ಕೆಂಭಾವಿ: ಸುರಪುರ ತಾಲೂಕಿನ ಶಹಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅತೀ ದೊಡ್ಡ ಹೋಬಳಿ ಕೇಂದ್ರ ಕೆಂಭಾವಿ ಪಟ್ಟಣವು ತಾಲೂಕು ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿದ್ದರೂ ಕೂಡ ಈ ಹಿಂದಿನ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತಾಲೂಕು ರಚನೆ ಮಾಡಲಿಲ್ಲ. ಪ್ರಸ್ತುತ ಆಡಳಿತ ನಡೆಸುತ್ತಿರುವ ಸರ್ಕಾರ ಮೀನಾಮೇಷ ಎಣಿಸದೆ ಕೆಂಭಾವಿ ಪಟ್ಟಣವನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡುವಂತೆ ಭೋವಿ ಸಮಾಜದ ಅಧ್ಯಕ್ಷ ರಂಗಪ್ಪ ವಡ್ಡರ್ (ಕಂದೀಲು) ಆಗ್ರಹಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ಉಪತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ ಮೂಲಕ ಸಲ್ಲಿಸಿದವರು. 25 ರಿಂದ 30 ವರ್ಷಗಳ ಕಾಲ ವಿವಿಧ ರೀತಿಯ ಹೋರಾಟ ಮಾಡುತ್ತಾ ಬಂದಿದ್ದೇವೆ, ಯಾವುದೇ ಸರ್ಕಾರಗಳು ಗಮನಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದವರು, ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಾಯಕರು ಕೆಂಭಾವಿಯನ್ನು ತಾಲ್ಲೂಕು ಮಾಡುವುದಾಗಿ ಭರವಸೆ ಆಶ್ವಾಸನೆ ನೀಡಿದ್ದರು ಪ್ರಾಮಾಣಿಕ ಪ್ರಯತ್ನ ನಡೆಯದೆ ಕೆಂಭಾವಿ ತಾಲೂಕು ರಚನೆಯ ಕನಸು ಗಗನಕುಸುಮವಾಗಿದೆ, ಆಡಳಿತದಲ್ಲಿರುವ ಸರ್ಕಾರ ಜನರ ತಾಳ್ಮೆಯನ್ನು ಪರೀಕ್ಷಿಸದೆ ಬಹು ದಿನದ ಬೇಡಿಕೆಯನ್ನು ಈಡೇರಿಸುವಂತಾಗಲಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

