ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ್ಲಿ ಒಂದಾದ ಯವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಪದವಿ/ಡಿಪ್ಲೋಮಾ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ ೧೮೦ ದಿನಗಳು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ-೨೦೨೪ ರಿಂದ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳಲ್ಲಿ ಅಭ್ಯರ್ಥಿಯು (ತಾನು) ನಿರುದ್ಯೋಗಿ, ಸ್ವಯಂ ಉದ್ಯೋಗವಿಲ್ಲವೆಂದು ‘ಸ್ವಯಂ ಘೋಷಣೆ’ ಮಾಡಬೇಕಾಗಿರುತ್ತದೆ. ಸ್ವಯಂ ಘೋಷಣೆ ಮಾಡದೇ ಇರುವ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯಾಗುವುದಿಲ್ಲ.
ಫಲಿತಾಂಶದ ನಂತರ ನಿರುದ್ಯೋಗಿ ೧೮೦ ದಿನಗಳು ಪೂರ್ಣಗೊಂಡ ನಂತರವು ಯಾವುದೇ ನಗದು ಪಡೆಯದೆ ಹೋದ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನ (http://sevasindhugs.karnataka.gov.in)ನಲ್ಲಿ ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ, ತಮ್ಮ ಅರ್ಜಿಯು ಯಾವ ಕಚೇರಿಯಲ್ಲಿ ಪರಿಶೀಲನೆಗಾಗಿ ಬಾಕಿ ಇದೆ ಎಂದು ತಿಳಿದುಕೊಂಡು ಆ ಕಚೇರಿಗಳಿಗೆ ತಮ್ಮ ಶೈಕ್ಷಣಿಕ ಮೂಲ ಹಾಗೂ ಒಂದು ಪ್ರತಿಯ ದಾಖಲಾತಿಗಳನ್ನು ಭೌತಿಕವಾಗಿ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ೦೮೩೫೨-೨೫೦೩೮೩ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಯುವನಿಧಿ ಫಲಾನುಭವಿಗಳು ತಮ್ಮ ಅರ್ಜಿ ಸ್ಥಿತಿ ಪರಿಶೀಲಿಸಿಕೊಳ್ಳಿ
Related Posts
Add A Comment
