ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ದಿನೇ ದಿನೇ ಒಳಹರಿವು ಹೆಚ್ಚುತ್ತಿದ್ದು, ಇದರಿಂದ ಜಲಾಶಯದ ಮಟ್ಟ ಕ್ರಮೇಣ ಏರಿಕೆಯಾಗುತ್ತಿದೆ.
ಗುರುವಾರ ಜಲಾಶಯಕ್ಕೆ ೩೪,೫೮೪ ಕ್ಯುಸೆಕ್ ನೀರು ಹರಿದು ಬಂದಿದೆ. ಮಹಾರಾಷ್ಟçದಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಅಲ್ಲಿಂದ ೫೦ ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಮುಂದಿನ ಒಂದೆರೆಡು ದಿನಗಳ ನಂತರ ಜಲಾಶಯದ ಮಟ್ಟ ಇನ್ನಷ್ಟು ಹೆಚ್ಚಲಿದೆ.
ಆಲಮಟ್ಟಿ ಸಮುದ್ರ ಮಟ್ಟದಿಂದ ೪೮೮.೯೪೮ಮೀ.ಎತ್ತರದಲ್ಲಿದೆ ಆಣೆಕಟ್ಟೆಯ ಉದ್ದ ೧೫೬೪.೮೩ಮೀ.ಹೊಂದಿ ೫೧೯.೬ಮೀಟರುಗಳವರೆಗೆ (೧೨೩.೦೮೧ಟಿಎಮ್‌ಸಿ)ಅಡಿ ಗರಿಷ್ಟ ನೀರು ಸಂಗ್ರಹ ಮಾಡುವ ಸಾಮಥ್ರ‍್ಯ ಹೊಂದಿದೆ.
ನೀರಿನ ಸಂಗ್ರಹ ಮಾಹಿತಿ: ೫೧೯.೬೦ ಮೀ ಗರಿಷ್ಠ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಗುರುವಾರ ೫೧೨.೫೪ ಮೀ ವರೆಗೆ ನೀರು ಇತ್ತು.೧೨೩.೦೮೧ಟಿಎಂಸಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ ೨೬.೭೪೨ ಟಿಎಮ್‌ಸಿ ಅಡಿ ನೀರಿದೆ. ಅದರಲ್ಲಿ ಬಳಕೆಗೆ ಯೋಗ್ಯ ೩ ಟಿಎಮ್‌ಸಿ ನೀರಿದೆ.
ಜಲಾಶಯಕ್ಕೆ ೩೪,೫೮೪ ಕ್ಯುಸೆಕ್ ಒಳಹರಿವು ಇದೆ. ಜಲಾಶಯದಿಂದ ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ೫೦ ಕ್ಯುಸೆಕ್ ಮತ್ತು ೩೮೦ ಕ್ಯುಸೆಕ್ ನೀರು ಕುಡಿಯುವ ನೀರು.
ಒಟ್ಟು ಹೊರಹರಿವು ೪೩೦ ಕ್ಯುಸೆಕ್ ಹೊರಹರಿವಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

