ಇಂಡಿ: ಜಿಲ್ಲೆಯಲ್ಲಿ ಶೈಕ್ಷಣಕ ಕ್ರಾಂತಿ ಮಾಡಿದ ಬಂಥನಾಳದ ಸಂಗನಬಸವ ಶ್ರೀಗಳು, ಶಿಕ್ಷಣದ ಜತೆ ಸಂಸ್ಕಾರ ನೀಡುವ ಮೂಲಕ ಜನರನ್ನು ಸುಜ್ಞಾನಿಗಳಾಗಿ ಮಾಡಿದ ಕೀರ್ತಿ ಬಂಥನಾಳ ಶ್ರೀಗಳಿಗೆ ಸಲ್ಲುತ್ತದೆ ಎಂದು ಶ್ರೀ ಸಂಗನಬಸವ ಸೌಹಾದ ಪತ್ತಿನ ಸಹಕಾರಿ ಸಂಸ್ಥೆಯ ನಿರ್ದೇಶಕ ಸಿದ್ದು ಹತ್ತಳ್ಳಿ ಹೇಳಿದರು.
ಅವರು ಶನಿವಾರ ತಾಲೂಕಿನ ತಾಂಬಾ ಗ್ರಾಮದ ಸಂಗನಬಸವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಗನಬಸವೇಶ್ವರ ಶ್ರೀಗಳ ೧೨೪ನೇ ಜಯಂತ್ಸೊವ ನಿಮಿತ್ಯ ಮಾತನಾಡಿ, ಜಂಗಮರ ಉದರದಲ್ಲಿ ಜನಿಸಿ ಸರಸ್ವತಿ ರೂಪ ತಾಳಿದ ಸಂಗನಬಸವ ಶಿವಯೋಗಿಗಳು ಪುರಾಣ ಪ್ರವಚನ ಕೇಳಿ ಭಕ್ತರು ನೀಡಿದ ದೇಣ ಗೆಯಲ್ಲಿ ವಿದ್ಯಾರ್ಥಿಗಳೆ ದೇವರು, ವಿದ್ಯಾಲಯಗಳೇ ದೇವಾಲಯ ಎಂದು ಶಾಲೆ ಕಾಲೇಜ್ ಕಟ್ಟುವ ಮೂಲಕ ಈ ನಾಡಿನಲ್ಲಿ ಶೈಕ್ಷಣ ಕ ಕ್ರಾಂತಿಗೈದ ಬಂಥನಾಳದ ಸಂಗನಬಸವ ಶಿವಯೋಗಿಗಳು ಎಂದು ಶ್ರೀಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅಡಿವಪ್ಪ ರೊಟ್ಟಿ, ಶಾಂತಪ್ಪ ಹಂಚನಾಳ, ಗೋಪಾಲ ಅವರಾದಿ, ಶಿವಪ್ಪ ಹಿಪ್ಪರಗಿ, ನಾಗರಾಜ ಚಾಳಿಕಾರ, ಶಾಖಾ ವ್ಯವಸ್ಥಾಪಕ ನಾಗೇಶ ನಿಂಬಾಳ, ಮಲ್ಲಯ್ಯ ವಿರಕ್ತಮಠ, ಶಾಂತಮಾಲ್ಲ ಖಟ್ಟೆ, ರಾಕೆಶ ಬಾಗಲಕೋಟ, ಶಿವುಕುಮಾರ ಹತ್ತಿ ಪಾಲ್ಗೊಂಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

