Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಹನುಮಾನ ಜಯಂತಿ ನಿಮಿತ್ತ ಭಕ್ತರು ಮಂಗಳವಾರದಂದು ಗ್ರಾಮದ ಹನುಮಾನ ಗುಡಿಗೆ ಆಗಮಿಸಿ, ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಿದರು.ಹನುಮಂತನು ಮಹಾದೇವನ ಅವತಾರವಾಗಿದ್ದು, ಅಷ್ಟ ಸಿದ್ಧಿ, ನವ ನಿಧಿ, ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯ ಪ್ರತೀಕವಾಗಿದ್ದು, ಹನುಮಂತನಿಗೆ ಸಲ್ಲಿಸಿದ ಪ್ರಾರ್ಥನೆಯಿಂದ ಎಲ್ಲರ ಜೀವನದಲ್ಲಿ ಸಾಮರಸ್ಯ, ಶಕ್ತಿ ಮತ್ತು ಯಶಸ್ಸನ್ನು ತರುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿ ಈಗಲೂ ಜನಜನಿತವಾಗಿದೆ.ಹನುಮಂತನ ವಿಗ್ರಹಕ್ಕೆ ತುಪ್ಪದಿಂದ ಮತ್ತು ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ ಹನುಮನನ್ನು ಭಕ್ತಿಯಿಂದ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಲ್ಲು ಹೂಗಾರ, ನವೀನ ಗುಣಕಿ, ಪ್ರಶಾಂತ ತಳವಾರ, ಸಿದ್ದು ಕನ್ನೋಳ್ಳಿ, ರಾಜು ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Udayarashmi kannada daily newspaper
ಚಡಚಣ: ಪಟ್ಟಣದ ರಾಹುಲ ನಿರಾಳೆ ಅವರನ್ನು ಚಡಚಣ ಬಿಜೆಪಿ ಮಂಡಲದ ಚಡಚಣ ನಗರ ಘಟಕದ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಚಡಚಣ ಬಿಜೆಪಿ ಮಂಡಲದ ಅಧ್ಯಕ್ಷರಾದ ಕಾಂತುಗೌಡ.ಸಿ.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-ಮಲ್ಲಿಕಾರ್ಜುನ ಎನ್.ಕೆಂಭಾವಿ, ಬ್ರಹ್ಮದೇವನಮಡು ಬ್ರಹ್ಮದೇವನಮಡು: ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ, ಶ್ರೀಶೈಲ ಗಿರಿಯ ಪ್ರತಿರೂಪ, ಇಷ್ಟಾರ್ಥ ಕರುಣಿಸುವ ಪುಣ್ಯತಾಣ ಎನಿಸಿದ ಗೋಲಗೇರಿ ಕ್ಷೇತ್ರದಲ್ಲಿ ಅದ್ಧೂರಿ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸದೆ ಇಲ್ಲಿನ ಗೊಲ್ಲಾಳೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಪುಟ್ಟ ಗ್ರಾಮ ಗೋಲಗೇರಿ. ಅಂದಾಜು ೫ ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ ನೂರಾರು ವರ್ಷಗಳ ಹಿಂದೆ ಕುರಿ ದಡ್ಡಿಯಾಗಿತ್ತು. ಪಕ್ಕದ ಢವಳಾರ ಗ್ರಾಮದ ಬಲ್ಲುಗ-ದುಗ್ಗಳಾದೇವಿ ದಂಪತಿಗೆ ೧೦ನೇ ಶತಮಾನದ ಕೊನೆಯಲ್ಲಿ ಗೊಲ್ಲಾಳೇಶ ಎಂಬ ಪುತ್ರ ಜನಿಸುತ್ತಾನೆ. ಮನೆತನದ ಕುರಿ ಕಾಯುವ ವೃತ್ತಿಯನ್ನೇ ಮುಂದುವರಿಸಿದ ಗೊಲ್ಲಾಳೇಶ ಜನ್ಮಾಂತರದ ಸುಕೃತದಿಂದ ನಿರಂತರ ಶಿವನ ಧ್ಯಾನದಲ್ಲೇ ತೊಡಗುತ್ತಾನೆ. ಒಮ್ಮೆ ನಾಮಸ್ಮರಣೆಯಲ್ಲಿ ಮೈಮರೆತ ಸಂದರ್ಭದಲ್ಲೇ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ಹೊರಟಿದ್ದ ನಂದಯ್ಯಸ್ವಾಮಿ ಎಂಬುವರ ಭೇಟಿಯಾಗುತ್ತದೆ. ಅವರಿಗೆ ಗೊಲ್ಲಾಳೇಶ ಒಂದು ನಾಣ್ಯ ನೀಡಿ ಶ್ರೀಶೈಲದಿಂದ ಲಿಂಗ ತೆಗೆದುಕೊಂಡು ಬರಲು ಹೇಳುತ್ತಾನೆ.ಆದರೆ ಲಿಂಗ ತರುವುದನ್ನು ಮರೆತ ನಂದಯ್ಯಸ್ವಾಮಿ, ಹತ್ತಿರದಲ್ಲೇ…
ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಿಪಕ್ಷಗಳ ಮೇಲೆ ವಾಗ್ದಾಳಿ ಹುಬ್ಬಳ್ಳಿ: ಇದು ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರದ ಮೈತ್ರಿಯೇ ಹೊರತು ಬೇರೇನೂ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಇತರ ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ಇಂಡಿಯಾ ಮೈತ್ರಿಕೂಟದ ಬಹುತೇಕ ನಾಯಕರು ಜಾಮೀನಿನ ಮೇಲೆ ಅಥವಾ ಜೈಲಿನಲ್ಲಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ದೇಶವಿರೋಧಿಗಳ ಜತೆ ಬೆರೆಯಲು ನಾಚಿಕೆಯಾಗುವುದಿಲ್ಲ’ ಎಂದು ಹೇಳಿದರು.ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರ’ ಮಾಡುವ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕ್ ಪರ ಘೋಷಣೆಗಳನ್ನು ಕೂಗುವವರನ್ನು ರಕ್ಷಿಸುತ್ತಿದ್ದಾರೆ. ಅವರು ಇಂತಹ ಘಟನೆಗಳನ್ನು ಖಂಡಿಸುವುದಿಲ್ಲ. ಕಾಂಗ್ರೆಸ್ ಸುಳ್ಳುಗಾರರ ಪಕ್ಷ. ರಾಜ್ಯವು ತನ್ನ ಪಾಲಿನ ಹಣವನ್ನು ಪಡೆಯುತ್ತಿಲ್ಲ ಎಂದು…
ಢವಳಗಿ ಹಳ್ಳದ ಬಳಿ ಪಲ್ಟಿಯಾದ ಕಾರು | ಈರ್ವರ ಸಾವು ಮುದ್ದೇಬಿಹಾಳ: ಮದುವೆಗೆಂದು ತೆರಳಿದ್ದ ಕುಟುಂಬದ ಇಬ್ಬರನ್ನು ದುರ್ವಿಧಿ ಮಸಣಕ್ಕೆ ಕರೆದೊಯ್ದ ಘಟನೆ ತಾಲೂಕಿನ ಢವಳಗಿ ವ್ಯಾಪ್ತಿಯ ಹಳ್ಳದ ಬಳಿ ರವಿವಾರ ರಾತ್ರಿ ೧೦-೪೫ ರ ವೇಳೆ ಸಂಭವಿಸಿದೆ.ಬಾಗೇವಾಡಿ ತಾಲೂಕು ಮಸೀಬಿನಾಳ ಗ್ರಾಮದ ನಿವೃತ್ತ ಯೋಧ ರಾಚಯ್ಯ ಪುರಾಣಿಕಮಠ(೩೭) ಮತ್ತು ತಾಳಿಕೋಟೆ ತಾಲೂಕಿನ ಜಲಪೂರ ಗ್ರಾಮದ ಪುಷ್ಪಾವತಿ ಹಿರೇಮಠ(೫೫) ಮೃತ ದುರ್ದ್ದೆವಿಗಳು. ಮದುವೆ ಮುಗಿಸಿಕೊಂಡು ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಪುಷ್ಪಾವತಿ ಮೃತಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ರಸ್ತೆ ಮಧ್ಯೆ ರಾಚಯ್ಯ ಅಸುನೀಗಿದ್ದಾರೆ.ಘಟನೆಯಲ್ಲಿ ಮೃತ ಸೈನಿಕ ರಾಚಯ್ಯನ ಪತ್ನಿ ಈರಮ್ಮ ಪುರಾಣಿಕಮಠ, ಮಕ್ಕಳಾದ ಶಿವಕುಮಾರ ಪುರಾಣಿಕಮಠ ಮತ್ತು ಸಂಪತಕುಮಾರ ಪುರಾಣಿಕಮಠ ಪ್ರಾಣಾಪಾಯದಿಂದ ಪಾರಾಗಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ದೌಡಾಯಿಸಿದ ಪಿಎಸ್‌ಐ ಸಂಜೀವ ತಿಪರೆಡ್ಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮುದ್ದೇಬಿಹಾಳ: ಬಿರುಗಾಳಿಗೆ ಸರ್ವಿಸ್ ವೈರ್ ಮೇಲೆ ಮರವೊಂದು ಬಿದ್ದ ಪರಿಣಾಮ ಮೂರು ವಿದ್ಯತ್ ಕಂಬಗಳು ನೆಲಕ್ಕುರುಳಿದ ಘಟನೆ ತಾಲೂಕಿನ ಹಿರೇಮುರಾಳ ಗ್ರಾಮದ ಹೊಸ ಪ್ಲಾಟ್ ನಲ್ಲಿ ರವಿವಾರ ಮಧ್ಯರಾತ್ರಿ ಸಂಭವಿಸಿದೆ.ಏಕಾಏಕಿ ಶುರುವಾದ ಬಿರುಗಾಳಿಗೆ ಮರ ಮುರಿದು ವಿದ್ಯುತ್ ಕಂಬದಿಂದ ಬಂದಿರುವ ತಂತಿಯ ಮೇಲೆ ಬಿದ್ದಿದೆ. ಭಾರ ತಾಳಲಾರದೇ ಮೂರೂ ಕಂಬಗಳು ನೆಲಕ್ಕುರುಳಿವೆ. ಜೋರಾಗಿ ಬಂದ ಶಬ್ಧದಿಂದ ಎಚ್ಚರವಾದ ನಿವಾಸಿ ಈರಯ್ಯ ಹಿರೇಮಠ ರಾತ್ರಿಯೇ ಹೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿ ವಿದ್ಯುತ್ ಕಡಿತಗೊಳಿಸುವಂತೆ ತಿಳಿಸಿದ್ದಾರೆ. ಘಟನೆಯಿಂದ ಯಾವುದೇ ವ್ಯಕ್ತಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಮುದ್ದೇಬಿಹಾಳ: ಹನುಮಾನ ದೇವರ ಜಯಂತ್ಯೋತ್ಸವದ ಅಂಗವಾಗಿ ಪಟ್ಟಣದ ಹುಡ್ಕೋ ಬಡಾವಣೆಯ ಶಿರವಾಳ ಲೇಔಟ್ ನಲ್ಲಿರುವ ವರದಾಂಜನೇಯ ದೇವಸ್ಥಾನದಲ್ಲಿ ಏ.೨೩ ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ ೬ರಿಂದಲೇ ಪಂಚಾಮೃತ ಅಭಿಷೇಕ, ಅಲಂಕಾರ, ಪೂಜೆ, ಕುಂಕುಮಾರ್ಷನೆ, ಎಲೆ ಪೂಜೆ, ಧ್ವಜಾರೋಹಣ ಮತ್ತು ಕಳಸಾರೋಹಣ, ಮಹಾಪ್ರಸಾದ ಮತ್ತು ಸತ್ಯನಾರಾಯಣ ಪೂಜೆ ಕಾರ್ಯಕ್ರಮಗಳು ಜರುಗಲಿದ್ದು ಭಕ್ತಾದಿಗಳು ಆಗಮಿಸಿ ಆಂಜನೇಯನ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆ ತಿಳಿಸಿದೆ.
ಸಿಂದಗಿ: ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನೇಹಾಳನ್ನು ಹತ್ಯೆಗೈದ ವ್ಯಕ್ತಿಯನ್ನು ನಿರ್ದಾಕ್ಷಿಣ್ಯವಾಗಿ ಗಲ್ಲಿಗೇರಿಸಬೇಕು ಎಂದು ಮಹಿಳಾ ಜಾಗರಣ ವೇದಿಕೆಯ ಅಧ್ಯಕ್ಷೆ ಶೈಲಜಾ ಸ್ಥಾವರಮಠ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಬಸವೇಶ್ವರ ವತ್ತದಲ್ಲಿ ನೇಹಾ ಹಿರೇಮಠ ಕೊಲೆಯನ್ನು ಖಂಡಿಸಿ ಮಹಿಳಾ ಜಾಗರಣ ವೇದಿಕೆಯಡಿಯಲ್ಲಿ ವಿವಿಧ ಮಹಿಳಾ ಸಂಘಟನೆಗಳಿಂದ ಮೇಣದ ಬತ್ತಿಯನ್ನು ಉರಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿ ಮೀರುತ್ತಿವೆ. ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು. ತಪ್ಪಿತಸ್ತನಿಗೆ ಗಲ್ಲಿಗೇರಿಸಿ ನೇಹಾಳ ಸಾವಿಗೆ ನ್ಯಾಯ ಒದಗಿಸಬೇಕು. ವಿಕೃತ ಮನಸ್ಸಿನ ಕ್ರೂರತ್ವ, ಮೃಗುತ್ವವನ್ನು ಮೆರೆಯುತ್ತಿರುವ ಇಂದಿನ ಪೀಳಿಗೆಗಳಿಗೆ ಕಡಿವಾಣ ಹಾಕಲು ಕಾನೂನಿನ ವ್ಯವಸ್ಥೆ ಬದಲಾಗಬೇಕು. ಮತ್ತು ಹತ್ಯೆಗೈದ ಆರೋಪಿಗೆ ಗಲ್ಲಿಗೇರಿಸಿದಾಗ ಮಾತ್ರ ಅವಳ ಆತ್ಮಕ್ಕೆ ಶಾಂತಿ ದೊರಕಲಿದೆ ಎಂದರು.ಈ ವೇಳೆ ವೀರಶೈವ ಮಹಾಸಭಾದ ಮಹಿಳಾ ಅಧ್ಯಕ್ಷೆ ಮಹಾದೇವಿ ಹಿರೇಮಠ, ಶಂಕುತಲಾ ಹಿರೇಮಠ, ಶ್ಯಾಮಲಾ ಮಂದೇವಾಲ, ರಾಜೇಶ್ವರಿ ಪಾಟೀಲ. ಮೇನಕಾ ಗುಡ್ಡಳ್ಳಿ, ಶೈನಾಬಿ ಮಸಳಿ, ಶೋಭಾ ಚಿಗರಿ, ಶಾರದಾ ಮಂಗಳೂರು, ಶಶಿಕಲಾ ಅಂಗಡಿ, ರೇಣುಕಾ ಮನೂರ,…
ಸಿಂದಗಿ: ಕಾಂಗ್ರೆಸ್ ಪಕ್ಷ ಬಡವರು ಮತ್ತು ದೀನ ದಲಿತರು ಸೇರಿದಂತೆ ಎಲ್ಲ ವರ್ಗಗಳ ಪರವಾಗಿದೆ. ನಾವು ಅಭಿವೃದ್ಧಿ ಕಾರ್ಯಗಳನ್ನು ಮುಂದೆ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ, ಕೋಮು, ಧರ್ಮ ಬದಿಗಿಟ್ಟು ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಇಂದು ಚುನಾವಣೆ ಎದುರಿಸುತ್ತಿರುವುದು ನಮಗೆ ಸಂತಸವಿದೆ. ಆದರೆ ಬಿಜೆಪಿ ಕೇವಲ ಒಬ್ಬ ವ್ಯಕ್ತಿ ಹಾಗೂ ಧರ್ಮ ಇಟ್ಟುಕೊಂಡು ಚುನಾವಣೆಗೆ ಬಂದಿರುವುದು ಶೋಚನೀಯವಾಗಿದೆ ಎಂದು ವಾಗ್ದಾಳಿ ನಡೆಸಿದರು.ಮಂಗಳವಾರ ಏ.೨೪ರಂದು ಬೆಳಿಗ್ಗೆ ೧೧ಗಂಟೆಗೆ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಸಿಂದಗಿಯ ಮಾಂಗಲ್ಯ ಭವನದಲ್ಲಿ ಚುನಾವಣೆ ಪ್ರಚಾರ ಸಭೆ ಜರುಗಲಿದೆ. ಕಾರಣ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ನಾಯಕರು ಅಭಿಮಾನಿಗಳು ಆಗಮಿಸಿ ಲೋಕಸಭಾ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಶಕ್ತಿಯಾಗಿ ನಿಲ್ಲಬೇಕಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೋಳಿಸಲು ವಿನಂತಿಸಿದರು.ಈ ವೇಳೆ ಕಾಂಗ್ರೆಸ್ ವಕ್ತಾರ ರಾಜಶೇಖರ ಕೂಚಬಾಳ ಮಾತನಾಡಿ, ಮೂವತ್ತು ವರ್ಷಗಳ ಕಾಲ ಒಂದೇ…
