ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ ೧೪ ಗ್ರಾಮಗಳಲ್ಲಿ ಜುಲೈ ೬ ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜುಲೈ ೬ ರ ಬೆಳಗ್ಗೆ ೧೧ ಗಂಟೆಗೆ ಹಗರಗುಂಡ ಗ್ರಾಮದ ಸಂತ ಸೇವಾಲಾಲ ದೇವಸ್ಥಾನದಲ್ಲಿ ವಿಜಯಪುರದ ಉಪ ವಿಭಾಗಾಧಿಕಾರಿಗಳು , ಅಂಬಳನೂರು ಗ್ರಾಮದ ಅಡಿವೆಪ್ಪಾ ಮುತ್ಯಾ ದೇವಸ್ಥಾನದಲ್ಲಿ ಇಂಡಿ ಉಪವಿಭಾಗಾಧಿಕಾರಿಗಳು ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ವಿಜಯಪುರ ಗ್ರೇಡ್ ೨ ತಹಶೀಲ್ದಾರ್ ಅವರು ಕುಮಟಗಿ ಗ್ರಾಮದ ಗ್ರಾಮ ಚಾವಡಿಯಲ್ಲಿ, ತಿಕೋಟಾದ ಗೇಡ್ ೨ ತಹಶೀಲ್ದಾರ್ ಅವರು ಧನರ್ಗಿ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ಬಬಲೇಶ್ವರ ಗ್ರೇಡ್ ೨ ತಹಶೀಲ್ದಾರ್ ಇವರು ಶೇಗುಣಸಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಬಸವನ ಬಾಗೇವಾಡಿಯ ಗ್ರೇಡ್ ೨ ತಹಶೀಲ್ದಾರ್ ಇವರು ಮುತ್ತಗಿ ಗ್ರಾಮದ ಶಿವನ ಗುಡಿಯಲ್ಲಿ, ಕೋಲಾರ ತಹಶೀಲ್ದಾರ ಅವರು ತಲೇವಾಡ ಗ್ರಾಮದ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ, ನಿಡಗುಂದಿ ಗ್ರೇಡ್ ೨ ತಹಶೀಲ್ದಾರ್ ಇವರು ದೇವಲಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ, ಮುದ್ದೇಬಿಹಾಳ ಗ್ರೇಡ್ ೨ ತಹಶೀಲ್ದಾರ ಇವರು ಖೀಲಾರಹಟ್ಟಿ ಗ್ರಾಮದ ಗದ್ದೆಮ್ಮನ ಕಟ್ಟಿಯಲ್ಲಿ, ತಾಳಿಕೋಟಿ ತಹಶೀಲ್ದಾರ್ ಅವರು ತುರಕನಗೇರಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಇಂಡಿ ಗ್ರೇಡ್ ೨ ತಹಶೀಲ್ದಾರ್ ಇವರು ಹೋರ್ತಿ ಗ್ರಾಮ ಪಂಚಾಯತಿಯಲ್ಲಿ, ಚಡಚಣದ ಗ್ರೇಡ್ ೨ ತಹಶೀಲ್ದಾರ್ ಇವರು ಗೋಡಿಹಾಳ ಗ್ರಾಮದ ಬಿಸಿಲ ಸಿದ್ಧರಾಯ ದೇವಸ್ಥಾನದಲ್ಲಿ, ಸಿಂದಗಿಯ ಗ್ರೇಡ್ ೨ ತಹಶೀಲ್ದಾರ ಅವರು ಬ್ರಹ್ಮದೇವನಮಡು ಗ್ರಾಮ ಹಾಗೂ ಆಲಮೇಲ ತಹಶೀಲ್ದಾರ ಇವರು ಉಚಿತನಾವದಗಿಯ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆಯ ಪಿಂಚಣಿ ಫಲಾನುಭವಿಗಳಿಗೆ ಎನ್ ಪಿ ಸಿ ಐ ಮ್ಯಾಪಿಂಗ್ ಕಾರ್ಯವನ್ನು ಸಂಬಂಧಿಸಿದ ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಅಧಿಕಾರಿಗಳ ಸಹಯೋಗದೊಂದಿಗೆ ಮಾಡಬೇಕು. ಪಿಂಚಣಿದಾರರ ಮಾಹಿತಿಯೊಂದಿಗೆ ಈ ಎಲ್ಲಾ ಗ್ರಾಮಗಳ ಗ್ರಾಮಲೆಕ್ಕಾಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

