Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಶನಿವಾರ ಪಟ್ಟಣದ ಆರಾಧ್ಯ ದೈವ ಶ್ರೀ ಶಾಂತೇಶ್ವರ ದೇವಸ್ಥಾನದಲ್ಲಿ ಪಟ್ಟಣಶೆಟ್ಟಿ ಅಭಿಮಾನಿಗಳು ಹಾಗೂ ಹಿತೈಷಿಗಳು ವಿಶೇಷ ಪೂಜೆ ಸಲ್ಲಿಸಿ ಸಿಹಿಹಂಚಿ ಜನ್ಮದಿನ ಆಚರಿಸಿದರು.ಈ ಸಂದರ್ಭದಲ್ಲಿ ಶಾಂತು ಕಂಬಾರ, ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಸೋಮು ನಿಂಬರಗಿಮಠ, ಶಿವು ಬಗಲಿ, ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಬಿರಾದಾರ, ವಜ್ರ ಕಾಂತ ಕುಡಿಗನೂರ, ರಾಮಸಿಂಗ ಕನ್ನೊಳ್ಳಿ, ಅಶೋಕ ಅಕಲಾದಿ, ಶ್ರೀಕಾಂತ ಬಡಿಗೇರ, ಪ್ರಶಾಂತ ಲಾಳಸಂಗಿ, ಪಿ.ಸಿ. ಪೂಜಾರಿ, ಬಾಬುರಾವ್ ಶಿಂಧೆ, ಪ್ರಶಾಂತ ಗೌಳಿ, ಮಂಜುನಾಥ ದೇವರ ಸೇರಿದಂತೆ ಇನ್ನಿತರರು ಇದ್ದರು.
ತಾಳಿಕೋಟಿ: ಪಟ್ಟಣದ ನಿವಾಸಿ ಕುಮಾರಿ ಸಾಕ್ಷಿ ಗುರುಸಂಗಪ್ಪ ಕಟ್ಟಿ ಇವಳು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದಿಂದ ಸ್ನಾತಕೋತರ ಪದವಿಯಾದ ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಪಡೆದು ತಾಳಿಕೋಟಿಯ ಕೀರ್ತಿ ಹೆಚ್ಚಿಸಿದ್ದಾಳೆ.ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವಾದ ಕಲಬುರ್ಗಿಯ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಇವಳು ಅಧ್ಯಯನ ಕೇಂದ್ರಕ್ಕೆ ಪ್ರಥಮ ಸ್ಥಾನ ಹಾಗೂ ಇಡೀ ವಿಶ್ವವಿದ್ಯಾಲಯಕ್ಕೆ ಮೊದಲನೇ ಸ್ಥಾನ ಪಡೆಯುವುದರ ಮೂಲಕ ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾಳೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿದ್ಯಾಲಯದ ಮುದ್ದೇನಹಳ್ಳಿಯಲ್ಲಿ ನಡೆದ ಘಟಕೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಹರಿದಿಪ್ ಸಿಂಗ್ ಪುರಿ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.ಈ ಸಮಾರಂಭದಲ್ಲಿ ಶ್ರೀ ಸದ್ಗುರು ಮಧುಸೂದನ್ ಸಾಯಿಯವರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ ಎನ್. ನರಸಿಂಹಮೂರ್ತಿ ಅವರು ಉಪಸ್ಥಿತರಿದ್ದರು.
ಕಲಕೇರಿ: ಆದರ್ಶ ಶಿಕ್ಷಣ ಸಂಸ್ಥೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯ ಸಂಯುಕ್ತ ಆಶ್ರಯದಲ್ಲಿ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಸ್ ಎಂ ಸಜ್ಜನ ಪ್ರಾಚಾರ್ಯರು ಪದವಿ ಮಹಾವಿದ್ಯಾಲಯ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎಂ.ಡಿ ಮೋತಿಬಾಯಿ, ಡಾ.ಸಂತೋಷ ಟೆಂಗಳಿ, ಅಪ್ಪಸಾಬ ಮಾಂಗ ಶ್ರೀ ಫಾರೂಕ್ ವಲ್ಲಿ ಬಾಯಿ ಶ್ರೀಮತಿ ರೇಷ್ಮಾ ಮುಜಾವರ ಶ್ರೀ ಎಚ್ಎ ಮೊಮೀನ ವಹಿಸಿದ್ದರು.ಈ ಸಂದರ್ಭದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಐ. ಸಿ. ಟಿ. ಸಿ ಆಪ್ತಸಮಾಲೋಚಕ ಡಾ. ಸಂತೋಷ ಟೆಂಗಳಿ ಮಾತನಾಡಿ, ಮಹಾಮಾರಿ ರೋಗವಾದ HIV/AIDs ಕುರಿತು ಅದು ಹರಡುವ ವಿಧಾನ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಯುವ ಜನತೆ ಅದರಿಂದ ಯಾವ ರೀತಿ ದೂರ ಇರಬೇಕು ಎಂಬುದರ ಬಗ್ಗೆ ಹಾಗೂ ಲೈಂಗಿಕ ರೋಗದ ಸೋಂಕುಗಳ ಬಗ್ಗೆ ವಿವರಿಸಿದರು.ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕ ಅಪ್ಪಸಾಬ ಮಾಂಗ ಮಾತನಾಡಿ, ಹದಿಹರೆಯದಲ್ಲಿ ಆಗುವ ದೈಹಿಕ ಮಾನಸಿಕ ಬದಲಾವಣೆಗಳು…
ಬಿ.ಎಲ್.ಡಿ.ಇ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ ಉದ್ಘಾಟನೆ & ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶ್ರೀಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಸ್ಮರಣೆ ವಿಜಯಪುರ: ಶತಮಾನದ ಹಿಂದೆ ಈ ಭಾಗದ ಶರಣರು ಮತ್ತು ಮಹನೀಯರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಜನ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣರಾಗಿದ್ದಾರೆ ಎಂದು ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಚೇರಮನ್ ಮತ್ತು ಕಾಹೆರ ಕುಲಾಧಿಪತಿ ಪ್ರಭಾಕರ ಬಿ. ಕೋರೆ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಪಘಾತ ಮತ್ತು ತುರ್ತು ಚಿಕಿತ್ಸೆ ವಿಭಾಗದ ಕಟ್ಟಡ(ಟ್ರಾಮಾ ಸೆಂಟರ್ ಮತ್ತು ಎಮರ್ಜೆನ್ಸಿ ಮೆಡಿಸೀನ್) ಉದ್ಘಾಟಿಸಿದ ಅವರು, ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ. ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.19ನೇ ಶತಮಾನದ ಪ್ರಾರಂಭದಲ್ಲಿ ಶಿಕ್ಷಣ, ನೀರಾವರಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದ್ದ ಮುಂಬೈ ಕರ್ನಾಟಕದ…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ್ ಒಲಂಪಿಕ್ ಕ್ರೀಡಾಕೂಟಗಳು 2024 ನನ್ನ ಮಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಇಂಗ್ಲಿಷ್ ನಲ್ಲಿ ಪಠ್ಯವೊಂದು ಇತ್ತು. ಆ ಪಠ್ಯದ ಒಂದು ವಾಕ್ಯ ಇಂದಿಗೂ ನನ್ನ ಮನಸ್ಸಿಗೆ ಅತ್ಯಂತ ಹತ್ತಿರವಾಗಿದೆ. ಬಹುಶಹ ಎಲ್ಲರ ಬದುಕಿಗೂ ಈ ವಾಕ್ಯ ಅನ್ವಯಿಸುತ್ತದೆ. ತುಸು ದೊಡ್ಡದಾಗಿದ್ದ ಆ ವಾಕ್ಯವನ್ನು ಒಂದು ವಾಕ್ಯದ ಉತ್ತರಕ್ಕಾಗಿ ನಾನು ಸರಳೀಕರಿಸಿ ಚಿಕ್ಕದಾಗಿಸಿದಾಗ ಪ್ರಾರಂಭದಲ್ಲಿ ಅದನ್ನು ಬರೆಯಲು ಒಪ್ಪದ ನನ್ನ ಮಗ ನಂತರ ನನ್ನ ಮಾವ ಮತ್ತು ಶಿಕ್ಷಕರು ನಾನು ಬರೆದ ರೀತಿಯೇ ಸರಿಯಾಗಿದೆ ಎಂದು ಹೇಳಿದಾಗ ಅದನ್ನು ಬರೆಯಲು ಒಪ್ಪಿಕೊಂಡ. ಆ ವಾಕ್ಯ ಹೀಗಿದೆ “ದ ಮೇನ್ ಮೋಟೋ ಆಫ್ ಒಲಂಪಿಕ್ ಗೇಮ್ಸ್ ಇಸ್ ನಾಟ್ ಟು ವಿನ್, ಬಟ್ ಟು ಪಾರ್ಟಿಸಿಪೇಟ್”. ಇದರ ಅರ್ಥ ಒಲಂಪಿಕ್ ಆಟಗಳ ಮುಖ್ಯ ಧ್ಯೇಯ ಇರುವುದು ಆಟದಲ್ಲಿ ಪಾಲ್ಗೊಳ್ಳುವುದರಲ್ಲಿಯೇ ಹೊರತು ಗೆಲ್ಲುವುದರಲ್ಲಿ ಅಲ್ಲ ಎಂದು. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಭಾಗವಹಿಸುವ ಒಲಂಪಿಕ್…
ವಿಜಯಪುರ: ದೇಹದ ಆರೋಗ್ಯಕ್ಕಿಂತ ಸಮಾಜದ ಆರೋಗ್ಯವೇ ಮುಖ್ಯ ಎಂದರಿತ ಬಂಥನಾಳ ಶ್ರೀಗಳುಶೈಕ್ಷಣಿಕ ಕ್ರಾಂತಿ ಮಾಡಿ, ಮಠಗಳ ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ ಧೀರ ಸನ್ಯಾಸಿಯಾಗಿದ್ದರು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ವತಿಯಿಂದ ಪರಿಷತ್ತಿನ ಕಚೇರಿಯಲ್ಲಿ ಹಮ್ಮಿಕೊಂಡ ಬಂಥನಾಳ ಸಂಗನಬಸವ ಶಿವಯೋಗಿಗಳ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದರು.ವಿದ್ಯಾರ್ಥಿಗಳೇ ದೇವರು, ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತರಿವರು. ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದರು ಎಂದು ಹೇಳಿದರು.ಶಿಕ್ಷಕ ಈರಣ್ಣ ಬಿರಾದಾರ ಮಾತನಾಡಿ, ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಲವು ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕ್ಷರ ದಾಸೋಹಿ ಬಂಥನಾಳದ…
ಇಂಡಿ: ಜಿಲ್ಲೆಯಲ್ಲಿ ಶೈಕ್ಷಣಕ ಕ್ರಾಂತಿ ಮಾಡಿದ ಬಂಥನಾಳದ ಸಂಗನಬಸವ ಶ್ರೀಗಳು, ಶಿಕ್ಷಣದ ಜತೆ ಸಂಸ್ಕಾರ ನೀಡುವ ಮೂಲಕ ಜನರನ್ನು ಸುಜ್ಞಾನಿಗಳಾಗಿ ಮಾಡಿದ ಕೀರ್ತಿ ಬಂಥನಾಳ ಶ್ರೀಗಳಿಗೆ ಸಲ್ಲುತ್ತದೆ ಎಂದು ಶ್ರೀ ಸಂಗನಬಸವ ಸೌಹಾದ ಪತ್ತಿನ ಸಹಕಾರಿ ಸಂಸ್ಥೆಯ ನಿರ್ದೇಶಕ ಸಿದ್ದು ಹತ್ತಳ್ಳಿ ಹೇಳಿದರು.ಅವರು ಶನಿವಾರ ತಾಲೂಕಿನ ತಾಂಬಾ ಗ್ರಾಮದ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಗನಬಸವೇಶ್ವರ ಶ್ರೀಗಳ ೧೨೪ನೇ ಜಯಂತ್ಸೊವ ನಿಮಿತ್ಯ ಮಾತನಾಡಿ, ಜಂಗಮರ ಉದರದಲ್ಲಿ ಜನಿಸಿ ಸರಸ್ವತಿ ರೂಪ ತಾಳಿದ ಸಂಗನಬಸವ ಶಿವಯೋಗಿಗಳು ಪುರಾಣ ಪ್ರವಚನ ಕೇಳಿ ಭಕ್ತರು ನೀಡಿದ ದೇಣ ಗೆಯಲ್ಲಿ ವಿದ್ಯಾರ್ಥಿಗಳೆ ದೇವರು, ವಿದ್ಯಾಲಯಗಳೇ ದೇವಾಲಯ ಎಂದು ಶಾಲೆ ಕಾಲೇಜ್ ಕಟ್ಟುವ ಮೂಲಕ ಈ ನಾಡಿನಲ್ಲಿ ಶೈಕ್ಷಣ ಕ ಕ್ರಾಂತಿಗೈದ ಬಂಥನಾಳದ ಸಂಗನಬಸವ ಶಿವಯೋಗಿಗಳು ಎಂದು ಶ್ರೀಗಳನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಅಡಿವಪ್ಪ ರೊಟ್ಟಿ, ಶಾಂತಪ್ಪ ಹಂಚನಾಳ, ಗೋಪಾಲ ಅವರಾದಿ, ಶಿವಪ್ಪ ಹಿಪ್ಪರಗಿ, ನಾಗರಾಜ ಚಾಳಿಕಾರ, ಶಾಖಾ ವ್ಯವಸ್ಥಾಪಕ ನಾಗೇಶ ನಿಂಬಾಳ, ಮಲ್ಲಯ್ಯ ವಿರಕ್ತಮಠ, ಶಾಂತಮಾಲ್ಲ ಖಟ್ಟೆ,…
ಸಿಂದಗಿ: ಭಾರತ ಹಲವಾರು ಯುದ್ಧಗಳನ್ನು ಗೆದ್ದಿದೆ. ಆದರೆ ಕಾರ್ಗಿಲ್ ಯುದ್ಧ ಐದಾರು ಸಾವಿರ ಅಡಿ ಎತ್ತರದ ಮೊನಚಾದ ಬೆಟ್ಟ ಗುಡ್ಡಗಳ ಕಠಿಣ ಶೀತ ಪ್ರದೇಶದಲ್ಲಿ ನಡೆದಿದೆ. ಆದ್ದರಿಂದ ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕವಾಗಿದೆ ಎಂದು ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.ಶುಕ್ರವಾರ ಸಾಯಂಕಾಲ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಕಾರ್ಗಿಲ್ ರ್‍ಯಾಲಿಗೆ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು. ಅಲ್ಲಿಂದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಪೂರ್ಣಗೊಂಡಿತು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಯೋಧರ ತ್ಯಾಗ, ಶೌರ್ಯ ಸ್ಮರಿಸಲಾಯಿತು. ಹುತಾತ್ಮ ಯೋಧರಿಗೆ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತೀಯ ಸೈನ್ಯ ವಿಜಯ ಪತಾಕೆ ಹಾರಿಸಿದ ದಿನ. ಆ ರೋಚಕ ಕ್ಷಣದ ನೆನಪಿಗಾಗಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುವುದು ಎಂದರು.ಈ ವೇಳೆ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ…
ಬಂಜಾರಾ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪಾಲಕರ ಸಭೆ ವಿಜಯಪುರ: ಶಿಕ್ಷಣ ಮತ್ತು ಭೌತಿಕ ಸಂಪತ್ತುಗಳನ್ನು ಪಡೆಯುವುದರ ಜತೆಯಲ್ಲಿ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ಅರಿತು ಜೀವನದಲ್ಲಿ ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನವಾಗುತ್ತದೆ ಎಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್‌ರವರು ಹೇಳಿದರು.ಶನಿವಾರದಂದು ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ‘ಪಾಲಕರ ಸಭೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಪೋಷಕರು ತಮ್ಮ ಮಕ್ಕಳ ಅಂಕ, ರ‍್ಯಾಂಕ್, ಸ್ಥಾನಮಾನ, ಬಿರುದು ಸನ್ಮಾನಗಳ ಕಡೆಗೆ ತಮ್ಮ ಶ್ರದ್ಧೆಯನ್ನು ಕೇಂದ್ರೀಕರಿಸಿ ಒತ್ತಡದ ಬದುಕಿಗೆ ಅವರನ್ನು ತಳ್ಳಿ ಬಿಡುತ್ತಾರೆ. ಶಿಕ್ಷಣ ಸ್ಥಾನಮಾನಗಳ ಜತೆಯಲ್ಲೇ ಮೌಲ್ಯಯುತ ಸಂಸ್ಕಾರಗಳನ್ನು ರೂಢಿಸಲು ಕಲಿಸಿದಲ್ಲಿ ಮಕ್ಕಳಲ್ಲಿ ವ್ಯಕ್ತಿತ್ವದ ಹೊಳಪು ಕಾಣಬಹುದು ಎಂದು ಹೇಳಿದರು.ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಮಾತನಾಡುತ್ತ, ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಾಲೆ ಮತ್ತು ಶಿಕ್ಷಕರಷ್ಟೇ ಪಾತ್ರ ಕುಟುಂಬ ಹಾಗೂ ಪಾಲಕರದ್ದು ಎಂಬುದು ಮರೆಯಬಾರದು. ಮಕ್ಕಳ ಶೈಕ್ಷಣಿಕತೆಗೆ ಸಂಬಂಧಿಸಿದ ಅವರ ಸಂದೇಹಗಳನ್ನು ಪರಿಹರಿಸಿಕೊಳ್ಳಬೇಕು. ತಿಂಗಳಿಗೊಮ್ಮೆ ಪೋಷಕರ ಸಭೆಯನ್ನು…
ವಿಜಯಪುರ: ನೀರು ಅತ್ಯಮೂಲ್ಯ ಸಂಪತ್ತು. ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ನದಿ, ಕೆರೆ, ಬಾವಿಯ ನೀರನ್ನು ಸಂರಕ್ಷಿಸುವ ಜತೆಗೆ ಮಳೆ ನೀರು ಕೊಯ್ಲು ಮೂಲಕ ಮಳೆ ನೀರನ್ನು ಸಂಗ್ರಹಿಸುವ ಪ್ರಯತ್ನ ಮಾಡಬೇಕು ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಹೇಳಿದರು.ಶನಿವಾರದಂದು ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಲಧೂತ ಜಾಗೃತಿ ಅಭಿಯಾನ’ದ ಜಾಥಾಕ್ಕೆ ಜಾಲನೆ ನೀಡಿ ಮಾತನಾಡಿದ ಅವರು, ಜಲ ಮರುಪೂರಣ ವ್ಯವಸ್ಥೆ, ಬಾವಿ, ಕೆರೆ, ಕಟ್ಟೆಗಳ ಹೂಳೆತ್ತುವುದು, ಬಾಂದಾರಾ, ಇಂಗು ಗುಂಡಿಗಳ ನಿರ್ಮಾಣದಂತಹ ಕ್ರಮಗಳಿಂದ ಅಮೂಲ್ಯ ಸಂಪತ್ತಾದ ನೀರನ್ನು ಸಂರಕ್ಷಿಸಬೇಕು ಮತ್ತು ಅದರ ಸದ್ಬಳಕೆ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಬಿ.ಪೂಜಾರಿಯವರು ಮಾತನಾಡುತ್ತ. ನೀರಿನ ನಾಳೆಯ ಅಭಾವ ತಪ್ಪಿಸಲು ಅತ್ಯಮೂಲ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿ, ಮುಂಬರುವ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ. ಮಾನವ ವೈಜ್ಞಾನಿಕವಾಗಿ ಬೆಳೆದರೂ ಸಹಿತ ನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಅವಿಷ್ಕಾರ ಮಾಡಿಲ್ಲ.…
