Author: editor.udayarashmi@gmail.com

ಇಂಡಿ: ಗ್ರಾಮ‌ ಆಡಳಿತ ಅಧಿಕಾರಿ ವಿರುದ್ಧ ಜಾತಿ ನಿಂದನೆ ಹಾಗೂ ಅವಾಚ್ಯ ಶಬ್ದಗಳ ಬಳಕೆ ಹಿನ್ನೆಲೆ ಶಿಸ್ತು ಕ್ರಮಕ್ಕಾಗಿ ಶಿರಸ್ತೆದಾರ ಎಸ್ ಆರ್ ಮುಜಗೊಂಡ ಅವರಿಗೆ ಲಂಬಾಣಿ ಸಮಾಜದ ಯುವಕರು ಮನವಿ ಸಲ್ಲಿಸಿದರು.ಶುಕ್ರವಾರ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಲಂಬಾಣಿ ಸಮಾಜದ ಯುವಕರು, ಅಥರ್ಗಾ ಗ್ರಾಮ‌ದ ಆಡಳಿತ ಅಧಿಕಾರಿ ಯುವರಾಜ ನಿಂಬರಗಿ ಎಂಬುವರು ಲಮಾಣಿ ಸಮಾಜಕ್ಕೆ ‌ ಅವಾಚ್ಯ, ಅಸಲಿಲ ಪದಗಳಿಂದ ಜಾತಿ‌ ನಿಂದನೆ ಮಾಡಿದ್ದು ಅತ್ಯಂತ ನೋವಾಗಿದೆ. ಆ ಗ್ರಾಮ ಆಡಳಿತ ಅಧಿಕಾರ ವಿರುದ್ಧ ಕೂಡಲೇ ‌ಶಿಸ್ತು ಕ್ರಮ ಜರಗಿಸಬೇಕು ಎಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಗಣಪತಿ ರಾಠೋಡ, ವಿಜಯಕುಮಾರ್ ರಾಠೋಡ, ಅಶೋಕ ಜಾಧವ, ಅವಿನಾಶ್ ರಾಠೋಡ, ವಿಶ್ವನಾಥ ರಾಠೋಡ, ಲಾಲು ಚವ್ಹಾಣ ಹಾಗೂ ಇನ್ನೂ ಅನೇಕ ಯುವಕರು ಉಪಸ್ಥಿತರಿದ್ದರು.

Read More

ಇಂಡಿ: ಇತ್ತೀಚಿಗೆ ರಾಜ್ಯ ಸರಕಾರ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಹಾಗೂ ಕಂದಾಯ ಇಲಾಖೆ ಸೇವೆಗಳು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ವಿತರಿಸುವ ಮಹತ್ವದ ಯೋಜನೆ ರೂಪಿಸಿಗೊಂಡಿತ್ತು. ಅದರಂತೆ ಶುಕ್ರವಾರ ಗ್ರಾ.ಪಂ ಯಲ್ಲಿ ಮರಣ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಕಾರ್ಯದರ್ಶಿ ನಾಗಪ್ಪ ತೆಲಸಂಗ ಹೇಳಿದರು.ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುಬ್ಬೇವಾಡ ಗ್ರಾಮದ ಗೌರಾಬಾಯಿ ವಿಠ್ಠಲ ಕೋಳಿ ಅವರ ಮರಣ ಪತ್ರ ಇಂದು ಅವರ ಕುಟುಂಬಕ್ಕೆ ವಿತರಿಸುವ ಮೂಲಕ ಸರಕಾರದ ಮಹತ್ವದ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಮೆಚ್ಚುಗೆ ಪಡೆಯುವಂತಾಗಿದೆ. ಸುಖಾ ಸುಮ್ನೆ ಪಟ್ಟಣ‌ ಮತ್ತು ಬೇರೆಬೇರೆ ಕಛೇರಿಗೆ ಅಲೆದಾಟ ತಪ್ಪಿದ್ದು, ಸ್ಥಳದಲ್ಲೆ ಪ್ರಮಾಣ ಪತ್ರ ದೊರೆಯುತ್ತಿದೆ‌ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕರವಸುಲಿಗಾರ ಎಸ್ ಐ ಕೋಳಿ‌ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಭವಿಸುವ ಜನನ ಹಾಗೂ ಮರಣದ ಘಟನೆಗಳಲ್ಲಿ 21 ದಿನಗಳೊಳಗೆ ಜನನ ಮತ್ತು ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ…

Read More

ಇಂಡಿ: ಇಂದಿನ ಯುವ ಜನತೆ ಕೇವಲ ಪುಸ್ತಕ ಜ್ಞಾನಕ್ಕೆ ಸೀಮಿತರಾಗುತ್ತಿದ್ದಾರೆ. ಸಮಾಜದಲ್ಲಿನ ವಿಚಾರಗಳನ್ನು ಅರಿಯದೆ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.ಅವರು ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಸಿ.ವಿ. ರಾಮನ್ ಪದವಿಪೂರ್ವ ವಿದ್ಯಾಲಯದಲ್ಲಿ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.ತಮ್ಮ ಮಾತಿನುದ್ದಕ್ಕೂ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯವನ್ನು ಉತ್ತಮವಾಗಿ ವಿವರಿಸಿದರು.ಶಿಕ್ಷಕ ಕೆ.ಎ. ತೆಲಸಂಗ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತಾವು ಕಲಿಯುವ ಪ್ರತೀ ಸಂದರ್ಭದಲ್ಲಿಯೂ ತಂದೆ ತಾಯಿಯ ಶ್ರಮದ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಪಾಲಕರು ಕಷ್ಟದ ಪರಿಸ್ಥಿತಿಯಲ್ಲಿ ನಿಮಗೆ ಉತ್ತಮ ಶಿಕ್ಷಣ ನೀಡುವ ಹಂಬಲ ಹೊಂದಿ ನಿಮ್ಮನ್ನು ಉತ್ತಮ ಸಂಸ್ಥೆಗಳಲ್ಲಿ ಕಲಿಸುತ್ತಾರೆ. ಅವುಗಳನ್ನೆಲ್ಲ ಸ್ಮರಿಸಿಕೊಂಡು ವಿದ್ಯಾಭ್ಯಾಸ ಮಾಡಿದಾಗ ವಿದ್ಯಾರ್ಥಿ ಜೀವನ ಉನ್ನತ ಸ್ಥಾನಕ್ಕೇರಲು ಸಾಧಯವಾಗುತ್ತದೆ ಎಂದರು.ಅತಿಥಿ ಶಿಕ್ಷಕ ಆಂಜನೇಯ ಸ್ವಾಮಿ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದಲ್ಲಿ ತಾಲೂಕು ಮತ್ತು…

Read More

ಹಡಗಲಿ(ದೇವರಹಿಪ್ಪರಗಿ): ಗ್ರಾಮದ ಮೂಲಕ ಸಂಚರಿಸುವ ವಿಜಯಪುರ-ಕಲಬುರ್ಗಿ, ಸಿಂದಗಿ-ವಿಜಯಪುರ ಬಸ್‌ಗಳನ್ನು ನಿಲುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು.ವಿಜಯಪುರ ತಾಲ್ಲೂಕಿನ ಹಡಗಲಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇರಿದ ಗ್ರಾಮ ಹಾಗೂ ಗ್ರಾಮದ ಎರಡು ತಾಂಡಾಗಳ ವಿದ್ಯಾರ್ಥಿಗಳು ಬಸ್ ನಿಲುಗಡೆಗಾಗಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಗೌರಮ್ಮ ಗಂಗಶೆಟ್ಟಿ ಮಾತನಾಡಿ, ಪ್ರತಿದಿನ ಸಿಂದಗಿ-ವಿಜಯಪುರ ಬಸ್‌ಗಳು ನಿಲ್ಲುತ್ತವೆ. ಆದರೆ ಈಗೀಗ ಸಿಂದಗಿ-ವಿಜಯಪುರ ಬಸ್‌ಗಳು ತಡೆರಹಿತ ಎಂದು ನಾಮಫಲಕ ಹಾಕೊಕೊಂಡು ಸಂಚರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಬಸ್ ಸಿಗದೇ ಬಳಲುವಂತಾಗಿದೆ.ನಿತ್ಯ ಶಾಲಾ ಸಮಯಕ್ಕೆ ಬಹುತೇಕ ತಡೆರಹಿತ ಬಸ್‌ಗಳೇ ಬರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜುಗಳಿಗೆ ತಡವಾಗಿ ತೆರಳುವಂತಾಗಿದೆ. ವಿಜಯಪುರದಿಂದ ಬರುವಾಗ ಸಾಯಂಕಾಲವು ಸಹ ತಡೆರಹಿತ ಬಸ್‌ಗಳೇ ಇರುವುದರಿಂದ ವಿದ್ಯಾರ್ಥಿನೀಯರಿಗೆ ಮನೆಗೆ ತೆರಳಲು ತಡವಾಗುತ್ತಿದೆ. ಆದ್ದರಿಂದ ಗ್ರಾಮದ ಮೂಲಕ ತೆರಳುವ ವಿಜಯಪುರ-ಸಿಂದಗಿ ಹಾಗೂ ವಿಜಯಪುರ-ಕಲಬುರ್ಗಿ ಬಸ್‌ಗಳು ನಿಲುಗಡೆ ಮಾಡಿ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಕಲಿಕೆಗೆ ಸಹಕಾರ ನೀಡುವಂತೆ ಆಗ್ರಹಿಸಿದರು.ಗ್ರಾಮದಲ್ಲಿ ಪ್ರತಿಭಟನೆ ಜರುಗುತ್ತಿರುವ ಸುದ್ದಿ ತಿಳಿದು ಸ್ಥಳಕ್ಕೆ…

Read More

ಸಿಂದಗಿ: ಪಟ್ಟಣದ ವಿದ್ಯಾಚೇತನ ಪ್ರಕಾಶನದಿಂದ ನೀಡುವ ರಾಜ್ಯಮಟ್ಟದ ಬಾಲಸಾಹಿತ್ಯ ಪುರಸ್ಕಾರ ಪ್ರದಾನ ಸಮಾರಂಭ ಜು.೨೮ ರಂದು ಬೆಳಿಗ್ಗೆ ೧೦.೩೦ಗಂಟೆಗೆ ಪಟ್ಟಣದ ಸಾರಂಗಮಠದ ಆವರಣದಲ್ಲಿ ನಡೆಯಲಿದೆ.ಬೆಂಗಳೂರಿನ ಲಲಿತಾ ಹೊಸಪ್ಯಾಟಿ (ಬ್ಯೂಟಿ ಬೆಳ್ಳಕ್ಕಿ—ಮಕ್ಕಳ ಕಥಾ ಸಂಕಲನ), ವಿಜಯಪುರ ಜಂಬುನಾಥ ಕಂಚ್ಯಾಣಿ (ಮತ್ತೆ ಅವತರಿಸಿದ ದೈತ್ಯರು—ಮಕ್ಕಳ ಕಾದಂಬರಿ), ಬೆಳಗಾವಿಯ ಎಂ.ಎಂ.ಸಂಗಣ್ಣವರ (ಅಮ್ಮ ಬೇಕು—ಮಕ್ಕಳ ಕವನ ಸಂಕಲನ) ಇವರಿಗೆ ಬಾಲಸಾಹಿತ್ಯ ಪುರಸ್ಕಾರ ಹಾಗೂ ಮಕ್ಕಳ ವಿಭಾಗದಲ್ಲಿ ಬಾಲಸಾಹಿತ್ಯ ಚಿಗುರು ಪುರಸ್ಕಾರವನ್ನು ಗದಗ ನಗರದ ವಿದ್ಯಾರ್ಥಿನಿ ಪ್ರಣತಿ ಗಡಾದ (ನಾನು ಮಳೆಯಾದರೆ—ಮಕ್ಕಳ ಕವನ ಸಂಕಲನ) ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ತಲಾ ೫ ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಹಾಗೂ ಬಾಲ ಸಾಹಿತ್ಯ ಚಿಗುರು ಪ್ರಶಸ್ತಿ ೨ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸುವರು. ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಸಮಾರಂಭವನ್ನು ಉದ್ಘಾಟಿಸುವರು.…

Read More

ಸಿಂದಗಿ: ಶಾಲಾ ಸಂಸತ್ತು, ಪಠ್ಯಪೂರಕ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುವುದರ ಜೊತೆಗೆ ಮಕ್ಕಳಲ್ಲಿ ಆಸಕ್ತಿ ಇಮ್ಮಡಿಗೊಳಿಸುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಎಂದು ಹೇಳಿದರು.ಪಟ್ಟಣದ ಸಮರ್ಥ ವಿದ್ಯಾವಿಕಾಸ ಸಂಸ್ಥೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಪ್ರಾಥಮಿಕ ಮತ್ತು ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಪಠ್ಯಪೂರಕ ಮತ್ತು ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಶಾಲಾ ಸಂಸತ್ತಿನ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಅವರಿಗೆ ಸಂಸತ್ತಿನ ಅರಿವು ಮೂಡಿಸಲು ಶಾಲೆಗಳಲ್ಲಿ ಸಂಸತ್ತಿನ ಪದಾಧಿಕಾರಿಗಳನ್ನಾಗ ಆಯ್ಕೆ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಅನಕೂಲವಾಗಲಿದೆ ಎಂದರು.ಈ ವೇಳೆ ಮಕ್ಕಳ ಸಾಹಿತಿ ಶಿಕ್ಷಕ ಎಸ್.ಎಸ್.ಸಾತಿಹಾಳ ಮಾತನಾಡಿ, ಮಕ್ಕಳು ಶಾಲಾ ಸಂಸತ್ತು ರಚನೆಯಿಂದ ಜಾತ್ಯಾತೀತ ಸಾಮಾಜಿಕ ನಾಯಕತ್ವ ಮತ್ತು ಪಕ್ಷಾತೀತ ಭಾವನೆ ಮಕ್ಕಳಲ್ಲಿ ಬೆಳೆಯುತ್ತದೆ. ಗುರು ಹಿರಿಯರ, ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಸಾಗಿದಾಗ ಭವ್ಯ ಭಾರತದ ಕನಸು ನನಸಾಗುತ್ತದೆ ಎಂದರು.ಪ್ರಸಕ್ತ ಸಾಲಿನಲ್ಲಿ ವಿವಿಧ ವಿಭಾಗದ…

Read More

ತಿಕೋಟಾ: ಸೈನಿಕ ಎಂದರೆ ದೀಪ ಇದ್ದಂತೆ, ದೀಪ ತನ್ನನ್ನು ತಾನು ಸುಟ್ಟಿಕೊಂಡು ಬೆಳಕು ಪಸರಿಸುವ ಹಾಗೆ ಸೈನಿಕರು ಕೂಡಾ ತಮ್ಮ ಜೀವವನ್ನು ಲೆಕ್ಕಿಸದೇ ದೇಶ ರಕ್ಷಣೆಗಾಗಿ ಸದಾ ಸನ್ನದ್ದರಾಗಿರುತ್ತಾರೆ ಎಂದು ಹೊನವಾಡ ಗ್ರಾಮದ ಮಾಜಿ ಸೈನಿಕ ಎನ್.ಬಿ‌.ನಾಟಿಕಾರ ಹೇಳಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ಶುಕ್ರವಾರ 25 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಸಸಿ ನೀರುನಿಸಿ ಚಾಲನೆ ನೀಡಿ ಅವರು ಮಾತನಾಡಿದರು.ಸೇನೆಗೆ ಸೇರುವ ವ್ಯಕ್ತಿಗಳು ರೈತರ ಮಕ್ಕಳು, ಕೂಲಿನಾಲಿ ಮಾಡುವ ಮಕ್ಕಳು, ಕಡು ಬಡತನ ಕುಟುಂಬದ ಮಕ್ಕಳು, ಸೈನ್ಯಕ್ಕೆ ಸೇರುತ್ತಾರೆ. ಸೈನದಲ್ಲಿ ಸೈನಿಕರಿಗೆ ಪಾಠ, ತರಬೇತಿ, ಎಲ್ಲ ಭಾಷೆ, ರಾಷ್ಟ್ರಭಕ್ತಿ, ಭಾವೈಕ್ಯತೆಯನ್ನು ಜಾಗೃತ ಗೊಳಿಸುವ ಕಾರ್ಯ ನಿರಂತರವಾಗಿ ಕಲಿಸುತ್ತಾರೆ ಎಂದರು.ಪ್ರಾಧ್ಯಾಪಕ ಬಸವರಾಜ ಸಾಲವಾಡಗಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ಇಂದು ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣೆ ಯಾಗಿದ್ದು ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನವನ್ನು ನಾವೇಲ್ಲರೂ ಇಂತಹ ಕಾರ್ಯಕ್ರಮದ ಮೂಲಕವಾದರು ಸ್ಮರಿಸಬೇಕಾಗಿದೆ…

Read More

ತಿಕೋಟಾ: ದಾಕ್ಷಿ ಬೆಳೆ ವಿಮಾ ತುಂಬುವ ದಿನಾಂಕವನ್ನು ವಿಸ್ತರಿಸುವ ಹಾಗೂ ರೈತರ ಪಹಣಿ ಉತಾರೆಯಲ್ಲಿ ದ್ರಾಕ್ಷಿ ಬೆಳೆ ದಾಖಲೆ ಮಾಡುವಂತೆ ಆಗ್ರಹಿಸಿ ತಾಲ್ಲೂಕ ದ್ರಾಕ್ಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಗ್ರೇಡ್ 2 ತಹಶಿಲ್ದಾರ ಸೋಮನಿಂಗ ಅರಕೇರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ವಿಮಾ ತುಂಬುವ ಅವಧಿಯು ಜಿಲ್ಲೆಯಲ್ಲಿ ಜುಲೈ15 ಕ್ಕೆ ಮುಕ್ತಾಯವಾಗಿರುತ್ತದೆ. ಅದನ್ನು ಅಗಷ್ಟ 15 ವರೆಗೆ ಅವಧಿಯನ್ನು ವಿಸ್ತರಿಸಬೇಕು. ಕೆಲವು ರೈತರ ಪಹಣಿ ಉತಾರೆಯಲ್ಲಿ ಬೆಳೆ ಕಾಲಂ ದಲ್ಲಿ ಬೆಳೆ ನಮೂದಾಗಿರುವುದಿಲ್ಲ. ಆದ ಕಾರಣ ವಿಮಾ ತುಂಬಲು ತೊಂದರೆಯಾಗಿರುತ್ತದೆ. ಸಮೀಕ್ಷೆ ಮಾಡಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು.2023-24ನೇ ಅವಧಿಯಲ್ಲಿ ರಾಜ್ಯದ ಎಲ್ಲ ದ್ರಾಕ್ಷಿ ಬೆಳಗಾರರು ದ್ರಾಕ್ಷಿ ವಿಮಾ ತುಂಬಿರುತ್ತಾರೆ. ಸರ್ಕಾರವು ಈ ಅವಧಿಯಲ್ಲಿ ಬರಗಾಲ ಪೀಡಿತ ಎಂದು ಘೋಷಿರುತ್ತಾರೆ. ಆದರೆ ವಿಮಾ ಕಂಪನಿಯವರು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಇದರಿಂದಾಗಿ ರೈತರಿಗೆ ನಷ್ಟವಾಗುತ್ತಿದೆ. ಅತಿ ವೃಷ್ಠಿ ಹಾಗೂ ಅನಾವೃಷ್ಠಿಯ ಸಲುವಾಗಿ ವಿಮಾ ಕಂತು ತುಂಬಿರುತ್ತೇವೆ. ಅದಕ್ಕೆ ವಿಮಾ ಕಂಪನಿಯ ಜೋತೆ ಚರ್ಚಿಸಿ ತ್ವರಿತವಾಗಿ ಹಣ…

Read More

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ(ಜಟ್ಟಗಿ) ಉಪಕೇಂದ್ರದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ೧೧೦ಕೆವಿ ಬ.ಬಾಗೇವಾಡಿ-ಮುದ್ದೇಬಿಹಾಳ ಮಾರ್ಗದ ಗೋಪುರದಲ್ಲಿ ಜಂಪ ಅಳವಡಿಸುವ ಸಲುವಾಗಿ ಜು.೨೯ ರಂದು ಬೆಳಿಗ್ಗೆ ೭ರಿಂದ ೯:೩೦ ರವರೆಗೆ ೧೧೦ಕೆವಿ ಮತ್ತು ೧೧೦ಕೆವಿ ಸೋಲಾರ ಮುದ್ದೇಬಿಹಾಳ, ೧೧೦ಕೆವಿ ಹಿರೇಮುರಾಳ, ೧೧೦ಕೆವಿ ಕೊಳೂರ, ೧೧೦ಕೆವಿ ಬಾಲಾಜಿ ಶುಗರ್ಸ್, ೩೩ಕೆವಿ ನಾಲತವಾಡ, ೩೩ಕೆವಿ ತಂಗಡಗಿ ಮತ್ತು ೩೩ಕೆವಿ ಢವಳಗಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿರುವದಾಗಿ ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ನಿವಾಸಿ ಸೋಮೇಶ ನಂದಿ ಇವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವತಿಯಿಂದ ಹಮ್ಮಿಕೊಂಡ ಘಟಿಕೋತ್ಸವದಲ್ಲಿ ಪಿಎಚ್‌ಡಿ ಪ್ರಧಾನ ಮಾಡಲಾಗಿದೆ.

Read More