Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಹಾವೀರ ಜಯಂತಿಯಂಗವಾಗಿ ಭಾನುವಾರ ಮಹಾವೀರರ ತೊಟ್ಟಿಲೋತ್ಸವ ಸಂಭ್ರಮ, ಸಡಗರದಿಂದ ಜರುಗಿತು.ತೊಟ್ಟಿಲೋತ್ಸವಕ್ಕೂ ಮುನ್ನ ಬಾಹುಬಲಿ ದಂಡಾವತಿ ಅವರ ಮನೆಯಿಂದ ಭಗವಾನ್ ಮಹಾವೀರರ ಮೂರ್ತಿಯನ್ನು ವಾದ್ಯಮೇಳ, ವೇದ ಘೋಷಗಳೊಂದಿಗೆ ಮೆರವಣಿಗೆ ಮೂಲಕ ಕಾಳಿಕಾದೇವಿ ದೇವಸ್ಥಾನಕ್ಕೆ ತರಲಾಯಿತು. ಭಗವಾನ್ ಮಹಾವೀರರ ಮೂರ್ತಿಯನ್ನು ತೊಟ್ಟಿಲಲ್ಲಿ ಜೈನ ಸಮಾಜದ ಮಹಿಳೆಯರು ಸಂಪ್ರದಾಯದಂತೆ ಹಾಕಿ ನಾಮಕರಣ ಮಾಡಿ ಭಕ್ತಿಯಿಂದ ಹಾಡಿದರು. ತೊಟ್ಟಿಲೋತ್ಸವದಲ್ಲಿ ಸುರೇಖಾ ಉಪಾಧ್ಯೆ, ಸುನಂದಾ ದಂಡಾವತಿ, ಕಸ್ತೂರಿ ಪಾಕಿ, ಸುಮತಿ ಹೊಸಮನಿ, ಸುನೀತಾ ದಂಡಾವತಿ, ವಿನುತಾ ಪಾಕಿ, ಅರ್ಚನಾ ದಂಡಾವತಿ, ಜನೇಶ್ವರಿ ಉಪಾಧ್ಯೆ, ಲಕ್ಷ್ಮೀ ಹೊಸಮನಿ, ಶೃತಿ ದಂಡಾವತಿ, ರಚನಾ ಹೊಸಮನಿ, ಅರ್ಚನಾ ನೇಜಕರ, ಆರಾಧ್ಯ ಕವಟೇಕರ, ಪ್ರಮೋದಿನಿ ಉಪಾಧ್ಯೆ, ಮುಖಂಡರಾದ ಅಪ್ಪು ದಂಡಾವತಿ, ಬಾಹುಬಲಿ ದಂಡಾವತಿ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ, ಅನಂತ ಪಾಕಿ, ಆದಿನಾಥ ಉಪಾಧ್ಯೆ ಸೇರಿದಂತೆ ದಿಂಡವಾರ, ಮನಗೂಳಿ, ವಡವಡಗಿ, ಕೂಡಗಿ, ಬೊಮನಳ್ಳಿ ಗ್ರಾಮದ ಜೈನ ಸಮಾಜ ಬಾಂಧವರು ಇದ್ದರು. ನಂತರ ಜರುಗಿದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ…
ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಭಾನುವಾರ ಭಗವಾನ್ ಮಹಾವೀರರ ಜಯಂತಿಯಂಗವಾಗಿ ಜೈನ ಸಮಾಜದಿಂದ ಹಾಲು-ಬಿಸ್ಕೀಟು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ಬಸವರಾಜ ಝಳಕಿ, ನಿವೃತ್ತ ಉಪನ್ಯಾಸಕ ಕೆ.ಬಿ.ಕಡೆಮನಿ, ಜೈನ ಸಮಾಜ ಬಾಂಧವರಾದ ಅಪ್ಪು ದಂಡಾವತಿ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ, ಆದಿನಾಥ ಉಪಾಧ್ಯೆ, ಅನಂತ ಪಾಕಿ, ಜಿನೇಶ ಗೊಂಗಡಿ, ಅಜೀತ ಕವಟೇಕರ, ಅಭಿಜಿತ ನೆಜಕರ, ಸನ್ಮತಿ ದಂಡಾವತಿ, ಪ್ರವೀಣ ದಂಡಾವತಿ, ಜಿನೇಶ ದಂಡಾವತಿ, ಮೌರ್ಯ ದಂಡಾವತಿ ಇತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಭಾನುವಾರ ತಾಲೂಕಾಡಳಿತದಿಂದ ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಗವಾನ್ ಮಹಾವೀರರ ಜಯಂತಿ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಎಸ್.ಕೆ. ಪತ್ತಾರ, ಬಿ.ಆರ್.ಪೋಲೇಶಿ, ತಹಸೀಲ್ದಾರ ಸಿಬ್ಬಂದಿಗಳಾದ ಮಂಜು ಹಳ್ಳೂರ, ಕಾಂಜನಾ ಸಂದಿಮನಿ,ಶಂಕರ ತಳವಾರ,ರಾಮಚಂದ್ರ ಘಾಟಗೆ, ನಿರ್ಮಲಾ ಪೂಜಾರಿ, ಜೈನ ಸಮಾಜದ ಮುಖಂಡರಾದ ಅಪ್ಪು ದಂಡಾವತಿ, ಅನಂತ ಪಾಕಿ, ಆದಿನಾಥ ಉಪಾಧ್ಯ, ಮಹಾವೀರ ಹೊಸಮನಿ, ಪಾರ್ಶ್ವನಾಥ ಹೊಸಮನಿ ಇತರರು ಇದ್ದರು.
ಮುದ್ದೇಬಿಹಾಳ: ಮಹಾವೀರ ಜಯಂತಿ ಅಂಗವಾಗಿ ಶ್ವೇತಾಂಬರ ಜೈನ ಸಮಾಜದ ವತಿಯಿಂದ ಪಟ್ಟಣದ ಕುಂಬಾರಗಲ್ಲಿಯಲ್ಲಿರುವ ಜೈನ ಮಂದಿರದಿಂದ ಮುಖ್ಯ ಬಜಾರ ಮಾರ್ಗವಾಗಿ ಜೈನ ಮಂದಿರದ ವರೆಗೆ ಮೆರವಣಿಗೆ ನಡೆಸಲಾಯಿತು. ಬಸ್ ನಿಲ್ದಾಣದ ಬಳಿ ಇರುವ ಸಮಾಜದ ಕಾಯ್ದಿರಿಸಿದ ಜಾಗೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಸಮಾಜದ ಅಧ್ಯಕ್ಷ ಬಾಬುಲಲ್ ಓಸ್ವಾಲ್, ದಿ ಕರ್ನಾಟಕ ಕೋ-ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್, ಪ್ರಮುಖರಾದ ವಿಕ್ರಂ ಓಸ್ವಾಲ್, ಹುಲಾಬಚಂದ ಓಸ್ವಾಲ್, ಶ್ರೀಪಾಲ ಪೋರವಾಲ, ಮೋಹನ ಪೋರವಾಲ, ಮಾಂಗಿಲಾಲ ಓಸ್ವಾಲ್, ಮಹೇಂದ್ರ ಓಸ್ವಾಲ್, ಸಂಜು ಓಸ್ವಾಲ್ ಸೇರಿದಂತೆ ಮತ್ತೀತರರು ಪಾಲ್ಗೊಂಡಿದ್ದರು.
ಮುದ್ದೇಬಿಹಾಳ: ಪಟ್ಟಣದ ಅರಿಹಂತ ಚಾರಿಟೇಬಲ್ ಟ್ರಸ್ಟ್ ನ ಪಿ.ಯು.ಸಿ. & ಬಿ.ಎಸ್.ಡಬ್ಲೂ ಕಾಲೇಜು ಹಾಗೂ ಎಂ.ಬಿ.ಎಸ್. ಕಲಾ ಪ್ರಥಮ ದರ್ಜೆ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಭಗವಾನ ಗೋಮ್ಮಟೇಶ ಬಾಹುಬಲಿ ಸ್ವಾಮಿಯ ಸನ್ನಿದಾನದ ಅರಿಹಂತಗಿರಿಯಲ್ಲಿ ೨೬೨೩ ನೇ ಮಹಾವೀರ ಸ್ವಾಮಿಯ ಜನ್ಮಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ನಿವೃತ್ತ ಗ್ರಂಥಪಾಲಕ ಮಾಣಿಕ ಸಗರಿ, ಡಿ.ಸಿ.ಸಿ. ಬ್ಯಾಂಕಿನ ಕಂಪ್ಯೂಟರ ಇಂಜನಿಯರ್ ಅನಿಲಕುಮಾರ ಸಗರಿ, ಸುನಿತಾ ಸಗರಿ, ಮಹಾವೀರ ಮಂಕಣಿ, ಕಾಲೇಜಿನ ಪ್ರಾಚಾರ್ಯ ವಿಪುಲ್ ಸಗರಿ, ಸಿಬ್ಬಂದಿ ವರ್ಗದವರಾದ ನಮ್ರತಾ ಸಗರಿ, ಜಿ.ಡಿ.ಬಡಿಗೇರ, ಅಶೋಕ ಹಡಪದ, ಹೆಚ್.ಎಸ್.ಗೌಡರ್, ಬಸವರಾಜ ಬಡಿಗೇರ, ಶ್ರೀಶೈಲ್ ಹತ್ತಿ, ರಮೇಶ ಮಡಿವಾಳರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಮೋರಟಗಿಯಲ್ಲಿ ಪಂಚ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಸಚಿವ ಎಚ್.ಕೆ.ಪಾಟೀಲ ಅಭಿಮತ ಮೋರಟಗಿ: ಚುನಾವಣೆ ಬಂದಾಗ ಮಾತ್ರ ಇವರಿಗೆ ರಾಮ ನೆನಪಾಗುತ್ತಾನೆ. ಹಿಂದೂ ಮುಸ್ಲಿಮರ ನಡುವೆ ದ್ವೇಷದ ಮನೋಭಾವ ಬೆಳೆಸುವುದು ಮತ್ತು ಮತಗಳಿಸಲು ಬಣ್ಣ ಬಣ್ಣದ ಮಾತುಗಳನ್ನಾಡುವುದೇ ಬಿಜೆಪಿಯ ಸಾಧನೆಯಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹರಿಹಾಯ್ದರು.ತಾಲೂಕಿನ ಮೋರಟಗಿ ಗ್ರಾಮದ ಸಿದ್ದಮುನಿ ಆಶ್ರಮ ಆವರಣದಲ್ಲಿ ಭಾನುವಾರ ಮೀಸಲು ಕ್ಷೇತ್ರ ಲೋಕಸಭಾ ಚುನಾವಣಾ ನಿಮಿತ್ಯವಾಗಿ ಹಮ್ಮಿಕೊಂಡ ಕಾರ್ಯಕರ್ತರ ಸಭೆ ಹಾಗೂ ಪಂಚ ಗ್ಯಾರಂಟಿ ಕಾರ್ಡ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೇ ಪ್ರತಿಯೊಬ್ಬರ ಖಾತೆಗೆ ೧೫ಲಕ್ಷ ರೂ.ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಆ ಭರವಸೆ ಈಡೇರಿದೆಯೇ, ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು ಬಂದಿವೆಯೇ ಎಂದು ಪ್ರಶ್ನಿಸಿದರು.ರೈತರ ಸಾಲ ಮನ್ನಾ ಮಾಡುವಂತೆ ಕೋರಿದರೆ ದೇಶ ದಿವಾಳಿಯಾಗುತ್ತದೆ ಎನ್ನುತ್ತಾರೆ. ಉದ್ಯಮಿಗಳ ಕೋಟಿ, ಕೋಟಿ ಸಾಲವನ್ನು ಮನ್ನಾ ಮಾಡಿದರೆ ದೇಶ ದಿವಾಳಿ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.ರೈತರ ಸಾಲ ಮನ್ನಾ ಮಾಡಿದ ಕೀರ್ತಿ…
ಸಿಂದಗಿ: ಸತ್ಯ ಅಂಹಿಸಾ ತತ್ವಾದರ್ಶಗಳನ್ನು ಬೋಧಿಸಿದ ಭಗವಾನ್ ಮಹಾವೀರ ಅವರನ್ನು ದೇಶದ ಎಲ್ಲ ಸಮುದಾಯದವರು ನೆನೆಯಬೇಕು ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ೨೦೨೪ರ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಭಗವಾನ್ ಮಹಾವೀರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಅವರು, ತ್ಯಾಗ, ಸತ್ಯ ಮತ್ತು ಅಂಹಿಸೆಯ ಶಾಶ್ವತ ಸಂಕೇತವಾದ ಭಗವಾನ್ ಮಹಾವೀರರು ತಮ್ಮ ಬೋಧನೆಗಳ ಮೂಲಕ ಇಡೀ ಮಾನವ ಜನಾಂಗದ ಕಲ್ಯಾಣಕ್ಕೆ ದಾರಿ ಮಾಡಿಕೊಟ್ಟರು. ಅವರ ಪಂಚಶೀಲ ತತ್ವಗಳು ಜನರಿಗೆ ಮಾರ್ಗದರ್ಶನ ನೀಡುತ್ತಿವೆ ಎಂದರು.ಇದೇ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಿ.ಡಿ.ಪಾಟೀಲ, ಸುಭಾಸ ಒನಕುದರಿ, ಡಾ.ಅಭಯ ಕಾಗಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತಿತರರಿದ್ದರು.
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹತ್ತಿರದ ರಾಷ್ಟ್ರೀಯ ಹೆದ್ದಾರಿ-೫೦ ರಲ್ಲಿ ಭಾನುವಾರ ಯಾವುದೇ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ರೂ. ೫೦ ಲಕ್ಷ ನಗದು ಹಣವನ್ನು ಅಧಿಕಾರಿಗಳ ತಂಡ ಜಪ್ತಿ ಮಾಡಿದೆ.ಮನಗೂಳಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಾಂತ ಕಾಂಬಳೆ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಜಯಪುರದಿಂದ ಚಿಕ್ಕಮಗಳೂರಿನ ಹತ್ತಿರದ ಅಜ್ಜಂಪುರಕ್ಕೆ ಹೋಗುತ್ತಿದ್ದ ಕಾರಿನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣದ ಕುರಿತು ಸಹಾಯಕ ಚುನಾವಣಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ., ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ, ಸಿಪಿಐ ಆನಂದರಾವ, ಎಫ್ಎಸ್ಟಿ ತಂಡದ ಮುಖ್ಯಸ್ಥ ದಾವಲಸಾಬ ನದಾಫ ಭೇಟಿ ನೀಡಿ ಕಾರಿನಲ್ಲಿ ದಾಖಲೆಯಿಲ್ಲದ ಇಲ್ಲದ ನಗದು ಹಣ ಎಣಿಕೆ ಮಾಡಿದಾಗ ರೂ. ೫೦ ಲಕ್ಷ ಇರುವದು ಗೊತ್ತಾಗಿದೆ. ದಾಖಲೆಯಿಲ್ಲದ ಈ ಹಣವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಮೂವರು ವ್ಯಕ್ತಿಗಳಾದ ಕಡುರ ತಾಲೂಕಿನ ಅಡಗೇರಿಯ ರಕ್ಷಿತ, ತರಿಕೇರಿ ತಾಲೂಕಿನ ಸೊಖೆಯ ಪ್ರಭು, ತರಿಕೇರಿಯ ತಾಲೂಕಿನ…
ಖರ್ಗೆ ಆಸ್ತಿಯ ಶೇ.೧೦ ದಾನ ಮಾಡಿದರೂ ಕಲಬುರಗಿ ಜನತೆಗೆ ತಲಾ ರೂ.೧೦ಲಕ್ಷ ನೀಡಬಹುದು ಅಫಜಲಪುರ: ಈ ಬಾರಿಯ ಚುನಾವಣೆ ಜಾಧವ ಚುನಾವಣೆ ಅಲ್ಲ, ದೇಶದ ಚುನಾವಣೆ. ಮೂರನೇ ಬಾರಿ ಪ್ರಧಾನಿಯಾಗುವ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿದರು.ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಡಾ. ಉಮೇಶ ಜಾಧವ ಲೋಕಸಭೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದ ಅವರು ಮೋದಿ ಬಗ್ಗೆ ಅಪಪ್ರಚಾರ ಮಾಡುವ ಖರ‍್ಗೆ ಅವರು ತಮ್ಮ ಆಸ್ತಿಯಲ್ಲಿ ೧೦% ದಾನ ಮಾಡಿದರೂ ಕೂಡ ಕಲಬುರಗಿ ಜನರಿಗೆ ತಲಾ ಹತ್ತು ಲಕ್ಷ ದಾನ ಮಾಡಬಹುದು ಎಂದರು.ಅಭ್ಯರ್ಥಿ ಡಾ. ಉಮೇಶ ಜಾಧವ ಮಾತನಾಡುತ್ತಾ, ಕಲಬುರಗಿಗೆ ಮೋದಿ ಕೊಡುಗೆ ಏನು? ಜಾಧವ ಕೊಡುಗೆ ಏನೆಂದು ಕಾಂಗ್ರೆಸ್ ನವರು ಕೇಳುತ್ತಾರೆ. ಅವರಿಗೆ ಕಣ್ಣು ಕಾಣುತ್ತಿಲ್ಲ, ಭಾರತಮಾಲಾ ರಾಷ್ಟ್ರೀಯ ಹೆದ್ದಾರಿ ನರ‍್ಮಾಣ ಆಗುತ್ತಿದೆ. ಸ್ಟೇಷನ್ ಗಾಣಗಾಪೂರ ರೈಲ್ವೆ ನಿಲ್ದಾಣ ರೂ.೩೨ ಕೋಟಿ ವೆಚ್ಚದಲ್ಲಿ ಹೈಟೆಕ್ ಆಗುತ್ತಿದೆ.…
ಮುದ್ದೇಬಿಹಾಳ: ಹೃದಯ ಸಂಬಂಧಿ ಖಾಯಲೆಗಳ ತಪಾಸಣೆಗಾಗಿ ನಮ್ಮಲ್ಲಿ ಯಾವುದೇ ವಿಶೇಷ ಉಪಕರಣಗಳಿಲ್ಲದ ಕಾರಣ ನಮ್ಮ ಭಾಗದ ಜನತೆ ೮೦ಕಿ.ಮೀ ದೂರದ ವಿಜಯಪುರ ಮತ್ತು ಬಾಗಲಕೋಟೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಸುವ ಅನಿವಾರ್ಯತೆ ಇತ್ತು. ಸಧ್ಯ ನಮ್ಮೂರಲ್ಲಿಯೇ ೨ಡಿ ಇಕೋ ಸ್ಕ್ಯಾನಿಂಗ್ ಸೌಲಭ್ಯ ದೊರಕಿದ್ದು ನಮ್ಮ ಭಾಗದ ಜನತೆಗೆ ಸಾಕಷ್ಟು ಸಹಾಯಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಬಿರಾದಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೨ಡಿ ಇಕೋ ಸ್ಕ್ಯಾನಿಂಗ್ ಮಶೀನ್ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಮ್ಮ ಭಾಗದಲ್ಲಿ ಬಹಳ ದಿನಗಳ ಹಿಂದೆಯೇ ಎಲ್ಲ ಸೌಲಭ್ಯಗಳನ್ನೊಳಗೊಂಡ ಬಹಳ ಆಸ್ಪತ್ರೆಗಳಾಗಬೇಕಿತ್ತು. ಆದರೆ ಸ್ಥಳೀಯರ ಸಹಕಾರದ ಕೊರತೆ, ಚಿಕ್ಕ ಪುಟ್ಟ ಕಾರಣಗಳಿಗೆ ಮತ್ತು ಆಕಸ್ಮಿಕ ಘಟನೆಗಳಲ್ಲಿ ಜಗಳವಾಡುವ ಪರಿಣಾಮ ಬಹುತೇಕರು ಹಿಂದೇಟು ಹಾಕಿದ್ದಾರೆ ಎಂದು ಡಾಕ್ಟರ್‌ಗಳು ಮಾತನಾಡಿಕೊಳ್ಳುತ್ತಿರುತ್ತಾರೆ. ರೋಗಿಯ ರೋಗವನ್ನು ಗುಣಪಡಿಸುವದು ಮತ್ತು ಜೀವ ಉಳಿಸುವದೇ ಡಾಕ್ಟರ್‌ಗಳ ಮೊದಲ ಆದ್ಯ ಕರ್ತವ್ಯ ಎನ್ನುವದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಯಾರಾದರೂ ಡಾಕ್ಟರ್‌ಗಳಿಗೆ ಸಮಸ್ಯೆಯುಂಟು…
