Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಚಡಚಣ ತಾಲೂಕಿನ ನಿವರಗಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢ ಶಾಲೆ ವಿದ್ಯಾರ್ಥಿಗಳು ಶೇ.೭೯.೧೦% ಫಲಿತಾಂಶವನ್ನು ದಾಖಲಿಸಿದ್ದಾರೆ. ಪರೀಕ್ಷೆಗೆ ಕುಳಿತ ೬೭ ವಿದ್ಯಾರ್ಥಿಗಳ ಪೈಕಿ ೫೩ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಪ್ರಜ್ವಲ ನರೂಣಿ ಶೇ.೯೫.೮೪% ಪ್ರಥಮ, ನಿಖಿತಾ ಹಳದಕಿ ಶೇ.೯೪.೦೮% ದ್ವಿತೀಯ, ಚೇತನ ಕರ್ಜಗಿ ಶೇ.೯೦.೭೨% ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ ರಕ್ಷಿತಾ ಬಿರಾದಾರ ಗಣಿತ ವಿಷಯದಲ್ಲಿ ೧೦೦ಕ್ಕೆ ೧೦೦ ಅಂಕ, ನಿಖಿತಾ ಹಳದಕಿ ಮತ್ತು ಚೇತನ ಕರ್ಜಗಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಪಾಟೀಲ, ಮುಖ್ಯ ಗುರು ರವಿಕುಮಾರ ನಾಯಕ ಸಂಸ್ಥೆಯ ಸರ್ವ ಸದಸ್ಯರುಗಳು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.
ಕಲಕೇರಿ: ಸಮೀಪದ ತಿಳಗೂಳ ಗ್ರಾಮದಲ್ಲಿ ವಿಶ್ವಗುರು ಸಾಂಸ್ಕೃತಿಯ ನಾಯಕ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.ಗ್ರಾಮದ ಹಿರಿಯರು ಮತ್ತು ಯುವಕರು ಬಸವಣ್ಣನವರ ವೃತ್ತದಲ್ಲಿ ಸೇರಿ ಭಕ್ತಿಪೂರ್ವಕವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಮಹಾಪೂಜೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪ್ರೊ. ಜಗದೀಶ ಸಾತಿಹಾಳ ಅವರು, ೧೨ನೇ ಶತಮಾನದಲ್ಲಿ ವಚನ ಕ್ರಾಂತಿಯನ್ನು ಮಾಡಿ ನುಡಿದಂತೆ ನಡೆದ ಮಹಾನ್ ಚೇತನ ಅಣ್ಣ ಬಸವಣ್ಣನವರಾಗಿದ್ದು, ಕಾಯಕ ತತ್ವದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾದ ಸಮಾಜದಲ್ಲಿ ಸಮಾನತೆಯನ್ನು ಸಾರಿದ ಅಣ್ಣ ಬಸವಣ್ಣನವರ ಜೀವನ ನಮಗೆಲ್ಲ ದಾರಿದೀಪವಾಗಿದ್ದು, ಅವರ ವಚನಗಳಲ್ಲಿಯ ಒಂದಿಷ್ಟು ವಿಚಾರಗಳನ್ನು ನಮ್ಮ ಜೀವನದಲ್ಲಿ ಪ್ರತಿನಿತ್ಯ ಅಳವಡಿಸಿಕೊಂಡು ನಡೆದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುವುದಲ್ಲದೇ ಅದು ನಾವು ಅವರಿಗೆ ಸಲ್ಲಿಸುವ ನಿಜವಾದ ಭಕ್ತಿ ಮತ್ತು ಗೌರವವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಿವಪುತ್ರ ಸಾತಿಹಾಳ, ಷಡಕ್ಷರಿ ಹಿರೇಮಠ, ಸತೀಶ ನೆಲ್ಲಗಿ, ಶರಣಪ್ಪ ಗದ್ದಗಿ, ಭೀಮು ಕುಂಬಾರ, ಸೋಮನಗೌಡ ಬಾಗೇವಾಡಿ, ಶಿವನಗೌಡ ಬಿರಾದಾರ, ಸಂಗಪ್ಪ ಪೊಲೀಸಪಾಟೀಲ, ಸಂಗಪ್ಪ ಸಾತಿಹಾಳ, ಮುತ್ತು ಸಾತಿಹಾಳ ಎಮ್‌ಆರ್‌ಡಬ್ಲೂ ಸಿಂದಗಿ, ಮಹಾಂತೇಶ ಸಜ್ಜನ,…
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಮೇ. ೧೧ ರಂದು ಸಂಜೆ ೬ ಗಂಟೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾನಿಧ್ಯವನ್ನು ಸಿದ್ದಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಉದ್ಘಾಟಿಸುವರು. ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಪುಷ್ಪಾರ್ಚನೆ ನೆರವೇರಿಸುವರು. ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ ವಹಿಸುವರು. ಮಹಮ್ಮದಗೌಸ ಹವಾಲ್ದಾರ ಉಪನ್ಯಾಸ ನೀಡುವರು. ಮುಖ್ಯಅತಿಥಿಗಳಾಗಿ ರಾಜ್ಯ ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಫ್.ಡಿ.ಮೇಟಿ, ಮುಖಂಡರಾದ ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಎಂ.ಎನ್. ಅಂಗಡಗೇರಿ ಆಗಮಿಸುವರು ಎಂದು ತಾಲೂಕು ಕಸಾಪ ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ಬಸವಜ್ಯೋತಿಯನ್ನು ಕಳೆದ ಹನ್ನೆರಡು ವರ್ಷಗಳಿಂದ ಕೊಂಡೊಯ್ಯುತ್ತಿರುವ 63 ಹರೆಯದ ಬಸನಗೌಡರು ಇಂತಹ ವಯಸ್ಸಿನಲ್ಲಿ ಆರೋಗ್ಯದ ಬಗ್ಗೆ ಗಮನವಿಟ್ಟುಕೊಂಡು ಒಂದು ಆದ್ಯಾತ್ಮಿಕ ಮ್ಯಾರಥಾನ್ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ರಾತ್ರಿ ಬಸವನಬಾಗೇವಾಡಿಯಿಂದ ವಿಜಯಪುರ ನಗರಕ್ಕೆ ಕಳೆದ ಹನ್ನೆರಡು ವರ್ಷಗಳಿಂದ ಬಸವಜ್ಯೋತಿಯನ್ನು ಓಡುತ್ತಲೇ ಕೊಂಡೊಯುತ್ತಿರುವ ಬೆಂಗಳೂರಿನ ಉದ್ಯಮಿ ಬಸನಗೌಡ ಪಾಟೀಲ ಅವರ ಜ್ಯೋತಿಯಾತ್ರೆಗೆ ಚಾಲನೆ ಕೊಟ್ಟು ಮಾತನಾಡಿದರು.ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅದ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಬಸವತತ್ವ ಪ್ರಚಾರಕ್ಕಾಗಿ ಬಸವಜ್ಯೋತಿಯಾತ್ರೆಯನ್ನು ಮಾಡುತ್ತಿರುವ ಬಸನಗೌಡ ಪಾಟೀಲ ಅವರ ಕಾರ್ಯ ಇಂದಿನ ಯುವಕರಿಗೆ ಮಾದರಿ. ಇಂದಿನ ಪ್ರಸ್ತುತ ಯುಗದಲ್ಲಿ ಬಸವ ತತ್ವ ಬಸವಣ್ಣನವರ ವಚನ ಸಾಹಿತ್ಯದ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಜು ಬಿರಾದಾರ, ಮುತ್ತು ಡಂಬಳ, ಮುತ್ತು ಚಿಕ್ಕೊಂಡ, ಎಸ್.ಎ.ಪಾಟೀಲ, ಉಮೇಶ ಅವಟಿ, ಮಹಾಂತೇಶ ಜಾಲಗೇರಿ, ವಿಜಯಪುರ ಸೈಕ್ಲಿಂಗ್ ಗ್ರೂಪಿನ ಸಂಕೇತ ಬಗಲಿ, ಸೋಮಶೇಖರ್ ರಾಜು ಸಾಲೋಟಗಿ, ಡಾ.ಭೀಮನಗೌಡ…
ಬಸವನಬಾಗೇವಾಡಿ: ಇಡೀ ಜಗತ್ತಿನಲ್ಲಿಯೇ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಜಗತ್ತಿನ ಮೊದಲನೇ ವ್ಯಕ್ತಿ ಬಸವಣ್ಣನವರು ಎಂದು ಡಾ ಯುವರಾಜ ಮಾದನಶೆಟ್ಟಿ ಹೇಳಿದರು.ಪಟ್ಟಣದ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಶುಕ್ರವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು ಬಿದ್ದವರನ್ನು ಮೇಲೆತ್ತಿದ ಮಹಾನುಭಾವ ಬಸವಣ್ಣನವರು. ಸರ್ವಕಾಲಕ್ಕೂ ನಮ್ಮ ಮುಂದೆ ಆದರ್ಶರಾಗಿ ನಿಲ್ಲುತ್ತಾರೆ. ಅವರ ತತ್ವಗಳನ್ನು ನಾವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡುವ ಅವಶ್ಯಕತೆ ಇಂದು ಹೆಚ್ಚಾಗಿದೆ ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತಿ ಮಂಜುನಾಥ ಗುಳೇದಗುಡ್ಡ ಮಾತನಾಡಿ. ಬಸವಣ್ಣವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು.ನುಡಿದಂತೆ ನಡೆದ ಶರಣರ ವಿಚಾರಗಳು ಸರ್ವಕಾಲಕ್ಕೂ ನಮಗೆ ದಾರಿದೀಪವಾಗಿ ನಿಲ್ಲುತ್ತವೆ ಎಂದು ಹೇಳಿದರು.ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ವೀರೇಶ ಕುಂಟೋಜಿ ಮಾತನಾಡಿ, 900 ವರ್ಷಗಳು ಗತಿಸಿದರೂ ಕೂಡ…
ಬಸವನಬಾಗೇವಾಡಿ: ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಜಯಂತಿ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಅವರು ಶುಕ್ರವಾರ ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ (ಬಸವೇಶ್ವರ) ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು. ನಂತರ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಸವೇಶ್ವರರಿಗೆ ನಮನ ಸಲ್ಲಿಸಿದರು. ನಂತರ ಬಸವ ಜನ್ಮ ಸ್ಮಾರಕಕ್ಕೆ ಭೇಟಿ ನೀಡಿ ಬಸವ ತೊಟ್ಟಿಲು ತೂಗಿ ನಮಸ್ಕರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಸುರೇಶ ಹಾರಿವಾಳ, ಭರತು ಅಗರವಾಲ, ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ. ಸಂಕನಗೌಡ ಪಾಟೀಲ, ಸಂಗಮೇಶ ಓಲೇಕಾರ, ಬಸವರಾಜ ಗೊಳಸಂಗಿ, ಕಾಶೀನಾಥ ರಾಠೋಡ ಸೇರಿದಂತೆ ಇತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಜಯಂತಿಯನ್ನು ಶುಕ್ರವಾರ ಜನತೆ ಶ್ರದ್ಧಾ-ಭಕ್ತಿಯಂದ ಆಚರಿಸಿದರು.ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಭಕ್ತರು ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಬಸವ ಜಯಂತಿಯಂಗವಾಗಿ ಮೂಲನಂದೀಶ್ವರ(ಬಸವೇಶ್ವರ) ಪಲ್ಲಕ್ಕಿ ಕಟ್ಟೆಯನ್ನು ಅಲಂಕರಿಸಲಾಗಿತ್ತು.ಸಂಪ್ರದಾಯದಂತೆ ಬಸವೇಶ್ವರ ದೇವಸ್ಥಾನದಿಂದ ವಿರಕ್ತಮಠಕ್ಕೆ ತೆರಳಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕ ಬರಮಾಡಿಕೊಳ್ಳಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು ಬಸವ ಜಯಂತಿಯಂಗವಾಗಿ ಹಮ್ಮಿಕೊಂಡಿದ್ದ ಶಿವಭಜನೆಗೆ ಪೂಜೆ ಸಲ್ಲಿಸಿ ಮಂಗಳಾರತಿ ಜರುಗಿದ ನಂತರ ಶಿವಭಜನೆ ಮುಕ್ತಾಯಗೊಳಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಶ್ರೀಗಳಿಂದ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಬಸವ ಜಯಂತಿಗೆ ಚಾಲನೆ ನೀಡಿದರು. ನಂತರ ಶ್ರೀಗಳನ್ನು ಶ್ರೀಮಠಕ್ಕೆ ಮೆರವಣಿಗೆ ಮೂಲಕ ಬೀಳ್ಕೊಡಲಾಯಿತು.ಬೆಳಗ್ಗೆ ೧೧.೩೦ ಗಂಟೆಗೆ ಸುಮಾರಿಗೆ ಬಸವಜನ್ಮ ಸ್ಮಾರಕದಿಂದ ವಿರಕ್ತಮಠಕ್ಕೆ ತೆರಳಿ ಶ್ರೀಗಳನ್ನು ಬಸವ ಜನ್ಮಸ್ಮಾರಕಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಶ್ರೀಗಳ ಆಗಮನದ ನಂತರ ಅವರ ಸಾನಿಧ್ಯದಲ್ಲಿ ಬೆಳ್ಳಿ ಬಾಲ ಬಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಮಹಿಳೆಯರು ನಾಮಕರಣ ಮಾಡುವ ಪದ್ಧತಿ ನೆರವೇರಿಸಿ…
ವಿಜಯಪುರ: ನಗರದ ಹೃದಯಭಾಗದಲ್ಲಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಶುಕ್ರವಾರ ಬಸವ ಜಯಂತಿಯಂದು ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮತ್ತು ವಿಜಯಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರಿಷಿಕೇಶ ಸೋನಾವಣೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಿಜಯಪುರ: ಕಾಶ್ಮೀರದ ಅರಸ ಪರ್ಷಿಯನ್ ಭಾಷೆ ಬಿಟ್ಟು ಕನ್ನಡ ಕಲಿತು ಶ್ರೇಷ್ಠ ವಚನಕಾರನೆನಿಸಲು ಬಸವಣ್ಣನವರ ನಡೆ – ನುಡಿಗಳೆ ಕಾರಣವಾದವು. ಧಾರ್ಮಿಕ ಜಿಡ್ಡು ತೊಳೆದು ವೈಚಾರಿಕ ನೆಲೆಗಟ್ಟಿನಲ್ಲಿ. ಲಿಂಗಾಯತ ಸಮಾಜ ನಿರ್ಮಿಸಿದ ಬಸವಣ್ಣ ವಿಶ್ವದ ಶ್ರೇಷ್ಠ ದಾರ್ಶನಿಕ ಎನಿಸಿದ್ದಾನೆ ಎಂದು ಜನಪದ ಸಾಹಿತಿ ಶಂಕರ ಬೈಚಬಾಳ ಹೇಳಿದರು.ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಪರಿಷತ್ ಕಾರ್ಯಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರು ಜನಪದರ ಆಡು ನುಡಿಯಲ್ಲಿ ವಚನ ಬರೆದು ಜನಪದ ಸಾಹಿತ್ಯ ರಕ್ಷಿಸಿದರು . ವಚನ ಸಾಹಿತ್ಯ ಗ್ರಾಮೀಣ ಬದುಕಿನ ಪ್ರತಿಬಿಂಬವಾಗಿ ಕಾಣುತ್ತಿದೆ ಎಂದು ಹೇಳಿದರು.” ಸಾಮರಸ್ಯದ ಬದುಕಿಗೆ ಶರಣರ ವಚನಗಳು ” ಕುರಿತು ಉಪನ್ಯಾಸ ನೀಡಿದ ಚಿಂತಕ ಮೋಹನ ಕಟ್ಟಿಮನಿ, ಸತ್ಕಾರ್ಯ- ಸದ್ವಿಚಾರದ ಮೂಲಕ ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಿಸುವ ಕನಸು ಕಂಡರು. ಶರಣರ ಸಹಕಾರದಿಂದ ವಚನ ಚಳುವಳಿ ನಡೆಸಿದರು. ಬಸವಣ್ಣನವರ ವಿಚಾರಧಾರೆಗಳು ಮೈಗೂಡಿಸಿಕೊಂಡು ನಡೆದರೆ ಬದುಕು ಸುಂದರವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿ…
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಶುಕ್ರವಾರದಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಶಿಷ್ಟಾಚಾರದಂತೆ ಆಚರಿಸಲಾಯಿತು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಶೀಲ್ದಾರರಾದ ಶ್ರೀಮತಿ ಕವಿತಾ ಅವರು ಬಸವಣ್ಣನವರ ಹಾಗೂ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.ಇದಕ್ಕೂ ಮೊದಲು ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೊನಾವಣೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರುಗಳಾದ ಶರಣು ಸಬರದ, ಭೀಮರಾಯ ಜಿಗಜಿನ್ನಿ, ಹಣಮಂತ ಮಾಚಪ್ಪನವರ, ಸುರೇಶ ದೇಸಾಯಿ, ಕೆ.ಕೆ.ಬನ್ನೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
