ಇಂಡಿ: ಇತ್ತೀಚಿಗೆ ರಾಜ್ಯ ಸರಕಾರ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಹಾಗೂ ಕಂದಾಯ ಇಲಾಖೆ ಸೇವೆಗಳು ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ವಿತರಿಸುವ ಮಹತ್ವದ ಯೋಜನೆ ರೂಪಿಸಿಗೊಂಡಿತ್ತು. ಅದರಂತೆ ಶುಕ್ರವಾರ ಗ್ರಾ.ಪಂ ಯಲ್ಲಿ ಮರಣ ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಕಾರ್ಯದರ್ಶಿ ನಾಗಪ್ಪ ತೆಲಸಂಗ ಹೇಳಿದರು.
ತಾಲ್ಲೂಕಿನ ಗುಬ್ಬೇವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗುಬ್ಬೇವಾಡ ಗ್ರಾಮದ ಗೌರಾಬಾಯಿ ವಿಠ್ಠಲ ಕೋಳಿ ಅವರ ಮರಣ ಪತ್ರ ಇಂದು ಅವರ ಕುಟುಂಬಕ್ಕೆ ವಿತರಿಸುವ ಮೂಲಕ ಸರಕಾರದ ಮಹತ್ವದ ಯೋಜನೆಗೆ ಗ್ರಾಮೀಣ ಪ್ರದೇಶದಲ್ಲಿ ಮೆಚ್ಚುಗೆ ಪಡೆಯುವಂತಾಗಿದೆ. ಸುಖಾ ಸುಮ್ನೆ ಪಟ್ಟಣ ಮತ್ತು ಬೇರೆಬೇರೆ ಕಛೇರಿಗೆ ಅಲೆದಾಟ ತಪ್ಪಿದ್ದು, ಸ್ಥಳದಲ್ಲೆ ಪ್ರಮಾಣ ಪತ್ರ ದೊರೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕರವಸುಲಿಗಾರ ಎಸ್ ಐ ಕೋಳಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಭವಿಸುವ ಜನನ ಹಾಗೂ ಮರಣದ ಘಟನೆಗಳಲ್ಲಿ 21 ದಿನಗಳೊಳಗೆ ಜನನ ಮತ್ತು ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಜನನ ಹಾಗೂ ಮರಣ ನೋಂದಣಿ ಪದ್ಧತಿಯನ್ನು ಬಲಪಡಿಸಲು ಮತ್ತು 30 ದಿನಗಳ ಒಳಗಾಗಿ ಜನನ-ಮರಣ ಘಟನೆಗಳನ್ನು ನೋಂದಾಯಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್ ಯಲ್ಲಿ ಪ್ರಮಾಣ ಪತ್ರ ಕೊಡುವ ಮಹತ್ವದ ಯೋಜನೆ ಸರಕಾರ ರೂಪಿಸಿದೆ. ಈಗಾಗಲೇ ಬಾಪೂಜಿ ಕೇಂದ್ರದ ಮೂಲಕ 72 ಯೋಜನೆಗಳು ಲಭ್ಯವಿದ್ದು, ಈಗ 73 ನೇ ಯೋಜನೆಯಾಗಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ ಮಾಡುವುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಾರದಾಬಾಯಿ ಸಿ ಮರಗೂರ, ಉಪಾಧ್ಯಕ್ಷ ಅನಾರ್ಕಲಿ ಆ ಚಾಂದಕವಟೆ, ಸದಸ್ಯ ಅಮೃತ ಮರಗೂರ, ಹಸನಸಾಬ್ ಕಸಾಯಿ, ಸಿದ್ದು ಕೋಳಿ, ಸುರೇಶ ಆಲೂರ, ಪ್ರವೀಣ್ ಮೈಲಗೊಂಡ, ಚಿದಾನಂದ ಮರಗೂರ, ಯಲ್ಲಪ್ಪ ಪೂಜಾರಿ, ಶ್ರೀಮಂತ ಪೂಜಾರಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

