Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರ‍್ಯಾಲಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದ ಜಿಪಂ ಸಿಇಓ ಋಷಿ ಆನಂದ ವಿಜಯಪುರ: ದೇಶದಲ್ಲಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಸಂವಿಧಾನ ನೀಡಿರುವ ಮತದಾನದ ಹಕ್ಕು ದೇಶದ ಸಂಸತ್ತನ್ನು ನಿರ್ಮಿಸುವ ಹಕ್ಕಾಗಿದೆ. ನಾವೇಲ್ಲ ಚುನಾವಣೆ ದಿನ ಯಾರು ಕೂಡ ಮತದಾನದಿಂದ ಹಿಂದೆ ಉಳಿಯದೆ ನಿಮ್ಮ ಮತ ನಿಮ್ಮ ಹಕ್ಕು ತಪ್ಪದೇ ಮತ ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ನೂರರಷ್ಟು ಮತದಾನ ಮಾಡುವಂತೆ ಸಿಇಓ ಋಷಿ ಆನಂದ ಕರೆ ನೀಡಿದರು.ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಸೋಮವಾರದಂದು ಹಮ್ಮಿಕೊಂಡಿದ್ದ ‘ವಿಶೇಷ ಚೇತನರ ಚುನಾವಣಾ ಜಾಗೃತಿ ಜಾಥಾ ಬೈಕ್ ರ‍್ಯಾಲಿಗೆ’ ಹಸಿರು ನಿಶಾನೆ ತೊರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು. ಸುಭದ್ರ ಸರ್ಕಾರ ರಚನೆಗೆ ಪ್ರತಿಯೊಬ್ಬರ ಮತದಾನವು ಪ್ರಮುಖವಾಗಿದೆ. ಕಡ್ಡಾಯ ಮತದಾನ ರಕ್ತದಾನ, ಅನ್ನದಾನ ಸೇರಿದಂತೆ ಇನ್ನಿತರೆ ಯಾವುದೇ ದಾನಕ್ಕಿಂತಲೂ ಹೆಚ್ಚಿನ ದಾನವಾಗಿದೆ. ಕೂಲಿಕಾರರು ಎಲ್ಲರೂ…
ಚಡಚಣ: ತಾಲೂಕಿನ ರೇವತಗಾಂವ ಗ್ರಾಮದಲ್ಲಿ ಸೋಮವಾರ ಬೀಸಿದ ಬಿರುಗಾಳಿಗೆ ಗ್ರಾಮದ ಪಿಕೆಪಿಎಸ್ ಆವರಣದಲ್ಲಿದ್ದ ಬಿಎಸ್‌ಎನ್‌ಎಲ್ ಟವರ್ ಉರುಳಿ ಬಿದ್ದಿದೆ.ಇದರಿಂದ ಅಕ್ಕಪಕ್ಕದ ಮನೆಗಳ ಮೇಲೆ ಉರುಳಿರುವುದರಿಂದ ಕೆಲವು ಮನೆಗಳು ಜಖಮಗೊಂಡಿವೆ. ಇದರಿಂದ ಯಾವುದೇ ಜೀವ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಮದಬಾವಿ ಎಲ್.ಟಿ-೧ ಗ್ರಾಮಸ್ಥರು ವಿಜಯಪುರ: ಸಮೀಪದ ಮದಭಾವಿ ತಾಂಡಾ ನಂ ೧ರ ಹತ್ತಿರದ ಟಾಯರ್ ಕಾರ್ಖಾನೆಯನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿ ಮದಬಾವಿ ಎಲ್ಟಿ ೧ ನಿವಾಸಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಚುನಾವಣಾ ಅವಧಿಯೊಳಗೆ ಕಾರ್ಖಾನೆ ಬಂದ್ ಮಾಡದಿದ್ದರೆ ಮತದಾನ ಮಾಡದೆ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ, ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಂದ ಸ್ಥಳಕ್ಕೆ ಖುದ್ದಾಗಿ ಆಗಮಿಸಿ ಪರಶೀಲನೆ ಮಾಡಿ, ವರದಿ ಪಡೆದುಕೊಂಡು ತಕ್ಷಣದಿಂದಲೇ ಆ ಕಾರ್ಖಾನೆಯನ್ನು ಬಂದ್ ಮಾಡಬೇಕು, ಇಲ್ಲವೇ ಬೇರೆಡೆಗೆ ಸ್ಥಳಾಂತರಿಸಬೇಕು, ಇದರಿಂದ ಇಲ್ಲಿಯ ಸಾಕಷ್ಟು ಮಕ್ಕಳಿಗೆ, ಮಹಿಳೆಯರಿಗೆ, ಮಯೋವೃದ್ಧರಿಗೆ ಸಮಸ್ಯೆ ಉಂಟಾಗಿವೆ, ಅದರಲ್ಲಿ ಮುಖ್ಯವಾಗಿ ಗಂಟಲು ಉರಿ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಲಕ್ವಾ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಎದುರಿಸುವಂತಾಗಿದೆ ಎಂದರುಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ೧೪೪ ಕಲಂ ಜಾರಿ ಇದ್ದು, ಯಾರು ಇಲ್ಲಿ ಬರಬಾರದು…
ಇಂಡಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಕೊಲೆ ಮಾಡಿದ ಕೊಲೆಗಡುಕನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು. ಸರಕಾರ ಕೀಳು ಹೇಳಿಕೆ ನೀಡುವುದನ್ನು ಬಿಟ್ಟು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ವಿಜಯಪೂರ ವಿಭಿನ್ನ ಅಭಿವೃಧ್ಧಿ ಸಂಸ್ಥೆ ಅಧ್ಯಕ್ಷೆ ಶಾಮಲಾ ಬಗಲಿ, ಅನಸೂಯಾ ಮದರಿ ಆಗ್ರಹಿಸಿದರು.ಅವರು ಮಂಗಳವಾರ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನಸೌಧವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ ಆಡಳಿತ ಸೌಧ ಮುಂಭಾಗದಲ್ಲಿ ಶಿರಸ್ಥೇದಾರ ಆರ್.ಎಸ್ ಮುಜಗೊಂಡ ಅವರ ಮುಖಾಂತರ ಸರಕಾರಕ್ಕೆ ಮನವಿ ಮಾಡಿದರು.ಇಂತಹ ಕೊಲೆಗಳಾಗುತ್ತಿರುವುದರಿಂದ ಶಾಲಾ ಕಾಲೇಜಿಗೆ ಮಕ್ಕಳನ್ನು ಕಳುಹಿಸಿಕೊಡಲು ಭಯದ ವಾತಾವರಣ ನಿರ್ಮಾಣವಾಗಿದೆ. ನೇಹಾ ಹಿರೇಮಠ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಆರೋಪಿಗೆ ಸರಕಾರ ಅಕ್ಕ ಶಿಕ್ಷೆ ವಿಧಿಸಬೇಕು. ತಪ್ಪಿತಸದ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.ನಿತಿನ್‌ಕುಮಾರ್ ಆರಿ, ಎಸ್.ಜೆ. ವಾಲೀಕಾರ, ಶಶಿಕಲಾ ಬೆಟಗೇರಿ, ರಾಜೇಶ್ವರಿ ಕ್ಷತ್ರಿ, ಐಶ್ವರ್ಯಾ ಮಾದರ್, ನಿಖಿತಾ ರಾಠೋಡ, ದೀಪಾ ಆಲಮೇಲ, ಸ್ನೇಹಾ ನಾಟೀಕಾರ್, ಅನಸೂಯಾ ಮದರಿ, ಬೀನಾ ಕೂಡಗಿ, ಅನಸೂಯಾ ಮದರಿ,…
ಚಿಮ್ಮಡ: ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ, ಸಂಸ್ಕಾರ ಕಲಿಯಬೇಕಾದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಸಂಸ್ಕಾರ ಇಲ್ಲದ ಮನೆ ಸ್ಮಶಾನಕ್ಕೆ ಸಮ ಎಂದು ಬೀಳಗಿ ಕಲ್ಮಠದ ಶ್ರೀ ಗುರುಪಾದ ಶಿವಾಚಾರ್ಯರು ಹೇಳಿದರು.ಸ್ಥಳೀಯ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳದಾಗಿದ್ದ ಲಿಂಗೈಕ್ಯ ಶ್ರೀ ವಿರಕ್ತಮಹಾಸ್ವಾಮಿಗಳ ೩೧ನೇ ಪುಣ್ಯಸ್ಮರನೋತ್ಸವ, ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದ ಚಿಂತನ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಠಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶಗಳು ಹಾಸುಹೊಕ್ಕಾಗಿರುತ್ತದೆ ಅದನ್ನ ಸಾರ್ವಜನಿಕರ ಜೀವನದಲ್ಲಿ ತುಂಬುವುದು ಮಠಾಧೀಶರ ಕರ್ತವ್ಯ, ಮನುಷ್ಯ ಸುಖ ಶಾಂತಿ ನೆಮ್ಮದಿ ಪಡೆಯಬೇಕಾದರೆ ಶರಣ ಮಹಾತ್ಮರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಶರಣರ ನೆನೆಯುವುದೇ ಪುಣ್ಯಸ್ಮರಣೋತ್ಸವವೆಂದರು,ಸಾನಿಧ್ಯ ವಹಿಸಿದ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಯಾವುದೇ ಧರ್ಮಬೇಧವಿಲ್ಲದೆ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಠಗಳೆಂದರೆ ವಿರಕ್ತಮಠಗಳು ಮಾತ್ರ ಅವು ತಮ್ಮ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿವೆ ಎಂದರು.ಸನ್ಮಾನ ಸ್ವೀಕರಿಸಿದ ವಾಸುದೇವ ಇಗವೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಳೆದ ಹದಿನೈದು ದಿನಗಳಿಂದ ಕಿತ್ತೂರು-ಕುಲವಳ್ಳಿಯ ಸುಕುಮಾರ ಯೋಗಾಶೃಮದ ಶ್ರೀ ಓಂ…
ವಿಜಯಪುರ: ನಗರದಲ್ಲಿ ಹನುಮ ಜಯಂತಿ ಅಂಗವಾಗಿ ಮಂಗಳವಾರ ನಡೆದ ಉತ್ಸವ, ಪೂಜೆಯಲ್ಲಿ ನಗರ ಶಾಸಕರ ಪುತ್ರರು ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ನಿರ್ದೇಶಕರಾದ ರಾಮನಗೌಡ ಪಾಟೀಲ ಯತ್ನಾಳ ಭಾಗವಹಿಸಿ, ಶ್ರೀ ಆಂಜನೇಯನ ದರ್ಶನಾರ್ಶೀವಾದ ಪಡೆದುಕೊಂಡು, ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದರು.ವಾರ್ಡ ನಂ.೪ರ ವ್ಯಾಪ್ತಿಯ ಭೂತನಾಳ ಕೆರೆಯ ಹತ್ತಿರ ಇರುವ ಘಂಟೆ ಆಂಜನೇಯ ದೇವಸ್ಥಾನ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ, ವಾರ್ಡ ನಂ.೮ರ ಚಾಲುಕ್ಯ ನಗರದ ಹನುಮಾನ ದೇವಸ್ಥಾನಕ್ಕೆ ಭೇಟಿ ನೀಡಿ ಜಯಂತಿ ಆಚರಣೆಯಲ್ಲಿ ಭಾಗವಹಿಸಿದರು. ನಂತರ ಗುಜ್ಜರ ಗಲ್ಲಿಯ ಹನುಮಾನ ದೇವಸ್ಥಾನ ಹಾಗೂ ವಜ್ರ ಹನುಮಾನ ದೇವಸ್ಥಾನಕ್ಕೆ ತೆರಳಿ ಪೂಜೆಯಲ್ಲಿ ಭಾಗವಹಿಸಿದರು.ಎಲ್ಲಾ ದೇವಸ್ಥಾನಗಳಲ್ಲಿಯೂ ಕಮಿಟಿ ಪದಾಧಿಕಾರಿಗಳು, ಅಲ್ಲಿನ ನಿವಾಸಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ವಿಜಯಪುರ: ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಈ ಕುರಿತು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಮತ್ತು ಪೊಲಿಂಗ್ ಏಜೆಂಟರಿಗೆ ಗಂಬೀರವಾಗಿ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದು ವಿಜಯಪುರ ಮೀಸಲು ಲೋಕಸಭಾ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಡಾ. ರತನಕನ್ವರ ಹೆಚ್. ಗಡವಿಚರಣ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಮತ್ತು ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದ ಫಲಿತಾಂಶ ಪ್ರಕಟವಾಗುವರೆಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಪಾರದರ್ಶಕವಾಗಿರಬೇಕಾಗಿದ್ದು, ನೀವು ನೇಮಕ ಮಾಡಿಕೊಳ್ಳುವ ಏಜೇಂಟರು ಚುನಾವಣಾ ಆಯೋಗದ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೂಪದ ನಿರ್ದಿಷ್ಟವಾದ ದೂರು ಅಥವಾ ಸಮಸ್ಯೆ ಇದ್ದಲ್ಲಿ ಅದನ್ನು ಚುನಾವಣಾ ವೀಕ್ಷಕರ ಗಮನಕ್ಕೆ ತರಬೇಕು ಎಂದರು.ವೆಚ್ಚ ವೀಕ್ಷಕ ಅನುಪ್ ಕುಮಾರ್ ಮಾತನಾಡಿ ಚುನಾವಣಾ ಆಯೋಗದ ನಿರ್ದೆಶನದಂತೆ ಪ್ರತಿಯೊಒಬ್ಬ ಅಭ್ಯರ್ಥಿಯು ಈ ಚುನಾವಣೆಗಾಗಿಯೇ ಅಭ್ಯರ್ಥಿ ಹೆಸರಿನಲ್ಲಿ ಪ್ರತ್ಯೆಕವಾದ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗುತ್ತದೆ. ಚುನಾವಣಾ ಆಯೋಗವು ಅಭ್ಯರ್ಥಿಗಳು…
ವಿಜಯಪುರ: ಜವಾಬ್ದಾರಿಯುತ ಹಿರಿಯ ನಾಗರಿಕನಾಗಿ ದೇಶದ ರಕ್ಷಣೆ, ಅಭಿವೃದ್ಧಿ ನನಗೆ ಮುಖ್ಯ. ಹಾಗಾಗಿ ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿಯವರನ್ನು ಬೆಂಬಲಿಸಿ, ರಾಷ್ಟ್ರ ರಕ್ಷಣೆ, ಪ್ರಗತಿಗಾಗಿ ಜಗಮೆಚ್ಚಿದ ನಾಯಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ನಾನು ಪಕ್ಷೇತರನಾಗಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆದಿದ್ದೇನೆ ಎಂದು ನಿವೃತ್ತ ಡಿವೈಎಸ್ಪಿ ಸಂಗಪ್ಪ ಹುಣಶಿಕಟ್ಟಿ ಹೇಳಿದರು.ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿ, ನಾನು ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನಿವೃತ್ತಿಯ ನಂತರವೂ ಸಮಾಜಮುಖಿ ಕೆಲಸಕ್ಕೆ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ವಿಜಯಪುರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಆಗ ನಮ್ಮ ಸಮುದಾಯದ ಅನೇಕ ಹಿರಿಯರು ಆಗಮಿಸಿ ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರ ಆಡಳಿತದಲ್ಲಿ ದೇಶದಲ್ಲಾದ ಅನೇಕ ಅಭಿವೃದ್ಧಿ ಕಾರ್ಯಗಳು, ಬದಲಾವಣೆಗಳ ಬಗ್ಗೆ ಚರ್ಚಿಸಿ ಪ್ರಸ್ತುತ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಅವಶ್ಯಕತೆ ಬಗ್ಗೆ ವಿವರಿಸಿದರು.…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಇಂದು ಪದ್ಮಭೂಷಣ ದಿ ಡಾ.ರಾಜಕುಮಾರ ಅವರ ಜನ್ಮದಿನ (ಏ.24) ನಿಮಿತ್ತ ವಿಶೇಷ ಲೇಖನ ರಾಜಕುಮಾರ್ ಎಂದರೆ ಅಚ್ಚ ಬಿಳಿ ಬಣ್ಣದ ಪಂಚೆ ಮತ್ತು ಅಂಗಿ ಧರಿಸಿದ ಸರಳತೆ,ಮುಗ್ಧತೆ, ಪ್ರೀತಿ, ವಿಶ್ವಾಸ ಮತ್ತು ವಿನಯವೇ ಮೈವೆತ್ತಂತ ವ್ಯಕ್ತಿತ್ವದ ಸಂತ. ಯಾವುದೇ ಉಪಮಾನ ಉಪಮೇಯಗಳಿಗೆ ನಿಲುಕದ ಅದ್ಭುತ ರಸಗ್ರಹಿಕೆಯುಳ್ಳ ನವರಸಗಳನ್ನೊಳಗೊಂಡ ಲೀಲಾಜಾಲ ಅಭಿನಯದ ಸಾಕಾರ ಮೂರ್ತಿ.ಕವಿರತ್ನ ಕಾಳಿದಾಸದ ಪೆದ್ದ ಕುರಿ ಕಾಯುವ ವ್ಯಕ್ತಿಯ ನಟನೆಯಿಂದ ಪ್ರಬುದ್ಧ ಪ್ರಕಾಂಡ ಪಂಡಿತನಾಗಿ ಪರಕಾಯ ಪ್ರವೇಶ ಮಾಡಿದಂತಹ ನಟನೆ ಇರಲಿ, ಯುವ ಜನರನ್ನು ಪ್ರೇರೇಪಿಸುವ ಜೀವನ ಚೈತ್ರ ಆಕಸ್ಮಿಕಗಳಂತಹ ಚಿತ್ರಗಳಿರಲಿ, ವಿನಯವೇ ಮೈವೆತ್ತ ಸಾಕ್ಷಾತ್ಕಾರ ಚಿತ್ರವಿರಲಿ, ತನ್ನಿಡಿ ಬದುಕನ್ನೇ ಹಾಳು ಮಾಡಿದ ದುಷ್ಕರ್ಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದ ಗುರಿ ಚಲನಚಿತ್ರವಿರಲಿ,ಅವರಿಗೆ ಅವರೇ ಸಾಟಿ. ಪೌರಾಣಿಕ ಪಾತ್ರಗಳಲ್ಲಂತೂ ಅವರ ಅಂಗಸೌಷ್ಟವ, ಅಸ್ಕಲಿತ ಮಾತಿನ ಶೈಲಿ, ಅದ್ಭುತ ನಟನೆ ಹೋರಾಟದ ದೃಶ್ಯಗಳಲ್ಲಿನ ವೀರೋಚಿತ ಅಭಿನಯ, ಖಳ ನಟರೊಂದಿಗೆ ವ್ಯಂಗೋಕ್ತಿಗಳನ್ನು ಉದುರಿಸುವಾಗ ಅವರ…
ವಿಜಯಪುರದ ಎಪಿಎಂಸಿಯಲ್ಲಿ ನಡೆದ ವ್ಯಾಪಾರಿಗಳ & ವಿವಿಧ ಸಂಘಗಳ ಪ್ರತಿನಿಧಿಗಳ ಸಭೆ ವಿಜಯಪುರ: ಕಾಂಗ್ರೆಸ್ ಪಕ್ಷ ಯಾವತ್ತೂ ಆರ್ಥಿಕತೆ ಮೂಲವಾದ ವ್ಯಾಪಾರ-ವಹಿವಾಟಿನ ಪರವಿರುವುದರಿಂದ ನಾವು ವ್ಯಾಪಾರಿಗಳ ಹಿತ ಕಾಪಾಡುತ್ತ ಬಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರ ಪರವಾಗಿ ಮತಯಾಚಿಸಿ, ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಡೆದ ವ್ಯಾಪಾರಿಗಳ ಹಾಗೂ ಎಲ್ಲ ಸಂಘಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.ದೇಶ ಈ ಹತ್ತು ವರ್ಷಗಳಲ್ಲಿ ಏನೇನು ಅನುಭವಿಸಿದೆ ನಿಮಗೆ ಗೊತ್ತಿದೆ. ಎಲ್ಲದರ ಮೇಲೆ ಜಿಎಸ್‌ಟಿ ದಾಳಿಯನ್ನು ವ್ಯಾಪಾರಿಗಳಾದ ನೀವು ಅನುಭವಿಸಿದ್ದೀರಿ. ಮನಮೋಹನ್ ಸಿಂಗ್ ಅವರು ಇದ್ದಾಗ ದೇಶದ ಆರ್ಥಿಕ ಸ್ಥಿತಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಮೋದಿ ಆಡಳಿತ ಬಂದ ಮೇಲೆ ಅದು ಕುಸಿಯುತ್ತ ಬಂದಿದೆ. ಇದರ ನೇರ ಪರಿಣಾಮವನ್ನು ನೀವು ಉಂಡಿದ್ದೀರಿ ಎಂದು ವಿವರಿಸಿದರು.ಚುನಾವಣಾ ಬಾಂಡ್ ಮೂಲಕ ಅನಧಿಕೃತವಾಗಿ ಹಣ ಎತ್ತಲಾಗಿದೆ. ಹೆದರಿಸಿ ಬೆದರಿಸಿ ವ್ಯಾಪಾರಿಗಳ, ಉದ್ಯೋಗಪತಿಗಳಿಂದ ವಸೂಲಿ ಮಾಡಲಾಗಿದೆ. ಇದೆಲ್ಲವನ್ನು ನೀವು ಅರ್ಥ…
