ಅಫಜಲಪುರ: ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನಕ್ಕೆ ಮಂಗಳವಾರ ರಾಜ್ಯಸಭೆ ಸದಸ್ಯ ಜಗ್ಗೇಶ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ಅವರು ದತ್ತ ಮಹಾರಾಜರ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾನು ದತ್ತ ಮಹಾರಾಜರ ಭಕ್ತನಾಗಿದ್ದೇನೆ. ಮನಸ್ಸಿಗೆ ಇಲ್ಲಿಗೆ ಬರಬೇಕೆನಿಸಿದಾಗ ಬಂದು ಬಿಡುತ್ತೇನೆ. ಇದು ಯಾವುದೇ ರಾಜಕೀಯ ಉದ್ದೇಶದ ಭೇಟಿಯಲ್ಲ, ನನ್ನ ಅಕ್ಕನ ಮಗ ಅಮೇರಿಕದಿಂದ ಗಾಣಗಾಪೂರ ಕ್ಷೇತ್ರ ದರ್ಶನಕ್ಕಾಗಿ ಬಂದಿದ್ದಾನೆ. ಅವನನ್ನು ಕರೆದುಕೊಂಡು ಬಂದಿದ್ದೇನೆ ಎಂದರು.
ಇನ್ನೂ ಗಾಣಗಾಪೂರ ಕ್ಷೇತ್ರ ಬಹಳಷ್ಟು ಅಭಿವೃದ್ದಿಯಾಗಬೇಕಾಗಿದೆ. ಸರ್ಕಾರಗಳು ಈ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿವೆ ಎನಿಸುತ್ತಿದೆ. ಇಲ್ಲಿನ ಒಂದು ನಿಯೋಗ ಬೆಂಗಳೂರಿಗೆ ಬಂದರೆ ನಾನು ಅವರೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಗಾಣಗಾಪೂರ ಅಭಿವೃದ್ದಿ ಕುರಿತು ಮನವರಿಕೆ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪತ್ನಿ ಪರಿಮಳ ಜಗ್ಗೇಶ, ಸಹೋದರಿ ಮಹಾದೇವಿ, ಅಳಿಯ ಜೀವನ್, ದೇವಲ ಗಾಣಗಾಪೂರ ಪಿಎಸ್‌ಐ ರಾಹುಲ ಪವಾಡೆ, ದೇವಸ್ಥಾನದ ಅರ್ಚಕರು, ದೇಗುಲ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

