ವಿಜಯಪುರ: ಸೊಳ್ಳೆಯಿಂದ ಹರಡುವ ಡೆಂಗ್ಯೂ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಜಯಪುರ ಮಹಾನಗರಪಾಲಿಕೆಯ ವತಿಯಿಂದ ವಿಜಯಪುರ ನಗರ ಪ್ರದೇಶದಲ್ಲಿ ಧೂಮೀಕರಣ (ಈoggiಟಿg) ಮತ್ತು ಬೈ ಲಾರ್ವಾ ಸಿಂಪಡಣೆಯನ್ನು ಮಾಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ತಿಳಿಸಿದ್ದಾರೆ.
ಡೆಂಗ್ಯೂ ಜ್ವರದ ಪೀಕ್ ಸೀಸನ್‌ಗೆ ಪ್ರವೇಶಿಸುತ್ತಿದ್ದಂತೆ, ಸದರಿ, ಡೆಂಗ್ಯೂ ಜ್ವರವು ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ, ಇದು ನಿಂತ ನೀರಿನಲ್ಲಿ, ಸಂತಾನೋತ್ಪತ್ತಿ ಮಾಡುತ್ತದೆ ಮತ್ತು ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಮಹಾನಗರಪಾಲಿಕಯ ವ್ಯಾಪ್ತಿಯಲ್ಲಿನ ಸಾರ್ವಜನಿಕರುಗಳು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ, ಹೂವಿನ ಕುಂಡಳ, ನೀರು ಶೇಖರಿಸಿಟ್ಟ ಬಕೇಟ್‌ಗಳಲ್ಲಿ, ಹಳೆಯದಾದ ಟೈರ್‌ಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯನ್ನು ಕ್ರಮಗಳನ್ನು ವಹಿಸಿಕೊಂಡು ನಗರದಲ್ಲಿ ಡೆಂಗ್ಯೂಗ ಜ್ವರ ಹರಡುವುದನ್ನು ತಡೆಗಟ್ಟಲು ಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸುವಂತೆ ಮಹಾನರ ಪಾಲಿಕೆ ಮಹಾಪೌರರು ಹಾಗೂ ಆಯುಕ್ತರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
