ವಿಜಯಪುರ: ಜು.೧೫ ರಂದು ಪ್ರಾರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಜಮೀನು ದಾರಿ ವಿಷಯವನ್ನು ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರುಗಳಿಗೆ ದಾರಿ ಮಾಡಿಕೊಡಬೇಕೆಂದು ಒತ್ತಾಯಿಸಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ ಅವರಿಗೆ ಬರೆದ ಪತ್ರವನ್ನು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಯವರ ಮುಖಾಂತರ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರದಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ರಾಜ್ಯದ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಲು ಮುಂದಿನ ರೈತರು ದಾರಿ ಕೊಡದ ಕಾರಣ ಜಮೀನು ಬಿತ್ತನೆ ಮಾಡದೆ ಜಮೀನು ಬೀಳು ಬಿದ್ದು ರೈತ ಕುಟುಂಬಗಳು ಉಪವಾಸ ಬೀಳುವ ಪರಸ್ಥಿತಿ ನಿರ್ಮಾಣವಾಗಿದೆ ಈ ವಿಷಯವಾಗಿ ಕಳೆದ ೧೦ ವರ್ಷಗಳಿಂದ ಹೋರಾಟ ಮಾಡಿ ಸರಕಾರ ಗಮನ ಸೆಳೆಯಲಾಗಿತ್ತು ನಂತರ ಸರಕಾರ ಕಾಟಾಚಾರಕ್ಕೆ ಎಂಬಂತೆ ಸುತ್ತೋಲೆ ಹೊರಡಿಸಿದೆ. ಆದರೆ ರಾಜ್ಯದ ಯಾವೊಬ್ಬ ತಹಶೀಲ್ದಾರಗಳು ದಾರಿ ಮಾಡಿಕೊಟ್ಟ ಉದಾಹರಣೆ ಇಲ್ಲ ತಹಶೀಲ್ದಾರಗಳನ್ನು ಕೇಳಿದರೆ ಸರಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ದಾರಿ ಮಾಡಿಕೊಡಲು ಆದೇಶ ವಿಲ್ಲ ಆದ್ದರಿಂದ ಮಾಡಿಕೊಡಲು ಸಾಧ್ಯವಿಲ್ಲವೆಂದು ರೈತರಿಗೆ ಹೇಳುತಿದ್ದಾರೆ. ಇದರಿಂದ ಸರಕಾರದ ಸುತ್ತೋಲೆಗೆ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಜುಲೈ ೧೫ ರಂದು ಪ್ರಾರಂಭವಾಗಲಿರುವ ವಿಧಾನ ಸಭಾ ಅಧಿವೇಶನದಲ್ಲಿ ಜಮೀನು ದಾರಿ ವಿಷಯವನ್ನು ಚರ್ಚಿಸಿ ಸೂಕ್ತ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರುಗಳಿಗೆ ದಾರಿ ಮಾಡಿಕೊಡುವ ಅಧಿಕಾರವನ್ನು ವಹಿಸಿಕೊಡಬೇಕು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರದಂತೆ ಕಾನೂನು ತಿದ್ದುಪಡಿ ಮಾಡಬೇಕೆಂದು ಮತ್ತು ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮೀತಿ ಈ ಗಂಭೀರ ಸಮಸ್ಯೆಯನ್ನು ಅಧಿವೇಶನದಲ್ಲಿ ಚರ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚನ್ನಬಸಪ್ಪ ಸಿಂಧೂರ, ದಾವಲಸಾಬ ನದಾಫ್, ವಿಠ್ಠಲ ಬಿರಾದಾರ, ಸಿದ್ದಪ್ಪ ಕಲಬಿಳಗಿ, ಪ್ರಭು ಬಸ್ತವಾಡ, ಗಿರಿಮಲ್ಲಪ್ಪ ದೊಡಮನಿ, ಶೇಖಪ್ಪ ಖರಾಬಿ, ಶರಣಪ್ಪ ಹಿಪ್ಪರಗಿ, ಶ್ರೀಕಾಂತ ಹಾದಿಮನಿ, ಈರಣ್ಣ ಶಿರಸಂಗಿ, ಶಿವಪ್ಪ ಸುಂಟ್ಯಾನ, ಹನಮಂತ ಮುರಾಳ, ಶಿವಪ್ಪ ಮುರಾಳ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
ಜಮೀನು ದಾರಿ ಸಮಸ್ಯೆ ಅಧಿವೇಶನದಲ್ಲಿ ಚರ್ಚಿಸಲು ರೈತಸಂಘ ಆಗ್ರಹ
Related Posts
Add A Comment

