ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ | ಪತ್ರಕರ್ತರಿಗೆ ಸನ್ಮಾನ
ಸಿಂದಗಿ: ಇಡೀ ಜಗತ್ತಿನಲ್ಲಿ ಪತ್ರಿಕಾ ರಂಗ ವಿಶಿಷ್ಠಪೂರ್ಣ ಸ್ಥಾನವನ್ನು ಪಡೆದುಕೊಂಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗದ ಪಾತ್ರ ಅಪಾರವಾಗಿದೆ ಎಂದು ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು, ಪತ್ರಿಕೆಗಳು ಪತ್ರಿಕಾ ಧರ್ಮ ಪಾಲಿಸುವುದರ ಜೊತೆಗೆ ನ್ಯಾಯ, ನಿಷ್ಠುರವಾಗಿ ಸಮಾಜದಲ್ಲಿನ ಸತ್ಯಾಂಶದ ವರದಿಗಳನ್ನು ಪ್ರಕಟಣೆ ಮಾಡುತ್ತಾ ನೊಂದವರ ಧ್ವನಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಹಿರಿಯ ಪರ್ತಕರ್ತರಾದ ಟಿ.ಕೆ.ಮಲಗೊಂಡ, ಬೆನಕರಾಜ ಜೋಗುರ, ರಮೇಶ ಪೂಜಾರ, ನಾಗೇಶ ತಳವಾರ ಮಾತನಾಡಿ, ಪರ್ತಕರ್ತರು ಯಾವುದೇ ಬೆದರಿಕೆಗಳಿಗೆ ಹೆದರದೆ ನಿಷ್ಠುರವಾಗಿ ಸುದ್ದಿಗಳನ್ನು ಮಾಡಬೇಕು. ಯಾರಿಗೂ ಮರ್ಜಿ ಕಾಯಬಾರದು. ಇಂದಿನ ಜನಾಂಗಕ್ಕೆ ಓಂ ಶಾಂತಿ ತಾಣ ಅಧ್ಯಾತ್ಮದ ಒಲವನ್ನು ಮೂಡಿಸಿ ಅವರನ್ನು ಸುಸಂಸ್ಕೃತವಂತರನ್ನಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವ ಕಾರ್ಯವು ಸಂತಸ ತಂದಿದೆ. ಇದು ನಮಗೆ ಅವಿಸ್ಮರಣಿಯ ಕ್ಷಣವಾಗಿದೆ ಎಂದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಶಕ್ಷ ಆನಂದ ಶಾಬಾದಿ ಮಾತನಾಡಿ, ನಮ್ಮ ದಿನನಿತ್ಯದ ಬದುಕನ್ನು ಇನ್ನೊಬರು ದೂರದಿಂದಲೇ ನೋಡುತ್ತಿರುತ್ತಾರೆ. ಆದರೆ ಅದನ್ನು ಮೇಲೆ ಕುಳಿತ ಭಗವಂತ ನೋಡಿ ನಮ್ಮ ಜೀವನದ ಪಾಪ-ಪುಣ್ಯಗಳನ್ನು ಅಳೆಯುತ್ತಾನೆ. ನಮಗೆ ಆಹ್ವಾನಿಸಿ ಸತ್ಕರಿಸಿದ ಕಾರಣ ಮತ್ತಷ್ಟು ನಮ್ಮಲ್ಲಿ ಉತ್ಸಾಹ ಮತ್ತು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರಾ ಅಕ್ಕಾಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಕಾನಿಪ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪುರೆ, ಪರ್ತಕರ್ತರಾದ ಮಲ್ಲಿಕಾರ್ಜುನ ಅಲ್ಲಾಪೂರ, ಸುದರ್ಶನ ಜಂಗಣ್ಣಿ, ಶಿವಾನಂದ ಆಲಮೇಲ, ಮಹಾಂತೇಶ ನೂಲಾನವರ, ವಸಿಂ ಗೋಗಿ, ರಷೀದ ಕುಮಸಗಿ, ಅಸ್ಪಾಕ್ ಕರ್ಜಗಿ, ಗುಂಡು ಕುಲಕರ್ಣಿ, ಅಂಬರೀಶ ಸುಣಗಾರ, ಬಸವರಾಜ ಹಜೆನವರ, ವಿಜಯಕುಮಾರ ಪತ್ತಾರ, ಆರಿಫ್ ಅಂತರಗಂಗಿ, ತಾನಾಜಿ ಕನಸೆ, ವಿಜಯಕುಮಾರ ತೇಲಿ, ಶಿವನಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಸಂಗಣ್ಣ ಬಿರಾದಾರ, ಬಸವರಾಜ ಕಕ್ಕಳಮೇಲಿ, ರೇವಣಸಿದ್ದ ಪೂಜಾರಿ, ಮಲ್ಲಪ್ಪ ಡೋಣುರ, ಎಂ.ಎಂ.ದೊಡಮನಿ, ಮಲ್ಲಮ್ಮ ವಣಕ್ಯಾಳ, ಸುನಂದಾ ಕಕ್ಕಳಮೇಲಿ, ಮಾದೇವಿ ಪೂಜಾರಿ, ಮಂಜೂಳಾ ಹೂಗಾರ, ಸೀಮಾ ಉಡಚಾಣ, ಮಾದೇವಿ ಕರಲಗಿ, ಕಸ್ತೂರಿಬಾಯಿ ಬಿರಾದಾರ ಸೇರಿದಂತೆ ಅನೇಕರು ಇದ್ದರು.
ಶಿಕ್ಷಕ ಎಸ್.ಬಿ.ಚೌದರಿ ನಿರೂಪಿಸಿ, ವಂದಿಸಿದರು.

