರೀಕೃಷ್ಣ-ವಾದಿರಾಜ ಮಠಕ್ಕೆ ಕರೆತರಲಾಗುವದು. ಶ್ರೀರಾಮ ಮಂದಿರ ಟ್ರಸ್ಟ ಸದಸ್ಯರೂ ಆಗಿರುವ ಶ್ರೀಗಳು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನೆ ಮತ್ತು ಮಂಡಳ ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಮತ್ತು ಅವರಿಗೆ ಈಗ ಅರವತ್ತು ವಸಂತಗಳು ಪೂರ್ಣಗೊಂಡ ಸಂದರ್ಭದಲ್ಲಿ ನಗರದ ಸಮಸ್ತ ಭಕ್ತ ಮಂಡಳಿ ಪರವಾಗಿ ಅವರನ್ನು ಗೌರವಿಸಲಾಗುವದು. ಹಾಗೆಯೆ ಶ್ರೀಗಳು ಸಂಕಲ್ಪಿಸಿದಂತೆ ಅಖಿಲ ಭಾರತ ಮಧ್ವ ಮಹಾಮಂಡಳ ಗಂಗಾಬಾಯಿ ಆದ್ಯ ವಿದ್ಯಾರ್ಥಿ ನಿಲಯದ ನೂತನ ಕಟ್ಟಡ ನಿರ್ಮಾಣ ಕಾರ್ಯದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ದಿನಾಂಕ ೫ ರಂದು ಶ್ರೀಗಳು ಬೆಳಿಗ್ಗೆ ಶ್ರೀಮಠದಲ್ಲಿ ಸಾಮೂಹಿಕ ಪಾದಪೂಜೆ ನಂತರ ದೇಣಿಗೆ ನೀಡಿದ ಭಕ್ತರ ಮನೆಗೆ ಭೇಟಿ ಕೊಡಲಿದ್ದಾರೆ. ನಂತರ ಶ್ರೀಮಠದಲ್ಲಿಯೆ ಸಂಸ್ಥಾನ ಪೂಜೆ ಹಮ್ಮಿಕೊಳ್ಳಲಾಗಿದೆ. ತೀರ್ಥ ಪ್ರಸಾದ ನಂತರ ಫಲ ಮಂತ್ರಾಕ್ಷತೆ ಕೊಟ್ಟು ಶ್ರೀಗಳು ಉಡುಪಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಕ್ತಾದಿಗಳು ಶ್ರೀಗಳ ಕಾರ್ಯಕ್ರಮದಲ್ಲಿ ತನು-ಮನ-ಧನದಿಂದ ಭಾಗವಹಿಸಿ ಶ್ರೀರಾಮ-ವಿಠಲ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಆಡಳಿತ ಮಂಡಳಿ ಸದಸ್ಯರನ್ನು ಮತ್ತು ವ್ಯವಸ್ಥಾಪಕರನ್ನು ಸಂಪರ್ಕಿಸಲು ವಿಂತಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

