Author: editor.udayarashmi@gmail.com

ದೇವರಹಿಪ್ಪರಗಿ: ಪಟ್ಟಣದ ಬಸವ ಶರಣಸಂಗಮ ಸೇವಾ ಸಮಿತಿಯ ಅಡಿಯಲ್ಲಿ ದಿ:೧೦ ಶುಕ್ರವಾರದಂದು ಬಸವ ಜಯಂತ್ಯುತ್ಸವ ಹಾಗೂ ಶ್ರೀಬಸವಶ್ರೀ ಪ್ರಶಸ್ತಿ ವಿತರಣಾ ಸಮಾರಂಭ ಜರುಗಲಿದೆ.ಪಟ್ಟಣದ ಬಸವೇಶ್ವರ ವೃತದಲ್ಲಿ ಬೆಳಿಗ್ಗೆ ಭಾವಚಿತ್ರಕ್ಕೆ ಪೂಜೆ ಜರುಗಲಿದೆ. ನಂತರ ಸಾಯಂಕಾಲ ಶ್ರೀಸಿದ್ಧೇಶ್ವರ ಸ್ವಾಮೀಜಿ ವಸತಿ ಶಾಲೆಯ ಆವರಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ‘ಶ್ರೀಬಸವಶ್ರೀ’ ಪ್ರಶಸ್ತಿ ಹಾಗೂ ಇತರ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಅಧ್ಯಕ್ಷ ಸಂಗಪ್ಪ ತಡವಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Read More

ಇಂಡಿ: 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿಧ್ಯಾರ್ಥಿಗಳು ಅದ್ವಿತೀಯ ಸಾಧನೆಗೈದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಂದು ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.ತಾಲ್ಲೂಕಿನ ಅಂಜುಟಗಿ ಗ್ರಾಮದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿಯ ಶಾಲೆಯ ವಿಧ್ಯಾರ್ಥಿನಿ ವೈಶಾಲಿ ಮಣ್ಣೂರ 608 ಅಂಕ ಪಡೆದು ಪ್ರಥಮಸ್ಥಾನ, ಅನುರಾಧ ಹಿರೇಮಾಳ 605 ಅಂಕ ಪಡೆದು ದ್ವೀತಿಯ ಸ್ಥಾನ, ಸುಪ್ರೀಯಾ ನಾಯಕ 599 ಹಾಗೂ ಅಕ್ಷತಾ ಹಳ್ಳದಮನಿ 599 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅದು ನಮ್ಮ ಶಾಲೆಗೆ ಕ್ರೈಸ್ ಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅದಲ್ಲದೇ ಪರೀಕ್ಷೆ ಬರೆದ ವಿಧ್ಯಾರ್ಥಿಗಳ ಪೈಕಿ ಯಾರೊಬ್ಬರೂ ಅನುವುತ್ತೀರ್ಣರಾಗಿದೆ ಕ್ರೈಸ್ ಶಾಲೆಯ ಮೆರುಗು ಹೆಚ್ಚಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಾಂಶುಪಾಲ ಚನ್ನಪ್ಪ ಸೇಠೆ ಹಾಗೂ ನಿಲಯಪಾಲಕ ಸಂಜೀವ್ ಕುಮಾರ್ ಹಿರೋಳ ಹಾಗೂ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.ವೈಶಾಲಿ‌ ಮಣ್ಣೂರ 608 ಅಂಕಅನುರಾಧ ಹಿರೇಮಾಳ…

Read More

ವಿಜಯಪುರ: ಬಿರುಬೇಸಿಗೆಯಲ್ಲಿ ತತ್ತರಿಸಿದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶದಿಂದ ಮುಳವಾಡ ಏತನೀರಾವರಿ ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯಡಿ ಇಂದಿನಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವದನ್ನು ತಪ್ಪಿಸಲು ಈ ಹಿಂದೆ ತಿಡಗುಂದಿ ಕಾಲುವೆಯಿಂದ ನೀರು ಹರಿಸಿ, ಭೂತನಾಳ ಕೆರೆ ತುಂಬಿಸಿ, ನಗರದಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗಿತ್ತು. ಈಗ ಮತ್ತೆ ಭೂತನಾಳ ಕೆರೆಗೆ ಹಾಗೂ ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಿಡಗುಂದಿ ಕಾಲುವೆ ಮೂಲಕ ನೀರು ಹರಿಸಲಾಗುವುದು.ಬಸವನಬಾಗೇವಾಡಿ ತಾಲೂಕಿನ ಅರೇಶಂಕರ ಮತ್ತು ಇತರೆ 19 ಗ್ರಾಮಗಳ ಕಣಕಾಲ ಮತ್ತು 11 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯು 0.45ಟಿ.ಎಂ.ಸಿ ನೀರನ್ನು ಮುಳವಾಡ ಏತನೀರಾವರಿ ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯಡಿ ಕೆರೆಗಳಿಗೆ…

Read More

ನಿಡಗುಂದಿ:ಎಸ್‌ಎಸ್‌ಎಲ್‌ಸಿ -2024ರ ಪರೀಕ್ಷೆಯಲ್ಲಿ ಸ್ಥಳೀಯ ಬನಶಂಕರಿ ಪಬ್ಲಿಕ್ ಸ್ಕೂಲ್ & ಪಿ.ಯು ಕಾಲೇಜ್‌ನ ವಿದ್ಯರ‍್ಥಿಗಳ ಈ ಬಾರಿಯೂ ಸಹ ಉತ್ತಮ ಸಾಧನೆಯನ್ನು ಸಾಧಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಸತೀಶ. ಎಸ್. ಪಾಟೀಲ ತಿಳಿಸಿದ್ದಾರೆ.ಅಲ್ಲದೇ ಕಳೆದ 3ಬ್ಯಾಚ್‌ಗಳಲ್ಲಿಯೂ ಶೇ.100ರಷ್ಟು ಫಲಿತಾಂಶ ಪಡೆಯುವಲ್ಲಿ ಶಿಕ್ಷಕರ ಪಾತ್ರ ಹಿರಿದು ಎಂದು ತಿಳಿಸಿದರು.2024ರ ಪರೀಕ್ಷೆಯಲ್ಲಿ ರ‍್ಪಿತಾ ಮೋಕಾಶಿ (576/625) 92.16% ಪಡೆದು ಶಾಲೆಗೆ ಪ್ರಥ ಮಸ್ಥಾನದಲ್ಲಿದ್ದಾಳೆ. ಅನುಪ್ ಮೂರನಾಳ (574/625) 91.84% ಪಡೆದು ದ್ವೀತಿಯ ಸ್ಥಾನವನ್ನು ಪಡೆದಿರುತ್ತಾನೆ. ಸಾಧಿಕಾ ಪೆಂಡಾರಿ (532/625) 85.12% ಪಡೆದು 3ನೇ ಸ್ಥಾನವನ್ನು ಪಡೆದಿರುತ್ತಾಳೆ.ಉತ್ತಮ ಅಂಕ ಗಳಿಸಿದ ಎಲ್ಲ ವಿದ್ಯರ‍್ಥಿಗಳಿಗೆ ಸಂಸ್ಥೆಯ ಕರ‍್ಯರ‍್ಶಿ ನೀಲಾ ಎಸ್ ಪಾಟೀಲ, ಮುಖ್ಯ ಗುರುಗಳು ಮತ್ತು ಎಲ್ಲ ಶಿಕ್ಷಕವೃಂದ ಅಭಿನಂದನೆಗಳನ್ನು ತಿಳಿಸಿದ್ದಾರೆ.

Read More

ಡಾ.ಪೂರ್ಣಿಮಾ ಧಾಮಣ್ಣವರಕನ್ನಡ ಉಪನ್ಯಾಸಕರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವಿಜಯಪುರ ಕಾವ್ಯ ಸೌಂದರ್ಯ ಎನ್ನುವುದು ಕೇವಲ ಕವಿತೆಗಳಲ್ಲಿಯೇ ಇರುತ್ತದೆಯೆಂದಲ್ಲ, ಪ್ರತಿಭಾನ್ವಿತರು ಬರೆದ ವಚನಗಳಲ್ಲಿ ಕಾವ್ಯದ ಅನನ್ಯತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಚನ-ಕೀರ್ತನೆ-ತತ್ವಪದ ಇವು ಯಾವುದು ಹೊರತಾಗಿಲ್ಲ. ಬಸವಣ್ಣನವರ ವಚನಗಳಂತೂ ಆಧುನಿಕ ಸಂದರ್ಭದ ಭಾವಗೀತೆಗಳಂತೆ ಸುಂದರವಾಗಿವೆ. ರಚನೆ ಸುಂಧರವಾಗಿ ಅನನ್ಯವಾಗಿ ಕಾಣಲು ಹೇಳುವ ವಿಷಯದಷ್ಟೇ ಅಭಿವ್ಯಕ್ತಿ ಕ್ರಿಯೆಯೂ ಮುಖ್ಯವಾಗಿರಬೇಕಾಗುತ್ತದೆ. ಕಾವ್ಯವು ಅಭಿವ್ಯಕ್ತಿ ಭಾಷೆಯನ್ನ ವಹಿಸಿರುತ್ತದೆ. ಹೀಗಾಗಿ ಕವಿತೆಯಾಗಲಿ, ವಚನವಾಗಲಿ ಸುಂದರವಾಗಿ ಕಾಣಬೇಕಾದರೆ ಅದರಲ್ಲಿ ಬಳಸುವ ಭಾಷಾ ಚಮತ್ಕಾರ ಪಡೆನುಡಿಗಳು ಗಾದೆ ಮಾತುಗಳು, ಅಲಂಕಾರಗಳು ತುಂಬಾ ಮುಖ್ಯವಾಗಿರುತ್ತವೆ. ಆದರೆ ನಿಜವಾದ ಕಾವ್ಯ ಓದುಗನನ್ನು ಕಟ್ಟಿ ಹಾಕುತ್ತದೆ ಹಾಗೂ ಒಳಗೆ ಇಳಿಯುತ್ತದೆ, ನಿನದಿಸುತ್ತದೆ, ಗುನುಗುಡುತ್ತದೆ. ಮನದಾಳದಲ್ಲಿ ಹಸಿರಾಗುತ್ತದೆ. ಇಂತಹ ತೀವ್ರವಾದ, ಆಶ್ಚರ್ಯಕರವಾದ ಅನನ್ಯವಾದ ಪರಿಣಾಮ ನಿಜವಾದ ಕಾವ್ಯದಿಂದ ಮಾತ್ರ ಸಾಧ್ಯವಾಗುತ್ತದೆ. ಬಸವಣ್ಣನವರ ವಚನಗಳು ಅಂತಹ ಸುಂದರ ರಚನೆಗಳಾಗಿವೆ. ಅವರ ಅನೇಕ ವಚನಗಳು ಕಾವ್ಯಸೌಂದರ್ಯದ ಅನುಭವವನ್ನು ನಾವು ಕಾಣುತ್ತೇವೆ.ಮೊದಲಿಗೆ ಕಾವ್ಯ ಸೌಂದರ್ಯ ಎಂದರೇನು? ಎಂಬ ಪ್ರಶ್ನೆ ಏಳುತ್ತದೆ. ಭಾರತೀಯ ಅಲಂಕಾರಿಕನಾದ…

Read More

ಮಾಜಿ ಸಿಎಂ. ಎಚ್ ಡಿ ಕುಮಾರಸ್ವಾಮಿ ಬೇಡಿಕೆಗೆ ತಿರಸ್ಕಾರ | ತನಿಖೆ ನಡೆಸಲು ಸಿಐಡಿ ಸಮರ್ಥ | ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಠನೆ ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಬೇಡಿಕೆಯನ್ನು ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಬುಧವಾರ ತಿರಸ್ಕರಿಸಿದ್ದಾರೆ.ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರದ ಸಿಐಡಿ ಸಮರ್ಥವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.ಕುಮಾರಸ್ವಾಮಿ ಅವರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವೆಲ್ಲಕ್ಕೂ ನಾನು ಉತ್ತರಿಸುವುದಿಲ್ಲ. ಅವರು ಸಿಬಿಐ ತನಿಖೆ ಮಾಡಬೇಕು ಎಂದು ಕೇಳಿದ್ದರು ನಾವು ಮಾಡುವುದಿಲ್ಲ. ಪ್ರಕರಣದ ತನಿಖೆ ನಡೆಸಲು ಎಸ್‌ಐಟಿ ಸಮರ್ಥವಾಗಿದೆ. ಸೂಕ್ತ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.ಹೊಳೆನರಸೀಪುರ ಜೆಡಿಎಸ್ ಶಾಸಕ ಹಾಗೂ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ಕೂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, ಮೂರು ಮಕ್ಕಳ ತಾಯಿಯಾಗಿರುವ…

Read More

ಢವಳಗಿ: ಇತ್ತಿಚಿನ ದಿನಗಳಲ್ಲಿ ಕೃಷಿಗೆ ಎತ್ತುಗಳ ಬಳಕೆ ಮಾಡುವುದು ಕಡಿಮೆ ಆಗಿದೆ. ಯಂತ್ರದ ಕೃಷಿ ಹೆಚ್ಚುತ್ತಿದೆ. ಒಕ್ಕುಲುತನ ಮಾಡುವವರು ನಾವು ಕೀಳುಮಟ್ಟದವರು ಎನ್ನುವ ಭಾವನೆ ಜನರಲ್ಲಿ ಬರಬಾರದು ಎಂದು ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ ಅವರು ಹೇಳಿದರು.ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ಜೋಡೆತ್ತಿನ ಕೃಷಿಗೆ ಪುನಶ್ಚೇತನ ಸಂಕಲ್ಪ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮೊದಲು ನಮ್ಮ ಮನೆಯಲ್ಲಿ ಅರವತ್ತು ಎತ್ತಿನ ಒಕ್ಕಲುತನ ಇತ್ತು. ಆದರೆ ಇವತ್ತಿನ ದಿನ ನಮ್ಮ ಮನೆಯಲ್ಲಿ ಒಂದು ಹಸು ಕೂಡಾ ಇಲ್ಲ. ನಾವು ಎಲ್ಲರೂ ಪಾಕೇಟ್ ಹಾಲು ಬಳಸುತ್ತಿದ್ದೆವೆ. ಈಗಿನ ಯುವಕರು ವ್ಯವಸಾಯದಲ್ಲಿ ಆಸಕ್ತಿ ತೋರಬೇಕು. ರೈತರಿಗೆ ಹಸು ಹಾಗೂ ಎತ್ತಿನ ಗೊಬ್ಬರ ಬೂಮಿಗೆ ಮತ್ತು ಬೆಳೆಗಳಿಗೆ ಉತ್ತಮ ಹಾಗೂ ಆರೋಗ್ಯವಾದ ಗೊಬ್ಬರವಾಗಿದೆ. ಇದರಿಂದ ಬೆಳೆಯುವ ಬೆಳೆಗಳಿಗೂ ಕೂಡಾ ಹೆಚ್ಚು ರೋಗಗಳು ಬರುವುದಿಲ್ಲ. ಆಗಿನ ಕಾಲದಲ್ಲಿ ವ್ಯವಸಾಯದಲ್ಲಿ ರೈತರಿಗೆ ಹೆಚ್ಚು ಖರ್ಚು ಬರುತ್ತಿರಲಿಲ್ಲ. ಏಕೆಂದರೆ ಅವರ ಜೋತೆ ಎತ್ತು, ಧನಕರುಗಳು ಜೋತೆಗಿರುತ್ತಿದ್ದವು. ಆದರೆ ಈಗಿನ ರೈತರ…

Read More

ಮುದ್ದೇಬಿಹಾಳ: ಪ್ರತೀ ವರ್ಷದಂತೆ ಈ ವರ್ಷವೂ ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಮಸ್ತ ಬಸವಾಭಿಮಾನಿಗಳು ತೀರ್ಮಾನಿಸಿದರು.ಈ ಕುರಿತು ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಮಾತನಾಡಿ, ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಹೊಸ ಮಠದಿಂದ ಬಸವೇಶ್ವರರ ಅದ್ಧೂರಿ ಮೆರವಣಿಗೆ ಮಾಡುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿಸಲು ತೀರ್ಮಾನಿಸಿದ್ದೇವೆ. ವ್ಯಾಪಾರಸ್ಥರು ಮೇ೧೦ ರಂದು ಮಧ್ಯಾಹ್ನ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಂಡರು.ಈ ವೇಳೆ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಬಸವರಾಜ ನಂದಿಕೇಶ್ವರಮಠ ಮಾತನಾಡಿ, ಅಂದು ಸಂಜೆ ೫ಗಂಟೆಗೆ ಮೆರವಣಿಗೆ ಪ್ರಾರಂಭವಾಗುವದು. ಹೊಸಮಠದಿಂದ ಸರಾಫ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತ, ರಾಘವೇಂದ್ರ ದೇವಸ್ಥಾನ, ಶಾರದಾ ದೇವಿ ದೇವಸ್ಥಾನ, ಬಿಎಸ್‌ಎನ್‌ಎಲ್ ಕಚೇರಿ ಮಾರ್ಗವಾಗಿ ಬೊಮ್ಮಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಸಾಗಲಿದೆ. ಎಲ್ಲರೂ ತಮ್ಮ ವಾಹನಗಳನ್ನು ಒಂದೆಡೆ…

Read More

ದೇವರಹಿಪ್ಪರಗಿ: ಪಡಗಾನೂರ ತಾಂಡಾದ ಬಿಎಸ್‌ಎಫ್ ಯೋಧ ಅಶೋಕ ಬಾಸು ಪವಾರ(೪೬) ಅನಾರೋಗ್ಯದಿಂದ ಮಂಗಳವಾರ ನಿಧನರಾದರು.ತಾಲ್ಲೂಕಿನ ಪಡಗಾನೂರ ತಾಂಡಾ ನಿವಾಸಿಯಾಗಿದ್ದ ಅಶೋಕ ಬಾಸು ಪವಾರ ತ್ರಿಪುರಾದ ೧೦೪ ಬೆಟಾಲಿಯನ್‌ನಲ್ಲಿ ಕಳೆದ ೨೪ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ದೇಶ ಸೇವೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ತಿಂಗಳ ಹಿಂದೆಯೇ ಸ್ವಗ್ರಾಮಕ್ಕೆ ಬಂದು ಮಗನ ಮದುವೆ ಮಾಡಿ ಹೋಗಿದ್ದರು. ಆಕಸ್ಮಿಕವಾಗಿ ಕಳೆದ ವಾರ ಅನಾರೋಗ್ಯಕ್ಕೆ ಒಳಗಾಗಿ ಮಂಗಳವಾರ ಕೋಲ್ಲಾಪೂರ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಬುಧವಾರ ಸ್ವಗ್ರಾಮ ಪಡಗಾನೂರ ತಾಂಡಾಕ್ಕೆ ಸೇನಾವಾಹನದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸೈನಿಕನ ಮೃತದೇಹ ಬರುತ್ತಿದ್ದಂತೆ ನೂರಾರು ಯುವಕರು, ಸಾರ್ವಜನಿಕರು ದೇಶಭಕ್ತರು ಭೋಲೋ ಭಾರತ ಮಾತಾಕೀ ಜೈ, ಜೈಜವಾನ ಜೈಕಿಸಾನ್ ಘೋಷಣೆ ಮೊಳಗಿಸಿದರು. ಸೇನಾ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ನಂತರ ಮೃತರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಶಾಸಕ ರಾಜುಗೌಡ ಪಾಟೀಲ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಡಾ.ರಮೇಶ ರಾಠೊಡ, ಶಂಕರ ರಾಠೋಡ, ಎಲ್.ಆರ್.ಅಂಗಡಿ, ಶ್ರೀಕಾಂತ ರಾಠೋಡ…

Read More