ವಿಕಲಚೇತನ-ಹಿರಿಯ ನಾಗರಿಕರ ಇಲಾಖೆ: ಸಹಾಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
ವಿಜಯಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ೧೩ ಫಲಾನುಭವಿ ಆಧಾರಿತ ಯೋಜನೆಗಳಡಿ ಸಹಾಯ ಸೌಲಭ್ಯ ಪಡೆಯಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
೧೩ ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾಸಿಂಧು, ಗ್ರಾಮ ಓನ್, ಕರ್ನಾಟಕ ಓನ್, ಬೆಂಗಳೂರು ಓನ್, ಸಿಟಿಜೆನ್ಸ್ ಪೋರ್ಟಲ್ ಆನ್‌ಲೈನ್ ತಂತ್ರಾಂಶದಡಿ ಅಳವಡಿಸಲಾಗಿದ್ದು, ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಶಿಶುಪಾಲನಾ ಭತ್ಯೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್, ನಿರುದ್ಯೋಗ ಭತ್ಯೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಆಧಾರ ಯೋಜನೆ, ಸಾಧನ ಸಲಕರಣೆಗಳ ಯೋಜನೆ, ಮರಣ ಪರಿಹಾರ ನಿಧಿ, ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನೆ ಯೋಜನೆ, ದೃಷ್ಟಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‌ಕಿಟ್ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಲು ಆನ್ ಲೈನ್ ಮೂಲಕ hhps://sevasindhu.karnataka.gov.in/sevasindhu/Department Services kannadaಫೋರ್ಟಲ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ವಿವಿಧೋದ್ಧೇಶ ಪುನರ್‌ವಸತಿ ಕಾರ್ಯಕರ್ತರಾದ ವಿಜಯಪುರ ತಾಲೂಕಿನ ರವಿ ರಾಠೋಡ (ಮೊ:೯೦೩೫೫೫೩೩೩೭), ಸಿಂದಗಿಯ ಮುತ್ತುರಾಜ ಸಾತಿಹಾಳ (ಮೊ:೯೯೮೦೦೧೯೬೩೫),ಬಸವನ ಬಾಗೇವಾಡಿಯ ಎಸ್.ಡಿ.ಬಿರಾದಾರ (ಮೊ:೮೭೨೨೧೩೫೬೬೦), ಇಂಡಿಯ ಪರಶುರಾಮ ಬೋಸಲೆ (ಮೊ:೯೯೭೨೪೪೧೪೬೪) ಹಾಗೂ ಮುದ್ದೇಬಿಹಾಳ ತಾಲೂಕಿನ ಎಸ್.ಕೆ. ಘಾಟಿ (ಮೊ:೯೭೪೦೬೮೨೯೭೯) ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಕಟಣೆ ತಿಳಿಸಿದೆ.
