ಸಿಂದಗಿ: ಪಟ್ಟಣದ ವಿದ್ಯಾಚೇತನ ಪ್ರಕಾಶದಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಪುರಸ್ಕಾರಕ್ಕೆ ಬೆಂಗಳೂರಿನ ಡಾ.ಲಲಿತಾ ಹೊರಪ್ಯಾಟಿ ಅವರ “ಬ್ಯೂಟಿ ಬೆಳ್ಳಕ್ಕಿ” ಕಥಾ ಸಂಕಲನ, ವಿಜಯಪುರದ ಜಂಬುನಾಥ ಕಂಚ್ಯಾಣಿಯವರ “ಮತ್ತೆ ಅವತರಿಸಿದ ದೈತರು” ವೈಜ್ಞಾನಿಕ ಕಾದಂಬರಿ, ಬೆಳಗಾವಿ ಜಿಲ್ಲೆಯ ಹುನಶಿಕಟ್ಟೆಯ ಎಂ.ಎಂ.ಸಂಗಣ್ಣವರ ಅವರ “ಅಮ್ಮಬೇಕು” ಕವನ ಸಂಕಲನ ಮತ್ತು ಮಕ್ಕಳ ವಿಭಾಗದಲ್ಲಿ ಗದಗಿನ ಪ್ರಣತಿ ಗಡಾದ ಇವರ “ನಾನು ಮಳೆ ಆದರೆ” ಕವನ ಸಂಕಲನ ಆಯ್ಕೆಯಾಗಿರುತ್ತದೆ.
ಜು.೨೮ರಂದು ಸಿಂದಗಿಯ ಸಾರಂಗಮಠದಲ್ಲಿ ಜರುಗುವ ಸಮಾರಂಭದಲ್ಲಿ ಆಯ್ಕೆಯಾದ ಲೇಖಕರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

