ತಿಕೋಟಾ: ಶೈಕ್ಷಣಿಕ ಕ್ಷೇತ್ರದಲ್ಲಿ ಮಹಾನ್ ಕೊಡುಗೆ, ಆಧ್ಯಾತ್ಮ ಜೀವಿಗಳು, ಮಾತೃ ವಾತ್ಸಲ್ಯ ಉಳ್ಳವರು ಹೀಗೆ ಬಹುಮುಖ ವ್ಯಕ್ತಿತ್ವ ಹೊಂದಿದ ಸಂಗಮೇಶ ಬಬಲೇಶ್ವರ ಅವರಿಗೆ ಸರ್ಕಾರದಿಂದ ದೊರೆತ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಹುದ್ದೆಯು ಅವರಿಗೆ ಸಂದ ಗೌರವ ಹಾಗೂ ನಮ್ಮ ವಿಜಯಪುರ ಜಿಲ್ಲೆಗೆ ಹೆಮ್ಮೆ ಎಂದು ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಹೇಳಿದರು.
ನಗರದ ಅವರ ಸ್ವಗೃಹದಲ್ಲಿ ಸಂಗಮೇಶ ಬಬಲೇಶ್ವರ ಅವರಿಗೆ ಗಡಿನಾಡ ಕನ್ನಡ ಶಿಕ್ಷಕರ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ಹೊಂದಿದ ಅವರು ಅನಾಥ ಮಕ್ಕಳ ಶಿಕ್ಷಣಕ್ಕೆ “ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ” ವತಿಯಿಂದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಬಾಲ ವಿಕಾಸ ಅಕಾಡೆಮಿಯಿಂದ ರಾಜ್ಯದಲ್ಲಿರುವ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗುವ ಮಕ್ಕಳನ್ನು ಹೊಂದುವ ಶಕ್ತಿ ಅವರಿಗೆ ಕೊಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಂ.ಜಿ.ಹೊನಮೋರೆ, ಎ.ವಿ.ಪಾಂಡ್ರೆ, ಆರ್.ಜಿ.ಬಿರಾದಾರ, ಯು.ಟಿ.ಕೊಟ್ಯಾಳ, ಎಚ್.ಎಚ್.ಹೊನಮೊರೆ, ಜಿ.ಎಂ.ಚೌಗಲೆ, ಆರ್.ಎಸ್.ಝಳಕಿ, ಬಾಪು ದೇವಾನಾಯಕ, ಐ.ಎನ್.ಕಂಬಾರ, ಸೂರ್ಯಕಾಂತ ಕಾರ್ಕಲ್ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

