ಸಿಂದಗಿ: ಭಾರತ ಹಲವಾರು ಯುದ್ಧಗಳನ್ನು ಗೆದ್ದಿದೆ. ಆದರೆ ಕಾರ್ಗಿಲ್ ಯುದ್ಧ ಐದಾರು ಸಾವಿರ ಅಡಿ ಎತ್ತರದ ಮೊನಚಾದ ಬೆಟ್ಟ ಗುಡ್ಡಗಳ ಕಠಿಣ ಶೀತ ಪ್ರದೇಶದಲ್ಲಿ ನಡೆದಿದೆ. ಆದ್ದರಿಂದ ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕವಾಗಿದೆ ಎಂದು ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಹೇಳಿದರು.
ಶುಕ್ರವಾರ ಸಾಯಂಕಾಲ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಕಾರ್ಗಿಲ್ ರ್‍ಯಾಲಿಗೆ ಸಂಗಮೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದರು. ಅಲ್ಲಿಂದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಪೂರ್ಣಗೊಂಡಿತು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಯೋಧರ ತ್ಯಾಗ, ಶೌರ್ಯ ಸ್ಮರಿಸಲಾಯಿತು. ಹುತಾತ್ಮ ಯೋಧರಿಗೆ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಕೋಶಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿ ಭಾರತೀಯ ಸೈನ್ಯ ವಿಜಯ ಪತಾಕೆ ಹಾರಿಸಿದ ದಿನ. ಆ ರೋಚಕ ಕ್ಷಣದ ನೆನಪಿಗಾಗಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಗುವುದು ಎಂದರು.
ಈ ವೇಳೆ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಯುದ್ಧ ಗೆಲ್ಲುವುದಕ್ಕೆ ಮದ್ದು ಗುಂಡುಗಳಿಗಿಂತಲೂ ಸೈನಿಕರ ಶೌರ್ಯ, ಆತ್ಮವಿಶ್ವಾಸ ಮುಖ್ಯ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ತೋರಿದ ಶೌರ್ಯ, ಸಾಹಸಗಳನ್ನು ದೇಶ ಎಂದಿಗೂ ಅವರನ್ನು ಸ್ಮರಿಸುತ್ತದೆ. ಕಾರ್ಗಿಲ್ ಯುದ್ಧ ನಡೆದು ಜು.೨೬ಕ್ಕೆ ೨೫ ವರ್ಷವಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಎಸ್.ಟಿ ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ, ಯುವ ಮೋರ್ಚಾ ತಾಲೂಕಾಧ್ಯಕ್ಷ ಅಶೋಕ ನಾರಾಯಣಪುರ, ಸಿದ್ದರಾಮ ಅನಗೊಂಡ, ಎಸ್.ಆರ್. ಪಾಟೀಲ, ಮಾಜಿ ಸೈನಿಕ ಶ್ರೀಶೈಲ ಯಳಮೇಲಿ, ಬಿ.ಜಿ. ಕೊಟರಗಸ್ತಿ, ಸಿ.ಎಸ್.ಅಮಲಿಹಾಳ, ಮಲ್ಲು ಪೂಜಾರ, ಪ್ರಶಾಂತ, ಬಿರಾದಾರ, ಶ್ರೀಧರ ಮಲ್ಲೇದ, ಸೇರಿದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಕಾರ್ಗಿಲ್ ವಿಜಯೋತ್ಸವ ಭಾರತೀಯರ ಹೆಮ್ಮೆಯ ಪ್ರತೀಕ :ಶ್ರೀಶೈಲಗೌಡ
Related Posts
Add A Comment

