ದೇವರಹಿಪ್ಪರಗಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಜಲಧೂತ್ ಜಾಗೃತಿ ಕಾರ್ಯಕ್ರಮ ಜರುಗಿತು.
ತಾಲ್ಲೂಕಿನ ಬಮ್ಮನಜೋಗಿ ಎಲ್.ಟಿ ಒಂದರ ಶಾಲೆಯಲ್ಲಿ ಶುಕ್ರವಾರ ಮಕ್ಕಳ ಪ್ರಭಾತ್‌ಪೇರಿ ಘೋಷಣೆಗಳೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಬಿ.ಡಿ.ಪಾಟೀಲ ಮಾತನಾಡಿ, ಮಕ್ಕಳು ಈಗ ಬಿಸಿನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ರಾತ್ರಿ ಹಾಗೂ ಹಗಲು ಹೊತ್ತಿನಲ್ಲಿ ಸೊಳ್ಳೆ ಕಚ್ಚದಂತೆ ಜಾಗೃತ ವಹಿಸುವುದು. ಮತ್ತು ಜ್ವರ, ನೆಗಡಿಯಂತ ಖಾಯಿಲೆಗಳಿಗೆ ಕೂಡಲೇ ವೈದ್ಯರನ್ನು ಕಂಡು ತಪಾಸಣೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದು ಅರಿವು ಮೂಡಿಸಿದರು.
ಶಿಕ್ಷಕರಾದ ನಾಗೇಶ ನಾಗೂರ, ಬಸವರಾಜ ಬಡಿಗೇರ, ಎನ್.ಎಸ್.ಹರವಾಳ, ಎಸ್.ಪಿ.ಪವಾರ, ಎಸ್.ಡಿ.ಹೊಸೂರ ಸೇರಿದಂತೆ ಎಸ್‌ಡಿಎಮ್‌ಸಿ ಸದಸ್ಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

