Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಾಗಲಕೋಟ: ಹವಾಮಾನ ವೈಪರೀತ್ಯದಿಂದಾಗಿ ರೈತರು ಪ್ರಕೃತಿಯೊಂದಿಗೆ ಹೊಂದಿಕೊಂಡು ಬೇಸಾಯ ಮಾಡುತ್ತಿದ್ದು, ಅವರ ಕಷ್ಟಕಾರ್ಪಣ್ಯಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅಧಿಕಾರಿಗಳು ಮತ್ತು ವಿಜ್ಞಾನಿಗಳು ನಿರಂತರವಾಗಿ ಸ್ಪಂದಿಸುತ್ತಿದ್ದಾರೆ ಎಂದು ಬಾಗಲಕೋಟ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಲಕ್ಷ್ಮಣ ಕಳ್ಳೆನ್ನವರ ಹೇಳಿದರು.ಅವರಿಂದು ಬಾಗಲಕೋಟ ತಾಲೂಕಿನ ಶಾರದಾಳ ಗ್ರಾಮದ ಪ್ರಗತಿಪರ ರೈತ ನಿಂಗಪ್ಪ ಅರಕೇರಿ ಇವರ ಕ್ಷೇತ್ರದಲ್ಲಿ (೦೯-೦೭-೨೦೨೪ ರಂದು) ಹಮ್ಮಿಕೊಂಡ ದ್ವೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ರೈತರಿಗೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವದು, ಸಕಾಲದಲ್ಲಿ ಪರಿಕರಗಳನ್ನು ಪೂರೈಸುವದು, ವಿವಿಧ ಬೆಳೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ಮಿನಿಕಿಟ್ ವಿತರಿಸುವದು, ಸಮಸ್ಯಾತ್ಮಕ ಕ್ಷೇತ್ರಗಳಿಗೆ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಪರಿಹಾರ ಒದಗಿಸುವದು, ಒಟ್ಟಾರೆಯಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಇಲಾಖೆ ಸದಾ ಸನ್ನದ್ದವಾಗಿದೆ ಎಂದರು.ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆಗಳನ್ನು ನೀಡಲು ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ಅಧಿಕಾರಿಗಳಿಗೆ ಕೃಷಿಯಲ್ಲಾದ ನೂತನ ತಾಂತ್ರಿಕತೆಗಳ ಕುರಿತು ಪರಸ್ಪರ ಚರ್ಚಿಸಿ ಮಾಹಿತಿ ನೀಡಲಾಗುವದು. ಇದನ್ನು ಆಧರಿಸಿ ಅಧಿಕಾರಿಗಳು ರೈತರ…
ನಿವೃತ್ತಗೊಂಡ ನೆಚ್ಚಿನ ಶಿಕ್ಷಕ ಬಸವರಾಜ ಅನಂತಪುರಗುರುವಿಗೆ ಕಲ್ಪವೃಕ್ಷ ಕಾಣಿಕೆ ಚಿಕ್ಕಪಡಸಲಗಿ (ಜಮಖಂಡಿ): ತಮ್ಮ ಅಚ್ಚುಮೆಚ್ಚಿನ ಗುರುಯೊಬ್ಬರು ಸೇವಾ ನಿವೃತ್ತಿ ಹೊಂದಿದರು. ತನ್ನಿಮಿತ್ಯ ಈ ಶುಭ ಹಾರೈಕೆಯ ಸುಘಳಿಗೆಯಲ್ಲಿ ಹಲವಾರು ಹಿತೈಷಿಗಳು, ಶಾಲಾ ಮಕ್ಕಳು ಗುರುದೇವೋಭವನ ಗುಣಗಾನದೊಂದಿಗೆ ಸಂಪ್ರೀತಿಯ ಕಾಣಿಗಳನ್ನು ಸಮರ್ಪಿಸಿ ಧನ್ಯತಾಭಾವ ಮೆರೆದರು. ಆದರೆ ಕೆಲ ಬಾಲೆಯರು ತಮ್ಮ ಪ್ರೀತಿ ಪಾತ್ರ ಆ ಗುರುವಿಗೆ ವಿಭಿನ್ನ ಸವಿನೆನಪಿನ ಕಾಣಿಕೆಯೊಂದನ್ನು ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಗಮನ ಸೆಳೆದರು. ಹೌದು! ನಿಷ್ಕಲ್ಮಶ ಭಾವದ ಆ ಗುರುಜಿಗೆ ಶಾಲಾ ಬಾಲೆಯರು ನೀಡಿದ ಕಾಣಿಕೆ ಅಂತಿಂಥ ಕಾಣಿಕೆಯಲ್ಲ ! ಅದು ಪರಿಸರ ಕಾಳಜಿಯುತ ಕಳಕಳಿಯ ಕಾಣಿಕೆ. ಗುರುಜಿಯವರ ವಿಶ್ರಾಂತ ಜೀವನವು ಕಲ್ಪವೃಕ್ಷದಂತೆ ಅರಳಲಿ. ಸವಿಸಿಹಿ ಭಾವ ಬಂಧನ ಗಟ್ಟಿಗೊಳ್ಳಲಿ. ಔದಾರ್ಯ ಗುಣದ ಪ್ರೀತಿಭರಿತ ಪುಷ್ಪರಸ ಇನ್ನೂ ಶಿಷ್ಯವೃಂದಕ್ಕೆ ಲಭಿಸಲಿ ಎನ್ನುವ ಉದಾತ್ತ ಚಿಂತನೆ ಸಿಂಚನದೊಂದಿಗೆ ಸವಿನೆನಪಿಗಾಗಿ ಕಲ್ಪವೃಕ್ಷದ ಸಸಿ ನೀಡಿ ಮಹೋನ್ನತ ಪರಿಸರ ಸ್ನೇಹಕ್ಕೆ ಮುಂದಾದರು. ತಮ್ಮ ಅಂತರಂಗದಲ್ಲಿ ಮೊಳಕೆಯೊಡೆದಿದ್ದ ಹಸಿರಿನ ಹಸಿವು ಗುರುವಿಗೆ…
ಸಿಂದಗಿ: ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಿಂದ ಸರಬರಾಜಾಗುವ ೧೧ಕೆವ್ಹಿ ಸಿಂದಗಿ-೧ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಎಪಿಎಂಸಿ, ವಿವೇಕಾನಂದ ವೃತ್ತ, ಕನಕದಾಸ ವೃತ್ತ, ಮೋರಟಗಿ ನಾಕಾ, ಬಂದಾಳ ರೋಡ್, ಬಸವ ನಗರ, ಬಸ್‌ಸ್ಟ್ಯಾಂಡ್, ಟಿಪ್ಪು ಸುಲ್ತಾನ್ ವೃತ್ತ, ಬಸ್ ಡಿಪೋ, ಸಿಂದಗಿ ತಾಂಡಾ ಹಾಗೂ ಕೈಗಾರಿಕಾ ನಗರ ಪ್ರದೇಶಗಳಿಗೆ ಜು.೧೨ರಂದು ಬೆಳಿಗ್ಗೆ ೧೦ಗಂಟೆಯಿಂದ ಸಾಯಂಕಾಲ ೫ರವರೆಗೆ ವಿದ್ಯುತ್ ವಿತರಣೆ ಇರುವುದಿಲ್ಲ. ಆದ್ದರಿಂದ ಸದರಿ ಪ್ರದೇಶದ ಗ್ರಾಹಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ: ಮಕ್ಕಳಿಗೆ ಎರಡನೆಯ ತಾಯಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವರ ಶ್ರಮ ಬಹಳಷ್ಟಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಎಪಿಎಂಸಿ ಯಾರ್ಡ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಮೇಲ್ವಿಚಾಕರಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ, ಸ್ಮಾರ್ಟ್ ಫೋನ್, ಸಮವಸ್ತç, ಫಲಾಣುಭವಿಗಳಿಗೆ ಔಷಧಿ ಕಿಟ್ ಹಾಗೂ ತೂಕದ ಯಂತ್ರಗಳ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳ ಪ್ರಪಂಚ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಪಾರದರ್ಶಕತೆ ಮತ್ತು ಪ್ರಾಮಾಣಿಕವಾಗಿ ಈ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂದರೆ ತಾಯಿ ಮಗುವಿನ ಸಂಬAಧ ಸಮಾಜ ಈ ಇಲಾಖೆಯ ಮೇಲೆ ನಿಂತಿದೆ.ಈ ವೇಳೆ ಜಿಲ್ಲಾ ಉಪ-ನಿರ್ದೇಶಕ ಕೆ.ಕೆ.ಚವ್ಹಾಣ ಮಾತನಾಡಿ, ಸರಕಾರ ಅಂಗನವಾಡಿ ಕಾರ್ಯಕತೆಯರಿಗೆ ೩೦೯ ಸ್ಮಾರ್ಟ್ ಫೋನ್,…
ಕ್ಯಾಂಟೀನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮನಗೂಳಿ ಅಭಿಮತ ಸಿಂದಗಿ: ಇಂದಿರಾ ಕ್ಯಾಂಟಿನ್ ಬಡವರಿಗೆ ಹಸಿವು ನೀಗಿಸಲು ಉಪಯುಕ್ತವಾಗಿದೆ. ತಾಲೂಕು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಕೋರ್ಟ್ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರಿಗೆ ಅನುಕೂಲ ಕಲ್ಪಿಸಲು ನಿಟ್ಟಿನಲ್ಲಿ ಸು.೮೬ಲಕ್ಷ ರೂ. ಅನುದಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಭೂಮಿ ಪೂಜಾ ಸಮಾರಂಭವನ್ನು ಬೆಂಗಳೂರ ಪೌರಾಡಳಿ ಇಲಾಖೆ, ಸಿಂದಗಿ ಪುರಸಭೆ ವತಿಯಿಂದ ಹಮ್ಮಿಕೊಂಡ ಇಂದಿರಾ ಕ್ಯಾಂಟಿನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮಹತ್ತರವಾದ ಯೋಜನೆ ಇಂದಿರಾ ಕ್ಯಾಂಟಿನ್. ೨೦೧೩-೧೮ರವರೆಗೆ ಈ ರಾಜ್ಯದ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ೨೨೪ ಮತಕ್ಷೇತ್ರಘಲ್ಲಿ ಜಾರಿಗೆ ತಂದು ಜನ ಸಾಮಾನ್ಯರಿಗೆ ಊಟ ಉಪಹಾರ ಹೋರೆಯಾಗಬಾರದು ಎಂಬ ಉದ್ದೇಶದಿಂದ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಿದ್ದರು, ಆದರೆ ನಗರದ ತಹಶೀಲ್ದಾರ್…
ಸಿಂದಗಿ: ನಮ್ಮ ಸಂಘ ನೌಕರರ ಕ್ಷೇಮಾಭಿವೃದ್ಧಿಗೆ ಮಾತ್ರ ಸೀಮಿತವಾಗದೆ ರಾಷ್ಟç ಮತ್ತು ರಾಜ್ಯದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ, ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಸಹಕಾರ ನೀಡಿ ಸೇವಾ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ಮಾದರಿ ಸಂಘಟನೆ ನಮ್ಮದಾಗಿದೆ ಎಂದು ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಬಳಗ ಮನವಿ ಸಲ್ಲಿಸಿದ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಆಲಮೇಲ ತಾಲೂಕಾಧ್ಯಕ್ಷ ರವಿ ಬಿರಾದಾರ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಹಳೆ ಪಿಂಚಣಿ ಯೋಜನೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಜಾರಿಗೊಳಿಸಬೇಕು. ರಾಜ್ಯ ೭ನೆಯ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರಕಾರಿ ನೌಕರರ ವೇತನ ಭತ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸಬೇಕು. ರಾಜ್ಯದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಇದೇ…
ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ೨೦೨೪ -೨೫ ನೇ ಸಾಲಿನ ಶಾಲಾ ಸಂಸತ್ತು ರಚಿಸಲಾಯಿತು.ವಿದ್ಯಾರ್ಥಿಗಳಿಗೆ ಇ.ವಿ.ಎಂ ಮಷೀನ್ ಮುಖಾಂತರ ಮೊಬೈಲ್ ಆಪ್ ಸಹಾಯದಿಂದ ಉಮೇದುವಾರರ ಪಟ್ಟಿ, ಮತದಾನ, ಮತಗಳ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಯಿತು.ಲೋಕಸಭಾ, ವಿಧಾನಸಭಾ, ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಂತೆ ಯಾವ ರೀತಿಯಾಗಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವದು, ದಿನಾಂಕಗಳನ್ನು ಮತ್ತು ಕಾರ್ಯಚಟುವಟಿಕೆ ಯಾವ ರೀತಿ ನಿರ್ವಹಿಸುತ್ತದೆಯೋ ಆ ಕಾರ್ಯರೂಪವನ್ನು ಸಂಪೂರ್ಣವಾಗಿ ವಿವರಣೆಯನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ವಿವರಿಸಿದರು.ಶಾಲೆಯ ಮುಖ್ಯ ಗುರು ಎಸ್.ವಿ.ಹಿರೇಮಠ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವಂತೆ ದಿನಾಂಕಗಳನ್ನು ತಿಳಿಸಿದರು. ನಾಮಪತ್ರ ಸಲ್ಲಿಕೆ, ಹಿಂಪಡೆಯುವದು, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಮತ್ತು ಚಿನ್ನೆಯನ್ನು ನೀಡುವುದು, ಉಮೇದುವಾರದಿಂದ ಮತ ಯಾಚನೆಗಾಗಿ ಪ್ರಚಾರ, ಮತದಾನ, ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಈ ಎಲ್ಲದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.ಶಾಲೆಯ ಶಿಕ್ಷಕರಾದ ಕೆ.ಎಸ್.ಚಟ್ಟಿ, ಪ್ರೊಸೈಡಿಂಗ್ ಆಫೀಸರ್ ಆಗಿ ರೇಣುಕವ್ವ ಎಸ್.ಬಿ,…
ಸ್ವಚ್ಚತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅನುಸೂಯ ತೆರದಾಳ ಸಲಹೆ ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೆರದಾಳ ಮಾತನಾಡಿ, ಎಲ್ಲೆಡೆ ಡೆಂಗ್ಯೂ ಜ್ವರ ಹರಡುತ್ತಿರುವುದರಿಂದ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸೊಳ್ಳೆಗಳನ್ನು ನಿರ್ಮೂಲನೆ ಮಾಡಬೇಕು. ಡೆಂಗ್ಯೂ ಹರಡುವುದನ್ನು ನಿಯಂತ್ರಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆಯನ್ನು ನಡೆಸುವುದರ ಜೊತೆಗೆ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಿದೆ. ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುವುದರಿಂದ ಇವುಗಳನ್ನು ಶುಚಿಗೊಳಿಸಿ, ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು. ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬಾರದು. ಮನೆಯ ಸುತ್ತಲು ಹಾಗೂ ತಾರಸಿ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು…
ವಿಜಯಪುರ: ಪಕ್ಷ ಸಂಘಟನೆಯಲ್ಲಿ ಹೋರಾಟ ಮಾಡುತ್ತ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಶ್ರಮಿಸಿರುವ ಬಿಜೆಪಿ ರಾಜ್ಯ ವಕ್ತಾರ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಆಗ್ರಹಿಸಿದ್ದಾರೆ.ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಅವರು ಅಲ್ಪ ಸಮಯದಲ್ಲೇ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ಅವರ ಗೆಲುವಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆಮಾಡಿ ಸಾಮಾಜಿಕ ಪ್ರಾತಿನಿಧ್ಯ ಕೊಡೆಬೇಕು ಎಂದು ಪ್ರಕಟಣೆಯಲ್ಲಿ ಗೋಪಾಲ ಘಟಕಾಂಬಳೆ ತಿಳಿಸಿದ್ದಾರೆ.
ಇಂಡಿ: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರರೀರ್ವರೂ ಮೃತಪಟ್ಟ ಘಟನೆ ಇಂಡಿ ತಾಲೂಕಿನ ರೂಗಿ ಕ್ರಾಸ್ ಬಳಿ ಸಂಭವಿಸಿದೆ.ಮೃತರನ್ನು ನಾದ ಗ್ರಾಮದ ಸಿದ್ದು ಬಿರಾದಾರ (೨೭) ಮತ್ತು ಲಾಳಸಂಗಿ ಗ್ರಾಮದ ನಾಗೇಶ ನಾವಿ (೨೭) ಎಂದು ಗುರುತಿಸಲಾಗಿದೆ.ರೂಗಿ ಕ್ರಾಸ್ ಬಳಿಯ ಸುಗಲಮ್ಮತಾಯಿ ಮಠದ ಮುಂದೆ ಈ ಅವಘಡ ಸಂಭವಿಸಿದ್ದು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
