ತಿಕೋಟಾ: ದಾಕ್ಷಿ ಬೆಳೆ ವಿಮಾ ತುಂಬುವ ದಿನಾಂಕವನ್ನು ವಿಸ್ತರಿಸುವ ಹಾಗೂ ರೈತರ ಪಹಣಿ ಉತಾರೆಯಲ್ಲಿ ದ್ರಾಕ್ಷಿ ಬೆಳೆ ದಾಖಲೆ ಮಾಡುವಂತೆ ಆಗ್ರಹಿಸಿ ತಾಲ್ಲೂಕ ದ್ರಾಕ್ಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಗ್ರೇಡ್ 2 ತಹಶಿಲ್ದಾರ ಸೋಮನಿಂಗ ಅರಕೇರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವಿಮಾ ತುಂಬುವ ಅವಧಿಯು ಜಿಲ್ಲೆಯಲ್ಲಿ ಜುಲೈ15 ಕ್ಕೆ ಮುಕ್ತಾಯವಾಗಿರುತ್ತದೆ. ಅದನ್ನು ಅಗಷ್ಟ 15 ವರೆಗೆ ಅವಧಿಯನ್ನು ವಿಸ್ತರಿಸಬೇಕು. ಕೆಲವು ರೈತರ ಪಹಣಿ ಉತಾರೆಯಲ್ಲಿ ಬೆಳೆ ಕಾಲಂ ದಲ್ಲಿ ಬೆಳೆ ನಮೂದಾಗಿರುವುದಿಲ್ಲ. ಆದ ಕಾರಣ ವಿಮಾ ತುಂಬಲು ತೊಂದರೆಯಾಗಿರುತ್ತದೆ. ಸಮೀಕ್ಷೆ ಮಾಡಿಸಿ ರೈತರಿಗೆ ಅನೂಕೂಲ ಮಾಡಿಕೊಡಬೇಕು.
2023-24ನೇ ಅವಧಿಯಲ್ಲಿ ರಾಜ್ಯದ ಎಲ್ಲ ದ್ರಾಕ್ಷಿ ಬೆಳಗಾರರು ದ್ರಾಕ್ಷಿ ವಿಮಾ ತುಂಬಿರುತ್ತಾರೆ. ಸರ್ಕಾರವು ಈ ಅವಧಿಯಲ್ಲಿ ಬರಗಾಲ ಪೀಡಿತ ಎಂದು ಘೋಷಿರುತ್ತಾರೆ. ಆದರೆ ವಿಮಾ ಕಂಪನಿಯವರು ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಇದರಿಂದಾಗಿ ರೈತರಿಗೆ ನಷ್ಟವಾಗುತ್ತಿದೆ. ಅತಿ ವೃಷ್ಠಿ ಹಾಗೂ ಅನಾವೃಷ್ಠಿಯ ಸಲುವಾಗಿ ವಿಮಾ ಕಂತು ತುಂಬಿರುತ್ತೇವೆ. ಅದಕ್ಕೆ ವಿಮಾ ಕಂಪನಿಯ ಜೋತೆ ಚರ್ಚಿಸಿ ತ್ವರಿತವಾಗಿ ಹಣ ಸಂದಾಯ ಮಾಡಿಸಬೇಕು.
ರಾಜ್ಯದಲ್ಲಿ ದ್ರಾಕ್ಷಿ ಬೆಳೆಯುವ ಪ್ರದೇಶವೂ ಶೇ.80 ಉತ್ತರ ಕರ್ನಾಟಕದಲ್ಲಿರುತ್ತದೆ. ಅದರಲ್ಲಿ ವಿಜಯಪೂರ ಜಿಲ್ಲೆಯೇ ಶೇ.80 ಇರುತ್ತದೆ. ವಿಮಾ ಕಂಪನಿಯ ಕಾರ್ಯಾಲಯವೂ ಬೆಂಗಳೂರಿನಲ್ಲಿರುವುದರಿಂದ ಸಂಪರ್ಕಿಸಲು ರೈತರಿಗೆ ತೊಂದರೆಯಾಗುತ್ತದೆ. ಆದ ಕಾರಣ ವಿಮಾ ಕಂಪನಿ ಕಾರ್ಯಾಲಯವನ್ನು ವಿಜಯಪೂರ ಜಿಲ್ಲೆಯಲ್ಲಿ ತೆರೆಯಬೇಕು ಎಂದು ಮನವಿಯಲ್ಲಿ ಉಲ್ಲೆಖಿಸಿದ್ದಾರೆ.
ಈ ಸಂದರ್ಭದಲ್ಲಿ ಅರುಣ ಬಿರಾದಾರ, ರಾಘವೇಂದ್ರ ಬಿರಾದಾರ, ಕುಮಾರ ಒಂಟೊಂಟಿ, ಪರಮಾನಂದ ಕಣಮುಚನಾಳ, ಮಲ್ಲಿಕಾರ್ಜುನ ತುಳಜನವರ, ಸಿದ್ದೇಶ್ವರ ಮಸಳಿ, ಸುಖದೇವ ಗದ್ಯಾಳ, ಶಂಕರ ಮಠ, ಪ್ರಶಾಂತ ಲೋಣಿ, ಮಲ್ಲಿಕಾರ್ಜುನ ಉಟಗಿ, ಮಲ್ಲಿಕಾರ್ಜುನ ಮಸಳಿ, ರಾಮು ಮಸಳಿ, ಗುರುರಾಜ ಪಟ್ಟಣಶೆಟ್ಟಿ, ಪ್ರವೀಣ ಮಠ, ಶಂಭು ಪೋಳ, ಪ್ರವೀಣ ಮಠಪತಿ, ಸುಪ್ರೀತ ಹುನ್ನೂರ, ವಿಕಾಸ ತಿಕೋಟಿ, ಸಿದ್ದಲಿಂಗ ತಳವಾರ, ದಯಾನಂದ ಧನಗೊಂಡ, ಸಚಿನ ಲೋಣಿ, ವಿಶ್ವ ಬಿರಾದಾರ, ಪ್ರಜ್ವಲ ಹಾದಿಮನಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

