ಇಂಡಿ: ಮರ ಗಿಡಗಳ ನಾಶದಿಂದ ಭೂಮಿಯ ಮೇಲಿನ ಜೀವಜಲ ನೀರು ಬತ್ತಿ ಹೋಗುತ್ತಿದೆ.ಭೂಮಿಯ ಮೇಲೆ ಭೂಮಿಗಿಂತಲೂ ನೀರು ಮೂರು ಪಾಲು ಹೆಚ್ಚಿದ್ದರೂ ಕೂಡಾ ಮಾನವನಿಗೆ ಕುಡಿಯಲು ಲಭ್ಯವಿರುವದು ಸ್ವಲ್ಪ ಭಾಗ ಮಾತ್ರ ಕುಡಿಯಲು ಯೋಗ್ಯವಾದ ನೀರಿದೆ ಎಂದು ದಶರಥ ಕೋರಿ ಶಿಕ್ಷಕರು ತಿಳಿಸಿದರು.
ಪಟ್ಟಣದ ಗಾಂಧಿ ಬಾಜಾರ ಕೆ. ಜಿ. ಎಸ್ ಶಾಲೆ ವತಿಯಿಂದ
ಜಲಧೂತ ಜಾಗೃತಿ ಜಾಥಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡುತ್ತ, ದಕ್ಷಿಣ ಆಫ್ರಿಕಾದ ಕೇಪಟೌನ ಬೃಹತ್ ಪಟ್ಟಣ ಇತ್ತೀಚೆಗೆ ಅಕ್ಷರಶಃ ಇಡೀ ಪಟ್ಟಣ ಹನಿ ನೀರಿಲ್ಲದೆ ನಲುಗಿ ಹೋಯಿತು. ಇದರಿಂದ ಜನ ತಮ್ಮ ಆಸ್ತಿ ಅಂತಸ್ತು ಕ್ಷಣ ಮಾತ್ರದಲ್ಲಿ ಬಿಟ್ಟು ಹೋದರು. ಕೇಪಟೌನ ನಗರ ಪ್ರಪಂಚದ ನೀರಿಲ್ಲದ ಪಟ್ಟಣವೆಂದು ಪೋಷಿತವಾಗಿ ಇತಿಹಾಸ ಸೇರಿತು. ಭಾರತದಲ್ಲಿ ಕೂಡಾ ಸಹಸ್ರಾರು ಸಂಖ್ಯೆಯಲ್ಲಿ ಹಳ್ಳಗಳು ಕಣ್ಮರೆಯಾಗಿವೆ. ಕೆರೆಗಳು ಬತ್ತಿ ಹೋಗಿವೆ. ಭಾವಿಗಳು ಜೀವ ಜಲವಿಲ್ಲದೇ ಬೀಕೋ ಎನ್ನುತ್ತಿವೆ. ಭವಿಷ್ಯದಲ್ಲಿ ನಾವು ಮುಂದಿನ ಪೀಳಿಗೆಗಾಗಿ ಜಗತ್ತಿನ ಜೀವನಾಡಿ ನೀರನ್ನು ಸಂರಕ್ಷಿಸಬೇಕಾಗಿದೆ ಎಂದರು. ಅದಕ್ಕಾಗಿ ಸಸ್ಯ ಸಂಪತ್ತು-ಜಲ ಸಂಪತ್ತು ಜೀವ ಸಂಪತ್ತು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಹೇಳಿ ಪ್ರಸ್ತುತ ಈಗ ಇಂಗು ಗುಂಡಿ ನಿರ್ಮಾಣ ಮಾಡಿ ನೀರನ್ನು ಮಿತವಾಗಿ ಬಳಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಗುರು ಶ್ರೀ ಯು ಎಚ್ ಚವ್ಹಾಣ ಅಶೋಕ ಹೊಸಮನಿ ಎಮ್ ಎ ಲಕ್ಕಡಹಾರ ಶಿಕ್ಷಕರು ಮತ್ತು ಶಿಕ್ಷಕಿಯರಾದ ಶ್ರೀ ಬಿ.ಸಿ ಭಗವಂತಗೌಡರ ಕೆ.ಎಲ್ ಲಚ್ಯಾಣ ಎಮ್ ಬಿ ಭಾಸಗಿ ಎಮ್ ಡಿ ದೊಡ್ಡಮನಿ ಮತ್ತು ಅತಿಥಿ ಶಿಕ್ಷಕಿಯರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

