Author: editor.udayarashmi@gmail.com

ಮುದ್ದೇಬಿಹಾಳ: ನಮ್ಮ ಅವಧಿಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಇಷ್ಟೊಂದು ಅಭಿವೃದ್ಧಿ ಕಂಡಿದೆ ಎಂದರೆ ಅದಕ್ಕೆ ಯಡಿಯೂರಪ್ಪನವರ ಆಶೀರ್ವಾದ ಬಹಳ ಇದೆ. ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅನುದಾನವನ್ನು ನಮ್ಮ ಭಾಗಕ್ಕೆ ಕೊಟ್ಟ ಪುಣ್ಯಾತ್ಮ ಅವರು. ಅವರ ಋಣವನ್ನು ಯಾವತ್ತೂ ನಮ್ಮ ಜನತೆ ಮುಟ್ಟಿಸಲು ಸಾಧ್ಯವಿಲ್ಲ. ನಾಳೆ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಮಾ.೨೭ ರಂದು ಪಟ್ಟಣಕ್ಕೆ ಅವರು ಆಗಮಿಸಲಿದ್ದು ಅತ್ಯಂತ ಅದ್ಧೂರಿಯಾಗಿ ಅವರನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ, ಭಾಜಪಾ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.ಬೆಳಿಗ್ಗೆ ೧೦ ಗಂಟೆಗೆ ಅವರ ಆಗಮನದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವರು. ನಂತರ ಪಟ್ಟಣದ ಅಂಬೇಡ್ಕರ ವೃತ್ತದಿಂದ, ಬಸವೇಶ್ವರ ವೃತ್ತ, ಮುಖ್ಯ ಬಜಾರ, ಇಂದಿರಾ ವೃತ್ತ ಮಾರ್ಗವಾಗಿ ಬನಶಂಕರಿ ದೇವಸ್ಥಾನದವರೆಗೆ ತೆರೆದ ವಾಹನದ ಮೂಲಕ ಮತಯಾಚನೆ ನಂತರ ಬಹಿರಂಗ ಸಭೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಟ್ಟಣದ ಪ್ರತೀ ವಾರ್ಡ ನಿಂದ ೨೦೦ ಜನ ಸೇರಿದಂತೆ…

Read More

ವಿಜಯಪುರ: ನಗರದ ವಿದ್ಯಾವರ್ಧಕ ಸಂಸ್ಥೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ಇಂದು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ರವೀಂದ್ರನಾಥ ಕದಂ ಉದ್ಘಾಟಕರಾಗಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ಮೌಲ್ಯಗಳು ಹಾಗೂ ಶಿಕ್ಷಕ ವೃತ್ತಿಯ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಈ ಒಕ್ಕೂಟ ಸಹಾಯಕಾರಿಯಾಗಿದೆ ಎಂದು ಹೇಳಿದರುಮುಖ್ಯ ಅತಿಥಿಗಳಾಗಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಸಚಿವರಾದ ಡಾ. ಎಚ್ ವೆಂಕಟೇಶ ಮಾತನಾಡಿ, ವಿದ್ಯಾರ್ಥಿಗಳು ಸಂಘಟನಾ ಪ್ರವೃತ್ತಿ, ಏಕತಾ ಮನೋಭಾವವನ್ನು ರೂಡಿಸಿಕೊಳ್ಳುವಲ್ಲಿ ಇಂತಹ ಒಕ್ಕೂಟಗಳು ಬಹುಮುಖ್ಯವಾಗಿವೆ ಎಂದು ಹೇಳಿದರುಪ್ರಾಚಾರ್ಯೆ ಡಾ.ಶ್ರೀಮತಿ ಎಸ್ ಟಿ ಬೋಳರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಐಕ್ಯತಾ ಮನೋಭಾವನೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಇಂತಹ ಒಕ್ಕೂಟಗಳು ಪೂರಕವಾಗಿವೆ ಎಂದು ಹೇಳಿದರು.ಸಹ್ಯಾದ್ರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ ಎಸ್ ಬಾಪಗೂಂಡ, ವಿಜಯಕುಮಾರ ಸಜ್ಜನ, ಡಾ.ಶಾರದಾ ಮನವಿ, ವಾಣಿಶ್ರೀ ವೀರಬಾಶೆಟ್ಟಿ, ವಾಣಿಶ್ರೀ ಬಂದಿ, ಡಾ. ವಿಜಯಲಕ್ಷ್ಮೀ…

Read More

ಮುದ್ದೇಬಿಹಾಳ: ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗಿ ಚಿಕುನ್‌ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ ಸೇರಿದಂತೆ ವಿವಿಧ ಬಗೆಯ ಖಾಯಿಲೆಗಳು ಹರಡುತ್ತಿದ್ದು, ಸೊಳ್ಳೆಗಳನ್ನು ನಿಯಂತ್ರಣ ಮಾಡಿದಲ್ಲಿ ಇಂತಹ ಖಾಯಿಲೆಗಳನ್ನು ತಡೆಗಟ್ಟಬಹುದು. ಹಾಗಾಗಿ ಸಾರ್ವಜನಿಕರು ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ಬಗ್ಗೆ ಜಾಗೃತಿ ವಹಿಸಿ ಸೊಳ್ಳೆ ನಿರ್ಮೂಲನೆ ಬಗ್ಗೆ ಎಚ್ಚರ ವಹಿಸಬೇಕು ಎಂದು ತಾಲೂಕಿನ ತಂಗಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಂಗಮೇಶ ದಶವಂತ ಹೇಳಿದರು.ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೇರಿಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಸೊಳ್ಳೆಗಳಿಂದ ಪ್ರಸಾರವಾಗುವ ರೋಗಗಳಲ್ಲಿ ಮಲೇರಿಯಾ ರೋಗವು ಕೂಡ ಒಂದು. ಇದು ಪ್ಲಾಸ್ಮೋಡಿಯಾ ಎಂಬ ಸೂಕ್ಷ್ಮಾಣು ಪರಾವಲಂಬಿ ಮೂಲಕ ಬರುತ್ತದೆ. ಹೆಣ್ಣು ಅನಾಫಿಲಿಸ್ ಸೊಳ್ಳೆಯು ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮಲೇರಿಯಾ ರೋಗದ ಲಕ್ಷಣಗಳಲ್ಲಿ ಮೊದಲು ಚಳಿ ನಂತರ ವಿಪರೀತ ಜ್ವರ ಬಂದು ಕೊನೆಗೆ ಬೆವರುವಿಕೆಯಿಂದ ಆರಾಮ ಎನಿಸುತ್ತದೆ. ಇದೇ ಲಕ್ಷಣಗಳು ಪುನರಾವರ್ತನೆಗೊಳ್ಳುತ್ತದೆ. ಇದೇ ಅವಧಿಯಲ್ಲಿ…

Read More

ಪುರಾಣ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿದ ಡಾ.ವಿಶ್ವರಾಧ್ಶ ಶಿವಾಚಾಯ೯ ಅಭಿಮತ ಬ್ರಹ್ಮದೇವನಮಡು: ಪ್ರತಿಯೊಬ್ಬರೂ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡಕೊಳ್ಳಬೇಕು ಎಂದು ಮಾಗಣಗೇರಿಯ ಬೃಹನ್ಮಠದ ಶಿವಾಚಾಯ೯ ರತ್ನ ಪ್ರಶಸ್ತಿ ಪುರಸ್ತ್ರತ ಡಾ.ವಿಶ್ವರಾಧ್ಶ ಶಿವಾಚಾಯ೯ರು ಹೇಳಿದರು.ಸಿಂದಗಿ ತಾಲೂಕಿನ ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದ ಶ್ರೀ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಮಹಾ ಸಾದ್ವಿ ಶಿವಶರಣಿ ಹೇಮರಡ್ಡಿ ಮಲ್ಲಮ್ಮನವರ ಮಹಾ ಪುರಾಣ ಪ್ರಾರಂಭೋತ್ಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಮಾಜದ ಉದ್ದಾರಕ್ಕಾಗಿ ಶ್ರಮಿಸಿದ ಮಹಾ ಪುರಷರ ಜೀವನ ಚರಿತ್ರೆ ತಿಳಿಯಲು ಎಲ್ಲರೂ ಮುಂದಾಗಬೇಕು. ಬದುಕಿನಲ್ಲಿ ದಾನ ಧಮ೯ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಎಂದರು.ಖಾನಾಪೂರದ ಮೌನಯೋಗಿ ಕಲ್ಶಾಣದಯ್ಶ ಸ್ವಾಮೀಜಿ, ಕುರಳಗೇರಾದ ಸಜ್ಜಾದೆ ನಶಿನ್ ದಗಾ೯ದ ಹಜರತ್ ಸಯ್ಶದ್ ಹುಸೇನ್ ಬಾಷಾ ದಿವ್ಶ ಸಾನ್ನಿಧ್ಶ ವಹಿಸಿದ್ದರು.ಶ್ರೀಮಠದ ಒಡೆಯ ಕಲ್ಶಾಣದಯ್ಶ ವೀರಘಂಟಯ್ಶ ಸ್ವಾಮೀಜಿ,ಚನ್ನಮಲ್ಲಯ್ಶ ಹಿರೇಮಠ, ಕಾಂಗ್ರೆಸ್ ಮುಖಂಡ ಮಲ್ಲಣ್ಣ ಸಾಲಿ ಪುರಾಣ ಕಾಯ೯ಕ್ರಮಕ್ಕೆ ಚಾಲನೆ ನೀಡಿದರು. ಮಾಜಿ ಎಪಿಎಂಸಿ ಅಧ್ಶಕ್ಷ ಹಳ್ಳೆಪ್ಪಗೌಡ ಚೌಧರಿ,ಹೊನ್ನಳ್ಳಿ ಗ್ರಾಪಂ…

Read More

ವಿಜಯಪುರ: ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ ನಂ.೨೧ ರ ವ್ಯಾಪ್ತಿಯ ಇಬ್ರಾಹಿಂಪುರ ನಗರದಲ್ಲಿ ವಿಜಯಪುರ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿ ನಿ. ನಿದೇರ್ಶಕರಾದ ರಾಮನಗೌಡ ಪಾಟೀಲ ಯತ್ನಾಳ ಅವರು ಮನೆ ಮನೆಗೆ ತೆರಳಿ ಮತಯಾಚಿಸಿದರು.ಈ ವೇಳೆ ಮಾತನಾಡಿದ ಅವರು, ಜಗತ್ತು ಮೆಚ್ಚಿದ ನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ೧೦ ವರ್ಷದ ಆಡಳಿತದಲ್ಲಿ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮುಂದೆ ಕೂಡ ದೇಶದ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಕೈಜೋಡಿಸುವ ಅಗತ್ಯವಿದೆ. ಹೀಗಾಗಿ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜನ ಗಡಗಿ, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಶಂಕರ ಹೂಗಾರ, ಪ್ರಧಾನ ಕಾರ್ಯದರ್ಶಿ ಪಾಪುಸಿಂಗ್ ರಜಪೂತ್, ಎಸ್.ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ, ರೈತ ಮೋರ್ಚಾ…

Read More

ವಿಜಯಪುರ: ಮಾಜಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವುದು ಮತ್ತು ಗಟ್ಟಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೇ.೭ರಂದು ಕಡ್ಡಾಯವಾಗಿ ಮತ್ತು ಖಚಿತವಾಗಿ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿರ್ವಹಿಸೋಣ ಎಂದು ಜಿಲ್ಲಾ ಸ್ವೀಪ್ ಸಮಿತಿಯ ನೊಡೆಲ್ ಅಧಿಕಾರಿಗಳಾದ ಸಿ. ಆರ್ ಮುಂಡರಗಿರವರು ಹೇಳಿದರು.ಅವರು ಗುರುವಾರ ಲೋಕಸಭಾ ಚುನಾವಣೆ ೨೦೨೪ ರ ಪ್ರಯುಕ್ತ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ್ಲ ವಸತಿ ನಿಲಯದ ವಿದ್ಯಾರ್ಥಿನಿಯರೊಂದಿಗೆ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾನಾಡಿದರು.ಮತದಾನದ ಹಬ್ಬವನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಅತ್ಯಂತ ಸಂಭ್ರಮದಿAದ ಆಚರಿಸೋಣ. ಆದ್ದರಿಂದ ಎಲ್ಲರೂ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು ಇದೇ ಮೇ ೦೭ ೨೦೨೪ ರಂದು ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅದಿ ಎಮ್. ಎಮ್. ತುಂಬರಮಟ್ಟಿ ಮಾತನಾಡಿ, ಯುವ ಮತದಾರರು ಮತ್ತು ಮೊಟ್ಟಮೊದಲ ಬಾರಿಗೆ ಮತ ನೀಡುತ್ತಿರುವ ನೀವೆಲ್ಲರೂ ಮತದಾನ ಮಾಡಿದರೆ ಮಾತ್ರ ಸುಭದ್ರವಾದ…

Read More

ವಿಜಯಪುರ: ಮಾಜಿ ಸೈನಿಕರ ಪತ್ನಿ, ಮಕ್ಕಳಿಗೆ, ಕಾನೂನುಬಧ್ಧವಾಗಿ ದತ್ತು ಪಡೆದ ಮಕ್ಕಳು ಸೇರಿದಂತೆ ಹಾಗೂ ಅವಲಂಬಿತರಿಗೆ(ಮಕ್ಕಳ ವಯಸ್ಸು ೨೫ ವರ್ಷ ಮೀರಿರಬಾರದು ಹಾಗು ಉದ್ಯೋಗಿ ಆಗಿರಬಾರದು) ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ವೀರ ಯೋಧರ ಅವಲಂಬಿತರಿಗೆ ಡಿಪೆನ್‌ಡೆಂಟ್ ಕಾರ್ಡ ವಿತರಿಸಲಾಗುವುದು. ಎಲ್ಲಾ ಮೂಲಗಳಗಳಿಂದ ಪೋಷಕರ ಮಾಸಿಕ ಆಧಾಯ ೯ ಸಾವಿರ ಮೀರಿರಬಾರದು , ಡಿಪೆನ್‌ಡೆಂಟ್ ಕಾರ್ಡ್ ಮಾಡಲು ಬೇಕಾಗಿರುವ ದಾಖಲಾತಿಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಡಿಸಿ ಕಚೇರಿ ಕೌಂಪೌಡ್ ಹತ್ತಿರ ಅಥವಾ ಕಚೇರಿಯ ದೂ.ಸಮಖ್ಯೆ ೦೮೩೫೨-೨೫೦೯೧೩ಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ವಿಜಯಪುರದ ಜೆ.ಎಮ್.ಎಫ್.ಸಿ ನ್ಯಾಯಾಲಯವು ೦೭ ಆರೋಪಿಗಳಿಗೆ ೦೧ ವರ್ಷ ಕಠಿಣ ಜೈಲು ಹಾಗೂ ರೂ. ೧೦,೦೦೦/- ದಂಡ ವಿಧಿಸಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದು, ಇನ್ನೂ ಇಬ್ಬರೂ ಆರೋಪಿಗಳು ವಿಚಾರಣೆ ಬಾಕಿ ಇದ್ದ ಸಂದರ್ಭದಲ್ಲಿ ಮೃತರಾಗಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಟಿ.ಭೂಬಾಲನ್, ವಿಜಯಪುರ ನಗರದ ಆದಿಲ್ ಶಾಹಿ ಮಂಗಲ ಕಾರ್ಯಾಲಯದಲ್ಲಿ ದಿನಾಂಕ : ೩೦-೦೮-೨೦೧೮ ರಂದು ಗೋಡಿಹಾಳ ಕಾಲೋನಿಯ ಅಪ್ರಾಪ್ತ ಬಾಲಕಿಯನ್ನು ಸದ್ದಾಂ ಹುಸೇನ್ ಸಲೀಂ ಶೇಖ ಎಂಬ ಯುವಕನ ಜೊತೆ ಬಾಲ್ಯವಿವಾಹ ಮಾಡಿದ್ದರು. ಬಾಲ್ಯವಿವಾಹ ಮಾಡಿ, ಪ್ರೋತ್ಸಾಹಿಸಿದ ಹಾಗೂ ಭಾಗಿಯಾದ ಕಾಶಿಂಸಾಬ್ ಇಮಾಮ್‌ಸಾಬ ಶೇಖ, ರಾಜಾಬಿ ಕಾಶಿಂಸಾಬ್ ಶೇಖ, ಸದ್ದಾಂಹುಸೇನ್ ಸಲೀಂ ಶೇಖ, ಸಲೀಂ ಹುಸೇನ ಶೇಖ, ಮಜರ ಸಲೀಂ ಶೇಖ, ಶಹಜಾನ ರಂಜಾನ ಶೇಖ, ನಬಿರಸೂಲ ಖಾದರಪಟೇಲ್ ಸೀತನೂರ, ಅಬ್ದುಲರಜಾಕ್ ಭಾಷಾಸಾಬ ಬಿದ್ನಾಳ ಹಾಗೂ ಖಾಲಿದ ತಾಜುದ್ದೀನ ಪಟೇಲ ಹೀಗೆ ಒಟ್ಟು ೦೯ ಜನರ ವಿರುದ್ದ…

Read More

ಪ್ರತಿ ಮತಕ್ಷೇತ್ರಕ್ಕೆ ಓರ್ವ ನೋಡಲ್ ಅಧಿಕಾರಿ ನೇಮಕ :ಡಿಸಿ ಟಿ.ಭೂಬಾಲನ್ ವಿಜಯಪುರ: ನಿಯೋಜಿತ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗೆ ಏ.೩೦ರಂದು ಆಯೋಜಿಸಲಾದ ೨ನೇ ಹಂತದ ತರಬೇತಿಗೆ ಹಾಜರಾಗಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರದಿಂದ ತರಬೇತಿ ಸ್ಥಳಕ್ಕೆ ತೆರಳಲು ಒಟ್ಟು ೧೩೯ ಬಸ್‌ಗಳ ವ್ಯವಸ್ಥೆ ಹಾಗೂ ಸರಿಯಾದ ಸಮಯಕ್ಕೆ ವಾಹನಗಳು ತಲುಪಲು ಮತಕ್ಷೇತ್ರವಾರು ಓರ್ವ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.ತರಬೇತಿಗೆ ನಿಯೋಜಿತ ಸಿಬ್ಬಂದಿಗಳು ನಿಗದಿತ ಸ್ಥಳದಿಂದ ನಿಗದಿತ ಸಮಯಕ್ಕೆ ಹಾಜರಾಗಿ ತರಬೇತಿಗೆ ಹಾಜರಾಗಲು ವಿಧಾನಸಭಾ ಕ್ಷೇತ್ರವಾರು ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬಸ್‌ಗಳ ವಿವರ ಈ ಕೆಳಗಿನಂತಿದೆ.೨೬-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಂ.ಜಿ.ಇ.ಸಿ.ಕಾಲೇಜ್ ಮುದ್ದೇಬಿಹಾಳದಿಂದ ಬೆಳಿಗ್ಗೆ ೭ ಗಂಟೆಯಿಂದ ೮ ಗಂಟೆಯವರೆಗೆ ೦೩ ಬಸ್‌ಗಳು ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್, ದೇವರಹಿಪ್ಪರಗಿಗೆ, ೦೨ ಬಸ್‌ಗಳು ಬಸವನಬಾಗೇವಾಡಿ ಬಸವೇಶ್ವರ ಪಿಯು ಕಾಲೇಜ್, ೦೨ ಬಸ್‌ಗಳು ವಿಜಯಪುರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ, ೦೩ ಬಸ್‌ಗಳು…

Read More

ವಿಜಯಪುರ: ಲೋಕಸಭಾ ಚುನಾವಣೆಯನ್ನು ಜಿಲ್ಲೆಯಲ್ಲಿ ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ಜರುಗಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಶುಕ್ರವಾರ ಬಸವನ ಬಾಗೇವಾಡಿ, ಮುದ್ದೇಬಿಹಾಳ ಮತ್ತು ದೇವರಹಿಪ್ಪರಗಿ ಮತಕ್ಷೇತ್ರದ ಇವಿಎಂ ಭದ್ರತಾ ಕೊಠಡಿಗಳಿಗೆ ಭೇಟಿ ನೀಡಿ, ವಿದ್ಯುನ್ಮಾನ ಮತಯಂತ್ರಗಳ ಪೂರ್ವಸಿದ್ದತೆ ಕುರಿತು ಪರಿಶೀಲನೆ ಮಾಡಿದರು.

Read More