ಮುದ್ದೇಬಿಹಾಳ: ಪಟ್ಟಣದ ನಾಲತವಾಡ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ೨೦೨೪ -೨೫ ನೇ ಸಾಲಿನ ಶಾಲಾ ಸಂಸತ್ತು ರಚಿಸಲಾಯಿತು.
ವಿದ್ಯಾರ್ಥಿಗಳಿಗೆ ಇ.ವಿ.ಎಂ ಮಷೀನ್ ಮುಖಾಂತರ ಮೊಬೈಲ್ ಆಪ್ ಸಹಾಯದಿಂದ ಉಮೇದುವಾರರ ಪಟ್ಟಿ, ಮತದಾನ, ಮತಗಳ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಯಿತು.
ಲೋಕಸಭಾ, ವಿಧಾನಸಭಾ, ನಗರ ಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಗಳಂತೆ ಯಾವ ರೀತಿಯಾಗಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವದು, ದಿನಾಂಕಗಳನ್ನು ಮತ್ತು ಕಾರ್ಯಚಟುವಟಿಕೆ ಯಾವ ರೀತಿ ನಿರ್ವಹಿಸುತ್ತದೆಯೋ ಆ ಕಾರ್ಯರೂಪವನ್ನು ಸಂಪೂರ್ಣವಾಗಿ ವಿವರಣೆಯನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ.ಕೆರೂರ ವಿವರಿಸಿದರು.
ಶಾಲೆಯ ಮುಖ್ಯ ಗುರು ಎಸ್.ವಿ.ಹಿರೇಮಠ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವಂತೆ ದಿನಾಂಕಗಳನ್ನು ತಿಳಿಸಿದರು. ನಾಮಪತ್ರ ಸಲ್ಲಿಕೆ, ಹಿಂಪಡೆಯುವದು, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಮತ್ತು ಚಿನ್ನೆಯನ್ನು ನೀಡುವುದು, ಉಮೇದುವಾರದಿಂದ ಮತ ಯಾಚನೆಗಾಗಿ ಪ್ರಚಾರ, ಮತದಾನ, ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಈ ಎಲ್ಲದರ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಶಾಲೆಯ ಶಿಕ್ಷಕರಾದ ಕೆ.ಎಸ್.ಚಟ್ಟಿ, ಪ್ರೊಸೈಡಿಂಗ್ ಆಫೀಸರ್ ಆಗಿ ರೇಣುಕವ್ವ ಎಸ್.ಬಿ, ಮೊದಲನೆಯ ಪೋಲಿಂಗ್ ಆಫೀಸರ್ ಆಗಿ ತಬಸುಂ ಕಾಜಿ, ಎರಡನೇ ಪೋಲಿಂಗ್ ಅಧಿಕಾರಿಯಾಗಿ ಟಿ.ಎ.ನಾಗರಬಾವಡಿ ಕಾರ್ಯನಿರ್ವಹಿಸಿದರು. ಒಟ್ಟು ೧೧೬ ವಿದ್ಯಾರ್ಥಿಗಳು ಇದ್ದು ಅದರಲ್ಲಿ ೯೬ ವಿದ್ಯಾರ್ಥಿಗಳು ಮತ ಚಲಾವಣೆ ಮಾಡಿದರು. ವೈ.ಎಸ್.ಮೊಘಲೈ ಮತ ಎಣಿಕೆ ಮೇಲ್ವಿಚಾರಕಾಗಿ, ಸಂತೋಷ್ ಬಿದರಿ ಮತ ಎಣಿಕೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.
ಕುಮಾರಿ ಸ್ವಾಲಿಹಾ ದೇಸಾಯಿ ನೂತನ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ, ಕುಮಾರ ಇಮ್ರಾನ ಬಾಗಲಕೋಟ ಉಪಪ್ರಧಾನ ಮಂತ್ರಿಯಾಗಿ, ಕುಮಾರಿ ಸಾನಿಯಾ ಶಿಕ್ಷಣ ಮಂತ್ರಿಯಾಗಿ, ಕುಮಾರಿ ಶಮೀಮ್ ನದಾಫ್ ಮಹಿಳಾ ಪ್ರತಿನಿಧಿಯಾಗಿ, ಬಿಬಿ ಆಯಿಶಾ ತೆಗ್ಗಿನಮನಿ ಆರೋಗ್ಯ ಮಂತ್ರಿಯಾಗಿ, ಕುಮಾರಿ ಉಮ್ಮೇ ಕುಲಸುಮ ಮಮದಾಪೂರ ಶಾಲಾ ಉಸ್ತುವಾರಿ ಮಂತ್ರಿಯಾಗಿ, ಮುಸಬ್ಬಿಯಾ ಮುರಾಳ ಹಣಕಾಸು ಮಂತ್ರಿಯಾಗಿ, ಕುಮಾರಿ ಬಿಬಿ ಆಯಿಶಾ ಕಾಚಾಪೂರ ಸ್ವಚ್ಛತಾ ಮಂತ್ರಿಯಾಗಿ, ಕುಮಾರಿ ಮೆಹಬೂಬ್ಬಿ ದೊಡಮನಿ ಪ್ರವಾಸ ಮಂತ್ರಿಯಾಗಿ, ಮಿಸ್ಬಾ ಕೂಡಗಿ ಸಂಸ್ಕೃತಿಕ ಮಂತ್ರಿಯಾಗಿ ಪ್ರಮಾಣ ವಚನದ ಸ್ವೀಕರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

