ಮುದ್ದೇಬಿಹಾಳ: ಅಸೂಯೆ ಪಡದ ವೃತ್ತಿ ಯಾವುದಾದರೂ ಇದ್ರೆ ಅದು ಶಿಕ್ಷಕ ವೃತ್ತಿ ಮಾತ್ರ ಎಂದು ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸೇವಾ ನಿವೃತ್ತರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಹಿಂದೂಗಳಲ್ಲಿ ಸೇವೆ ಹುಟ್ಟಿನಿಂದಲೇ ಬರುತ್ತದೆ. ಅದಕ್ಕೊಂದು ನಿದರ್ಶನವೆಂದರೆ ಹಿಂದೂ ಸೇವಾ ಪ್ರತಿಷ್ಠಾನ ಪ್ರಥಮ ನಿರ್ದೇಶಕರಾದ ದಿ.ಅಜೀತ ಕುಮಾರವರ ಕರೆಗೆ ಓಗೊಟ್ಟು ಬಂದ ಲಕ್ಷಾಂತರ ಯುವಕ ಯುವತಿಯರು ನಿಸ್ವಾರ್ಥ ಸೇವೆಯಲ್ಲಿ ಈಗಲೂ ತೊಡಗಿಕೊಂಡಿದ್ದಾರೆ. ಅಂತಹ ಸಾಲಿನಲ್ಲಿ ಉತ್ತರ ಕನ್ನಡದಿಂದ ಉತ್ತರ ಕರ್ನಾಟಕಕ್ಕೆ ಬಂದು ಇಲ್ಲಿಯ ವಾತಾವರಣ, ಆಹಾರ, ವಿಚಾರಗಳಿಗೆ ಹೊಂದಿಕೊಂಡು ೪ ದಶಕಗಳ ಸೇವೆ ಸಲ್ಲಿಸಿರುವ ಲೀಲಾ ಭಟ್ಟ ಮತ್ತು ಶಾಂತಾ ಭಟ್ಟ ಮಾತಾಜಿಯವರ ಸೇವೆ ಗಮನಾರ್ಹವಾಗಿದೆ ಎಂದರು.
ಶಾಲೆಯ ಹಿರಿಯ ವಿದ್ಯಾರ್ಥಿ ಉದಯಸಿಂಗ ರಾಯಚೂರ, ಪ್ರಸನ್ನ ಇಲ್ಲೂರ, ಸಿದ್ದರಾಜ ಹೋಳಿ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ಅಭಿನಂದಿತರಾದ ಲೀಲಾ ಭಟ್ಟ, ಶಾಂತಾ ಭಟ್ಟ, ಜಿ.ಜೆ.ಪಾದಗಟ್ಟಿ, ಪ್ರಭು ನಾಗಠಾಣ ನಾಲ್ವರ ಸೇವಾಧಕ್ಷತೆಯ ಕುರಿತು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಬಿ.ಪಿ.ಕುಲಕರ್ಣಿ ಅಧ್ಯಕ್ಷೀಯ ನುಡಿಯಲ್ಲಿ ಅಭಿನಂದಿತರಿಂದ ಸಂಸ್ಥೆಯ ಬೆಳವಣಿಗೆ ಹೇಗೆ ಸಹಕಾರಿಯಾಯಿತು ಮತ್ತು ಅವರ ವೃತ್ತಿ ಜೀವನದ ಕಾಲಘಟ್ಟವನ್ನು ನೆನಪಿಸಿಕೊಟ್ಟರು.
ಈ ವೇಳೆ ಆಡಳಿತ ಮಂಡಳಿಯ ಡಾ. ಎಸ್.ಬಿ.ವಡವಡಗಿ, ಬಿ.ಆರ್.ಓಸ್ವಾಲ, ಜಿ.ಎಸ್.ಓಸ್ವಾಲ್, ಮಾಣಿಕಚಂದ ದಂಡಾವತಿ, ಸುಭಾಸ ಬಿದಿರಕುಂದಿ, ಸದಾನಂದ ನಾಗಠಾಣ, ಡಾ.ಪರಶುರಾಮ ಪವಾರ, ಪುರಸಭೆಯ ಸದಸ್ಯರುಗಳಾದ ಭಾರತಿ ಪಾಟೀಲ್, ಸಂಗಮ್ಮ ದೇವರಳ್ಳಿ, ಪ್ರೀತಿ ದೇಗಿನಾಳ, ಸಹನಾ ಬಡಿಗೇರ, ಸಾಹಿತಿ ಅಶೋಕ ಮಣಿ, ಬಿ.ಎಸ್.ಮೇಟಿ, ಎಮ್.ಎನ.ಯರಝರಿ, ಅರವಿಂದ ಕೊಪ್ಪ, ಎಮ್.ಬಿ.ನಾವದಗಿ ರಾಜಶೇಖರ ಪಾಟೀಲ್, ಚಿದಂಬರ್ ಕಮ್ಮರಕರ್, ಎಸ್.ಎಲ್.ಗುರವ, ಶಂಕರ ಬೇವಿನ ಗಿಡ, ಬಸವರಾಜ ನಂದಿಕೇಶ್ವರಮಠ, ಮೀನಾಕ್ಷಿ ಕುಲಕರ್ಣಿ, ಶಶಿಕಲಾ ಕಡಿ, ಸುರೇಖಾ ನಾಗಠಾಣ, ಸೋಮನಗೌಡ ಸಾಲವಾಡಗಿ, ಆರತಿ ಪಾದಗಟ್ಟಿ, ಬಾಪುಗೌಡ ಪಾಟೀಲ್, ವಿಕ್ರಮ ಓಸ್ವಾಲ್, ಅಶೋಕ ರೇವಡಿ ಸೇರಿದಂತೆ ಪಾಲಕಕರು, ಗಣ್ಯರು ಹಾಜರಿದ್ದರು.
ಗುರುಮಾತೆ ರಂಜಿತಾ ಹೆಗಡೆ ಪ್ರಾರ್ಥಿಸಿದರು, ಪ್ರಾಚಾರ್ಯ ಅರುಣ ಹುನಗುಂದ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭು ಕಡಿ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕ ಮಂಜುನಾಥ ಪಡದಾಳಿ ನಿರೂಪಿಸಿದರು. ಮುಖ್ಯಗುರು ರಾಮಚಂದ್ರ ಹೆಗಡೆ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

