Author: editor.udayarashmi@gmail.com

ಅಫಜಲಪುರ: ಸುಕ್ಷೇತ್ರ ದೇವಲ ಗಾಣಗಾಪೂರದ ಅಭಿವೃದ್ದಿಗಾಗಿ ಪ್ರಸಾದ್ ಯೋಜನೆಯಡಿಯಲ್ಲಿ ೮೩.೫೩ ಕೋಟಿ ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬೇಗ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯಸಭೆ ಸದಸ್ಯ ಜಗ್ಗೇಶ ಅವರಿಗೆ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮನವಿ ಮಾಡಿಕೊಂಡರು.ಅವರು ಕಲಬುರಗಿಯಲ್ಲಿನ ಶಾಸಕ ಎಂ.ವೈ ಪಾಟೀಲರ ನಿವಾಸಕ್ಕೆ ಭೇಟಿ ನೀಡಿದಾಗ ಮನವಿ ಮಾಡಿಕೊಂಡು ಮಾತನಾಡುತ್ತಾ, ದೇವಲ ಗಾಣಗಾಪೂರದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಾಗಿದೆ. ಪ್ರಸಾದ್ ಯೋಜನೆಯಡಿ ೮೩.೫೩ ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಅನುದಾನ ಬೇಗ ಬಿಡುಗಡೆಗೊಳಿಸುವಂತೆ ತಾವು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿನಂತಿಸಿದರು.ರಾಜ್ಯಸಭೆ ಸದಸ್ಯ ಜಗ್ಗೇಶ ಮಾತನಾಡಿ ದೇವಲ ಗಾಣಗಾಪೂರ ಕ್ಷೇತ್ರ ಬಹಳ ಶ್ರೇಷ್ಠವಾದ ಕ್ಷೇತ್ರವಾಗಿದೆ. ನಾನು ದತ್ತಾತ್ರೇಯರ ಭಕ್ತನಾಗಿದ್ದೇನೆ. ರಾಜ್ಯದ ಬೇರೆ ಪುಣ್ಯಕ್ಷೇತ್ರಗಳಿಗೆ ಹೋಲಿಸಿದರೆ ಅಭಿವೃದ್ದಿ ವಿಷಯದಲ್ಲಿ ಗಾಣಗಾಪೂರ ಬಹಳಷ್ಟು ಹಿಂದುಳಿದಿದೆ. ಹೀಗಾಗಿ ಪ್ರಸಾದ್ ಯೋಜನೆಯಡಿಯ ಸಲ್ಲಿಸಿದ ಪ್ರಸ್ತಾವನೆಯ ಅನುದಾನದ ಬಿಡುಗಡೆಗಾಗಿ ನಾನು ಕೂಡ ಸರ್ಕಾರ ಮತ್ತು ಸಂಬಂಧ ಪಟ್ಟವರೊಂದಿಗೆ ಚರ್ಚಿಸುತ್ತೇನೆ…

Read More

ಅಫಜಲಪುರ: ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನಕ್ಕೆ ಮಂಗಳವಾರ ರಾಜ್ಯಸಭೆ ಸದಸ್ಯ ಜಗ್ಗೇಶ ಕುಟುಂಬ ಸಮೇತರಾಗಿ ಭೇಟಿ ನೀಡಿದರು.ಅವರು ದತ್ತ ಮಹಾರಾಜರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾನು ದತ್ತ ಮಹಾರಾಜರ ಭಕ್ತನಾಗಿದ್ದೇನೆ. ಮನಸ್ಸಿಗೆ ಇಲ್ಲಿಗೆ ಬರಬೇಕೆನಿಸಿದಾಗ ಬಂದು ಬಿಡುತ್ತೇನೆ. ಇದು ಯಾವುದೇ ರಾಜಕೀಯ ಉದ್ದೇಶದ ಭೇಟಿಯಲ್ಲ, ನನ್ನ ಅಕ್ಕನ ಮಗ ಅಮೇರಿಕದಿಂದ ಗಾಣಗಾಪೂರ ಕ್ಷೇತ್ರ ದರ್ಶನಕ್ಕಾಗಿ ಬಂದಿದ್ದಾನೆ. ಅವನನ್ನು ಕರೆದುಕೊಂಡು ಬಂದಿದ್ದೇನೆ ಎಂದರು.ಇನ್ನೂ ಗಾಣಗಾಪೂರ ಕ್ಷೇತ್ರ ಬಹಳಷ್ಟು ಅಭಿವೃದ್ದಿಯಾಗಬೇಕಾಗಿದೆ. ಸರ್ಕಾರಗಳು ಈ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿವೆ ಎನಿಸುತ್ತಿದೆ. ಇಲ್ಲಿನ ಒಂದು ನಿಯೋಗ ಬೆಂಗಳೂರಿಗೆ ಬಂದರೆ ನಾನು ಅವರೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಗಾಣಗಾಪೂರ ಅಭಿವೃದ್ದಿ ಕುರಿತು ಮನವರಿಕೆ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಪತ್ನಿ ಪರಿಮಳ ಜಗ್ಗೇಶ, ಸಹೋದರಿ ಮಹಾದೇವಿ, ಅಳಿಯ ಜೀವನ್, ದೇವಲ ಗಾಣಗಾಪೂರ ಪಿಎಸ್‌ಐ ರಾಹುಲ ಪವಾಡೆ, ದೇವಸ್ಥಾನದ ಅರ್ಚಕರು, ದೇಗುಲ ಸಿಬ್ಬಂದಿ ಇದ್ದರು.

Read More

ಅಫಜಲಪುರ: ಒಂದು ಮಳೆ ಬಂದರೂ ತಡೆದುಕೊಳ್ಳದಂತಾಗಿದೆ ಸುಕ್ಷೇತ್ರ ದೇವಲ ಗಾಣಗಾಪೂರ. ಸೋಮವಾರ ಬಂದ ಮಳೆಯಿಂದಾಗಿ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿದೆ.ಗ್ರಾಮದಲ್ಲಿನ ಚರಂಡಿಗಳು ಬಹಳ ಸಣ್ಣದಾಗಿವೆ. ಇರುವ ಚರಂಡಿಗಳೇ ಕಸದಿಂದ ತುಂಬಿಕೊಂಡು ಊರವರ ಬಳಸಿದ ನೀರು ಹರಿದು ಹೋಗದಂತಾಗಿದ್ದು, ಅದರ ಮೇಲೆ ಮಳೆ ನೀರು ಸೇರಿ ನೀರು ಮೇಲೆ ಬಂದು ಮುಖ್ಯ ರಸ್ತೆಯ ಮೇಲೆ ಹರಿಯುವಂತಾಗಿದೆ. ಅಲ್ಲದೆ ಮಳೆ ನೀರು, ಚರಂಡಿ ನೀರು ಸೇರಿ ದೇವಸ್ಥಾನದೊಳಗೆ ನೀರು ನುಗ್ಗಿ ಪ್ರಾಂಗಣಕ್ಕೂ ನೀರು ನುಗ್ಗಿ ಸಮಸ್ಯೆಯುಂಟು ಮಾಡಿದೆ. ಅದೇ ನೀರಲ್ಲೇ ಭಕ್ತರು ಸಂಚರಿಸಿ ದೇವರ ದರ್ಶನ ಮಾಡುವಂತಾಯಿತು.

Read More

ಇಂಡಿ: ಶಿಕ್ಷಣ ದೇಶದ ಭವಿಷ್ಯವನ್ನು ರೂಪಿಸುವ ಪ್ರಮುಖ ಅಸ್ತ್ರ. ವಿದ್ಯೆಗೆ ನೀಡುವ ಪ್ರೋತ್ಸಾಹವು ಮಕ್ಕಳ ಬದುಕನ್ನು ರೂಪಿಸುತ್ತದೆ. ಮಕ್ಕಳು ತಂದೆ-ತಾಯಿ,ಗುರುಗಳಿಗೆ ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಅವರು ಪಟ್ಟಣದ ಆಶ್ರಯ ಕಾಲೋನಿಯಲ್ಲಿರುವ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಹಸನ್ ಮುಜಾವರ ವತಿಯಿಂದ ಉಚಿತವಾಗಿ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜತೆಗೆ ಆಶ್ರಯ ಕಾಲೊನಿಯ ಎರಡೂ ಸರ್ಕಾರಿ ಶಾಲೆಯ ಭೌತಿಕ ಸ್ಥಿತಿಗತಿಯನ್ನು ವೀಕ್ಷಿಸಿ,ಕಂಪೌಂಡ್ ದುರಸ್ತಿ ಕಾರ್ಯ ಮಾಡಿಸುವದಾಗಿ ಭರವಸೆ ನೀಡಿದರು. ಶಾಲಾ ಆವರಣದಲ್ಲಿ ಸಸಿನೆಟ್ಟು, ಮಕ್ಕಳು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.ಹಿರೇರೂಗಿ ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಶಿಕ್ಷಣವು ಮಾನವನ ಪ್ರಗತಿಗೆ ಆಧಾರವಾಗಿದೆ.ಇದು ಸಮಾಜ ಮತ್ತು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ನೆರವಾಗಿ, ಬ್ಯಾಗ್-ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಪ್ರೋತ್ಸಾಹಿಸುವುದು ಪುಣ್ಯದ ಕೆಲಸ ಎಂದು ಹೇಳಿದರು.ಧರ್ಮಗುರು ಜಿಯಾ ಉಲ್…

Read More

ಇಂಡಿ‌: ಹೊಸಪೇಟೆ ಎಕ್ಸ್‌ಪ್ರೆಸ್‌ ರೈಲು ಇಂಡಿ ರೈಲು ನಿಲ್ದಾಣದಲ್ಲಿ‌ ನಿಲ್ಲಿಸಲು ಸಂಸದ ರಮೇಶ್ ‌ಜಿಗಜಿಣಿಗಿ ಅವರಿಗೆ ಬಿಜೆಪಿ ‌ಮುಖಂಡ‌ ರಾಮಸಿಂಗ್ ಕನ್ನೊಳ್ಳಿ ನೇತೃತ್ವದಲ್ಲಿ ಮುಖಂಡರು ‌ಮನವಿ ಸಲ್ಲಿಸಿದರು.ಪಟ್ಟಣದ‌‌‌ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನೂತನ ಸಂಸದರಿಗೆ ಸನ್ಮಾನ ಹಾಗೂ ಬಿಜೆಪಿ ಕಾರ್ಯಾಕಾರಣಿ ಸಭೆಯಲ್ಲಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ‌ಮುಖಂಡ ರಾಮಸಿಂಗ್ ಕನ್ನೊಳ್ಳಿ ಮಾತನಾಡಿ, ಈ ಬಾಗದಲ್ಲಿ ರೈಲು ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಿದ್ದು, ವಿವಿಧ ಚಟುವಟಿಕೆಗಳಾಗಿ ರೈಲನ್ನು ನಂಬಿಕೊಂಡಿದ್ದಾರೆ.‌ಅದಲ್ಲದೆ ಚಡಚಣ, ಇಂಡಿ, ಸಿಂದಗಿ , ಆಲಮೇಲ ಭಾಗದ ಜನರು ಆಗಮಿಸಿ ಈ ರೈಲು ಮೂಲಕ ಪ್ರಯಾಣ ಬೆಳೆಸುತ್ತಾರೆ. ಹಾಗಾಗಿ ಈ ಬಾಗದ‌ ಜನರ‌ ಹಿತದೃಷ್ಟಿಯಿಂದ ಹೊಸಪೇಟೆ ಎಕ್ಸ್‌ಪ್ರೆಸ್‌ ರೈಲು ‌ನಿಲ್ಲಿಸಬೇಕೆಂದು‌ ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಿ ವಿ ನಾಡಗೌಡ, ಮಹೇಶ ಕಲ್ಯಾಣಿ, ಎಸ್ ಎಮ್ ಕಕ್ಕಳಮೇಲಿ, ವಿರೇಶ ಹತ್ತೂರಮಠ, ಸಂತೋಷ ಹೂಗಾರ, ರಾಚು ಬಡಿಗೇರ, ಜೆಟ್ಟಪ್ಪ ಮರಡಿ, ವಿ ಸಿ ಪಾಟೀಲ, ವಿ ಎಸ್ ಕುಡಿಗನೂರ ಇನ್ನೂ ಅನೇಕರು ಉಪಸ್ಥಿತರಿದ್ದರು.

Read More

ದೇವರಹಿಪ್ಪರಗಿ: ಪಟ್ಟಣದ ಆಶ್ರಯ ಸಮಿತಿಗೆ ಕಾನೂನು, ನಿಯಮಗಳ ಚೌಕಟ್ಟು ಮೀರಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಪಂಚಾಯಿತಿ ಕಾರ್ಯಾಲಯಕ್ಕೆ ಶುಕ್ರವಾರ ಆಗಮಿಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸರ್ಕಾರದ ನಾಮ ನಿರ್ದೇಶನ ಕ್ರಮವನ್ನು ಖಂಡಿಸಿದರು.ಈ ಸಂದರ್ಭದಲ್ಲಿ ಸದಸ್ಯ ರಮೇಶ ಮಸಬಿನಾಳ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಲವು ಸಮಿತಿಗಳಿಗೆ ಸದಸ್ಯರನ್ನು ಕಾನೂನು ವ್ಯಾಪ್ತಿ, ಚೌಕಟ್ಟನ್ನು ಅರಿಯದೇ ಬೇಕಾಬಿಟ್ಟಿಯಾಗಿ ಕೇವಲ ಕೆಲವೇ ಸಮುದಾಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಾಮ ನಿರ್ದೇಶನ ಮಾಡುತ್ತಿದ್ದು, ಇದಕ್ಕೆ ಪಟ್ಟಣದ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಮಾಡಿದ ಪ್ರಕ್ರಿಯೆಯೇ ಉತ್ತಮ ಉದಾಹರಣೆಯಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ವಾಸಿಸುವ ಹಾಗೂ ಪಟ್ಟಣದ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯನ್ನು ಮಾತ್ರ ನಾಮ ನಿರ್ದೇಶನ ಮಾಡುವ ನಿಯಮವಿದ್ದಾಗ್ಯೂ ಸಹ ಮಣೂರ ಹಾಗೂ ಬೇರೆ ತಾಲ್ಲೂಕಿನ ತೆನೆಹಳ್ಳಿ ಗ್ರಾಮದ ವ್ಯಕ್ತಿಗಳಿಗೆ ಆಶ್ರಯ ಸಮಿತಿಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ಮಾಡಿ ಆದೇಶಿಸಲಾಗಿದೆ.…

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಜುಲೈ ೨೧ ರಂದು ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಆಯೋಲಾಗಿದ್ದು ಅಂದು ಬೆಳಗ್ಗೆ ೯.೩೦ಕ್ಕೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಹನುಮಂತರಾಯ ರಂಗಮಂದಿರದವರೆಗೆ ಹಡಪದ ಅಪ್ಪಣ್ಣ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ ೧೦:೩೦ಕ್ಕೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ.ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಜಯಪುರ ನಗರದ ಮತಕ್ಷೇತ್ರದ ಶಾಸಕರಾದ ಬಸನಗೌಡ ಆರ್ ಪಾಟೀಲ್ (ಯತ್ನಾಳ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ್, ವಿಧಾನ ಪರಿಷತ್‌ನ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ-೨ ಪ್ರಕಾಶ ಬಿ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ…

Read More

ವಿಜಯಪುರ: ೨೦೨೫ನೇ ಸಾಲಿನಲ್ಲಿ ಉತ್ತರಾಖಂಡ ರಾಜ್ಯದ ಡೆಹರಾಡೂನ್‌ನಲ್ಲಿರುವ ರಾಷ್ಟ್ರೀಯ ಮಿಲಿಟರಿ ಕಾಲೇಜಿನಲ್ಲಿ ೮ನೇ ತರಗತಿ ಪ್ರವೇಶಾತಿ ಪಡೆಯಲು ಅರ್ಹತಾ ಪರೀಕ್ಷೆಗೆ ಅರ್ಜಿ ಅಹ್ವಾನಿಸಲಾಗಿದ್ದು, ದಿನಾಂಕ:೩೦-೦೯-೨೦೨೪ ಕೊನೆಯ ದಿನವಾಗಿದೆ. ಅರ್ಹತಾ ಪರೀಕ್ಷೆಯೂ ಡಿಸೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೦-೨೫೫೮೯೪೫೯ ಹಾಗೂ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ವಿಜಯಪುರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಹೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜುಲೈ ೨೦ರಂದು ಮಧ್ಯಾಹ್ನ ೩ ಗಂಟೆಗೆ ವಿಜಯಪುರ ತಾಲೂಕಿನ ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗದ ಹೆಸ್ಕಾಂ ಕಚೇರಿಯಲ್ಲಿ ರೈತರು, ಗ್ರಾಹಕರೊಂದಿಗೆ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಸಂವಾದ ಸಭೆ ಆಯೋಜಿಸಲಾಗಿದೆ. ಹೆಸ್ಕಾಂ ಗ್ರಾಮೀಣ ಉಪ ವಿಭಾಗದ ಕಚೇರಿಗೆ ಒಳಪಡುವ ಗ್ರಾಮಗಳ ಗ್ರಾಹಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೨೦೨೪-೨೫ನೇ ಸಾಲಿನಲ್ಲಿ ವಿಜಯಪುರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಅಟೋಮೊಬೈಲ್, ಸಿವಿಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸೆಮಿಸ್ಟರ್ ಹಾಗೂ ತೃತೀಯ ಸೆಮಿಸ್ಟರ್‌ನ ಪ್ರವೇಶಾತಿ ಪಡೆಯಲು ಜುಲೈ ೨೫ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರವೇಶ ವಿಭಾಗದ ಕಾರ್ಯನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More