ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿರುವುದರಿಂದ ಹೆಚ್ಚಿನ ಮಳೆ-ಗಾಳಿಯ ರಭಸಕ್ಕೆ ಹಾಗೂ ಇತರೆ ಅನೇಕ ಕಾರಣಗಳಿಮದ ಗಿಡಮರಗಳು ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳ ಮೇಲೆ ಬೀಳುವುದು, ತಂತಿಗಳು ತುಂಡಾಗಿ ನೆಲದ ಮೇಲೆ ಬಿಳುವ ಸಾಧ್ಯತೆಗಳಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರು ಅವುಗಳನ್ನು ಮುಟ್ಟದೇ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವಿಜಯಪುರ ಹೆಸ್ಕಾಂ ಅಧೀಕ್ಷಕ ಅಭಿಯಂತರರು ಮನವಿ ಮಾಡಿಕೊಂಡಿದ್ದಾರೆ.
ಸಂಪರ್ಕ ವಿಳಾಸ: ವಿಜಯಪುರ ನಗರದ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನ ಪ್ರದೇಶಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಿಲಿಂದ ಜೀರ ಮೊ: ೯೪೪೮೩೭೦೨೫೦, ವಿಜಯಪುರ ನಗರದ ಗಾಂಧಿ ವೃತ್ತದಿಂದ ದಕ್ಷಿಣ, ನೈರುತ್ಯ ಮತ್ತು ಅಗ್ನೇಯ ದಿಕ್ಕಿನ ಪ್ರದೇಶ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀಮತಿ ಭಾರತಿ ಪೂಜಾರ ಮೊ: ೯೪೪೮೩೭೫೭೧೧, ವಿಜಯಪುರ ತಾಲೂಕಿನ ಗ್ರಾಮೀಣ ಪ್ರದೇಶ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಾಲಾಜಿಸಿಂಗ್ ರಾಠೋಡ ಮೊ: ೯೪೪೮೩೭೦೨೫೧, ತಿಕೋಟಾ ತಾಲೂಕಿಗೆ ಸಂಬಂಧಿಸಿದಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ಎಸ್.ದೇಶಮುಖ ಮೊ: ೯೪೪೮೯೭೧೦೦೧, ಬಬಲೇಶ್ವರ ತಾಲೂಕ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹದೇವ ಸಾ. ತಳವಾರ ಮೊ: ೯೪೪೯೮೨೫೯೫೫ ಹಾಗೂ ಈ ಪ್ರದೇಶದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಮಹಾಂತೇಶ ಚನಗೊಂಡ ಮೊ:೯೪೪೮೩೭೦೨೪೯ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಬಸವನಬಾಗೇವಾಡಿ ತಾಲೂಕಿಗೆ ಸಂಬಂಧಿಸಿದಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ ಸಂಪನ್ನವರ ಮೊ: ೯೪೪೮೩೭೦೨೫೬, ನಿಡಗುಂದಿ ಮತ್ತು ಕೊಲ್ಹಾರ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಚಿತ್ತಾಪೂರ ಮೊ: ೯೪೮೦೮೮೩೬೬೩, ತಾಳಿಕೋಟ ತಾಲೂಕ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ ಮೊ: ೯೪೮೦೮೮೩೬೬೪, ಮುದ್ದೇಬಿಹಾಳ ತಾಲೂಕ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎನ್.ಹಾದಿಮನಿ ಮೊ: ೯೪೪೮೩೭೦೨೫೭ ಹಾಗೂ ಈ ಪ್ರದೇಶದ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಿದ್ರಾಮ ಬಿರಾದಾರ ಮೊ: ೯೪೮೦೮೮೨೬೨೭ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಇಂಡಿ ತಾಲೂಕಿಗೆ ಸಂಬಂಧಿಸಿದಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಗಮೇಶ ಮೆಡೆಗಾರ ಮೊ: ೯೪೪೮೩೭೦೨೫೩, ಚಡಚಣ ತಾಲೂಕ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಕುಮಶಿ ಮೊ: ೯೪೪೯೮೫೮೧೨೪, ಸಿಂದಗಿ ಮತ್ತು ಆಲಮೇಲ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ನಾಯ್ಕ ಮೊ: ೯೪೪೮೩೭೦೨೫೪ ಹಾಗೂ ದೇವರಹಿಪ್ಪರಗಿ ತಾಲೂಕಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗಂಗಾಧರ ಲೋಣಿ ಮೊ: ೯೪೮೦೮೮೨೯೨೩ ಮತ್ತು ಈ ಪ್ರದೇಶದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಬಿರಾದಾರ ಮೊ: ೯೪೪೮೧೪೩೩೬೨ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು ಹರಿದು ಬಿದ್ದ ವಿದ್ಯುತ್ ಸಲಕರಣೆಗಳನ್ನು ನೋಡಿದ ತಕ್ಷಣ ಅವುಗಳನ್ನು ಮುಟ್ಟದೆ ತಮ್ಮ ಹತ್ತಿರದ ಮಾರ್ಗದಾಳು (ಲೈನ್‌ಮನ್), ಶಾಖಾಧಿಕಾರಿ, ಉಪವಿಭಾಗಾಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಅಥವಾ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ವಿದ್ಯುತ್ ದೂರುಗಳನ್ನು ಸ್ವೀಕರಿಸಲು ಇರುವ ಉಚಿತ ಸಹಾಯವಾಣಿ ೧೯೧೨ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ಸಾರ್ವಜನಿಕರು ವಿದ್ಯುತ್ ವಾಹಕಗಳನ್ನು ಮುಟ್ಟುವುದಾಗಲಿ, ವಿದ್ಯುತ್ ಕಂಬಗಳ ಹಾಗೂ ಪರಿವರ್ತಕಗಳ ಸುತ್ತಮುತ್ತ ದನಕರುಗಳನ್ನು ಬಿಡಬಾರದು. ಬಟ್ಟೆಗಳನ್ನು ಒಣಗಿಸಬಾರದು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
ವಿದ್ಯುತ್ ಸಂಬಂಧಿತ ಸಮಸ್ಯೆ-ತುರ್ತು ಸಂದರ್ಭಕ್ಕೆ ಸಂಪರ್ಕ ವಿಳಾಸ
Related Posts
Add A Comment
