ಬಾಗಲಕೋಟ: ಹವಾಮಾನ ವೈಪರೀತ್ಯದಿಂದಾಗಿ ರೈತರು ಪ್ರಕೃತಿಯೊಂದಿಗೆ ಹೊಂದಿಕೊಂಡು ಬೇಸಾಯ ಮಾಡುತ್ತಿದ್ದು, ಅವರ ಕಷ್ಟಕಾರ್ಪಣ್ಯಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಅಧಿಕಾರಿಗಳು ಮತ್ತು ವಿಜ್ಞಾನಿಗಳು ನಿರಂತರವಾಗಿ ಸ್ಪಂದಿಸುತ್ತಿದ್ದಾರೆ ಎಂದು ಬಾಗಲಕೋಟ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಲಕ್ಷ್ಮಣ ಕಳ್ಳೆನ್ನವರ ಹೇಳಿದರು.
ಅವರಿಂದು ಬಾಗಲಕೋಟ ತಾಲೂಕಿನ ಶಾರದಾಳ ಗ್ರಾಮದ ಪ್ರಗತಿಪರ ರೈತ ನಿಂಗಪ್ಪ ಅರಕೇರಿ ಇವರ ಕ್ಷೇತ್ರದಲ್ಲಿ (೦೯-೦೭-೨೦೨೪ ರಂದು) ಹಮ್ಮಿಕೊಂಡ ದ್ವೈಮಾಸಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರಿಗೆ ಇಲಾಖೆಯಿಂದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವದು, ಸಕಾಲದಲ್ಲಿ ಪರಿಕರಗಳನ್ನು ಪೂರೈಸುವದು, ವಿವಿಧ ಬೆಳೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ಮಿನಿಕಿಟ್ ವಿತರಿಸುವದು, ಸಮಸ್ಯಾತ್ಮಕ ಕ್ಷೇತ್ರಗಳಿಗೆ ವಿಜ್ಞಾನಿಗಳೊಂದಿಗೆ ಭೇಟಿ ನೀಡಿ ಪರಿಹಾರ ಒದಗಿಸುವದು, ಒಟ್ಟಾರೆಯಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಇಲಾಖೆ ಸದಾ ಸನ್ನದ್ದವಾಗಿದೆ ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಸೂಕ್ತ ಸಲಹೆಗಳನ್ನು ನೀಡಲು ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲೆಯ ಅಧಿಕಾರಿಗಳಿಗೆ ಕೃಷಿಯಲ್ಲಾದ ನೂತನ ತಾಂತ್ರಿಕತೆಗಳ ಕುರಿತು ಪರಸ್ಪರ ಚರ್ಚಿಸಿ ಮಾಹಿತಿ ನೀಡಲಾಗುವದು. ಇದನ್ನು ಆಧರಿಸಿ ಅಧಿಕಾರಿಗಳು ರೈತರ ಬೆಳೆಗಳಿಗೆ ತಗಲುವ ಕೀಟ-ರೋಗಗಳ ಹತೋಟಿಗಾಗಿ ಸೂಕ್ತ ಮಾರ್ಗದರ್ಶನ ಮಾಡುವರು ಎಂದರು.
ಪ್ರಗತಿಪರ ರೈತರಾದ ನಿಂಗಪ್ಪ ಅರಕೇರಿ, ಬಸವರಾಜ ಪುಂಡಿಕಟಗಿ ಮಾತನಾಡಿ, ಭಾರತ ಕೃಷಿ ಪ್ರಧಾನವಾದ ದೇಶ, ರೈತ ಈ ದೇಶದ ಬೆನ್ನೆಲುಬು, ಅನೇಕ ರೈತರು ವಿಜ್ಞಾನಿಗಳ/ಅಧಿಕಾರಿಗಳ ಸಲಹೆ ಪಡೆದು ಇಳುವರಿ ಹೆಚ್ಚಿಸಿ ದೇಶದ ಆಹಾರ ಉತ್ಪಾದನೆ ದ್ವಿಗುಣಗೊಳಿಸಿ, ದೇಶ ಸ್ವಾವಲಂಬಿಯಾಗಲು ಸಹಕಾರಿಯಾಗಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ಅಧಿಕಾರಿಗಳು ಮಳೆ ಬೆಳೆ ಪರಿಸ್ಥಿತಿ, ವಾತಾವರಣ, ಬೆಳೆಗಳಲ್ಲಿ ಕೀಟ-ರೋಗ ಬಾದೆ ಕುರಿತು ವಿವರವಾಗಿ ಚರ್ಚಿಸಿ ಪರಿಹಾರ ಕಂಡುಕೊಂಡರು.
ತಾಂತ್ರಿಕ ಕೃಷಿ ಅಧಿಕಾರಿ ಎಂ. ಆರ್. ನಾಗೂರ ಸ್ವಾಗತಿಸಿದರು. ಆರ್. ಎ. ಸುರಪುರ ಕಾರ್ಯಕ್ರಮ ನಿರೂಪಿಸಿದರು. ವಿವೇಕ ಪಾಟೀಲ ವಂದಿಸಿದರು.
ಸಭೆಯಲ್ಲಿ ಉಪ ಕೃಷಿ ನಿರ್ದೇಶಕ ಎಲ್. ಆಯ್. ರೂಡಗಿ, ಕೆ.ಎಸ್. ಅಗಸನಾಳ, ಎಂ.ಆರ್. ನಾಗೂರ, ಕೃಷಿ ವಿಜ್ಞಾನಿಗಳಾದ ಆರ್. ಎ. ನಂದಗಾವಿ, ಸಿದ್ದಪ್ಪ ಅಂಗಡಿ, ಸುಧಾ. ಎಸ್., ಭವ್ಯಾ, ರುಮಿತಾ, ಉಪ ಕೃಷಿ ನಿರ್ದೇಶಕರಾದ ಮಂಜುನಾಥ ಕೆ. ಅಶೋಕ ತಿರಕಣ್ಣವರ, ಎಸ್. ಬಿ. ದೊಡಮನಿ, ಸೋಮನಿಂಗಪ್ಪ, ಸಿದ್ದಪ್ಪ ಪಟ್ಟಿಹಾಳ, ಪ್ರಕಾಶ ಅಡವಿ, ಶಶಿಕಲಾ ಹಿರೇಮಠ, ಬಸವರಾಜ ಮಾಳೇದ, ರೇಣುಕಾ, ಟಸ್ಕೀನ್ ಡಾಂಗೆ, ರವೀಂದ್ರ ತುಳಸಿಗೇರಿ ಸೇರಿದಂತೆ ಬಾಗಲಕೋಟ ಜಿಲ್ಲೆಯ ಕೃಷಿ ಅಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಜಂಟಿ ಕೃಷಿ ನಿರ್ದೇಶಕ ಡಾ.ಲಕ್ಷ್ಮಣ ಕರೆ
Related Posts
Add A Comment

