ಕ್ಯಾಂಟೀನ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಮನಗೂಳಿ ಅಭಿಮತ
ಸಿಂದಗಿ: ಇಂದಿರಾ ಕ್ಯಾಂಟಿನ್ ಬಡವರಿಗೆ ಹಸಿವು ನೀಗಿಸಲು ಉಪಯುಕ್ತವಾಗಿದೆ. ತಾಲೂಕು ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಕೋರ್ಟ್ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರಿಗೆ ಅನುಕೂಲ ಕಲ್ಪಿಸಲು ನಿಟ್ಟಿನಲ್ಲಿ ಸು.೮೬ಲಕ್ಷ ರೂ. ಅನುದಾನದಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಭೂಮಿ ಪೂಜಾ ಸಮಾರಂಭವನ್ನು ಬೆಂಗಳೂರ ಪೌರಾಡಳಿ ಇಲಾಖೆ, ಸಿಂದಗಿ ಪುರಸಭೆ ವತಿಯಿಂದ ಹಮ್ಮಿಕೊಂಡ ಇಂದಿರಾ ಕ್ಯಾಂಟಿನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಮಹತ್ತರವಾದ ಯೋಜನೆ ಇಂದಿರಾ ಕ್ಯಾಂಟಿನ್. ೨೦೧೩-೧೮ರವರೆಗೆ ಈ ರಾಜ್ಯದ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಯೋಜನೆಯನ್ನು ೨೨೪ ಮತಕ್ಷೇತ್ರಘಲ್ಲಿ ಜಾರಿಗೆ ತಂದು ಜನ ಸಾಮಾನ್ಯರಿಗೆ ಊಟ ಉಪಹಾರ ಹೋರೆಯಾಗಬಾರದು ಎಂಬ ಉದ್ದೇಶದಿಂದ ಕಡಿಮೆ ದರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಚಾಲನೆ ನೀಡಿದ್ದರು, ಆದರೆ ನಗರದ ತಹಶೀಲ್ದಾರ್ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಮಂಜೂರಾಗಿ ಭೂಮಿ ಪೂಜೆಯೂ ನೇರವೇರಿತ್ತು, ತಾಂತ್ರಿಕ ದೋಷದಿಂದ ಅದು ನೆನೆಗುದಿಗೆ ಬಿದ್ದಿತ್ತು. ಪ್ರಸ್ತುತ ನಮ್ಮ ಸರಕಾರ ಮತ್ತೆ ಈ ಯೋಜನೆಗೆ ಚಾಲನೆ ನೀಡುವ ಮೂಲಕ ಮಹತ್ತರವಾದ ಹೆಜ್ಜೆಯಿಟ್ಟಿದೆ. ಈ ಮೊದಲು ಮಹಾನಗರದಲ್ಲಿ ಈ ಯೋಜನೆ ಪ್ರಾರಂಭಗೊಂಡಿದೆ. ಪ್ರಸ್ತುತ ರಾಜ್ಯದ ತುಂಬೇಲ್ಲ ಇದು ವಿಸ್ತರಣೆಗೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಇಂಡಿ ಉಪ ವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿದರು. ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ, ವಿರೇಶ ದುರ್ಗಿ, ವಾಯ್.ಸಿ.ಮಯೂರ, ಮಡಿವಾಳಪ್ಪ ನಾಯ್ಕೋಡಿ, ಪುರಸಭೆಯ ಸದಸ್ಯ ರಾಜಣ್ಣ ನಾರಾಯಣಕರ, ಬಸವರಾಜ ಯರನಾಳ, ಸಂದೀಪ ಚೌರ, ನಾಮ ನಿರ್ದೆಶಿತ ಸದಸ್ಯರಾದ ಚನ್ನಪ್ಪ ಗೋಣಿ, ಸದಾನಂದ ಕುಂಬಾರ, ಸಿದ್ದು ಮಲ್ಲೇದ, ಸಿಂದಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಕಾಂಬಳೆ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಶಾಂತಪ್ಪ ರಾಣಾಗೋಳ, ಶರಣಪ್ಪ ಸುಲ್ಪಿ, ಮಹಾದೇವ ಸುಲ್ಪಿ, ಆರೋಗ್ಯ ಇಲಾಖೆಯ ಡಾ.ರಾಜಶೇಖರ ಪಾಟೀಲ, ಡಾ. ಮೌನೇಶ ಬಡಿಗೇರ, ರಾಜು ನರಗೋದಿ, ಶ್ರೀಹರಿ ಕುಲಕರ್ಣಿ, ಸುರೇಶ ಪಾಟೀಲ, ನಬೀರಸುಲ್ ಉಸ್ತಾದ, ಅಜರುದ್ದಿನ ನಾಟೀಕಾರ, ಸದ್ದಾಮ ಶೇಖ, ದಯಾನಂದ ಇವಣಿ, ಸಿದ್ದು ಅಂಗಡಿ, ಅನೀಲ ಕರಾಬಿ, ಅಲ್ತಾಫ್ ಮುಜಾವರ ಸೇರಿದಂತೆ ಪುರಸಭೆ, ಆಸ್ಪತ್ರೆ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಇದ್ದರು.

