ಬಬಲೇಶ್ವರ: ಕನ್ನಡ ಸಾಹಿತಿ ಶಂ ಗು ಬಿರಾದಾರ, ಸಾಹಿತಿ ಮ. ಗು ಬಿರಾದಾರ ಮನೆತನದ ಪ್ರಗತಿಪರ ರೈತ ರಾಜುಗೌಡ ಚಂದ್ರಶೇಖರ ಬಿರಾದಾರ ಎಸ್.ಎಸ್.ಎಲ್.ಸಿ ವರೆಗೆ ಶಿಕ್ಷಣ ಮುಗಿಸಿ ತಮ್ಮ ೧೫ ಎಕರೆ ಜಮೀನಿನಲ್ಲಿ ಕೃಷಿ ಜೊತೆ ವಿವಿಧ ಲಾಭವನ್ನು ಪಡೆಯುವುದರ ಜೊತೆಗೆ ಈ ಭಾಗದ ಯುವ ರೈತರಿಗೆ ತಮ್ಮ ನಗುಮುಖದಿಂದಲೇ ಯಾವುದೇ ಜಾತಿ ಮತ ಅನ್ನದೇ ಎಲ್ಲರನ್ನು ಗೌರವಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ,
ಕೃಷಿಯಲ್ಲಿ ತಾವೇ ಸ್ವತಃ ತಮ್ಮ ಕುಟುಂಬದವರು ಸೇರಿಕೊಂಡು ಕೆಲಸ ಮಾಡುತ್ತಿರುವುದರಿಂದ ಇಂದಿನ ಕೂಲಿಕಾರ್ಮಿಕರು ಸಿಗದೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಇವರ ತಾಯಿ ಪಾರ್ವತಿಬಾಯಿ, ಸಹೋದರಿಯಾದ ರೂಪಾ ಜಂಗಮಶೆಟ್ಟಿ ಹಾಗೂ ಧರ್ಮಪತ್ನಿಯಾದ ಶ್ವೇತಾ ಬಿರಾದಾರ ಅವರು ಕೂಡಾ ಇವರ ಜೊತೆ ಹೆಗಲಿಗೆ ಹೆಗಲಾಗಿ ದುಡಿಯುತ್ತಿರುವುದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಅವರ ತಾಯಿ.
ಬೀಜದ ಹೋರಿಗಳಾದ ರಾಮೆ ಎಂಬ ಹೆಸರಿನ ಮಹಾರಾಷ್ಟ್ರದ ತಳಿ ಮತ್ತು ಸಾರಂಗ ಎಂಬ ಕರ್ನಾಟಕದ ಹೋರಿಗಳನ್ನು ಸಾಕಿ ಪ್ರತಿದಿನ ಸುತ್ತಮುತ್ತಲಿನ ಸುಮಾರು ೧೦ ಹಳ್ಳಿಗಳಿಂದ ಆಕಳುಗಳನ್ನು ಕಟ್ಟಿಸಲು ಇವರಿಗೆ ಬರುವವರು ಮುಂಚಿತವಾಗಿಯೇ ಹೆಸರು ಬರೆಸುವಷ್ಟು ಹೆಸರುವಾಸಿಯಾಗಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಪ್ರತಿನಿತ್ಯ ಆಕಳುಗಳಿಗೆ ಗರ್ಭಧರಿಸುವಂತೆ ಮಾಡುವ ರಾಜುಗೌಡರು ಬಿರಾದಾರ ಅವರು ಈ ಭಾಗದಲ್ಲಿ ಹೆಸರು ವಾಸಿಯಾಗಿದ್ದಾರೆ, ಅವುಗಳನ್ನು ಸ್ವಂತ ಮಕ್ಕಳಿಗಿಂತಲೂ ಹೆಚ್ಚೆಂದು ಸಾಕುತ್ತಿದ್ದಾರೆ,
ಇವರು ವಿಶೇಷ ಆಸಕ್ತಿಯಿಂದ ಹೊಸ ಹೊಸ ತಳಿಗಳನ್ನು ಅಭಿವೃದ್ಧಿ ಮಾಡುತ್ತಾ ಪ್ರತಿವರ್ಷ ಕಿಲಾರಿ ಹೋರಿಗಳನ್ನು ತಯಾರು ಮಾಡಿ ಒಳ್ಳೆಯ ಲಾಭ ಪಡೆಯುತ್ತಿದ್ದಾರೆ, ಇವುಗಳ ಜೊತೆ ೩ ದೇಶಿ ಆಕಳುಗಳು,೩ ಎಮ್ಮಿಗಳು, ೨೦ ಆಡುಗಳನ್ನು ಸಾಕಿ ಪ್ರತಿವರ್ಷ ಇವುಗಳಿಂದ ಹಾಲು, ಹಾಲಿನ ಉತ್ಪನ್ನಗಳು ಸೇರಿದಂತೆ ಇವುಗಳನ್ನು ಮಾರಾಟ ಮಾಡಿ ಕೈತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ
ಸುಮಾರು ೬ ಎಕರೆಯಲ್ಲಿ ಸಾವಯವ ಕಬ್ಬು, ಹಸುಗಳಿಗೆ ಬೇಕಾಗುವ ಮೇವು, ತೊಗರಿ, ಹತ್ತಿ, ಮನೆಗೆ ಬೇಕಾಗುವ ಎಲ್ಲಾ ರೀತಿಯ ತರಕಾರಿಗಳನ್ನು ಹಚ್ಚಿ, ಇವುಗಳ ಜೊತೆ ತೆಂಗು, ಮಾವು, ದಾಳಿಂಬೆ, ಚಿಕ್ಕು, ಪೆರು, ಬಾಳಿ, ಪೆರಲ್, ಬಾರಿಹಣ್ಣಿನ ಗಿಡ ಸೇರಿದಂತೆ ಇನ್ನಿತರ ಹಣ್ಣಿನ ಗಿಡಗಳನ್ನು ಹಚ್ಚಿ ಇದರಿಂದಲೂ ಲಾಭ ಪಡೆಯುತ್ತಿದ್ದಾರೆ.
ಸುಮಾರು ೨೦ ಅಂಕಣದಲ್ಲಿ ಒಳ್ಳೆಯ ಹಳೆಯ ಮಾದರಿಯಲ್ಲಿ ವರ್ಷ ಪೂರ್ತಿ ತಂಪಾಗಿರುವ ಕಟ್ಟಿಗೆ ಜಂತಿ ಮನೆ ಮಾಡಿ ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ.
ಕೋಟ ನಂಬರ – ಪ್ರಗತಿಪರ ರೈತ – ರಾಜುಗೌಡ ಬಿರಾದಾರ
ಕೇವಲ ಕೃಷಿಯಿಂದ ಇಂದಿನ ಆಧುನಿಕ ಯುವದಲ್ಲಿ ಬದುಕು ಸಾಗಿಸುವುದು ಕಷ್ಟದ ಕೆಲಸ, ಇವುಗಳ ಜೊತೆ ಸಮಗ್ರ ಕೃಷಿ ಮಾಡಿ ಪ್ರತಿನಿತ್ಯ ಲಾಭ ಪಡೆಯಬೇಕಾಗಿದೆ ನಮ್ಮ ರೈತರ ಬಾಂಧವರು, ಕೃಷಿ ಹಾಗೂ ಇನ್ನಿತರ ಉಪಕಸುಬಗಳನ್ನು ಸೇರಿ ಪ್ರತಿ ವರ್ಷ ೧೦-೧೫ ಲಕ್ಷಗಳ ಆದಾಯ ಪಡೆಯುತ್ತಿದ್ದೆನೆ, ಸಾವಯವ ಪದ್ದತಿಯಿಂದ ಖರ್ಚು ಕಡಿಮೆ ಆಗುವುದಲ್ಲದೇ, ಆರೋಗ್ಯವು ಉತ್ತಮವಾಗಿ ಸದೃಡ ಸಮಾಜದ ಯುವ ಪೀಳಿಗೆ ತಯಾರಾಗುತ್ತಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

