ಕೆಂಭಾವಿ: ಕರ್ನಾಟಕ ಪುರಸಭೆಗಳ ಅಧಿನಿಯಮ 1964 ರ ಪ್ರಕರಣ 11(1) ಬಿ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲ್ಲಾಯಿಸಿ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಪಟ್ಟಣದ ಪುರಸಭೆಗೆ ಕರ್ನಾಟಕ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಸದಸ್ಯರಾದ, ದೇವಿಂದ್ರಪ್ಪ ಭೀಮರಾಯ, ಪರಶುರಾಮ ಮಡಿವಾಳಪ್ಪ , ದಾವಲಸಾಬ್ ಸೋಪಿಸಾಬ್ ನಾಶಿ, ಶಿವಶಂಕರ ಶಿವರೆಡ್ಡಿ ಖಾನಾಪುರ, ಸಂಗಮ್ಮ ಆರ್ ಯರಗಲ್ ಇವರುಗಳಿಗೆ ಮಂಗಳವಾರ ಪುರಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಶಿವಶಂಕರ ಶಿವರೆಡ್ಡಿ ಖಾನಾಪುರ ಅವರು, ನನ್ನನ್ನು ಸೇರಿ ಐದು ಜನರನ್ನು ಪುರಸಭೆಗೆ ನಾಮನಿರ್ದೇಶನ ಮಾಡಲು ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಮಾಜಿ ಜಿಪಂ ಸದಸ್ಯ ಲಿಂಗನಗೌಡ ಮಾಲಿ ಪಾಟೀಲ್, ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪೋಲೀಸ್ ಪಾಟೀಲ್ ಮತ್ತು ಪಕ್ಷದ ಹಿರಿಯ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ಇದೇ ವೇಳೆ ಮುಖ್ಯಾಧಿಕಾರಿ
ಪುರಸಭೆ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ಅಭಿಮಾನಿಗಳು ಆಪ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

