ವಿಜಯಪುರ: ಶಿಕ್ಷಣ ಸಾಮಾಜಿಕ ಸೇವೆ ಪರಿಸರ ರಕ್ಷಣೆ.ಗ್ರಾಮೀಣ ಜನರ ಬದುಕಿನ ಜೀವನ ಅರಿವು ಮೂಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಉನ್ನತಿಗೆ ರಾಷ್ಟೀಯ ಸೇವಾ ಯೋಜನೆ (ಎನ್ ಎನ್ ಎಸ್) ತುಂಬ ಸಹಕಾರಿ ಎಂದು ನ್ಯಾಯವಾದಿ ದಾನೇಶ ಅವಟಿ ನುಡಿದರು.
ನಗರದ ಹೊರವಲಯ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾ ವರ್ಧಕ ಸಂಘದ ದರ್ಬಾರ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಭಾವೈಕ್ಯತೆ ಗ್ರಾಮಗಳ ಉದ್ದಾರ ಸಾಮಾಜಿಕ ಜವಾಬ್ದಾರಿ ಯುವಕರ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಇಲ್ಲಿ ಕಲಿತ ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಬರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಜಿ. ಹೆಚ್.ಮಣುರ ಮಾತನಾಡಿ, ಸಮಾಜದಲ್ಲಿ ಇಂದು ಮನುಷ್ಯ ವಿದ್ಯೆ, ಉದ್ಯೋಗ, ಕುಟುಂಬ ನಿರ್ವಹಣೆ ಇದರಲ್ಲಿಯೇ ಮೈ ಮರೆತು ಸಂವಿಧಾನಬದ್ಧವಾಗಿ ತನಗೆ ಬರಬೇಕಾದ ಅನುಕೂಲತೆಗಳ ಬಗ್ಗೆ ಮಾತ್ರ ಯೋಚಿಸುತ್ತಾನೆ. ಹಕ್ಕುಗಳ ಬಗ್ಗೆ ಯೋಚಿಸುವ ನಾವು ನಮ್ಮ ಕರ್ತವ್ಯಗಳ ಬಗ್ಗೆ ಮಾತನಾಡುವದಿಲ್ಲ. ಇಂತಹ ಸ್ವಾರ್ಥ ಬದುಕನ್ನು ಹೋಗಲಾಡಿಸಿ. ಪ್ರೀತಿ, ವಿಶ್ವಾಸ, ಸಹೋದರತ್ವ, ಸಾಮಾಜಿಕ ನ್ಯಾಯ ಪರಿಕಲ್ಪನೆ ಈ ಶಿಬಿರಗಳಲ್ಲಿ ಒಡಮೂಡಲು ಸಾಧ್ಯ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಸಂಯೋಜಕ ರಾಜು ಕಪಾಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ಆನಂದ ಕುಲಕರ್ಣಿ, ಜಗದೀಶ ಸಾತಿಹಾಳ, ಕಾಶಿನಾಥ್ ಕೋಣನವರ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಎಂ. ಕೆ. ಕುಡಚಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾದ ಪ್ರೊಫೆಸರ್ ರಾಜು ಕಪಾಲಿ, ಸುನೀತ ಸ್ವಾಗತಗೀತೆ ಹಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಗುರುದೇವಿ ಹಂಪನಗೌಡರ್, ಸ್ವಪ್ನ ಪೂಜಾರಿ ನಿರೂಪಿಸಿದರು. ಗೀತಾ ವಂದಿಸಿದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳ ಸರ್ವತೋಮುಖ ಉನ್ನತಿಗೆ ಎನ್ನೆಸ್ಸೆಸ್ ಸಹಕಾರಿ :ಅವಟಿ
Related Posts
Add A Comment

