Author: editor.udayarashmi@gmail.com

ವಿಜಯಪುರ: ಜುಲೈ 22, ರಾಷ್ಟ್ರೀಯ ಧ್ವಜ ಸ್ವೀಕಾರ ದಿನ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ, ಶ್ರೀನಿಧಿ, ಸಾಕ್ಷಿ, ದೀಪಾ, ಪವಿತ್ರಾ, ಶಾಂತಮ್ಮ, ಸಾಕ್ಷಿ ಅವರು ರಾಷ್ಟ್ರಧ್ವಜ ಪ್ರದರ್ಶಿಸಿ ಗಮನ ಸೆಳೆದರು.ನಮ್ಮ ಭಾರತದ ರಾಷ್ಟ್ರೀಯ ಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣ ಹೊಂದಿದ್ದು, ತ್ರಿವರ್ಣ ಧ್ವಜವಾಗಿದೆ. ಬಿಳಿಭಾಗದ ಮಧ್ಯದಲ್ಲಿ ಅಶೋಕ ಚಕ್ರವನ್ನು ಹೊಂದಿದೆ. ರಾಷ್ಟ್ರವನ್ನು ಪ್ರತಿನಿಧಿಸುವ ಭಾರತೀಯ ಧ್ವಜದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಜುಲೈ 22 ರಂದು ರಾಷ್ಟ್ರೀಯ ಧ್ವಜ ಸ್ವೀಕಾರ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.1947 ರ ಜುಲೈ 22 ರಂದು ಸಂವಿಧಾನ ಸಭೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಳ್ಳಲಾಯಿತು. ಧ್ವಜದಲ್ಲಿರುವ ಕೇಸರಿ ಬಣ್ಣವು ಭಾರತೀಯರ ಧೈರ್ಯ, ತ್ಯಾಗ ಮತ್ತು ಆತ್ಮವನ್ನು ಪ್ರತಿನಿಧಿಸುತ್ತದೆ. ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಸಮೃದ್ಧಿ, ಬೆಳವಣಿಗೆ ಮತ್ತು ಫಲವತ್ತತೆಯನ್ನು ಪ್ರತಿನಿಧಿಸುತ್ತದೆ.ಅಶೋಕ ಚಕ್ರದ ಕಡ್ಡಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳನ್ನು…

Read More

ಇಂಡಿಯಲ್ಲಿ ‘ಹಳೇಬೇರು-ಹೊಸಚಿಗುರು’ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮ ಇಂಡಿ: ಸಾಹಿತಿಯಾದವನು ಸಮಾಜದ ಆಗುಹೋಗುಗಳಿಗೆ ಪೂರಕವಾಗಿರುತ್ತಾನೆ, ಮೌಲ್ಯಯುತವಾದ ಬದುಕು ಮತ್ತು ಬರಹ ಇರುವ ಲೇಖಕ ಉತ್ತಮ ಸಮಾಜದ ನಿರ್ವಾಹಕನಾಗಿರುತ್ತಾನೆ ಎಂದು ಹಿರಿಯ ಕಾದಂಬರಿಕಾರ ಸಿದ್ಧರಾಮ ಉಪ್ಪಿನ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಶನಿವಾರ ಹಮ್ಮಿಕೊಂಡಿದ್ದ ‘ಹಳೇಬೇರು-ಹೊಸಚಿಗುರು’ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯತಿಥಿಗಳಾಗಿ ಮಾತನಾಡಿದರು.ಕಾದಂಬರಿಗಳಲ್ಲಿ ವಾಸ್ತವ ಪ್ರಜ್ಞೆಯನ್ನು ನಿರೂಪಿಸುವ ಸಂದರ್ಭದಲ್ಲಿ ಸತ್ಯದ ವಿಮುಖರಾಗಿ ಬರೆಯುವುದು ಸರಿಯಲ್ಲ, ಅನುಭವ ಮತ್ತು ಬರಹ ತಾಳೆಯಾಗುವಂತೆ ಲೇಖಕ ಬದುಕುಬೇಕಾಗುತ್ತದೆ ಎಂದರು.ಯುವಕವಿ ದೇವೂ ಮಾಕೊಂಡ ಮಾತನಾಡಿ ಯುವಕವಿಗಳಿಗೆ ಕನ್ನಡ ಸಾಹಿತ್ಯದ ಪರಂಪರೆಯ ಬಗ್ಗೆ ಅರಿವು ಇರಬೇಕು, ಪಠ್ಯದೊಂದಿಗೆ ಸಾಹಿತ್ಯದ ಕೃತಿಗಳನ್ನು ವಿದ್ಯಾರ್ಥಿ ಹೆಚ್ಚು ಓದುವದನ್ನು ರೂಢಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಕತ್ತಿ ಮಾತನಾಡಿ ಹಳೆಬೇರು ಹೊಸಚಿಗುರು ಕಾರ್ಯಕ್ರಮವು ಹಿರಿಯರನ್ನು ಗೌರವಿಸೋದು ಮತ್ತು ಕಿರಿಯರನ್ನು ಪ್ರೋತ್ಸಾಹಿಸೋದು ಮುಖ್ಯ ಉದ್ದೇಶವಾಗಿದೆ. ಹಿರಿಯರ ಬದುಕು ಕಿರಿಯರಿಗೆ ಮಾರ್ಗದರ್ಶನ ನೀಡುವಂತಿರಬೇಕು ಎಂದರು.ಪ್ರಾಚಾರ್ಯ…

Read More

ಗ್ಯಾರಂಟಿ ಯೋಜನೆಗೆ ಬಳಸುತ್ತಿರುವ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣ ಹಿಂಪಡೆಯಲು ಆಗ್ರಹ ಬೆಂಗಳೂರು: ದಲಿತರಿಗೆ ಮೀಸಲಿಟ್ಟ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಡೆಯ ವಿರುದ್ದ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅನ್ಯಾಯ ಸರಿಪಡಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಒಕ್ಕೂಟದ ಪ್ರಮುಖರು “ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣವನ್ನು ಹಿಂಪಡೆಯಬೇಕು ಮತ್ತು ಇತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದ್ದಾರೆ.ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಸರ್ವಾಧಿಕಾರ ಸ್ಥಾಪಿಸಲು ಹೊರಟಿರುವ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಸೋಲಿಸದೆ ದಲಿತರಿಗೆ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ, ರಾಜ್ಯ, ರಾಷ್ಟ್ರದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ದಲಿತರು ಅನಿವಾರ್ಯವಾಗಿ ಕಾಂಗ್ರೆಸ್‌ ಪಕ್ಷದೊಂದಿಗೆ ನಿಲ್ಲಬೇಕಾಯಿತು. ಬಹಿರಂಗವಾಗಿಯೇ ದಲಿತ ಸಂಘಟನೆಗಳು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ಸಫಲವಾಯಿತು…

Read More

ಇಂಡಿ: ಕನಿಷ್ಟ ವೇತನ 31 ಸಾವಿರ ಹಾಗೂ 6 ಸಾವಿರ ರೂಪಾಯಿ ಪಿಂಚಣಿ‌ ಮತ್ತು ವಿವಿಧ ಬೇಡಿಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ತಾಲ್ಲೂಕು ಘಟಕ ವತಿಯಿಂದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.ಪಟ್ಟಣದ ತಾ.ಪಂ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ್ ನೌಕರರ ತಾಲೂಕು ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಸೇರಿ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಗ್ರಾ.ಪಂ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ತುಕಾರಾಮ ಮಾರನೂರ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಖಾಸಗೀಕರಣವನ್ನು ತೀವ್ರವಾಗಿ ಜಾರಿ ಮಾಡುತ್ತಿರುವ ಹಿನ್ನೆಲೆಯ ಭಾಗವಾಗಿಯೇ ರಾಜ್ಯ ಸರ್ಕಾರವೂ ಸಹ ಅದೇ ನೀತಿಗಳನ್ನು ಜಾರಿ ಮಾಡುವ ಮುಂಚೂಣಿಯಲ್ಲಿದೆ ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿಯನ್ನು ಸ್ತ್ರೀ ಶಕ್ತಿ ಸಂಘಗಳ ಮುಖಾಂತರ ಜಾರಿ ಮಾಡಿಸುತ್ತಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ತೆರಿಗೆಗಳನ್ನು ವಸೂಲಿ ಮಾಡಲು ಸ್ತಶಕ್ತಿ ಮತ್ತು ಸ್ವ- ಸಹಾಯ ಸಂಘಗಳ ಮುಖಾಂತರ ವಸೂಲಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರದ…

Read More

ಇಂಡಿ: ಮರ ಗಿಡಗಳ ನಾಶದಿಂದ ಭೂಮಿಯ ಮೇಲಿನ ಜೀವಜಲ ನೀರು ಬತ್ತಿ ಹೋಗುತ್ತಿದೆ.ಭೂಮಿಯ ಮೇಲೆ ಭೂಮಿಗಿಂತಲೂ ನೀರು ಮೂರು ಪಾಲು ಹೆಚ್ಚಿದ್ದರೂ ಕೂಡಾ ಮಾನವನಿಗೆ ಕುಡಿಯಲು ಲಭ್ಯವಿರುವದು ಸ್ವಲ್ಪ ಭಾಗ ಮಾತ್ರ ಕುಡಿಯಲು ಯೋಗ್ಯವಾದ ನೀರಿದೆ ಎಂದು ದಶರಥ ಕೋರಿ ಶಿಕ್ಷಕರು ತಿಳಿಸಿದರು.ಪಟ್ಟಣದ ಗಾಂಧಿ ಬಾಜಾರ ಕೆ. ಜಿ. ಎಸ್ ಶಾಲೆ ವತಿಯಿಂದಜಲಧೂತ ಜಾಗೃತಿ ಜಾಥಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ದಕ್ಷಿಣ ಆಫ್ರಿಕಾದ ಕೇಪಟೌನ ಬೃಹತ್ ಪಟ್ಟಣ ಇತ್ತೀಚೆಗೆ ಅಕ್ಷರಶಃ ಇಡೀ ಪಟ್ಟಣ ಹನಿ ನೀರಿಲ್ಲದೆ ನಲುಗಿ ಹೋಯಿತು. ಇದರಿಂದ ಜನ ತಮ್ಮ ಆಸ್ತಿ ಅಂತಸ್ತು ಕ್ಷಣ ಮಾತ್ರದಲ್ಲಿ ಬಿಟ್ಟು ಹೋದರು. ಕೇಪಟೌನ ನಗರ ಪ್ರಪಂಚದ ನೀರಿಲ್ಲದ ಪಟ್ಟಣವೆಂದು ಪೋಷಿತವಾಗಿ ಇತಿಹಾಸ ಸೇರಿತು. ಭಾರತದಲ್ಲಿ ಕೂಡಾ ಸಹಸ್ರಾರು ಸಂಖ್ಯೆಯಲ್ಲಿ ಹಳ್ಳಗಳು ಕಣ್ಮರೆಯಾಗಿವೆ. ಕೆರೆಗಳು ಬತ್ತಿ ಹೋಗಿವೆ. ಭಾವಿಗಳು ಜೀವ ಜಲವಿಲ್ಲದೇ ಬೀಕೋ ಎನ್ನುತ್ತಿವೆ. ಭವಿಷ್ಯದಲ್ಲಿ ನಾವು ಮುಂದಿನ ಪೀಳಿಗೆಗಾಗಿ ಜಗತ್ತಿನ ಜೀವನಾಡಿ ನೀರನ್ನು ಸಂರಕ್ಷಿಸಬೇಕಾಗಿದೆ ಎಂದರು. ಅದಕ್ಕಾಗಿ ಸಸ್ಯ ಸಂಪತ್ತು-ಜಲ ಸಂಪತ್ತು…

Read More

ಸಿಂದಗಿ: ಸುಮಾರು ೩೦ ವರ್ಷಗಳ ಕಾಲ ಶೈಕ್ಷಣಿಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್.ಎಮ್.ಬಿರಾದಾರ ಹಾಗೂ ಆರ್.ಪಿ.ಕುಲಕರ್ಣಿ ಗುರುಮಾತೆಯರನ್ನು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ರಾಂಪೂರ ಪಿಎ, ಶಾಲೆಯ ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರೆಲ್ಲರೂ ಸಂಭ್ರಮದಿಂದ ಸನ್ಮಾನಿಸಿ ಬೀಳ್ಕೊಟ್ಟರು.ಕಾರ್ಯಕ್ರಮದಲ್ಲಿ ಪ್ರಭಾರಿ ಮುಖ್ಯಗುರು ಎಸ್.ಜಿ. ಕುಲಕರ್ಣಿ ಶಾಲೆಯ ಹಳೆಯ ವಿದ್ಯಾರ್ಥಿ ವಸಿಂ ಗೋಗಿ, ಅಮೀರ್ ರಂಜಾನ ಮುಜಾವರ್, ಅನಿಲ ದೊಡಮನಿ, ಎನ್.ಐ.ಅತ್ತಾರ, ಕೆ.ಹೆಚ್.ಜಂಬಗಿ, ಎಸ್.ಐ.ಅಂಕಲಗಿ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಊರಿನ ಗುರು ಹಿರಿಯರು, ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಅನೇಕರು ಇದ್ದರು.

Read More

ಸಿಂದಗಿ: ತಾಲೂಕು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಿಂದಗಿ ಕ್ಷೇತ್ರ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಬೆಂಗಳೂರಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಯಲ್ಲಿ ಯುವ ಮುಖಂಡ ಬಸವರಾಜ ಕಾಂಬಳೆ ಸಿಂದಗಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಅಶೋಕ ಮನಗೂಳಿ ಸನ್ಮಾನಿಸಿ ಮಾತನಾಡಿದ ಅವರು, ಸಿಂದಗಿ ನಗರದ ಸೌಂದರೀಕರಣ ಇನ್ನೂ ಹೆಚ್ಚು ಸುಧಾರಿಸಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ಕ್ಷೇತ್ರ ಮತ್ತು ಸಿಂದಗಿ ಪಟ್ಟಣದ ಅಭಿವೃದ್ಧಿಗೆ ಸಚಿವರು ನಿರಂತರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಸಚಿವ ಬೈರತಿ ಸುರೇಶ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದ ಅಭಿವೃದ್ಧಿಗೆ ಹಾಗೂ ಸಿಂದಗಿ ಪಟ್ಟಣದ ಎಲ್ಲ ಮೂಲಭೂತ ಸೌಕರ್ಯಗಳಿಗೆ ಸಹಕಾರ ನೀಡಲು ನಾನು ಸದಾ ಸಿದ್ಧನಾಗಿದ್ದೇನೆ. ಸಿಂದಗಿ ಯೋಜನಾ ಪ್ರಾಧಿಕಾರವು ಪಟ್ಟಣದ ಅಭಿವೃದ್ಧಿಗೆ ಮತ್ತು ಸೌಂದರ್ಯೀಕರಣಕ್ಕೆ ನೀಲನಕ್ಷೆ…

Read More

ಸಿಂದಗಿ: ಕರ್ನಾಟಕ ಸರಕಾರ ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.೫೦ ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.೭೫ ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಕರ್ನಾಟಕದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ. ಆದರೆ ಖಾಸಗಿ ಕಂಪೆನಿಗಳ ಆಕ್ಷೇಪದ ನೆಪವೊಡ್ಡಿ ಸ್ವತಃ ಸರಕಾರವೇ ಮಸೂದೆಯನ್ನು ತಡೆ ಹಿಡಿದಿರುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯ ಸಮಿತಿ ಸದಸ್ಯ ರಮೇಶ ಸಾಸಾಬಾಳ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಥಳೀಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ಆಯೋಗ ವರದಿ ನೀಡಿ ಹಲವು ದಶಕಗಳೇ ಕಳೆದಿವೆ. ಹತ್ತಾರು ವರ್ಷಗಳಿಂದ ಡಿವೈಎಫ್‌ಐ ಸೇರಿದಂತೆ ನಾಡಿನ ಜನಪರ ಸಂಘಟನೆಗಳು ಸ್ಥಳೀಯರಿಗೆ ಉದ್ಯೋಗ ಖಾತ್ರಿಪಡಿಸಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸುತ್ತಲೇ ಬಂದಿವೆ. ಇದೀಗ ಕರ್ನಾಟಕ ಸರಕಾರ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಮಸೂದೆ ಮಂಡಿಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಖಾಸಗಿ ಕಂಪೆನಿಗಳ ನಡೆಯು…

Read More

ಸಿಂದಗಿ: ಮಳೆಗಾಲದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತೀವ್ರವಾದ ಜ್ವರ, ತಲೆ ನೋವು, ವಾಂತಿ, ಮಾಂಸ ಖಂಡಗಳಲ್ಲಿ ನೋವು ಕಂಡು ಬಂದಲ್ಲಿ ಡೆಂಘೀ ಜ್ವರದ ಲಕ್ಷಣಗಳಾಗಿವೆ. ನಿರ್ಲಕ್ಷö್ಯ ವಹಿಸದೆ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಂದಗಿ ತಾಲೂಕು ಆಯುಷ್ಯ ಘಟಕದ ಸಹಯೋಗದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಂಡ ಡೆಂಘೀ ವಿರೋಧಿ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಡೆಂಘೀ ಹರಡಲು ಪ್ರಮುಖ ಕಾರಣ ಈಡಿಸ್ ಸೊಳ್ಳೆ. ಇವು ಹೆಚ್ಚಾಗಿ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ನೀರಿನ ಟ್ಯಾಂಕರ್, ಬಿಂದಿಗೆ ಸ್ವಚ್ಚಗೊಳಿಸುತ್ತಾ ಯಾವಾಗಲೂ ಮುಚ್ಚಿಡುವ ಮುಖಾಂತರ ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕು. ವಾರಕ್ಕೊಮ್ಮೆ ಬೇವಿನ ತಪ್ಪಲಿನ ಹೊಗೆ ಹಾಯಿಸಬೇಕು ಎಂದರು.ಈ ವೇಳೆ…

Read More