ವಿಜಯಪುರ: ಜಿಲ್ಲೆಯ ಹೆಮ್ಮೆಯ ಸಾಧಕ,1998ರ ಕೆ.ಎ.ಎಸ್. ಬ್ಯಾಚಿನ ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಡಾ.ಸಂಗಪ್ಪ ಉಪಾಸೆ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ಪದವಿ ಘೋಷಿಸಿದೆ.
ಪ್ರಸ್ತುತ ನಿಯೋಜನೆ ಮೇಲೆ ಜಂಟಿ ಕಾರ್ಯದರ್ಶಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸಂಗಪ್ಪ ಉಪಾಸೆ ಅವರು
ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನ ಸಂಯೋಜನ ವಿದ್ಯಾರ್ಥಿಯಾಗಿ ಡಾ. ಆರ್. ನಟರಾಜರ ಅವರ ಮಾರ್ಗದರ್ಶನದಲ್ಲಿ ‘ವಚನ ಅಧ್ಯಯನಗಳ ಸಾಂಸ್ಕೃತಿಕ ಅನುಸಂಧಾನ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧವನ್ನು ಹಂಪಿ ವಿವಿಗೆ ಮಂಡಿಸಿದ್ದರು. ಇದನ್ನು ಪರಿಗಣಿಸಿ ಅವರಿಗೆ ಪಿಎಚ್ಡಿ ಪದವಿ ಘೋಷಿಸಲಾಗಿದೆ.
ಅಭಿನಂದನೆ: ಡಾ.ಉಪಾಸೆ ಅವರ ಈ ಸಾಧನೆಗೆ ’ಉದಯರಶ್ಮಿ’ ದಿನಪತ್ರಿಕೆ ಬಳಗವು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

