ಅಫಜಲಪುರ: ಸುಕ್ಷೇತ್ರ ದೇವಲ ಗಾಣಗಾಪೂರದ ಅಭಿವೃದ್ದಿಗಾಗಿ ಪ್ರಸಾದ್ ಯೋಜನೆಯಡಿಯಲ್ಲಿ ೮೩.೫೩ ಕೋಟಿ ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬೇಗ ಬಿಡುಗಡೆಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯಸಭೆ ಸದಸ್ಯ ಜಗ್ಗೇಶ ಅವರಿಗೆ ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮನವಿ ಮಾಡಿಕೊಂಡರು.
ಅವರು ಕಲಬುರಗಿಯಲ್ಲಿನ ಶಾಸಕ ಎಂ.ವೈ ಪಾಟೀಲರ ನಿವಾಸಕ್ಕೆ ಭೇಟಿ ನೀಡಿದಾಗ ಮನವಿ ಮಾಡಿಕೊಂಡು ಮಾತನಾಡುತ್ತಾ, ದೇವಲ ಗಾಣಗಾಪೂರದ ಸಮಗ್ರ ಅಭಿವೃದ್ದಿಗಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕಾಗಿದೆ. ಪ್ರಸಾದ್ ಯೋಜನೆಯಡಿ ೮೩.೫೩ ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಅನುದಾನ ಬೇಗ ಬಿಡುಗಡೆಗೊಳಿಸುವಂತೆ ತಾವು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿನಂತಿಸಿದರು.
ರಾಜ್ಯಸಭೆ ಸದಸ್ಯ ಜಗ್ಗೇಶ ಮಾತನಾಡಿ ದೇವಲ ಗಾಣಗಾಪೂರ ಕ್ಷೇತ್ರ ಬಹಳ ಶ್ರೇಷ್ಠವಾದ ಕ್ಷೇತ್ರವಾಗಿದೆ. ನಾನು ದತ್ತಾತ್ರೇಯರ ಭಕ್ತನಾಗಿದ್ದೇನೆ. ರಾಜ್ಯದ ಬೇರೆ ಪುಣ್ಯಕ್ಷೇತ್ರಗಳಿಗೆ ಹೋಲಿಸಿದರೆ ಅಭಿವೃದ್ದಿ ವಿಷಯದಲ್ಲಿ ಗಾಣಗಾಪೂರ ಬಹಳಷ್ಟು ಹಿಂದುಳಿದಿದೆ. ಹೀಗಾಗಿ ಪ್ರಸಾದ್ ಯೋಜನೆಯಡಿಯ ಸಲ್ಲಿಸಿದ ಪ್ರಸ್ತಾವನೆಯ ಅನುದಾನದ ಬಿಡುಗಡೆಗಾಗಿ ನಾನು ಕೂಡ ಸರ್ಕಾರ ಮತ್ತು ಸಂಬಂಧ ಪಟ್ಟವರೊಂದಿಗೆ ಚರ್ಚಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಂ.ವೈ ಪಾಟೀಲ್, ಜಗ್ಗೇಶ ಕುಟುಂಬಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

