ತಿಕೋಟಾ: ಸೈನಿಕ ಎಂದರೆ ದೀಪ ಇದ್ದಂತೆ, ದೀಪ ತನ್ನನ್ನು ತಾನು ಸುಟ್ಟಿಕೊಂಡು ಬೆಳಕು ಪಸರಿಸುವ ಹಾಗೆ ಸೈನಿಕರು ಕೂಡಾ ತಮ್ಮ ಜೀವವನ್ನು ಲೆಕ್ಕಿಸದೇ ದೇಶ ರಕ್ಷಣೆಗಾಗಿ ಸದಾ ಸನ್ನದ್ದರಾಗಿರುತ್ತಾರೆ ಎಂದು ಹೊನವಾಡ ಗ್ರಾಮದ ಮಾಜಿ ಸೈನಿಕ ಎನ್.ಬಿ.ನಾಟಿಕಾರ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾ ಭವನದಲ್ಲಿ ಶುಕ್ರವಾರ 25 ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಸಸಿ ನೀರುನಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಸೇನೆಗೆ ಸೇರುವ ವ್ಯಕ್ತಿಗಳು ರೈತರ ಮಕ್ಕಳು, ಕೂಲಿನಾಲಿ ಮಾಡುವ ಮಕ್ಕಳು, ಕಡು ಬಡತನ ಕುಟುಂಬದ ಮಕ್ಕಳು, ಸೈನ್ಯಕ್ಕೆ ಸೇರುತ್ತಾರೆ. ಸೈನದಲ್ಲಿ ಸೈನಿಕರಿಗೆ ಪಾಠ, ತರಬೇತಿ, ಎಲ್ಲ ಭಾಷೆ, ರಾಷ್ಟ್ರಭಕ್ತಿ, ಭಾವೈಕ್ಯತೆಯನ್ನು ಜಾಗೃತ ಗೊಳಿಸುವ ಕಾರ್ಯ ನಿರಂತರವಾಗಿ ಕಲಿಸುತ್ತಾರೆ ಎಂದರು.
ಪ್ರಾಧ್ಯಾಪಕ ಬಸವರಾಜ ಸಾಲವಾಡಗಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸ್ ಇಂದು ಭಾರತೀಯ ಸೇನೆಯ ಶೌರ್ಯ, ಸಾಹಸಗಾಥೆ ಎಂದೆಂದಿಗೂ ಪ್ರೇರಣೆ ಯಾಗಿದ್ದು ಭಾರತದ ವೀರಯೋಧರ ತ್ಯಾಗ ಮತ್ತು ಬಲಿದಾನವನ್ನು ನಾವೇಲ್ಲರೂ ಇಂತಹ ಕಾರ್ಯಕ್ರಮದ ಮೂಲಕವಾದರು ಸ್ಮರಿಸಬೇಕಾಗಿದೆ ಎಂದು ಹೇಳಿದರು.
ಪ್ರೋ. ಆರ್. ಎಫ್. ನಾಗಣ್ಣನವರ ಮಾತನಾಡಿ, ದೇಶದ ಗಡಿ ನುಗ್ಗಲು ಯತ್ನಿಸಿದ ಪರಕೀಯರಿಗೆ ಭಾರತೀಯ ಸೈನಿಕರು ತಕ್ಕಪಾಠ ಕಲಿಸಿ ದೇಶದ ರಕ್ಷಣೆ ಮಾಡಿ ಇಡೀ ವಿಶ್ವವೇ ಭಾರತೀಯರ ಕಡೆಗೆ ಬೆರಗಾಗಿ ತಿರುಗಿ ನೋಡುವ ಹಾಗೇ ನಮ್ಮಸೈನಿಕರು ಮಾಡಿದ್ದಾರೆ. ದೇಶದ ಮತ್ತು ಕಾರ್ಗಿಲ್ ಯುದ್ಧದ ವಿಜಯಕ್ಕಾಗಿ ಹೋರಾಡಿ ವೀರಮರಣ ಹೊಂದಿರುವ ಹೆಮ್ಮೆಯ ವೀರ ಯೋಧರ ತ್ಯಾಗ ಬಲಿದಾನಗಳನ್ನು ಸ್ಮರಿಸುವ ಕಾರ್ಯವಾಬೇಕಾಗಿದೆ ಎಂದರು.
ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ರವಿಚಂದ್ರ ವಾಲಿಕಾರ, ಸಂತೋಷ ಹೆಗಡೆ, ಪ್ರಾಚಾರ್ಯ ಆರ್.ಬಿ.ಶಿರಸಂಗಿ ಮಾತನಾಡಿದರು. ಅಸ್ಲಂ ಮುಲ್ಲಾ, ಶಿವಮೂರ್ತಿ ಚಿಕ್ಕನರ್ತಿ ಸಿಬ್ಬಂದಿ ವರ್ಗ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

